Viral Brain Teaser: ಸ್ಮೆಲ್ ಪದಗಳ ರಾಶಿಯಲ್ಲಿ ಸ್ವೆಲ್ ಪದವೂ ಅಡಗಿದೆ, ಕಂಡುಹಿಡಿಯುವಿರೇ?
Optical Illusion : ಹತ್ತು ಸೆಕೆಂಡಿನಲ್ಲಿ ನೀವು ಈ ಪದವನ್ನು ಹುಡುಕಿದರೆ ನಿಮ್ಮದು ತೀಕ್ಷ್ಣ ದೃಷ್ಟಿ ಎಂದರ್ಥ. ಸ್ವಲ್ಪ ಹೆಚ್ಚಿಗೆ ಸಮಯ ತೆಗೆದುಕೊಂಡರೂ ಸರಿ, ಆದರೆ ಈ ಸವಾಲನ್ನು ಕೈಬಿಡಬೇಡಿ. ಈಗಾಗಲೇ ನೀವು ಮೆದುಳನ್ನು ಚುರುಕುಗೊಳಿಸುವ ಸಾಕಷ್ಟು ಬ್ರೇನ್ ಟೀಸರ್ಗಳಲ್ಲಿ ಒಳಗೊಂಡಿದ್ದೀರಿ. ಇದೂ ನಿಮಗೆ ಕಷ್ಟವಾಗಲಾರದು. ಪ್ರಯತ್ನಿಸಿ.
Brain Teaser : ಮತ್ತೊಂದು ಹೊಸ ಸವಾಲು ಇದೀಗ ನಿಮ್ಮ ಎದುರಿಗಿದೆ. ನಿಮ್ಮ ದೃಷ್ಟಿ ಎಷ್ಟು ತೀಕ್ಷ್ಣವಾಗಿದೆ, ಮೆದುಳಿನ ಗ್ರಹಿಕೆ ಎಷ್ಟು ವೇಗವಾಗಿದೆ ಎನ್ನುವುದನ್ನು ಪರೀಕ್ಷಿಸಿಕೊಳ್ಳಲು ನೀವು ಈ ಸವಾಲಿಗೆ ತೆರೆದುಕೊಳ್ಳಬೇಕು. Smell ಎಂಬ ಪದಗಳ ಸಾಲು ಇಲ್ಲಿವೆ. ಈ ಸಾಲುಗಳ ಮಧ್ಯೆಯೇ Swell ಎಂಬ ಪದವೊಂದು ಅಡಗಿದೆ. 12 ಸೆಕೆಂಡುಗಳಲ್ಲಿ ನೀವು ಅದನ್ನು ಪತ್ತೆ ಹಚ್ಚಬಹುದೆ? ಬಹುಶಃ ನೀವು 12 ಸೆಕೆಂಡಿನೊಳಗೇ ಆ ಪದವನ್ನು ಹುಡುಕುತ್ತೀರಿ ಎಂಬ ಆಶಯ ನಮ್ಮದು. ಏನಂತೀರಿ?
ತೀಕ್ಷ್ಮ ದೃಷ್ಟಿಯವರಿಗೆ ಮಾತ್ರ Swell ಎಂಬ ಪದವು ಕಾಣುತ್ತದೆ. Smell ಮತ್ತು Swell ಪದಗಳ ನಡುವೆ ಇರುವ ವ್ಯತ್ಯಾಸ ಒಂದೇ ಅಕ್ಷರ ಎನ್ನುವುದು ನಿಮಗೆ ಈಗಾಗಲೇ ಗೊತ್ತಾಗಿದೆ. ಹಾಗಿದ್ದರೆ ನಿಮ್ಮ ಹುಡುಕಾಟವನ್ನು ಮುಂದುವರಿಸಿ. 12 ಸೆಕೆಂಡುಗಳಲ್ಲಿ ಸಿಗದೇ ಇದ್ದರೆ 20 ಸೆಕೆಂಡುಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ : Viral Video: ಎರಡು ತಟ್ಟೆ ಅವಲಕ್ಕಿ; ಒಂದು ನಿಮ್ಮ ಕೋಣೆಯ ಗೋಡೆಗೆ ಇನ್ನೊಂದು ನಿಮ್ಮ ಹೊಟ್ಟೆಗೆ!
ಬಹುಶಃ ನಿಮ್ಮಲ್ಲಿ ಕೆಲವರಿಗೆ Swell ಪದ ಈಗಾಗಲೇ ಸಿಕ್ಕಿರಬಹುದು. ಸಿಗದೇ ಇದ್ದವರು ಬಿಡದೇ ಪ್ರಯತ್ನವನ್ನು ಮುಂದುವರಿಸಬಹುದು. ಎಷ್ಟು ಹುಡುಕಿದರೂ ಸಿಗುತ್ತಲೇ ಇಲ್ಲ ಎಂದವರು ನಿರಾಶರಾಗುವುದು ಬೇಡ. ಈ ಕೆಳಗಿವನ ಚಿತ್ರವನ್ನು ಗಮನಿಸಿ. ನಿಮ್ಮ ಕಣ್ಣಿನೊಂದಿಗೆ ಕಣ್ಣಾಮುಚ್ಚಾಲೆಯಾಡುತ್ತಿದ್ದ Swell ಇಲ್ಲಿದೆ.
ವಾರಾಂತ್ಯದ ಮೂಡಿನಲ್ಲಿರುವ ನಿಮಗೀಗ ವ್ಯವಧಾನ ಕಡಿಮೆ. ಹೇಗೋ ಬೇಗನೆ ಆಫೀಸ್ ಕೆಲಸಗಳನ್ನು ಮುಗಿಸಬೇಕೆನ್ನುವ ಒತ್ತಡದಲ್ಲಿರುತ್ತೀರಿ. ಈ ಒತ್ತಡದ ಮಧ್ಯೆ ಕೆಲಸ ಕುಂಟುತ್ತಿರುತ್ತದೆ. ಹಾಗಾಗಿ ಇಂತ ಬ್ರೇನ್ ಟೀಸರ್ ಚಟುವಟಿಕೆಗಳನ್ನು ಆಗಾಗ ಗಮನಿಸುತ್ತಿದ್ದರೆ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ.
ಇದನ್ನೂ ಓದಿ : Viral Video: ಭಲೇ ಮಾರ್ಜಾಲವೇ ಏನು ನಿಮ್ಮ ಮಹಿಮೆಯೇ! ನೆಟ್ಟಿಗರ ಶಭಾಷ್
ನೀವು ಉತ್ತರವನ್ನು ಕಂಡುಕೊಂಡಿರಿ. ನಿಮ್ಮ ಸ್ನೇಹಿತರಿಗೆ, ಮನೆಯವರಿಗೆ, ಮಕ್ಕಳಿಗೆ ಈ ಬ್ರೇನ್ ಟೀಸರ್ ಕಳಿಸಿ ಅವರಲ್ಲಿಯೂ ಈ ಕುರಿತು ಆಸಕ್ತಿ ಮೂಡಿಸಿ. ನಿಮಗೆ ಈ ಆಟದಲ್ಲಿ ಇಷ್ಟವಾಯಿತೇ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