Viral Video: ಕಾವಾಲಾ; ಡ್ಯಾನ್ಸ್​ಗಿಂತ ನಿಮ್ಮ ಭಾವಾಭಿನಯವೇ ಹೆಚ್ಚು ಇಷ್ಟವಾಯಿತು ಎಂದ ನೆಟ್ಟಿಗರು

Kaavaalaa : ಕಾವಾಲಾದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ರೂಪದರ್ಶಿಯರು, ನೃತ್ಯಕಲಾವಿದರು, ಡಿಜಿಟಲ್ ಕ್ರಿಯೇಟರ್​ಗಳು, ನೃತ್ಯಾಸಕ್ತ ಯುವತಿಯರು, ಯುವಕರು, ಅಂಕಲ್​​ಗಳೂ ಕೂಡ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಸಮೀಕ್ಷಾ ರಸ್ತೋಗಿ ಎಂಬ ಡಿಜಿಟಲ್ ಕ್ರಿಯೇಟರ್​ನ ಈ ರೀಲ್​ ಅನ್ನು ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

Viral Video: ಕಾವಾಲಾ; ಡ್ಯಾನ್ಸ್​ಗಿಂತ ನಿಮ್ಮ ಭಾವಾಭಿನಯವೇ ಹೆಚ್ಚು ಇಷ್ಟವಾಯಿತು ಎಂದ ನೆಟ್ಟಿಗರು
ಕಾವಾಲಾ ಹಾಡಿಗೆ ನರ್ತಿಸುತ್ತಿರುವ ಸಮೀಕ್ಷಾ ರಸ್ತೋಗಿ
Follow us
|

Updated on:Aug 12, 2023 | 12:26 PM

Jailer : ರಜಿನಿಕಾಂತ್ ತಮನ್ನಾ ಭಾಟಿಯಾ (Tamanna Bhatia) ನಟಿಸಿರುವ ಜೈಲರ್‌ನ ಕಾವಾಲಾ ಹಾಡು ಕಳೆದ ಕೆಲ ವಾರಗಳಿಂದ  ಭಾರೀ ಟ್ರೆಂಡಿಂಗ್​​ನಲ್ಲಿದೆ. ಅನೇಕ ವೃತ್ತಿಪರ ಕಲಾವಿದರು ಮತ್ತು ನೃತ್ಯಾಸಕ್ತರು ಈ ಹಾಡಿಗೆ ರೀಲ್ ಮಾಡುತ್ತಿದ್ದು ಸರದಿಯಂತೆ ವೈರಲ್ ಆಗುತ್ತಲೇ ಇವೆ. ಡಿಜಿಟಲ್​ ಕ್ರಿಯೇಟರ್ ಸಮೀಕ್ಷಾ ರಸ್ತೋಗಿ ಎನ್ನುವವರು ಈ ಹಾಡಿಗೆ ಆಕರ್ಷಕವಾಗಿ ನರ್ತಿಸಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಜು. 24ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಸಾವಿರಾರು ಜನರು ಲೈಕ್ ಮಾಡಿದ್ದಾರೆ. ಅನೇಕರು ಇವರ ನೃತ್ಯಕ್ಕಿಂತ ಭಾವಾಭಿವ್ಯಕ್ತಿಯನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ : Viral Video: ಫ್ಲೋರಿಡಾ; ಕಮೋಡ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇಗುವಾನಾ; ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿಮ್ಮ ಸ್ಟೆಪ್ಸ್​ಗಿಂತ ನಿಮ್ಮ ಎಕ್ಸ್​ಪ್ರೆಷನ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ ಒಬ್ಬರು. ಬಹಳ ಮುದ್ದಾಗಿ ನರ್ತಿಸಿದ್ದೀರಿ, ಫೆಂಟಾಸ್ಟಿಕ್​ ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಕಣ್ಣುಗಳು ನನಗೆ ಇಷ್ಟವಾದವು, ಸಂತೋಷ ತುಂಬಿತುಳುಕುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ತಮನ್ನಾ ಭಾಟಿಯಾರ ಅನುಕರಣೆ ತುಂಬಾ ಚೆನ್ನಾಗಿದೆ ಎಂದಿದ್ದಾರೆ ಮಗದೊಬ್ಬರು.

ಈ ಕೆಳಗಿನ ವಿಡಿಯೋದಲ್ಲಿ ಕಾವಾಲಾ ಹಾಡಿಗೆ ಸಮೀಕ್ಷಾ ರಸ್ತೋಗಿ ಅವರ ರೀಲ್​ ನೋಡಿ:

ಈ ಕೊರಿಯೋಗ್ರಫಿ ಮಾಡಿದವರಿಗೆ ಧನ್ಯವಾದ. ಸಾಕಷ್ಟು ಶಕ್ತಿ ಮತ್ತು ಪರಿಣತಿ ಉಳ್ಳವರು ಮಾತ್ರ ಈ ನೃತ್ಯ ಮಾಡಲು ಸಾಧ್ಯ. ಈತನಕ ಈ ಹಾಡಿಗೆ ರೀಲ್ ಮಾಡಿದವರೆಲ್ಲರೂ ನಿಜಕ್ಕೂ ಚೆನ್ನಾಗಿಯೇ ನರ್ತಿಸಿದ್ದಾರೆ ಎಂದಿದ್ದಾರೆ ಒಬ್ಬರು. ಈ ಹಾಡನ್ನು ಶಿಲ್ಪಾರಾವ್​ ಬಹಳ ಚೆನ್ನಾಗಿ ಹಾಡಿದ್ದಾರೆ, ಇದು ತುಂಬಾ ಒಳ್ಳೆಯ ಟ್ರೆಂಡ್​ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ ಮತ್ತೊಬ್ಬರು.

ಜೈಲರ್​ನ ಕಾವಾಲಾ ಮೂಲ ಹಾಡನ್ನು ಈ ಕೆಳಗೆ ನೋಡಿ.

ಈ ಹಿಂದೆ ಈ ಹಾಡಿಗೆ ಮಿಸ್​ ಕೇರಳ ಇಂಡಿಯಾ ಪ್ರಿಯಾಂಕಾ ಶೆಣೈ ಮೆನನ್​ ಕೂಡ ಈ ಹಾಡಿಗೆ ನರ್ತಿಸಿದ್ದನ್ನು  ನೆಟ್ಟಿಗರನೇಕರು ಮೆಚ್ಚಿದ್ದರು. ನಂತರ ಪುರುಷರೊಬ್ಬರು ತಾವೇನು ಕಡಿಮೆ ಎಂದು ತಮನ್ನಾಳ ಹೆಜ್ಜೆಗಳನ್ನೇ ಅನುಕರಿಸಿದ್ದರು. ಜೊತೆಗೆ ತಮ್ಮದೇ ಆದ ಉಡುಪಿನ ವಿನ್ಯಾಸವನ್ನೂ ರೂಪಿಸಿಕೊಂಡಿದ್ದರು. ಈ ರೀಲ್​ಗೆ ನೆಟ್ಟಿಗರಂತೂ ಬಿದ್ದು ಬಿದ್ದು ನಕ್ಕಿದ್ದರು ಹಾಗೆಯೇ ಹುರಿದುಂಬಿಸಿದ್ದರು ಕೂಡ.

ಅಂತೂ ಕಾವಾಲಾ ಹಾಡು ಎಲ್ಲರಿಗೂ ಭರ್ಜರಿಯಾಗಿ ಗುಂಗು ಹಿಡಿಸಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:26 pm, Sat, 12 August 23

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