Viral: ದೆಹಲಿಯ ಗ್ರೇಟರ್ ಕೈಲಾಶ್​ನಲ್ಲಿ ಬೆಡ್ ಜೊತೆ ಟಾಯ್ಲೆಟ್ ಬಾಡಿಗೆಗೆ ಲಭ್ಯ!

Rent : ತ್ರಿಬಲ್ ಬೆಡ್ರೂಮ್, ಡಬಲ್ ಬೆಡ್ರೂಮ್​, ಸಿಂಗಲ್ ಬೆಡ್ರೂಮ್​, ಸಿಂಗಲ್​ ರೂಮ್​​ ಹೀಗೆ ಬಾಡಿಗೆ ಮನೆಯ ಬೋರ್ಡ್​​ಗಳನ್ನು ನೋಡಿರುತ್ತೀರಿ. ಆದರೆ ಬೆಡ್​ ವಿಥ್​ ಬಾತ್ರೂಮ್​ ನೋಡಿದ್ದೀರಾ? ಇಲ್ಲಿ ನೋಡಿ, ಈ ಫೋಟೋಗೆ ಬಂದಿರುವ ಪ್ರತಿಕ್ರಿಯೆಗಳನ್ನೂ ಓದಿ. ಈ ಫೋಟೋ ದೆಹಲಿಯ ಗ್ರೇಟರ್ ಕೈಲಾಶ್​ನ ಬಾಡಿಗೆ ರೂಮಿನದು ಎಂದು ಈ ಪೋಸ್ಟ್ ಹೇಳುತ್ತಿದೆ.

Viral: ದೆಹಲಿಯ ಗ್ರೇಟರ್ ಕೈಲಾಶ್​ನಲ್ಲಿ ಬೆಡ್ ಜೊತೆ ಟಾಯ್ಲೆಟ್ ಬಾಡಿಗೆಗೆ ಲಭ್ಯ!
ದೆಹಲಿಯ ಗ್ರೇಟರ್​ ಕೈಲಾಶ್​ನಲ್ಲಿ ಬಾಡಿಗೆಗೆ ಇರುವ ಬೆಡ್​ ವಿಥ್ ಟಾಯ್ಲೆಟ್
Follow us
ಶ್ರೀದೇವಿ ಕಳಸದ
|

Updated on:Aug 17, 2023 | 3:59 PM

Delhi: ಬಾಡಿಗೆಯ ಮನೆ (Rent) ಅಥವಾ ಕೋಣೆ ಎಂದಾಗ ಬಹಳ ನಿರೀಕ್ಷೆ ಮಾಡಲಾಗದು. ಇರುವುದರಲ್ಲಿಯೇ ಹೊಂದಾಣಿಕೆ ಮಾಡಿಕೊಳ್ಳಬೇಕು. ಇಕ್ಕಟ್ಟು ಬಿಕ್ಕಟ್ಟುಗಳನ್ನೆಲ್ಲ ಪಕ್ಕಕ್ಕೆ ತಳ್ಳಿ ಚೊಕ್ಕಟವಾಗಿ ಇಟ್ಟುಕೊಂಡರೆ ಮಾತ್ರ ನೆಮ್ಮದಿಯಿಂದ ಉಸಿರಾಡಬಹುದು. ಹೌದಲ್ಲವೆ? ಆದರೆ ಇದೀಗ ವೈರಲ್ ಆಗಿರುವ ಈ ಫೋಟೋ ನೋಡಿದರೆ ನಿಮಗೇನು ಅನ್ನಿಸುತ್ತದೆಯೋ? ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿರುವ ಈ ಕೋಣೆ ಬಾಡಿಗೆಗೆ ಇದ್ದು ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಫೋಟೋ ನೋಡಿದ ಜಾಲತಾಣಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. ಮನಬಂದಂತೆ ಪ್ರತಿಕ್ರಿಯಿಸಿ ಮಜಾ ಉಡಾಯಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಕಾವಾಲಾ ಕಾವು; ರಜಿನಿ ಅಭಿಮಾನಿ ಜಪಾನ್ ರಾಯಭಾರಿ ಯೂಟ್ಯೂಬರ್​ನೊಂದಿಗೆ ಡ್ಯಾನ್ಸ್ 

