Viral Video: ಅಟ್ಟಾವೇರ್; ಈ ತಟ್ಟೆಯಲ್ಲಿ ತಿನ್ನಿ ಅದರೊಂದಿಗೆ ಲೋಟ, ಚಮಚ, ಬಟ್ಟಲನ್ನೂ ತಿಂದುಬಿಡಿ

AttaWareCutlery : ಈ ತಟ್ಟೆಬಟ್ಟಲುಗಳಲ್ಲಿ 6 ಗಂಟೆಗಳ ಕಾಲ ಆಹಾರ ಪದಾರ್ಥಗಳನ್ನು ಹಾಕಿಡಬಹುದು. ಮೈಕ್ರೋವೇವ್​ ಮತ್ತು ಶೀತಲೀಕರಣದಲ್ಲಿ ಕೂಡ ಬಳಸಬಹುದು. ಇವುಗಳ ಬೆಲೆ ರೂ. 5ರಿಂದ 25ರೂ. ಊಟದ ನಂತರ ಬೇಕೆನ್ನಿಸಿದರೆ ತಿನ್ನಬಹುದು ಇಲ್ಲವೆ ತಿಪ್ಪೆಗೆಸೆದರೆ ಪ್ರಾಣಿ ಪಕ್ಷಿ ಜೀವ ಜಂತುಗಳು ತಿನ್ನುತ್ತವೆ. ಹಾಗಾದರೆ ಬನ್ನಿ ಈ ಅಟ್ಟಾವೇರ್​ನ ಪ್ರಯಾಣದ ಬಗ್ಗೆ ತಿಳಿದುಕೊಳ್ಳಿ.

Viral Video: ಅಟ್ಟಾವೇರ್; ಈ ತಟ್ಟೆಯಲ್ಲಿ ತಿನ್ನಿ ಅದರೊಂದಿಗೆ ಲೋಟ, ಚಮಚ, ಬಟ್ಟಲನ್ನೂ ತಿಂದುಬಿಡಿ
ಊಟದ ನಂತರ ಅಟ್ಟಾವೇರ್ ಪ್ಲೇಟ್​​ಗಳನ್ನು ಚಮಚಗಳನ್ನು ಹೀಗೆ ತಿನ್ನಬಹುದು.
Follow us
|

Updated on:Aug 17, 2023 | 11:07 AM

Attaware : ಒಂದು ವರ್ಷಕ್ಕೆ ನಮ್ಮ ದೇಶದಲ್ಲಿ 9.46 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಗೊಳ್ಳುತ್ತದೆ. ಇದರಲ್ಲಿ ಶೇ. 43 ಪ್ಯಾಕೇಜಿಂಗ್​ ಮತ್ತು ಪ್ಲಾಸ್ಟಿಕ್ ತಟ್ಟೆಬಟ್ಟಲುಗಳಿಗೆ ಉಪಯೋಗಿಸಲಾಗುತ್ತದೆ. ಇದರಿಂದಾಗಿ ಮನುಷ್ಯರೊಂದಿಗೆ ಪ್ರಾಣಿಗಳ ಮೇಲೂ ಪ್ಲಾಸ್ಟಿಕ್​​ ಬಹುದೊಡ್ಡ ಪರಿಣಾಮ ಬೀರುತ್ತಿದ್ದು, ಇದಕ್ಕೆ ಕೊನೆಯೇ ಇಲ್ಲವೇ ಎಂಬಂತಾಗಿದೆ. ಏಕೆಂದರೆ ಪ್ಲಾಸ್ಟಿಕ್ 500 ವರ್ಷಗಳು ಕಳೆದರೂ ಕೊಳೆಯುವುದೇ ಇಲ್ಲ. ಹಾಗಾಗಿ ಪರಿಸರವನ್ನು (Environment) ಸುಸ್ಥಿತಿಯಲ್ಲಿಟ್ಟುಕೊಳ್ಳಲು ಏನು ಮಾಡಬೇಕು? ಯಾವ ಕಾಲಕ್ಕೂ ಪರ್ಯಾಯ ಎನ್ನುವುದೊಂದು ಇದ್ದೇ ಇರುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ‘ಅಟ್ಟಾವೇರ್​’ ಇದಕ್ಕೆ ಪರಿಹಾರದಂತೆ ಕಾಣುತ್ತಿದೆ.

ಇದನ್ನೂ ಓದಿ : Viral Video: ಇಂಜೆಕ್ಷನ್​ ಕೊಟ್ಟರೂ ನಗುತ್ತವೆ ಈ ಮಕ್ಕಳು; ಹೈಫೈ ಡಾಕ್ಟರ್ ಮ್ಯಾಜಿಕ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಏನಿದು ಅಟ್ಟಾವೇರ್​?

