Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇಂಜೆಕ್ಷನ್​ ಕೊಟ್ಟರೂ ನಗುತ್ತವೆ ಈ ಮಕ್ಕಳು; ಹೈಫೈ ಡಾಕ್ಟರ್ ಮ್ಯಾಜಿಕ್

HiFive Doctor : ಜಗತ್ತಿನಲ್ಲಿರುವ ಎಲ್ಲಾ ವೈದ್ಯರಿಗೂ ಇಂಥದೇ ಶಕ್ತಿ, ತಾಳ್ಮೆ, ಪ್ರೀತಿ, ಅಂತಃಕರಣ ಮತ್ತು ಎಲ್ಲಕ್ಕಿಂತ ಮೇಲಾಗಿ ವಿನೋದಪ್ರಜ್ಞೆಯನ್ನು ದಯಪಾಲಿಸು ಎಂದು ಬೆಂಗಳೂರಿನ ಈ ಹೈಫೈ ಡಾಕ್ಟರ್​​ ವಿಡಿಯೋಗಳಡಿ ನೆಟ್ಟಿಗರು ಕೇಳಿಕೊಳ್ಳುತ್ತಿರುತ್ತಾರೆ. ಅವರು ಮಾಡುವ ಮ್ಯಾಜಿಕ್​ನ ಮೂಲ ಏನು? ನಿಮಗೇನಾದರೂ ಗೊತ್ತೇ? ವಿಡಿಯೋ ನೋಡಿ.

Viral Video: ಇಂಜೆಕ್ಷನ್​ ಕೊಟ್ಟರೂ ನಗುತ್ತವೆ ಈ ಮಕ್ಕಳು; ಹೈಫೈ ಡಾಕ್ಟರ್ ಮ್ಯಾಜಿಕ್
ಬೆಂಗಳೂರಿನ ಮಕ್ಕಳ ತಜ್ಞ ಡಾ. ಸಯ್ಯದ್ ಮುಜಾಹಿದ ಹುಸೇನ್​ ಮಕ್ಕಳಿಗೆ ಇಂಜೆಕ್ಷನ್​ ಚುಚ್ಚುತ್ತಿರುವ ದೃಶ್ಯಗಳು
Follow us
ಶ್ರೀದೇವಿ ಕಳಸದ
|

Updated on:Aug 16, 2023 | 5:42 PM

Injection: ಇಂಜೆಕ್ಷನ್​ ಎಂದರೆ ಮಕ್ಕಳು ಹೋಗಲಿ ದೊಡ್ಡವರಲ್ಲಿಯೂ ಕೆಲವರಿಗೆ ಸಣ್ಣಗೆ ಮೈನಡುಕ ಬರುತ್ತದೆ. ಎಷ್ಟು ಬೇಕಾದರೂ ಮಾತ್ರೆ ಕೊಡಿ ಇಂಜೆಕ್ಷನ್ ಮಾತ್ರ ಬೇಡ ಎನ್ನುತ್ತಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಲಸಿಕೆ (Corona Vaccination) ತೆಗೆದುಕೊಳ್ಳುವ ವಿಡಿಯೋಗಳನ್ನು ನೋಡಿದ ಮೇಲೆ ಗೊತ್ತಾಗಿರಬೇಕಲ್ಲ, ದೊಡ್ಡವರೆನ್ನಿಸಿಕೊಂಡ ಕೆಲವರಿಗೆ ಇಂಜೆಕ್ಷನ್​ ಕೊಡುವುದೆಂದರೆ ಎಷ್ಟೊಂದು ಹರಸಾಹಸ ಮಾಡಬೇಕಾಗುತ್ತದೆ ಅಂತ. ಅದು ಬಿಡಿ, ಬೆಂಗಳೂರಿನ ಈ ಹೈಫೈ ಡಾಕ್ಟರ್ ಕಡೆ ಇಂಜೆಕ್ಷನ್​ ಹಾಕಿಸಿಕೊಳ್ಳುವ ಮಕ್ಕಳು ಮಾತ್ರ ಇಂಜೆಕ್ಷನ್​ ಕೊಟ್ಟಾದ ಮೇಲೆಯೂ ನಗುತ್ತಲೇ ಇರುತ್ತವೆ ಎನ್ನುವ ವಿಷಯ ನಿಮಗೆ ಗೊತ್ತೆ? ಮಕ್ಕಳ ತಜ್ಞ ಡಾ. ಸಯ್ಯದ್ ಮುಜಾಹಿದ್ ಹುಸೇನ್ (Dr Sayed Mujahid Husain)ರ ಕೈಯಲ್ಲಿ ಅಂಥಾ ಮಾಂತ್ರಿಕತೆ ಏನಿದೆ?

