Viral: ಫ್ಲೋರಿಡಾದ ಜಿಮ್‌ಗೆ ಭೇಟಿ ನೀಡಿದ ಮರಿಯಾಮೆ; ಮ್ಯಾನೇಜರ್ಗೆ ವ್ಯಾಯಾಮ ಮಾಡಿಸಿ ಮರಳಿತು
Turtle : ಜಿಮ್‌ಗೆ ಆನೆ ಬಂದಿದ್ದಲ್ಲ ಆಮೆಯೇ ಬಂದಿತ್ತು. ಇಲ್ಲೇನೂ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿಲ್ಲ ಮತ್ತೆ. ಬಂದಿದ್ದು ಆಮೆಯೇ. ಇನ್ನೂ ಯೋಚಿಸುತ್ತೀದ್ದೀರಾ? ಆನೆ ಬಂದಿದ್ದರೆ ಅದಕ್ಕೊಂದು ಅರ್ಥ ಇತ್ತು. ಆದರೆ ಆಮೆ ಯಾಕೆ ಬಂದಿತೆಂದು? ಈ ವಿಡಿಯೋ ನೋಡಿದರೆ ನಿಮ್ಮ ಪ್ರಶ್ನೆಗೆ ಉತ್ತರ ಹೊಳಿಯಬಹುದಾ ನೋಡಿ.
America :ಎಂದಾದರೊಮ್ಮೆ ಮನುಷ್ಯರ ಕಣ್ತಪ್ಪಿಸಿ ಜಿಮ್‌ಗೆ (Gym) ಹಸು, ನಾಯಿ, ಬೆಕ್ಕು, ಹಾವು, ಇಲಿ, ಮುಂಗುಸಿ, ಜಿರಳೆ, ಸೊಳ್ಳೆ, ಜೇಡ ಹೀಗೆ ಇನ್ನೇನೋ ಜೀವಜಂತುಗಳು ಬರುವುದು ಸಾಮಾನ್ಯ. ಆದರೆ ಸಮುದ್ರ, ನದಿ, ಕೆರೆದಡದಲ್ಲಿ ವಾಸಿಸುವ ಆಮೆ ಬರಲು ಸಾಧ್ಯವೆ? ಮಂದಗತಿಯಲ್ಲಿ ನಡೆಯುವ ಆಮೆ ಹೀಗೆ ಫ್ಲೋರಿಡಾದಲ್ಲಿರುವ ಜಿಮ್‌ಗೆ ಹೇಗೆ ಬರಲು ಸಾಧ್ಯ? ಬಂದರೂ ಏನು ಕಾರಣವಿದ್ದೀತು? ಈ ಕೆಳಗಿನ ವಿಡಿಯೋ ನೋಡಿ, ನಿಮಗೇನಾದರೂ ಅರ್ಥವಾಗುವುದೋ?
ಫ್ಲೋರಿಡಾದ ಪೋರ್ಟ್ ಸೇಂಟ್ ಲೂಸಿಯಲ್ಲಿರುವ ಜಿಮ್‌ಗೆ ಈ ಆಮೆ ಬಂದಿದೆ. ಜಿಮ್ನ ಮ್ಯಾನೇಜರ್ ಈ ಅನಿರೀಕ್ಷಿತ ಅತಿಥಿಯನ್ನು ನೋಡಿ ಅಚ್ಚರಿಗೆ ಒಳಗಾಗಿದ್ದಾಳೆ. ಜಿಮ್ ತುಂಬ ಮೆಲ್ಲಗೆ ಓಡಾಡುತ್ತ ಆಕೆಯನ್ನು ಸರಿಯಾಗಿ ವ್ಯಾಯಾಮವನ್ನೂ ಮಾಡಿಸಿದೆ. ಆ ನಂತರ ಆಕೆ ಅದನ್ನು ಪುಟ್ಟ ಟವೆಲ್ನಿಂದ ಹಿಡಿಯಲು ಪ್ರಯತ್ನಿಸಿದ್ದಾಳೆ. ಆದರೆ ಪ್ರಯತ್ನ ವಿಫಲವಾಗಿದೆ. ಆಕೆಯ ಕಾಟವನ್ನು ತಡೆಯಲಾರದೆ ಬೇಸತ್ತು ತಂತಾನೇ ಜಿಮ್ನ ಗ್ಯಾರೇಜ್ನ ಬಾಗಿಲಿನಿಂದ ಹೊರಹೋಗಿದೆ!