ಈಟ್ ಇನ್​ ಇಟ್​ ಅಂಡ್​ ಈಟ್ ಇಟ್​. ಇದರಲ್ಲಿ ತಿನ್ನಿ ಮತ್ತು ಇದನ್ನೂ ತಿನ್ನಿ ಎಂಬುದು ಈ ಅಟ್ಟಾವೇರ್​ನ ಟ್ಯಾಗ್​ಲೈನ್​. ಈ ತಟ್ಟೆಬಟ್ಟಲುಗಳನ್ನು ಎಲ್ಲಾ ರೀತಿಯ ದವಸಧಾನ್ಯ ಮತ್ತು ಬೆಲ್ಲದಿಂದ ತಯಾರಿಸಲಾಗುತ್ತದೆ. ಎಲ್ಲಾ ರೀತಿಯ ಅಕ್ಕಿ, ಗೋಧಿ, ಬಾರ್ಲಿ, ಜೋಳ ಇತ್ಯಾದಿ. ಧಾನ್ಯಗಳನ್ನು ಕಬ್ಬಿನ ರಸದೊಂದಿಗೆ ಮಿಶ್ರಣ ಮಾಡಿ ಅತೀ ಹೆಚ್ಚು ತಾಪಮಾನದಲ್ಲಿ ಬೆಲ್ಲವನ್ನು ತಯಾರಿಸಲಾಗುತ್ತದೆ. ಈ ಬೆಲ್ಲವನ್ನು ಅಚ್ಚುಗಳಲ್ಲಿ ಹಾಕಿ ಅವು ತಣ್ಣಗಾದ ನಂತರ ಪಾತ್ರೆಗಳ ಆಕಾರವನ್ನು ಕೊಡಲಾಗುತ್ತದೆ. ಇವುಗಳನ್ನು 5-6ತಾಸುಗಳ ತನಕ ಇಟ್ಟರೂ ಕರಗುವುದಿಲ್ಲ, ಒದ್ದೆಯಾಗುವುದಿಲ್ಲ ಅಥವಾ ಸೂಕ್ಷ್ಮಜೀವಿಗಳನ್ನು ಉತ್ಪತ್ತಿ ಮಾಡಲಾಗುವುದಿಲ್ಲ. ಅಲ್ಲದೆ 6 ತಿಂಗಳುಗಳ ಕಾಲ ಇವುಗಳನ್ನು ಇಟ್ಟಕೊಳ್ಳಬಹುದಾಗಿದೆ.

ನೋಡನೋಡುತ್ತಿದ್ದಂತೆ ಪ್ಲೇಟನ್ನೂ ತಿನ್ನುವ ಬಗೆ ನೋಡಿ

ಯಾರು ಇದರ ಸ್ಥಾಪಕರು?

ಅಟ್ಟಾವೇರ್​ ಬಯೋಡೀಗ್ರೇಡಬಲ್ ಪ್ರೈವೇಟ್ ಲಿಮಿಟೆಡ್​ನ ಸಂಸ್ಥಾಪಕ ಮತ್ತು ನಿರ್ದೇಶಕರಾದ ಪುನೀತ್ ದತ್ತಾ 2019ರ ಆ. 15ರಂದು ಈ ಕಂಪೆನಿಯನ್ನು ಶುರುಮಾಡಿದರು. ಅವರು ಒಂದು ದಿನ ದೆಹಲಿಯಿಂದ ವೃಂದಾವನಕ್ಕೆ ಪ್ರಯಾಣಿಸುತ್ತಿದ್ದರು. ಯಮುನಾ ನದಿ ದಡದಲ್ಲಿ ಏನೋ ತೇಲುತ್ತಿರುವುದು ಕಂಡುಬಂದಿತು. ಆಗ ಕಾರನ್ನು ನಿಲ್ಲಿಸಿ  ನೋಡಿದರೆ ಸುಮಾರು 7.5 ಕಿ.ಮೀ ದೂರದಷ್ಟು ಥರ್ಮಾಕೋಲ್​ ಪ್ಲೇಟ್​​ಗಳು ತೇಲಾಡುತ್ತಿದ್ದವು. ಇದನ್ನು ಕಂಡು ಅವರು ಚಿಂತೆಗೀಡಾದರು.

