Viral Optical Illusion; ಇಲ್ಲಿ ಗೂಬೆಯೊಂದು ಅಡಗಿದೆ, 5 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರೆ?

Eagle Owl : ರೆಡ್ಡಿಟ್​ನ ಖಾತೆದಾರರಲ್ಲಿ ಈ ಗೂಬೆ ಬಹಳ ಮುದ್ದಾಗಿದೆ, ಒಂದು ನಿಮಿಷದ ತನಕ ಹುಡುಕಿದ ನಂತರ ನನಗಂತೂ ಕಂಡಿದೆ ಎಂದಿದ್ದಾರೆ ಕೆಲವರು. ಹುಲ್ಲು, ಕಲ್ಲು ಬಿಟ್ಟರೆ ಏನೂ ಕಾಣುತ್ತಿಲ್ಲ ಎಂದಿದ್ದಾರೆ ಹಲವರು. ಮೂರ್ಖರನ್ನಾಗಿಸುವುದಕ್ಕೇ ಈ ಸವಾಲನ್ನು ಒಡ್ಡಿದ್ದೀರಿ ಎಂದಿದ್ದಾರೆ ಇನ್ನುಳಿದವರು. ನೋಡಿ ನಿಮಗೆ ಕಾಣುವುದೇ?

Viral Optical Illusion; ಇಲ್ಲಿ ಗೂಬೆಯೊಂದು ಅಡಗಿದೆ, 5 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರೆ?
ಅಡಗಿರುವ ಗೂಬೆ ಹುಡುಕಿ
Follow us
ಶ್ರೀದೇವಿ ಕಳಸದ
|

Updated on:Aug 12, 2023 | 2:11 PM

Optical Illusion : ಹದಬಿಸಿಲಿನಲ್ಲಿ ವಾರಾಂತ್ಯವನ್ನು ಆಹ್ಲಾದಕರವಾಗಿ ಕಳೆಯುತ್ತಿರುವಿರಿ. ನಿಮ್ಮ ವಿನೋದದ ಕ್ಷಣಗಳನ್ನು ಹೆಚ್ಚಿಸಲು ಮತ್ತೊಂದು ಭ್ರಮಾತ್ಮಕ ಸವಾಲಿನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತಿದ್ದೇವೆ. ಇಲ್ಲಿರುವ ಚಿತ್ರದಲ್ಲಿ ಗೂಬೆಯೊಂದು (Eagle Owl) ಅಡಗಿ ಕುಳಿತಿದೆ. ನಿಮಗೆ ಕೊಡಲಿರುವ ಸಮಯ 5 ಸೆಕೆಂಡುಗಳು ಮಾತ್ರ. ಈಗಾಗಲೇ ಇಂಥ ಅನೇಕ ಸವಾಲುಗಳನ್ನು ನೀವು ಬಿಡಿಸಿದ್ದೀರಿ. ಇದೀಗ ಈ ಸವಾಲು ಕೂಡ ಅಂಥಾ ಕ್ಲಿಷ್ಟಕರ ಎನ್ನಿಸಲಾರದು. ಪ್ರಯತ್ನಿಸಿ, ನಿಮ್ಮ ಸಮಯ ಇದೀಗ ಶುರು.

ಇದನ್ನೂ ಓದಿ : Viral Video: ಕಾವಾಲಾ; ಡ್ಯಾನ್ಸ್​ಗಿಂತ ನಿಮ್ಮ ಭಾವಾಭಿನಯವೇ ಹೆಚ್ಚು ಇಷ್ಟವಾಯಿತು ಎಂದ ನೆಟ್ಟಿಗರು

