Viral Video: ಬೆಂಗಳೂರು; ಬೆಕ್ಕೇ ಬೆಕ್ಕೇ ಮುದ್ದಿನ ಮೂಟೆ ಅಮ್ಮನ ಬೆನ್ನೇರಿ ಹೊರಟಿಹೆ ಎಲ್ಲಿಗೆ?
Cats : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸಾಕಿದ ಬೆಕ್ಕನ್ನು ಕರೆದುಕೊಂಡು ಹೋಗಬೇಕೆಂದರೆ ನೀವೆಲ್ಲ ಏನೆಲ್ಲ ಪ್ರಯೋಗಗಳನ್ನು ಮಾಡಿದ್ದೀರಿ? ಅದೆಷ್ಟು ತಾಕಲಾಟಕ್ಕೆ ಬಿದ್ದಿದ್ದೀರಿ? ನೆನಪಿದೆಯೇ ಅದೆಲ್ಲ? ಇಲ್ಲಿ ನೋಡಿ ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಬೆಕ್ಕಿಗೆಂದೇ ಬ್ಯಾಗ್ ಖರೀದಿಸಿ ಆರಾಮಾಗಿ ಪ್ರಯಾಣಿಸುತ್ತಿದ್ದಾರೆ.
Bengaluru: ಬೇಟೆಯಾಡಿ, ತಮಾಷೆ ಮಾಡಿ, ಆಟವಾಡಿ, ಜಗಳ ಮಾಡಿ, ಮಲಗಿಕೊಳ್ಳಿ, ಇನ್ನೂ ಏನೇನಿದೆಯೋ ಅದೆಲ್ಲ ಮಾಡಿಕೊಳ್ಳಿ. ಆದರೆ ಅದೆಲ್ಲವೂ 100 ಮೀ. ಪರಿಧಿಯೊಳಗೆ ಮಾತ್ರ! ಎಂದು ತನ್ನ ಪೋಷಕರ ಮಾತನ್ನು ಕರಾರುವಕ್ಕಾಗಿ ಪಾಲಿಸುವ ಪ್ರಾಮಾಣಿಕ ಜೀವಿಗಳು ಈ ಬೆಕ್ಕುಗಳು. ಇದೀಗ ಬೆಂಗಳೂರಿನಲ್ಲಿ ಬೆಕ್ಕೊಂದು ತನ್ನ ಪೋಷಕಿಯೊಂದಿಗೆ ದ್ವಿಚಕ್ರವಾಹನವದಲ್ಲಿ ಪ್ರಯಾಣಿಸಿದ್ದೇ ಸುದ್ದಿಯಾಗಿದೆ. ಜನನಿಬಿಡ ರಸ್ತೆಯಲ್ಲಿ ಆಕೆ ಅದನ್ನು ಅದಕ್ಕೆಂದೇ ರೂಪಿಸಿದ ಚೀಲದಲ್ಲಿ (Cat bag) ಇರಿಸಿಕೊಂಡು ಸವಾರಿ ಹೊರಟಿದ್ಧಾಳೆ.
Best way to go to work is to carry your furry friends with you.
ಇದನ್ನೂ ಓದಿFound this cute, so recorded it to show it to my other friends with pets.
I know this is not a new way, but I just happen to see it today.
Beating @peakbengaluru traffic with pawed company. pic.twitter.com/xsqVNVQhmS
— Anirban Roy Das (@anirbanroydas) August 3, 2023
ಅನಿರ್ಬನ್ ರಾಯ್ ದಾಸ್ ಎನ್ನುವರು X (Twitter) ನಲ್ಲಿ ಹಂಚಿಕೊಂಡಿದ್ಧಾರೆ. ಈ ವಿಧಾನವೇನು ಹೊಸದಲ್ಲ. ನನ್ನ ಪ್ರಾಣಿಪ್ರಿಯ ಸ್ನೇಹಿತರಿಗೆ ತೋರಿಸಲು ರೆಕಾರ್ಡ್ ಮಾಡಿದೆ, ಹಾಗೆಯೇ ಇದನ್ನು ಇಲ್ಲಿ ಹಂಚಿಕೊಂಡೆ ಎಂದಿದ್ದಾರೆ ದಾಸ್. 51 ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಆಗಸ್ಟ್ 3ರಂದು ಈ ವಿಡಿಯೋ ಟ್ವೀಟ್ ಮಾಡಲಾಗಿದೆ.
ಇದನ್ನೂ ಓದಿ : Viral Brain Teaser: ಸ್ಮೆಲ್ ಪದಗಳ ರಾಶಿಯಲ್ಲಿ ಸ್ವೆಲ್ ಪದವೂ ಅಡಗಿದೆ, ಕಂಡುಹಿಡಿಯುವಿರೇ?
ಸಾಕುಬೆಕ್ಕು ಅಥವಾ ನಾಯಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕರೆದೊಯ್ಯುವುದು ಮತ್ತು ಪ್ರಯಾಣಿಸುವುದು ನಿಜಕ್ಕೂ ಕಷ್ಟಕರವಾದದ್ದು. ಅಪರಿಚಿತ ಸ್ಥಳಗಳಲ್ಲಿ ಅವು ಭಯ ಬೀಳುತ್ತವೆ ಅಥವಾ ಅವುಗಳ ಭಯಕ್ಕೆ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಹಾಗಾಗಿ ಇಂತಹ ಬ್ಯಾಗ್ಗಳಲ್ಲಿ ಸಾಕುಪ್ರಾಣಿಗಳನ್ನು ತೆಗೆದುಕೊಂಡು ಹೋಗುವುದು ಸಾಕಿದವರ, ಸಾರ್ವಜನಿಕರ ಮತ್ತು ಪ್ರಾಣಿಗಳ ವಿಷಯವಾಗಿಯೂ ಸುರಕ್ಷಿತ.
ಇದನ್ನೂ ಓದಿ : Viral Video: ಭಲೇ ಮಾರ್ಜಾಲವೇ ಏನು ನಿಮ್ಮ ಮಹಿಮೆಯೇ! ನೆಟ್ಟಿಗರ ಶಭಾಷ್
ಮೊದಲೆಲ್ಲ ರಟ್ಟಿನ ಡಬ್ಬಿಗಳಲ್ಲಿ, ಬುಟ್ಟಿಗಳಲ್ಲಿ, ಬಾಸ್ಕೀಟಿನಲ್ಲಿ ಬೆಕ್ಕುಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಇದೀಗ ಸಾಕುಪ್ರಾಣಿಗಳಿಗೆಂದೇ ಅಂದಚೆಂದದ ಬ್ಯಾಗ್ಗಳು ಮಾರುಕಟ್ಟೆಯಲ್ಲಿ ಲಭ್ಯ. ನಿಮ್ಮ ಥೈಲಿಯ ಭಾರಕ್ಕೆ ತಕ್ಕಂತೆ ನೀವು ಅವುಗಳನ್ನು ನಿಮ್ಮ ಮುದ್ದುಮರಿಗಳಿಗಾಗಿ ಖರೀದಿಸಬಹುದು. ನಿಮ್ಮೊಂದಿಗೆ ನಿಮ್ಮ ಸಾಕುಪ್ರಾಣಿಗಳನ್ನು ಕರೆದೊಯ್ಯಬಹುದು.
ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:00 am, Fri, 11 August 23