ಚಹಾ ಕುಡಿಯುತ್ತಲೇ ಲೋಟವನ್ನೂ ತಿನ್ನುವ ಬಗೆ ನೋಡಿ

ಮೊಳೆತ ಬೀಜ

ನಂತರ ಅವರು ವೃಂದಾವನನ್ನು ತಲುಪಿದಾಗ ಅಲ್ಲಿಯ ಸಾಧುಗಳಿಗೆ ತಿಂಡಿತಿನಿಸುಗಳನ್ನು ಬಡಿಸುತ್ತಿರುವ ದೃಶ್ಯವನ್ನು ನೋಡಿದರು. ಆದರೆ ಒಬ್ಬ ವೃದ್ಧರಿಗೆ ತಟ್ಟೆ ಸಿಗಲಿಲ್ಲ. ಆದರೆ ಅವರು ಎರಡು ಪೂರಿಗಳನ್ನು ಕೈಯಲ್ಲಿಟ್ಟುಕೊಂಡು ಅದರ ಮೇಲೆ ತಿನಿಸನ್ನು ಬಡಿಸಲು ಕೇಳಿಕೊಂಡರು. ಯಮನುನಾ ನದಿಯಲ್ಲಿ ತೇಲಿಬಂದ ಥರ್ಮಾಕೋಲ್ ಪ್ಲೇಟ್​ಗಳು ಕಣ್ಮುಂದೆ ಬಂದವು. ಆಗಲೇ ಪುನೀತ್​ಗೆ ಅಟ್ಟಾವೇರ್​​ ಪರಿಕಲ್ಪನೆಯ ಬೀಜ ಮೊಳೆಯಿತು. ದೆಹಲಿ ಮೂಲದ ಪುನೀತ ಕ್ಯಾಲಿಫೋರ್ನಿಯಾದಲ್ಲಿ ಗ್ಲೋಬಲ್ ರಿಕ್ರ್ಯೂಟ್​ಮೆಂಟ್ ಮ್ಯಾನೇಜರ್ ಆಗಿದ್ದವರು ಈ ಮೂಲಕ ಉದ್ಯಮಿಯಾಗಿದ್ದಾರೆ.

ನಾಯಿಯ ಹಸಿವೂ ತಣಿಯುತ್ತದೆ ಆರೋಗ್ಯವೂ ಸುಧಾರಿಸುತ್ತದೆ

ಸಕಲ ಜೀವರಾಶಿಗಳ ಹಸಿವ ತಣಿಕೆಗೆ

ಗೋಧಿಯಿಂದ ಮಾಡಿದ ಹಪ್ಪಳ, ರೊಟ್ಟಿಯಂತೆಯೇ ಕಾಣುವ ಇವುಗಳನ್ನು ಊಟ, ತಿಂಡಿ ಮಾಡಿದ ನಂತರ ತಿನ್ನಬಹುದು, ಆದರೆ ಹೆಚ್ಚು ರುಚಿಯನ್ನು ಹೊಂದಿರಲಾರವು. ತಿನ್ನಲು ಇಷ್ಟವಾಗದಿದ್ದರೆ ತಿಪ್ಪೆಗೆ ಎಸೆಯಬಹುದು. ಅಲ್ಲಿ ಹಸು, ಪ್ರಾಣಿ, ಕೀಟಗಳು ಇವುಗಳನ್ನು ತಿನ್ನುತ್ತವೆ. ಇಲ್ಲವಾದಲ್ಲಿ ಇವುಗಳ ಕೊಳೆಯಲು 2 ವರ್ಷಗಳನ್ನು ತೆಗೆದುಕೊಳ್ಳುತ್ತದೆವೆ. ಆದರೆ ಅದೇ ಥರ್ಮಾಕೋಲ್​ ಪ್ಲೇಟ್​ಗಳು ಕೊಳೆಯಲು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತವೆ.

ನಿಮಗೆ ತಿನ್ನಲು ಇಷ್ಟವಿಲ್ಲವಾದರೆ ತೊಟ್ಟಿಗೆ ಎಸೆಯಿರಿ, ಆಗ ನೋಡಿ!

ನೀವು ಖರೀದಿಸಬಹುದೆ?

ಯಾವುದೇ ರೀತಿಯ ಮಾಲಿನ್ಯವನ್ನು ಉಂಟುಮಾಡದ ಈ ಅಟ್ಟಾವೇರ್​​ಗಳು ಭೂಮಿಗೆ ಮರಳುತ್ತವೆ. WHO, SSI ಮತ್ತು ಆರೋಗ್ಯ ಸಚಿವಾಲಯವು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಬಳಸಲು ಸುರಕ್ಷಿತ ಉತ್ಪನ್ನವೆಂದು ಪ್ರಮಾಣಿಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಮೈಕ್ರೋವೇವ್​ ಮತ್ತು ಶೀತಲೀಕರಣದಲ್ಲಿ ಕೂಡ ಇವುಗಳನ್ನು ಬಳಸಬಹುದಾಗಿದೆ. ಯಾವುದೇ ಕೃತಕ ಬಣ್ಣ ರಸಾಯನಿಕವನ್ನು ಸೇರಿಸಾಗಿಲ್ಲ. ಇವುಗಳ ಬೆಲೆ ರೂ. 5ರಿಂದ 25ರೂ. ಭಾತರದ 86 ನಗರಗಳಲ್ಲಿ ಮತ್ತು ವಿಶ್ವದ 89 ದೇಶಗಳಲ್ಲಿ ಈ ಉತ್ಪನ್ನಗಳ ತಯಾರಿಕಾ ಘಟಕವನ್ನು ಪ್ರಾರಂಭಿಸುವ ಯೋಜನೆ ಇದೆ. ಖರೀದಿಗಾಗಿ ಮತ್ತು ಫ್ರಾಂಚೈಸೆಗಾಗಿ ಅಟ್ಟಾವೇರ್​ನ ಇನ್​ಸ್ಟಾಗ್ರಾಂನ ಬಯೋನಲ್ಲಿ ಲಿಂಕ್​ ಗಮನಿಸಬಹುದು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:57 am, Thu, 17 August 23