Viral Video: ಫ್ಲೋರಿಡಾ; ಕಮೋಡ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇಗುವಾನಾ; ವಿಡಿಯೋ ವೈರಲ್
Iguana : ಇಗುವಾನಾ ಎಂದರೆ ಸರೀಸೃಪ ಜಾತಿಗೆ ಸೇರಿದ ಬೃಹತ್ ಗಾತ್ರದ ಹಲ್ಲಿ. ಒಂದೂವರೆ ಮೀಟರಿನಷ್ಟು ಉದ್ದ. 5 ರಿಂದ 9 ಕೆ.ಜಿ ತೂಕವಿರುತ್ತವೆ. ನೆತ್ತಿ, ಮೈಚರ್ಮ ಒರಟಾದ ಮಡಿಕೆಗಳಿಂದ ಕೂಡಿರುತ್ತದೆ. ಬೂದು, ಹಸಿರು, ನೀಲಿ, ಕೆಂಪು, ಕಿತ್ತಳೆ ಮತ್ತು ಕಂದು ಮೈಬಣ್ಣ ಹೊಂದಿರುತ್ತವೆ. ಕಮೋಡ್ನೊಳಗೆ ಹಸಿರು ಇಗುವಾನಾ ಕಂಡ ದಂಪತಿಗೆ ಹೇಗನ್ನಿಸಿರಬೇಡ?
Florida : ಇರುವೆ, ನೊಣ, ಹಲ್ಲಿ, ಜಿರಳೆ, ಸಹಸ್ರಪದಿ, ಇಲಿ, ಹೆಗ್ಗಣ ಇವೆಲ್ಲ ಟಾಯ್ಲೆಟ್ನಲ್ಲಿ ಆಗಾಗ ಕಾಣಿಸಿಕೊಳ್ಳುವುದುಂಟು. ಅಪರೂಪಕ್ಕೆ ಹಾವು ಕೂಡ. ಆದರೆ ಇಗುವಾನಾ (Iguana)?! ಯಾವುದೋ ಗುಂಗಿನಲ್ಲಿ ಟಾಯ್ಲೆಟ್ಗೆ ಹೋದವರಿಗೆ ಕಮೋಡ್ನೊಳಗೆ ಇಷ್ಟು ದೊಡ್ಡ ಪ್ರಾಣಿ ಕಂಡರೆ? ಫ್ಲೋರಿಡಾದಲ್ಲಿ ಇಂಥ ಘಟನೆಯೊಂದು ನಡೆದಿದ್ದು ಅದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಹಾಲಿವುಡ್ನ ನಿವಾಸಿ ಕ್ರಿಸ್ಟಲ್ ಕಾಲಿನ್ಸ್ ದಂಪತಿ ತಮ್ಮ ಮನೆಯ ಕಮೋಡ್ನಲ್ಲಿ ಇಗುವಾನಾ ಕಂಡು ಆಘಾತಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ : Viral: ವಿಶ್ವ ದಾಖಲೆ; ಈ ಚಹಾ ಕಿತ್ಲಿಯ ಬೆಲೆ ರೂ. 24 ಕೋಟಿ; ಇಲ್ಲಿದೆ ಇದರ ವೈಶಿಷ್ಟ್ಯ
ಕ್ರಿಸ್ಟಲ್ನ ಪತಿ ಸ್ನಾನಕ್ಕೆಂದು ಬಾತ್ರೂಮಿಗೆ ಹೋಗಿದ್ದಾರೆ. ಕಮೋಡಿನ ಮೇಲ್ಹೊದಿಕೆಯನ್ನು ತೆರೆದಾಗ ಇಗುವಾನಾ ಕಂಡಿದೆ. ಭಯದಿಂದ ದೂರ ಸರಿದಿದ್ದಾರೆ. ಆಮೇಲೆ ಅದು ಮಿಸುಕಾಡದೇ ಇದ್ದಾಗ ಪ್ರಾಣ ಕಳೆದುಕೊಂಡಿದೆ ಎಂದು ಹತ್ತಿರ ಹೋಗಿದ್ದಾರೆ. ಆದರೆ ಹಸಿರು ಇಗುವಾನಾ ತನ್ನ ಹಸಿರು ಕಣ್ಣುಗಳಿಂದ ಅವರನ್ನು ಹೊರಳಿ ನೋಡಿದೆ. ಅಂದರೆ ಕಮೋಡ್ನಲ್ಲಿ ಅಷ್ಟು ಹೊತ್ತು ಅದು ವಿಶ್ರಾಂತಿಯಲ್ಲಿತ್ತು! ಈ ಕೆಳಗಿನ ವಿಡಿಯೋ ಗಮನಿಸಿ.
