Viral Video: ಮಹಾರಾಷ್ಟ್ರ; ‘ಬುದ್ಧಿ ಇದೆಯೇ ನಿನಗೆ?’ ಭಯೋತ್ಪಾದಕನಿಗೆ ಕಪಾಳಮೋಕ್ಷ, ಮುಂದೆ?

Terrorist : ಧುಲೆಯ ನಾರಾಯಣಸ್ವಾಮಿ ದೇವಸ್ಥಾನ ಮಕ್ಕಳು ಮಹಿಳೆಯರಿಂದ ಕಿಕ್ಕಿರಿದು ತುಂಬಿದೆ. ಆಗ ಅಲ್ಲಿಗೆ ಪ್ರವೇಶಿಸಿದ ಭಯೋತ್ಪಾದಕರು ಭಕ್ತನೊಬ್ಬನನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ನಿನಗೆ ಬುದ್ಧಿ ಇದೆಯೇ? ಎಂದು ಕೂಗಿದ ವ್ಯಕ್ತಿಯೊಬ್ಬ ಭಯೋತ್ಪಾದಕನ ಕಪಾಳಕ್ಕೆ ಏಟು ಕೊಡುತ್ತಾನೆ. ಮುಂದೇನಾಗುತ್ತದೆ? ವಿಡಿಯೋ ನೋಡಿ.

Viral Video: ಮಹಾರಾಷ್ಟ್ರ; 'ಬುದ್ಧಿ ಇದೆಯೇ ನಿನಗೆ?' ಭಯೋತ್ಪಾದಕನಿಗೆ ಕಪಾಳಮೋಕ್ಷ, ಮುಂದೆ?
ಧುಲೆಯ ನಾರಾಯಣಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಿದ ಭಯೋತ್ಪಾದಕನ ಕಪಾಳಿಗೆ ಹೊಡೆಯುತ್ತಿರುವ ವ್ಯಕ್ತಿ
Follow us
|

Updated on:Aug 10, 2023 | 1:16 PM

Dhule : ಮಹಾರಾಷ್ಟ್ರದ ಧುಲೆಯ ದೇವಸ್ಥಾನವೊಂದರಲ್ಲಿ ಭಯೋತ್ಪಾದಕನಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಓಡಾಡುತ್ತಿದೆ. ಕಿಕ್ಕಿರಿದು ತುಂಬಿರುವ ದೇವಸ್ಥಾನದಲ್ಲಿ ಭಯೋತ್ಪಾದಕ (Terrorist) ಭಕ್ತನೊಬ್ಬನನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಧೈರ್ಯದಿಂದ ಭಯೋತ್ಪಾದಕನ ಕಪಾಳಿಗೆ ಏಟು ಕೊಟ್ಟಿದ್ದಾನೆ. ಈತನ ಧೈರ್ಯದಿಂದಾಗಿ ಈ ವಿಡಿಯೋ ಗಮನ ಸೆಳೆದಿಲ್ಲ. ಆದರೆ ಭಯೋತ್ಪಾದಕನ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ಇದು ವೈರಲ್ ಆಗಿದೆ.

