Viral Video: ಜೈಲರ್; ಕೊರಿಯನ್​ ಕಾವಾಲಾ ರೀಲ್ 15 ಮಿಲಿಯನ್ ವೀಕ್ಷಣೆ

Jailer : ರೂಪದರ್ಶಿಗಳು, ವೃತ್ತಿಪರ ನೃತ್ಯಕಲಾವಿದರು, ಸಿನೆಮಾ ಕಲಾವಿದರು, ಡಿಜಿಟಲ್ ಕ್ರಿಯೇಟರ್​​ಗಳು, ಜಪಾನಿಗರು ಮತ್ತೀಗ ಕೊರಿಯನ್ನರು. ಎಲ್ಲಿ ನೋಡಿದರೂ ರಜಿನಿಕಾಂತ ಮತ್ತು ತಮನ್ನ ಅಭಿನಯದ ಜೈಲರ್​ನದ್ದೇ ಸುದ್ದಿ. ಕಾವಾಲಾ ಹಾಡಿನದ್ದೇ ರೀಲ್ಸ್​​. ಈ ನಾಲ್ವರು ಕೊರಿಯನ್​ ಹುಡುಗರ ನೃತ್ಯವನ್ನು ಜಗತ್ತಿನಾದ್ಯಂತ ಜನರು ಮೆಚ್ಚಿದ್ದಾರೆ. ಅಂತೂ ಕಾವಾಲಾ ಗಾಳಿ ಜೋರಾಗಿಯೇ ಇದೆ!

Viral Video: ಜೈಲರ್; ಕೊರಿಯನ್​ ಕಾವಾಲಾ ರೀಲ್ 15 ಮಿಲಿಯನ್ ವೀಕ್ಷಣೆ
ಕಾವಾಲಾಕ್ಕೆ ಹೆಜ್ಜೆ ಹಾಕುತ್ತಿರುವ ಕೊರಿಯನ್ ಹುಡುಗರು
Follow us
ಶ್ರೀದೇವಿ ಕಳಸದ
|

Updated on: Aug 17, 2023 | 1:10 PM

Kaavaalaa : ನಿನ್ನೆಯಷ್ಟೇ ಜಪಾನೀ ಯುವಕನೊಬ್ಬ ಕಾವಾಲಾ ಹಾಡಿಗೆ ಹೆಜ್ಜೆ ಹಾಕಿದ್ದನ್ನು ನೋಡಿದ್ದಿರಿ. ಇದೀಗ ಕೊರಿಯನ್​ ಹುಡುಗರು ಈ ಹಾಡಿಗೆ ರೀಲ್ಸ್ ಮಾಡಿ ಈ ರೀಲ್​ಗೆ 15.2 ಮಿಲಿಯನ್​ ವೀಕ್ಷಕರನ್ನೂ ಗಳಿಸಿದ್ದಾರೆ. ಎಲ್ಲಿ ನೋಡಿದರೂ ಕಾವಾಲಾ ಮಹಿಮೆ, ಜೈಲರ್​ನದ್ದೇ (Jailer) ಹವಾ. ಅದ್ಭುತವಾಗಿ ಈ ಹಾಡಿಗೆ ಲಿಪ್​ಸಿಂಕ್ ಮಾಡಿ ಗಮನ ಸೆಳೆದಿದ್ದಾರೆ ಈ ಕೊರಿಯನ್ ಹುಡುಗರು. ಜು. 20 ರಂದು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ 1.6 ಮಿಲಿಯನ್​ ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಅನೇಕ ಭಾರತೀಯರು ಈ ವಿಡಿಯೋ ಅನ್ನು ಪ್ರೋತ್ಸಾಹಿಸಿದ್ದಾರೆ.

ಇದನ್ನೂ ಓದಿ : Viral: ಉಬರ್ ಆಟೋ ರೈಡ್ ಕೇವಲ ರೂ 6, ಏನಿದು ಬೆಂಗಳೂರಿನಲ್ಲಿ ಮ್ಯಾಜಿಕ್?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜಗತ್ತಿನಾದ್ಯಂತ ಅನೇಕ ವಿಡಿಯೋ ಕಂಟೆಂಟರ್​​ಗಳ ಮನಸ್ಸನ್ನು ಗೆದ್ದಿದೆ ರಜಿನಿಕಾಂತ್ ಮತ್ತು ತಮನ್ನಾ ಅಭಿನಯದ ಜೈಲರ್​ ಸಿನೆಮಾದ ಈ ಕಾವಾಲಾ ಹಾಡು. ಈ ಹಾಡಿನ ಲಯವಿನ್ಯಾಸ, ಧಾಟಿ ಮತ್ತು ತಮನ್ನಾರ ಜಬರ್​ದಸ್ತ್ ನೃತ್ಯ ಭಾರೀ ಟ್ರೆಂಡ್​ ಸೃಷ್ಟಿಸಿದೆ. ಯಾವ ರೀಲ್ ನೋಡಿದರೂ ಮಿಲಿಯನ್​ ವೀಕ್ಷಣೆ ಖಚಿತ.