ರೆಡ್ಡಿಟ್​ನಲ್ಲಿ ಹೇಮಂತ್ ಕೆ. ಎಂಬುವವರು ಈ ಫೋಟೋ ತೆಗೆದಿದ್ದಾರೆ. ಒಮ್ಮೆಲೇ ಈ ಫೋಟೋ ನೋಡಿದಾಗ ಕುರುಚಲು ಗಿಡ, ಹುಲ್ಲು, ಸಣ್ಣಸಣ್ಣ ಕಲ್ಲುಗಳು ಮಾತ್ರ ಕಾಣುತ್ತವೆ. ಆದರೆ ಇದರಲ್ಲಿ ಗೂಬೆಯೊಂದು ಅಡಗಿದೆ. ನೆಟ್ಟಿಗರನೇಕರು ಹೆಚ್ಚಿನ ಪಾಲು ಗೂಬೆಯನ್ನು ಗುರುತಿಸುವಲ್ಲಿ ಸೋತಿದ್ದಾರೆ. ನನಗಂತೂ ಗೂಬೆ ಸಿಗಲೇ ಇಲ್ಲ ಎಂದು ಒಬ್ಬರು ಹೇಳಿದ್ದಾರೆ. ನಾನಂತೂ ಸೋತೆ ಈ ಆಟದಲ್ಲಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ಫೋಟೋ ನೋಡಿ ನಾನಂತೂ ದಡ್ಡನಾಗಿದ್ದೇನೋ ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಕೆಳಗಿನ ಫೋಟೋದಲ್ಲಿ ನೀವು ಗೂಬೆಯನ್ನು ಹುಡುಕುತ್ತೀರಿ ಎಂಬ ಅಂಬೋಣ ನಮ್ಮದು.

Spot the camowlflaged Rock Eagle owl (By Hemant K) by u/ssigea in Superbowl

ನೀವು ಎಷ್ಟು ಸಮಯ ತೆಗೆದುಕೊಂಡು ಗೂಬೆಯನ್ನು ಹುಡುಕಿದಿರಿ? 5 ಸೆಕೆಂಡುಗಳು ಸಾಲಲಾರವು ಎಂದು ನಮಗೂ ಮನವರಿಕೆ ಆಯಿತು. ಪ್ರತೀ ಕಲ್ಲು, ಹುಲ್ಲುಗಳ ನಡುವೆ ಕಣ್ಣುನೆಟ್ಟು ಹುಡುಕಿದೆ, ಎಲ್ಲೂ ಸಿಗಲೇ ಇಲ್ಲ ಎಂದಿದ್ದಾರೆ ಒಬ್ಬರು. ಬಹುಶಃ ನೀವು ನಮ್ಮನ್ನೆಲ್ಲ ಮೂರ್ಖರನ್ನಾಗಿಸಲು ಈ ಫೋಟೋ ಅಪ್​ಲೋಡ್ ಮಾಡಿದ್ದೀರಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಟಿಪ್​ ಟಿಪ್ ಬರ್ಸಾ ಪಾನೀ; ಮಳೆಯಲ್ಲೇ ಬೆಲ್ಲಿ ಡ್ಯಾನ್ಸ್ ಮಾಡಿದ ಬೆಡಗಿ

ನನಗೆ ಸಿಕ್ಕಿತು! ಒಂದು ನಿಮಿಷದಲ್ಲಿ ನನಗದು ಕಂಡಿತು, ಬಹಳ ಮುದ್ದಾಗಿದೆ ಎಂದಿದ್ದಾರೆ ಒಂದಿಷ್ಟು ಜನ. ಮನೆಮಂದಿಗೆ, ಸ್ನೇಹಿತರಿಗೆಲ್ಲ ಕಳಿಸಿ ಹುಡುಕಲು ಹೇಳಿದೆ. ಎಲ್ಲರೂ ನೋಡಿದೆ ಎಂದು ಹೇಳಿದರು, ಆದರೆ ಜಾಗದ ಸುಳಿವನ್ನೇ ಬಿಟ್ಟುಕೊಡಲಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.

ನಿಮಗೆ ಸಿಕ್ಕಿತಾ ಗೂಬೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:06 pm, Sat, 12 August 23