AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಮಾಸೆಬೈಲು; ಕೆಸರಿನಲ್ಲಿ ಹೂತುಹೋಗಿದ್ದ ಆಕಳನ್ನು ರಕ್ಷಿಸಿದ ಬೈಕ್​ ಸವಾರರು

Rescue : ಮಳೆಗಾಲವನ್ನು ಆನಂದಿಸುತ್ತ ಅಮಾಸೆಬೈಲಿನ ಕಡೆಗೆ ಹೊರಟಿದ್ದಾರೆ ಈ ಬೈಕರ್​ಗಳು. ಕೆಸರಿನಲ್ಲಿ ಆಕಳೊಂದು ಸಿಲುಕಿರುವುದು ಕಂಡಿದೆ. ತಕ್ಷಣವೇ ಬೈಕ್ ನಿಲ್ಲಿಸಿ ಅದನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಅನ್ನು ಮೂರು ದಿನಗಳ ಹಿಂದೆ ಅಪ್​ಲೋಡ್ ಮಾಡಲಾಗಿದ್ದು ಈತನಕ ಸುಮಾರು 8 ಮಿಲಿಯನ್​ ಜನ ನೋಡಿದ್ದಾರೆ.

Viral Video: ಅಮಾಸೆಬೈಲು; ಕೆಸರಿನಲ್ಲಿ ಹೂತುಹೋಗಿದ್ದ ಆಕಳನ್ನು ರಕ್ಷಿಸಿದ ಬೈಕ್​ ಸವಾರರು
ಅಮಾಸೆಬೈಲಿನ ಬಳಿ ಕೆಸರಿನಲ್ಲಿ ಹೂತುಹೋಗಿದ್ದ ಆಕಳು
ಶ್ರೀದೇವಿ ಕಳಸದ
|

Updated on:Aug 12, 2023 | 2:56 PM

Share

Cow : ಎಡೆಬಿಡದೇ ಸುರಿಯುವ ಮಳೆ. ಎಷ್ಟೊತ್ತಿನಿಂದ ಈ ಆಕಳು ಈ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದೆಯೋ ಏನೋ. ಅಂತೂ ಬೈಕ್​ಸವಾರರಿಬ್ಬರು ಇಲ್ಲಿಗೆ ಬಂದು ಬೈಕ್ ನಿಲ್ಲಿಸುತ್ತಾರೆ. ಕೆಸರಿನಲ್ಲಿ ಹುದುಗಿಹೋಗಿರುವ ಆಕಳನ್ನು ಮೇಲಕ್ಕೆತ್ತಿ ನಡೆದು ಹೋಗಲು ಸಹಾಯ ಮಾಡುತ್ತಾರೆ. ಇನ್​ಸ್ಟಾಗ್ರಾಮ್​ನ ಆ್ಯನಿ ಅರುಣ್ ಎನ್ನುವವರು ಈ ರಸ್ತೆ ಮಾರ್ಗವಾಗಿ ಸಾಗುತ್ತಿದ್ದಾಗ ಈ ಆಕಳು ಅವರ ಕಣ್ಣಿಗೆ ಬಿದ್ದಿದೆ. ‘ನಾವು ಅಮಾಸೆಬೈಲು (Amasebailu) ಸುತ್ತಮುತ್ತಲಿನ ದಾರಿಗಳಲ್ಲಿ ಓಡಾಡುತ್ತಿದ್ದಾಗ ರಸ್ತೆಯ ಬದಿಯ ಕೆಸರಿನಲ್ಲಿ ಸಿಕ್ಕಿಬಿದ್ದಿದ್ದ ಹಸುವನ್ನು ಗಮನಿಸಿದೆವು. ನಂತರ ಅದನ್ನ ರಕ್ಷಿಸಿದೆವು. ಹತ್ತಿರದಲ್ಲಿದ್ದ ಮಹಿಳೆಯೊಬ್ಬರು ನಮಗೆ ಕೈಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿದರು. ಒಳ್ಳೆಯ ಮಳೆ ಒಳ್ಳೆಯ ಜನ’ ಎಂದು ಅವರು ಒಕ್ಕಣೆ ಬರೆದು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral Optical Illusion; ಇಲ್ಲಿ ಗೂಬೆಯೊಂದು ಅಡಗಿದೆ, 5 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು 3 ದಿನಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 8 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ. 1.3 ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸುತ್ತಿದ್ದಾರೆ. ನೀವು ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ ಎಂದು ಬೆನ್ನು ತಟ್ಟುತ್ತಿದ್ದಾರೆ. ಪ್ರಾಣಿ ಪಕ್ಷಿಗಳನ್ನು ಈ ಕಾಲದಲ್ಲಿಯೂ ರಕ್ಷಿಸುವವರಿದ್ದಾರೆ ಎಂದರೆ ಮಾನವೀಯತೆ ದಯೆ ಇನ್ನೂ ಉಳಿದಿದೆ ಎಂದು ಕೆಲವರು ಶ್ಲಾಘಿಸಿದ್ದಾರೆ.

