Viral Video: ಭಲೇ ಮಾರ್ಜಾಲವೇ ಏನು ನಿಮ್ಮ ಮಹಿಮೆಯೇ! ನೆಟ್ಟಿಗರ ಶಭಾಷ್​

Fighting : ಈ ಬೆಕ್ಕುಗಳಿವೆಯಲ್ಲ ಯಾವುದೋ ಗ್ರಹದಿಂದ ಇಳಿದುಬಂದಂಥವು. ನೋಡಲು ಹತ್ತಿಮುದ್ದೆಯಂತೆ ಕಾಣುತ್ತವೆ. ಸೋಮಾರಿ ಎನ್ನಿಸಿಕೊಳ್ಳುತ್ತವೆ. ಆದರೆ ವೈರಿ ಎದುರಿಗಿದ್ದಾಗ ಮಾತ್ರ ಇವುಗಳ ಚಾಣಾಕ್ಷತೆ, ಶೌರ್ಯ, ಸ್ಥೈರ್ಯ ಹೊಮ್ಮುವ ರೀತಿ ಅಮೋಘ! ಹಾವಿನೊಂದಿಗೆ ಸೆಣಸಾಡಿದ ಈ ಬೆಕ್ಕುಗಳ ವಿಡಿಯೋ ನೋಡಿ.

Viral Video: ಭಲೇ ಮಾರ್ಜಾಲವೇ ಏನು ನಿಮ್ಮ ಮಹಿಮೆಯೇ! ನೆಟ್ಟಿಗರ ಶಭಾಷ್​
ಹಾವುಗಳನ್ನು ಸೆದೆಬಡಿಯುತ್ತಿರುವ ಬೆಕ್ಕುಗಳು!
Follow us
ಶ್ರೀದೇವಿ ಕಳಸದ
|

Updated on:Aug 10, 2023 | 5:34 PM

Cat : ಮುದ್ದಿನ ಸೊಕ್ಕೇ, ಸೋಮಾರಿ ಬೆಕ್ಕೇ ಅಂತೆಲ್ಲ ಕರೆಯಿಸಿಕೊಳ್ಳುವ ಬೆಕ್ಕು ಹಾವಿನೊಂದಿಗೆ (Snakes) ಸೆಣಸಾಡುವುದನ್ನು ನೋಡಿದ್ದೀರಾ? ಜಿರಳೆ, ಇಲಿ, ಕೀಟ, ಪಕ್ಷಿಗಳನ್ನು ಬೇಟೆಯಾಡುವ ಬೆಕ್ಕುಗಳು ಎಂಥ ವಿಷಕಾರಿ ಹಾವುಗಳನ್ನೂ ಸೆದೆಬಡೆಯುತ್ತವೆ ಎಂದರೆ ನಂಬಲೇಬೇಕು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ಬೆಕ್ಕುಗಳ ಪರಾಕ್ರಮವನ್ನು ನೋಡಿ. ಇದರಲ್ಲಿರುವ ಮೂರು ದೃಶ್ಯಗಳಲ್ಲಿ ಮೂರು ಬೆಕ್ಕುಗಳು ಮೂರು ಹಾವುಗಳೊಂದಿಗೆ ಸೆಣಸಾಡಿವೆ. ನೆಟ್ಟಿಗರಂತೂ ಕಣ್ಣುಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ.

ಈ ವಿಡಿಯೋ ಅನ್ನು ಈತನಕ 1 ಮಿಲಿಯನ್​ ಜನರು ನೋಡಿದ್ದಾರೆ. 21,000 ಜನರು ಲೈಕ್ ಮಾಡಿದ್ದಾರೆ. 2,600ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ. ಈ ಬೆಕ್ಕುಗಳು ಯಾವತ್ತೂ ಅನ್ಯಗ್ರಹದ ಜೀವಿಗಳು! ಎಂದು ಶ್ಲಾಘಿಸಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಎಮಿಲಿಯಾನಾ ಹಾಡಿಗೆ ಸುನಿಧಿ ಚೌಹಾನ್​ ಡ್ಯಾನ್ಸ್​; ಕ್ಯಾ ಬಾತ್ ಹೈ ಎಂದ ನೆಟ್ಟಿಗರು