ಕ್ರಿಸ್ಟಲ್ ಮತ್ತು ಅವರ ಪತಿ ಕ್ಷಣಕಾಲ ಅದನ್ನೇ ನೋಡುತ್ತ ನಿಂತರು. ಇದನ್ನು ಇಲ್ಲಿಂದ ಹೇಗೆ ಓಡಿಸುವುದು ಎಂದು ಯೋಚಿಸುತ್ತಿರುವಾಗ ಸುಟ್ಟು ಹಾಕಿದರೆ ಹೇಗೆ? ಎಂದು ತಮಾಷೆ ಮಾಡಿಕೊಂಡರು ಕೂಡ. ಆದರೆ ವಾಸ್ತವದಲ್ಲಿ ಅದನ್ನು ಆ ಜಾಗದಿಂದ ಹೊರತೆಗೆಯುವುದು ಹೇಗೆ? ನಂತರ ಸ್ನೇಹಿತರ ಸಹಾಯದಿಂದ ಅದನ್ನು ಅಲ್ಲಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ : Viral Video: ಟಿಪ್ ಟಿಪ್ ಬರ್ಸಾ ಪಾನೀ; ಮಳೆಯಲ್ಲೇ ಬೆಲ್ಲಿ ಡ್ಯಾನ್ಸ್ ಮಾಡಿದ ಬೆಡಗಿ
ಇಗುವಾನಾ ಸರೀಸೃಪಗಳ ವರ್ಗಕ್ಕೆ ಸೇರಿದ ದೊಡ್ಡ ಹಲ್ಲಿ. ಕೆಲ ಇಗುವಾನಾಗಳು ಗಾತ್ರದಲ್ಲಿ ಬಹಳ ದೊಡ್ಡವು. ಸುಮಾರು ಒಂದೂವರೆ ಮೀಟರಿನಷ್ಟು ಉದ್ದವಾಗಿರುತ್ತವೆ. 5 ರಿಂದ 9 ಕೆ.ಜಿ ತೂಕವಿರುತ್ತವೆ. ನೆತ್ತಿ ಮತ್ತು ಮೈಚರ್ಮ ಒರಟಾದ ಮಡಿಕೆಗಳಿಂದ ಕೂಡಿರುತ್ತದೆ. ಇವು ಬೂದು, ಹಸಿರು, ನೀಲಿ, ಕೆಂಪು, ಕಿತ್ತಳೆ ಮತ್ತು ಕಂದು ಮೈಬಣ್ಣವನ್ನು ಹೊಂದಿರುತ್ತವೆ.
ಇದನ್ನೂ ಓದಿ : Viral: ಜಪಾನ್; ವಿಶ್ವದ ಅತ್ಯಂತ ದುಬಾರಿ ಖಾದ್ಯ ಸುಶಿಯ ಬೆಲೆ ರೂ 2 ಲಕ್ಷ; ಏನೇನೆಲ್ಲಾ ಇದೆ ಇದರಲ್ಲಿ?
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಸೆಂಕ್ಚುರಿ ಪಾರ್ಕ್ನಲ್ಲಿ ಬೃಹದ್ಗಾತ್ರದ ಇಗುವಾನಾವನ್ನು ನೋಡಬಹುದಾಗಿದೆ. ಇವುಗಳೊಂದಿಗೆ ಇನ್ನಿತರೇ ಎಕ್ಸಾಟಿಕ್ ಪ್ರಾಣಿ ಪಕ್ಷಿಗಳನ್ನೂ ಅಲ್ಲಿ ನೋಡಬಹುದಾಗಿದೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:10 am, Sat, 12 August 23