ಅಮಾಸೆಬೈಲಿನ ಬಳಿ ಬೈಕರ್​​ಗಳು ಆಕಳನ್ನು ರಕ್ಷಿಸಿದ ವಿಡಿಯೋ ಅನ್ನು ನೋಡಿ

View this post on Instagram

A post shared by AnnyArun (@anny.arun)

ಸೋಡಿಯಮ್​ನ ಕೊರತೆಯಿಂದ ಅದು ಕಸುವು ಕಳೆದುಕೊಂಡಂತಿದೆ, ಬಹುಶಃ ಆಕಳು ಗರ್ಭಧರಿಸಿರಬಹುದು ಎಂದಿದ್ದಾರೆ ಒಬ್ಬರು. ಸೋಡಿಯಂಗೂ ಇದಕ್ಕೂ ಏನೂ ಸಂಬಂಧ ಎಂದು ಮತ್ತೊಬ್ಬರು ಕೇಳಿದ್ದಾರೆ ಅದಕ್ಕೆ ಪ್ರತಿಯಾಗ ಇವರು, ಮಾಂಸಖಂಡಗಳನ್ನು ಬಲಿಷ್ಠಗೊಳಿಸುವಲ್ಲಿ ಸೋಡಿಯಂನ ಪಾತ್ರ ಮುಖ್ಯ ಎಂದಿದ್ದಾರೆ. ನೀವು ಇಲ್ಲಿ ಸಹಾಯಕ್ಕೆ ಬರುತ್ತೀರಿ ಎಂದು ಆಕೆಗೆ ಗೊತ್ತಿತ್ತು ಎನ್ನಿಸುತ್ತದೆ, ನೋಡಿ ಎಷ್ಟು ನಿರಾಳವಾದಳು ನೀವು ಸಹಾಯ ಮಾಡಿದಮೇಲೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral: ಜಪಾನ್; ವಿಶ್ವದ ಅತ್ಯಂತ ದುಬಾರಿ ಖಾದ್ಯ ಸುಶಿಯ ಬೆಲೆ ರೂ 2 ಲಕ್ಷ; ಏನೇನೆಲ್ಲಾ ಇದೆ ಇದರಲ್ಲಿ?

ಬೈಕರ್ಸ್ ಕಮ್ಯೂನಿಟಿ ಯಾವಾಗಲು ಸಹಾಯಹಸ್ತ ಚಾಚುವಲ್ಲಿ ಮುಂದು ಎಂದು ಹೇಳಿದ್ದಾರೆ ಇನ್ನೊಬ್ಬರು. ನಿಮ್ಮ ಬಗ್ಗೆ ನನಗೆ ಮತ್ತಷ್ಟು ಪ್ರೀತಿಯುಂಟಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಒಂದು ಜೀವವನ್ನು ರಕ್ಷಿಸುವುದಕ್ಕಿಂತ ಮಹಾಕಾರ್ಯ ಬದುಕಿನಲ್ಲಿ ಏನೂ ಇಲ್ಲ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:55 pm, Sat, 12 August 23

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?