ಇದನ್ನೂ ಓದಿ : Viral Video: ಅಪ್ಪನ ಸಂದರ್ಶನ ನಡೆಯುತ್ತಿರುವಾಗ ಮಗಳು ಕಟ್ ಕಟ್ ಹೇಳಿದ್ದ್ಯಾಕೆ?
ಈ ವಿಡಿಯೋ ಅನ್ನು 14 ಗಂಟೆಗಳ ಹಿಂದೆ USA Today ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. 1,000ಕ್ಕಿಂತಲೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಆಮೆಗಳು ನಿಧಾನ ಎಂದು ನೀವು ಅಂದುಕೊಂಡಿದ್ದೀರಿ. ಆದರೆ ಆಮೆಯ ಹಿಂದೆ ಓಡಾಡುತ್ತಿರುವ ಮಹಿಳೆಯ ವೇಗವನ್ನು ಗಮನಿಸಿದರೆ ನಿಮ್ಮ ಗ್ರಹಿಕೆ ತಪ್ಪು ತಾನೆ? ಎಂದು ಕೇಳಿದ್ದಾರೆ ಒಬ್ಬರು.
ಇದನ್ನೂ ಓದಿ : Viral: ಈ ಬೈಕ್ನಲ್ಲಿ ಎಷ್ಟು ಜನರು ಸವಾರಿ ಮಾಡುತ್ತಿದ್ದಾರೆ? ಇದು ಭ್ರಮಾತ್ಮಕ ಚಿತ್ರವಲ್ಲ!
ಸದ್ಯಕ್ಕೇನೋ ಮಹಿಳೆಯ ತಾಳ್ಮೆ ಮತ್ತು ಪ್ರಯತ್ನದಿಂದಾಗಿ ಆಮೆ ಜಿಮ್ನಿಂದ ಹೊರಹೋಯಿತು. ಅಂದಮಾತ್ರಕ್ಕೆ ಅದು ತನ್ನ ವಾಸಸ್ಥಳಕ್ಕೆ ವಾಪಾಸು ಹೋಗುತ್ತದೆ ಅಂತಲ್ಲ. ಮತ್ತೊಂದಿಷ್ಟು ಸಾಹಸಗಳನ್ನು ಮಾಡಲು ಅದು ಯೋಚಿಸುತ್ತಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Video: ಮಹಾರಾಷ್ಟ್ರ; ‘ಬುದ್ಧಿ ಇದೆಯೇ ನಿನಗೆ?’ ; ಭಯೋತ್ಪಾದಕನಿಗೆ ಕಪಾಳಮೋಕ್ಷ, ಮುಂದೆ?
ಏನೇ ಆಗಲಿ ಆ ಮಹಿಳೆಯ ತಾಳ್ಮೆ ಮತ್ತು ಬುದ್ಧಿವಂತಿಕೆ ಮೆಚ್ಚುವಂಥದ್ದು. ಅದು ಹೊರಗೆ ಹೋಗಲು ಬಾಗಿಲೆನೆಡೆ ಆಕೆ ತೋರಿದ ರೀತಿ ಗಮನಿಸಿ ಎಂದಿದ್ದಾರೆ ಮತ್ತೊಬ್ಬರು. ಅಂತೂ ಇಲ್ಲಿಗೆ ಆಕೆ ಮತ್ತು ಆಮೆಯ ಆಟ ಇಲ್ಲಿಗೆ ಮುಗಿದಿತ್ತು. ಮುಂದೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