ನಿನಗೆ ಬುದ್ಧಿ ಇದೆಯಾ? ಎಂದು ಕೂಗಿ ಭಯೋತ್ಪಾದಕನ ಕೆನ್ನೆಗೆ ಏಟು ಕೊಟ್ಟ ವ್ಯಕ್ತಿ 35 ವರ್ಷದ ಪ್ರಶಾಂತ ಕುಲಕರ್ಣಿ. ಹತ್ತಿರದಲ್ಲಿಯೇ ಇನ್ನೊಬ್ಬ ಭಯೋತ್ಪಾದಕ ವಶಪಡಿಸಿಕೊಂಡ ಭಕ್ತನ ಮೇಲೆ ನಿಗಾ ಇಟ್ಟಿದ್ದಾನೆ.  ಈ ದುಷ್ಕರ್ಮಿಗಳ ಹಠಾತ್ ಪ್ರವೇಶದಿಂದಾಗಿ ದೇವಸ್ಥಾನದಲ್ಲಿದ್ದ ಮಕ್ಕಳು ಮತ್ತು ಮಹಿಳೆಯರು ಭಯಭೀತರಾಗಿದ್ದಾರೆ. ಇಲ್ಲಿಯ ತನಕ ಅಂದುಕೊಂಡಂತೆ ಎಲ್ಲವೂ ಕರಾರುವಕ್ಕಾಗಿ ನಡೆದಿತ್ತು ಆದರೆ ಕೊನೆಯಲ್ಲಿ ಈ ಪ್ರಶಾಂತ ಕುಲಕರ್ಣಿಯ ಮಗಳು ಜೋರಾಗಿ ಅಳಲು ಶುರುಮಾಡಿಬಿಟ್ಟಳು!

ಇದನ್ನೂ ಓದಿ : Viral: ಆಸ್ಟ್ರೇಲಿಯಾ; 247 ಮಿಲಿಯನ್​ ವರ್ಷಗಳ ಹಿಂದೆ ಹಲ್ಲಿಜಾತಿಗೆ ಸೇರಿದ್ದ ಜೀವಿಯ ಪಳಿಯುಳಿಕೆ ಪತ್ತೆ

ಈ ಘಟನೆ ಇನ್ನೇನು ಕೈಮೀರಿ ಹೋಗುತ್ತದೆ ಎನ್ನಿಸಿದಾಗ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ವಾಸ್ತವದಲ್ಲಿ ಇದು ಪೊಲೀಸರು ನಡೆಸಿದ ಅಣುಕು ಪ್ರದರ್ಶನ (Mock Drill)ವಾಗಿತ್ತು. ಕಪಾಳಮೋಕ್ಷ ಮಾಡಿಸಿಕೊಂಡ ವ್ಯಕ್ತಿ ಪೊಲೀಸ್​ ಅಧಿಕಾರಿಯಾಗಿದ್ದರು. ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ, ಧುಲೆಯ ದೇವ್​ಪುರ್​ ಪ್ರದೇಶದಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭಯೋತ್ಪಾದಕರು ಪ್ರವೇಶಿಸುವ ಬಗ್ಗೆ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಗೆ ಕರೆಬಂದಿತ್ತು.

ಇದನ್ನೂ ಓದಿ : Viral: ಮದುವೆಗೆ ಕರೆಯದೇ ಬಂದ ಅತಿಥಿ; ದಿಗ್ಭ್ರಾಂತಗೊಂಡ ನವದಂಪತಿ

ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪೊಲೀಸರು ಏರ್ಪಡಿಸಿದ್ದ ಅಣುಕು ಪ್ರದರ್ಶನ ಇದಾಗಿದ್ದರೂ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಕಸ್ಮಾತ್ ಮುಸುಕುಧಾರಿ ಮನುಷ್ಯ ಭಯೋತ್ಪಾದಕನೇ ಆಗಿದ್ದಲ್ಲಿ ಯಾವ ವ್ಯಕ್ತಿಗೂ ಆತನನ್ನು ಎದುರಿಸುವ ಮತ್ತು ಕಪಾಳಕ್ಕೆ ಹೊಡೆಯುವ ಧೈರ್ಯ ಇರುತ್ತಿರಲಿಲ್ಲ ಎಂದಿದ್ದಾರೆ. ಆದರೆ ಈ ಅಣುಕು ಪ್ರದರ್ಶನ ಮಹಿಳೆ ಮತ್ತು ಮಕ್ಕಳಲ್ಲಿ ಆತಂಕ ತಂದಿದೆ ಎಂದಿದ್ದಾರೆ ಕೆಲವರು.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:13 pm, Thu, 10 August 23

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು