Viral: ಆಸ್ಟ್ರೇಲಿಯಾ; 247 ಮಿಲಿಯನ್​ ವರ್ಷಗಳ ಹಿಂದೆ ಹಲ್ಲಿಜಾತಿಗೆ ಸೇರಿದ್ದ ಜೀವಿಯ ಪಳಿಯುಳಿಕೆ ಪತ್ತೆ

Lizard : ಹಲ್ಲಿಜಾತಿಗೆ ಸೇರಿದ ಈ ಉಭಯವಾಸಿ ಜೀವಿಗಳು 247 ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದವು ಎನ್ನುವುದನ್ನು ಅಧೀಕೃತವಾಗಿ ಘೋಷಿಸಲಾಗಿದೆ. ಪ್ರಾಚೀನ ಜೀವಶಾಸ್ತ್ರಜ್ಞರೊಬ್ಬರು ಈ ಅಪರೂಪದ ಪಳೆಯುಳಿಕೆಗಳ ವಿಕಾಸದ ಮೇಲೆ ಇದೀಗ ಬೆಳಕು ಚೆಲ್ಲಿದ್ದಾರೆ. ಜಗತ್ತಿನ ಜೀವವಿಜ್ಞಾನ ಸಂಶೋಧಕರ ಕಣ್ಣೀಗ ಆಸ್ಟ್ರೇಲಿಯಾದ ಮೇಲೆ ನೆಟ್ಟಿದೆ.

Viral: ಆಸ್ಟ್ರೇಲಿಯಾ; 247 ಮಿಲಿಯನ್​ ವರ್ಷಗಳ ಹಿಂದೆ ಹಲ್ಲಿಜಾತಿಗೆ ಸೇರಿದ್ದ ಜೀವಿಯ ಪಳಿಯುಳಿಕೆ ಪತ್ತೆ
ಪ್ರಾತಿನಿಧಿಕ ಚಿತ್ರ, ಸೌಜನ್ಯ: ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Aug 10, 2023 | 12:02 PM

Australia: ಸುಮಾರು 247 ಮಿಲಿಯನ್ ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದ ಉಭಯವಾಸಿ ಪ್ರಭೇದವನ್ನು (Carnivorous Amphibian) ಅಧಿಕೃತವಾಗಿ ಗುರುತಿಸಲಾಗಿದೆ. BBC ವರದಿಯ ಪ್ರಕಾರ 1990ರಿಂದಲೂ ಇದು ವಿಜ್ಞಾನಿಗಳನ್ನು ಕುತೂಹಲಕ್ಕೆ ತಳ್ಳಿ ಒಗಟಿನಂತೆ ಮಾರ್ಪಟ್ಟಿತ್ತು. ಅಂತೂ ಈ ಪ್ರಾಣಿಯ ಅವಶೇಷಗಳ ಅಧ್ಯಯನದಿಂದಾಗಿ ಇದೀಗ ಈ ಒಗಟಿಗೆ ತೆರೆ ಬಿದ್ದಿದೆ. ನ್ಯೂ ಸೌತ್ ವೇಲ್ಸ್‌ನ ಕೋಳಿ ಸಾಕಾಣಿಕೆಯಲ್ಲಿ ತೊಡಗಿಕೊಂಡ ರೈತರೊಬ್ಬರು 30 ವರ್ಷಗಳ ಹಿಂದೆ ಈ ಜೀವಿಗಳ ಪಳೆಯುಳಿಕೆಯನ್ನು ಮೊದಲಿಗೆ ಪತ್ತೆ ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಲ್ಲಿಯನ್ನು ಹೋಲುವ ಈ ಜೀವಿಗಳ ಪಳೆಯುಳಿಕೆಗಳು ಜಗತ್ತಿನಾದ್ಯಂತ ಈತನಕ 10ಕ್ಕಿಂತಲೂ ಕಡಿಮೆ ಜಾಗಗಳಲ್ಲಿ ಪತ್ತೆಯಾಗಿದ್ದರೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇದಕ್ಕೆ ಕಾರಣ ಸಂಶೋಧನೆಗಳ ಕೊರತೆ. ಇದೀಗ ಈ ಪಳೆಯುಳಿಕೆ ಆಧಾರದ ಮೇಲೆ ಉಭಯಜೀವಿಗಳ ವಿಕಾಸದ ಬಗ್ಗೆ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಇದೊಂದು ಗಮನಾರ್ಹ ಮೆಟ್ಟಿಲಾಗುವ ಸಾಧ್ಯತೆ ಹೊಂದಿದೆ.

ಇದನ್ನೂ ಓದಿ : Viral: ಮದುವೆಗೆ ಕರೆಯದೇ ಬಂದ ಅತಿಥಿ; ದಿಗ್ಭ್ರಾಂತಗೊಂಡ ನವದಂಪತಿ

ಸುಮಾರು 30 ವರ್ಷಗಳ ಹಿಂದೆ ಸಿಡ್ನಿಯ ಉತ್ತರ ಭಾಗದಲ್ಲಿರುವ ಉಮಿನಾದಲ್ಲಿ ಈ ಅಸಾಮಾನ್ಯ ಪಳೆಯುಳಿಕೆಯ ಅನ್ವೇಷಣಾ ಕಾರ್ಯಾಚರಣೆಯು ನಡೆಯಿತು. ರೈತ ಮಿಹೈಲ್​ ಮಿಹೈಲಿಡಿಸ್​ ಎನ್ನುವವರು ತಮ್ಮ ಉದ್ಯಾನದ ಗೋಡೆಯ ರಿಪೇರಿಯಲ್ಲಿ ನಿರತರಾಗಿದ್ದಾಗ ಅಕಸ್ಮಾತ್​ ಆಗಿ 1.6 ಟನ್ ತೂಕದ ಮರಳು ಮತ್ತು ಚಪ್ಪಡಿ ಕಲ್ಲುಗಳ ಮಿಶ್ರಣದಿಂದ ಕಟ್ಟಿದ ಗೋಡೆ ಕುಸಿದು ಬಿದ್ದಿತು. ಆಗ ಈ ಅಪರಿಚಿತ ಮತ್ತು ವಿಶಿಷ್ಟ ಪ್ರಾಣಿಯ ಅವಶೇಷವು ಕಣ್ಣಿಗೆ ಬಿದ್ದಿತು. ಅದನ್ನು ಅವರು ಜೋಪಾನವಾಗಿ ಎತ್ತಿಟ್ಟುಕೊಂಡರು.

ಇದನ್ನೂ ಓದಿ : Viral: ಯಾಕಾದರೂ ಮುಳ್ಳುಹಂದಿ ನುಂಗಿದೇನೋ ಎಂದು ಪಶ್ಚಾತ್ತಾಪ ಪಟ್ಟ ಇಸ್ರೇಲಿ ಹಾವು, ಮುಂದೆ?

ಆನಂತರ ಇದನ್ನು ಮಿಹೈಲಿಡಿಸ್​ 1997 ರಲ್ಲಿ ಸಿಡ್ನಿಯಲ್ಲಿರುವ ಆಸ್ಟ್ರೇಲಿಯನ್ ಮ್ಯೂಸಿಯಂನ ಗಮನಕ್ಕೆ ತಂದರು, ಅಲ್ಲಿ ಪ್ರಾಚೀನ ಜೀವಶಾಸ್ತ್ರಜ್ಞ ಲಾಚ್ಲಾನ್​ ಹಾರ್ಟ್ ಈ ಅವಶೇಷಗಳನ್ನು ಜೋಡಿಸಿ ವಸ್ತುಸಂಗ್ರಹಾಲಯದ ಹವಾ ನಿಯಂತ್ರಿತ ಕೊಠಡಿಯಲ್ಲಿ ದಶಕಗಳ ಕಾಲ ಸಂರಕ್ಷಿಸಿಟ್ಟು ಇದೀಗ ಪ್ರದರ್ಶನ ಏರ್ಪಡಿಸಿದ್ದಾರೆ. ಈ ಪಳೆಯುಳಿಕೆಯು ತಲೆ ಮತ್ತು ದೇಹವನ್ನು ಹೊಂದಿಲ್ಲ. ಆದರೆ ಅದರ ಹೊರಭಾಗದ ಚರ್ಮ ಮತ್ತು ಕೊಬ್ಬಿನ ಅಂಗಾಂಶಗಳಿಂದ ಒಟ್ಟಾರೆಯಾಗಿ ಈ ಜೀವಿಯ ಪಳೆಯುಳಿಕೆ ಸಂರಕ್ಷಿಸಲ್ಪಟ್ಟಿದೆ ಎಂದಿದ್ದಾರೆ.

ಇದನ್ನೂ ಓದಿ : Viral Video: ಸಂಗೀತಪ್ರೇಮಿ ಮಂಗಗಳ ಸಂಗದಲ್ಲಿ ಹೀಗೊಬ್ಬ ಪಿಯಾನೋಸಂತ

ಹಲ್ಲಿಜಾತಿಗೆ ಸೇರಿದ ಈ ಉಭಯಜೀವಿಗಳು ಸಿಡ್ನಿ ಸುತ್ತಮುತ್ತಲಿನ ಸಿಹಿನೀರಿನ ಸರೋವರಗಳು ಮತ್ತು ತೊರೆಗಳಲ್ಲಿ ವಾಸವಾಗಿವೆ; ಅಳಿವಿನಂಚಿನಲ್ಲಿರುವ ಈ ಉಭಯಚರಗಳು ಟೆಮ್ನೋಸ್ಪಾಂಡಿಲಿ ಕುಟುಂಬಕ್ಕೆ ಸೇರಿವೆ. ಆದರೆ 66 ಮಿಲಿಯನ್​ ವರ್ಷಗಳ ಹಿಂದೆ ಜ್ವಾಲಾಮುಖಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಈ ಜೀವಿಗಳೊಂದಿಗೆ ಡೈನೋಸಾರ್​​ಗಳು ಕೂಡ ಸಾಮೂಹಿಕವಾಗಿ ಸಾವನ್ನಪ್ಪಿದವು.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:00 pm, Thu, 10 August 23