ರೂಮ್ ವಿತ್ ಅಟ್ಯಾಚ್ಡ್​ ಬಾತ್ರೂಮ್​ ಟಾಯ್ಲೆಟ್ ಎಲ್ಲೆಡೆ ಲಭ್ಯ. ಆದರೆ ಬೆಡ್​ ವಿಥ್ ಟಾಯ್ಲೆಟ್​!? ಅದೂ ಹೀಗೆ ಗೋಡೆ ಬಾಗಿಲುಗಳಿಲ್ಲದೆ!? ಈ ರೂಮ್​ ಗಮನಿಸಿ, ಸಣ್ಣ ಹಾಸಿಗೆ ಇದೆ, ಕಿಟಕಿಗೆ ಕರ್ಟನ್​ ಇದೆ, ಟೇಬಲ್ ಫ್ಯಾನ್​ ಕೂಡ ಇದೆ. ಆದರೆ ವೆಸ್ಟರ್ನ್​ ಕಮೋಡ್​ ಮತ್ತು ಕ್ಯೂಬಿಕಲ್​ ಬಾತ್ರೂಮ್​ ಜೊತೆಗೆ ಶವರ್​! ನೆಟ್ಟಿಗರಂತೂ ಬೆಚ್ಚಿಬಿದ್ದು ಈ ಫೋಟೋ ನೋಡುತ್ತಿದ್ದಾರೆ ನೀವು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೋಡಿ ಬೆಡ್​ ವಿತ್​ ಟಾಯ್ಲೆಟ್​ ಫೋಟೋ

What’s the max rent you would pay for this kind of place in GK2? by u/supermarketblues in delhi

ಗ್ರೇಟರ್ ಕೈಲಾಶ್​ ದೆಹಲಿಯ ಐಷಾರಾಮಿ ಪ್ರದೇಶಗಳಲ್ಲಿ ಒಂದಾಗಿದ್ದು ದೊಡ್ಡ ದೊಡ್ಡ ಬಂಗಲೆಗಳಿಗೆ ಹೆಸರುವಾಸಿಯಾಗಿದೆ. ಇಂಥ ಪ್ರದೇಶದಲ್ಲಿ ಇಂಥ ಕೋಣೆ!? ರೆಡ್ಡಿಟ್​ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್​ಗೆ ಈತನಕ 1,100 ಕ್ಕೂ ಹೆಚ್ಚು ಜನರು ಲೈಕ್​ ಮಾಡಿದ್ದು 600 ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಇದರ ಸತ್ಯಾಸತ್ಯತೆಯ ಬಗ್ಗೆ ಗೊತ್ತಿಲ್ಲ. ಆದರೆ ಈ ಫೋಟೋ ಅಂತೂ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.

ಇದನ್ನೂ ಓದಿ : Viral Video: ಜೈಲರ್; ಕೊರಿಯನ್​ ಕಾವಾಲಾ ರೀಲ್ 15 ಮಿಲಿಯನ್ ವೀಕ್ಷಣೆ

ಇದು ಕೋಣೆಯಲ್ಲ ವಿಶೇಷ ಸೌಲಭ್ಯವುಳ್ಳ ಜೈಲು! ಎಂದಿದ್ದಾರೆ ಒಬ್ಬರು. ಇಲ್ಲಿ ಮಲಗಿದವರ ಗತಿ ಏನು? ಆದಷ್ಟು ಬೇಗ ಅನಾರೋಗ್ಯದಿಂದ ಅವರ ಕಥೆ ಅಷ್ಟೇ! ಎಂದಿದ್ದಾರೆ ಇನ್ನೊಬ್ಬರು. ಈ ಕೋಣೆಯಲ್ಲಿರುವ ವ್ಯಕ್ತಿ ತನ್ನ ಸ್ನೇಹಿತರನ್ನು, ಮನೆಯವರನ್ನು ಇನ್ನ್ಯಾರನ್ನೂ ಒಳಗೆ ಕರೆಯುವ ಹಾಗೆಯೇ ಇಲ್ಲ! ಎಂದಿದ್ದಾರೆ ಮತ್ತೊಬ್ಬರು.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:58 pm, Thu, 17 August 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