ನಮ್ಮ ಮನೆಯ ಬೆಕ್ಕು ಮರಿ ಹಾಕಿದ್ದಾಗ ಒಂದು ರಾತ್ರಿ ಬೆಕ್ಕು ಜೋರಾಗಿ ಕೂಗುತ್ತಿತ್ತು. ನೋಡಿದರೆ ಅದು ನಾಗರಹಾವನ್ನು ಎದುರುಹಾಕಿಕೊಂಡಿತ್ತು. ಹಿಂದೆ ಮರಿಗಳು ಬೆಚ್ಚಿಬಿದ್ದು ಓಡಾಡುತ್ತಿದ್ದವು. ಅತ್ತ ಮರಿಗಳು ಹಾವಿನೆಡೆ ಹೋಗದಂತೆ, ಇತ್ತ ಹಾವು ಮರಿಗಳೆಡೆ ಬಾರದಂತೆ ಅಮ್ಮಬೆಕ್ಕು ಮಾಡಿದ ಹೋರಾಟ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಕೊನೆಗೆ ಸೋತ ಹಾವು ವಾಪಾಸು ಮರಳಿತು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಫ್ಲೋರಿಡಾದ ಜಿಮ್​ಗೆ ಭೇಟಿ ನೀಡಿದ ಮರಿಯಾಮೆ; ಮ್ಯಾನೇಜರ್​ಗೆ ವ್ಯಾಯಾಮ ಮಾಡಿಸಿ ಮರಳಿತು

ಆದರೆ ನಮ್ಮ ಮನೆಯ ಬೆಕ್ಕಿನಮರಿಗೆ ಹಾವೊಂದು ಕಚ್ಚಿದ್ದರಿಂದ ಮರಿ ಸತ್ತೇ ಹೋಯಿತು ಎಂದು ಇನ್ನೊಬ್ಬರು ಬೆಸರಿಸಿಕೊಂಡಿದ್ದಾರೆ. ಈ ಬೆಕ್ಕುಗಳು ಅಸಾಮಾನ್ಯ ಜೀವಿಗಳು, ನೋಡಲು ಮೃದು ಸ್ವಭಾವ ಮತ್ತು ಸೋಮಾರಿಯಂತೆ ಕಾಣುತ್ತವೆ. ಆದರೆ ಸಮಯ ಮತ್ತು ಸಂದರ್ಭಕ್ಕೆ ತಕ್ಕಂತೆ ಇವುಗಳು ಆವಾಹಿಸಿಕೊಳ್ಳುವ ಶಕ್ತಿ, ಸ್ಥೈರ್ಯ ಮತ್ತು ಜಾಣ್ಮೆ ನಿಜಕ್ಕೂ ಅಗಾಧ ಎಂದು ಮಗದೊಬ್ಬರು ಹೇಳಿದ್ದಾರೆ.

ಹುಲಿಯ ಜಾತಿಗೆ ಸೇರಿದ ಬೆಕ್ಕಿನ ಮೈಯಲ್ಲಿ ಇಷ್ಟೂ ತಾಕತ್ತು ಇರದಿದ್ದರೆ ಇವುಗಳ ಜಾತಿಗೇ ಅವಮಾನ ಅಲ್ಲವೆ? ಭಲೇ ಬೆಕ್ಕುಗಳ ಸಂತತಿಯೇ! ನಿಮ್ಮ ಈ ಹೋರಾಟದ ಕಿಚ್ಚು ಜಗತ್ತಿನ ಎಲ್ಲಾ ವಿಷಕಾರಿ ಜಂತುಗಳನ್ನು ನಾಶಮಾಡುತ್ತಿರಲಿ ಎಂದು ಹರಸಿದ್ದಾರೆ ಕೆಲ ನೆಟ್ಟಿಗರು.

ಏನಂತೀರಿ ನೀವು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 5:33 pm, Thu, 10 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