ನೋಡಿ ಕೊರಿಯನ್ ಹುಡುಗರ ಈ ರೀಲ್

ಓಹ್ ಇದು ಇಂಡಿಯನ್ ಸಾಂಗ್​, ಎಷ್ಟು ಚೆನ್ನಾಗಿ ನರ್ತಿಸಿದ್ದಾರೆ ನಮ್ಮ ದೇಶದ ಹುಡುಗರು ಎಂದು ಒಬ್ಬರು ಹೇಳಿದ್ದಾರೆ. ಜೈಶ್ರೀರಾಮ್ ಸಂತತಿಯ ಎಲ್ಲರೂ ಈ ರೀಲಿಗೆ ಲೈಕ್ ಮಾಡಿ ಎಂದಿದ್ದಾರೆ ಇನ್ನೊಬ್ಬರು. ಆಯ್ತು ಅಂಧಭಕ್ತ ಎಂದು ಮತ್ತೊಬ್ಬರು ಹೇಳಿದ್ದಾರೆ. ಓಹೋ ಈ ರೀಲಿನಲ್ಲಿರುವವರು ಗೇಗಳು ಎಂದು ಒಬ್ಬರು ಹೇಳಿದ್ದಾರೆ. ಯೋಚಿಸಿ ಪ್ರತಿಕ್ರಿಯಿಸಿ ಎಂದು ಕೆಲವರು ಸಿಟ್ಟಿಗೆದ್ದಿದ್ದಾರೆ. ಇನ್ನೂ ಕೆಲವರು ಬಹಳ ಮುದ್ಧಾದ ಹುಡುಗಿಯರು ಎಂದು ಹೇಳಿದ್ದಾರೆ. ಗಡ್ಡಮೀಸೆ ಇಲ್ಲದಿದ್ದರೆ ಗೇ ಎಂದು ಹೇಳುತ್ತೀರೆ? ಎಂದು ಕೇಳಿದ್ದಾರೆ ಇನ್ನೂ ಕೆಲವರು.

ಇದನ್ನೂ ಓದಿ : Viral Video: ಅಟ್ಟಾವೇರ್; ಈ ತಟ್ಟೆಯಲ್ಲಿ ತಿನ್ನಿ ಅದರೊಂದಿಗೆ ಲೋಟ, ಚಮಚ, ಬಟ್ಟಲನ್ನೂ ತಿಂದುಬಿಡಿ

ನೀವು ಏನೇ ಆಗಿರ್ರಿ ಭಾರತದಿಂದ ನಿಮಗೆ ಪ್ರೀತಿ ಮತ್ತು ಪ್ರೋತ್ಸಾಹದ ಸುರಿಮಳೆ ಎಂದಿದ್ದಾರೆ ಕೆಲವರು. ಹೀಗೆಲ್ಲ ಮಾತನಾಡುವುದನ್ನು ಬಿಟ್ಟು ಗೌರವದಿಂದ ಅವರನ್ನು ಕಾಣಿ, ಕೊರಿಯನ್ನರು ಭಾರತೀಯ ಸಿನೆಮಾದ ಬಗ್ಗೆ ಆಸಕ್ತಿ ತೋರಿರುವದನ್ನಷ್ಟೇ ಗಮನಿಸಿ ಎಂದಿದ್ದಾರೆ ಮತ್ತಷ್ಟು ಜನ. ಜಗತ್ತಿನ ಸಿನಿಪ್ರೇಮಿಗಳೆಲ್ಲರನ್ನೂ ಬಡಿದೆಬ್ಬಿಸಿದ ಈ ಹಾಡಿನ ಶಕ್ತಿಯ ಬಗ್ಗೆ ಅನೇಕರು ಕೊಂಡಾಡಿದ್ದಾರೆ, ತಮನ್ನಾರ ನೃತ್ಯವನ್ನೂ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