ಇದನ್ನೂ ಓದಿ : Viral: ಕುಡಿದ ಅಮಲಿನಲ್ಲಿ ಐಫೆಲ್ ಟವರ್​ ಮೇಲೆ ನಿದ್ದೆಹೋದ ಅಮೆರಿಕದ ಪ್ರವಾಸಿಗರು 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್​ಸ್ಟಾಗ್ರಾಂನ ಈ ಡಾಕ್ಟರ್ ಪುಟವನ್ನು ನೋಡಿದ ಮೇಲೆ ಇವರ ​ ವ್ಯಕ್ತಿತ್ವವೇ ಒಟ್ಟಾರೆ ಮಾಂತ್ರಿಕತೆಯಿಂದ ಕೂಡಿದೆ ಎಂದೆನ್ನಿಸುತ್ತದೆ. ಈತನಕ 9 ಲಕ್ಷ ಫಾಲೋವರ್ಸ್ ಹೊಂದಿರುವ ಇವರ ಕೆಲ ವಿಡಿಯೋಗಳನ್ನು ಮಿಲಿಯನ್​ಗಟ್ಟಲೆ ಮಂದಿ ಲೈಕ್ ಮಾಡಿರುತ್ತಾರೆ. ಮಕ್ಕಳ ಗಮನವನ್ನು ಸಂಪೂರ್ಣ ತಮ್ಮೆಡೆ ಸೆಳೆಯುವಂತಹ ವಿನೋದಮಯ ಕೌಶಲ ಇವರದು. ಒಂದಲ್ಲ ಎರಡಲ್ಲ ಆಸ್ಪತ್ರೆಗೆ ಬರುವ ಎಲ್ಲ ಮಕ್ಕಳನ್ನೂ ಅದೇ ಪ್ರೀತಿ, ಅದೇ ತಾಳ್ಮೆ, ಅದೇ ಅಕ್ಕರೆಯಿಂದ ರಂಜಿಸುತ್ತಾರೆ.

ಹೈಫೈ ಡಾಕ್ಟರ್​ರ ಇಂಜೆಕ್ಷನ್​ ಟೈಮ್ ಹೇಗಿರುತ್ತದೆ ನೋಡಿ

ಮೊಬೈಲ್ ಮತ್ತು ಟಿವಿ ಪರದೆಯೊಳಗಿನಿಂದ ತಮ್ಮ ನೆಚ್ಚಿನ ಕಾರ್ಟೂನ್​ ಕ್ಯಾರೆಕ್ಟರ್​ ತಮ್ಮೆದುರಿಗೆ ಧುತ್ತೆಂದು ಪವಡಿಸಿದೆಯೇನೋ ಎಂಬಂಥ ಖುಷಿ, ಅಚ್ಚರಿಯಲ್ಲಿ ಈ ಮಕ್ಕಳು ತೇಲಿಹೋಗುತ್ತವೆಯೇನೋ. ಆದರೆ, ಅವು ಮನೆಗೆ ಹೋದ ಮೇಲೆ ಬೆಂಕಿಯಂಥ ಜ್ವರ, ನೋವಿನಿಂದ ಒದ್ದಾಡುವ ಪರಿಯೋ ಕೇಳಬೇಡಿ ಮತ್ತೆ! ಈ ಮೇಲಿನ ವಿಡಿಯೋ ಅನ್ನು ಈತನಕ ಸುಮಾರು 1.5 ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ. ಇಂಜೆಕ್ಷನ್​ ಕೊಟ್ಟ ಅರಿವೇ ಆ ಮಗುವಿಗೆ ಇದ್ದಹಾಗಿಲ್ಲ, ನಗೆಗಡಲಲ್ಲಿ ಒಂದೇ ಸಮ ತೇಲುತ್ತಿದೆ.

ಈ ಆರು ತಿಂಗಳ ಮಗುವಿಗೂ ಇಂಜೆಕ್ಷನ್​ ಕೊಟ್ಟಿದ್ದು ಗೊತ್ತಾಗಿಲ್ಲ!

ನಿಮ್ಮ ಈ ವಿಡಿಯೋಗಳನ್ನು ನೋಡಿ ನಿಮ್ಮ ಬಳಿಯೇ ನಾನು ಮಕ್ಕಳ ತಜ್ಞೆಯಾಗಿ ತರಬೇತಿ ಪಡೆಯಬೇಕು ಎಂದೆನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ನಿಮ್ಮ ಆಸ್ಪತ್ರೆಯಲ್ಲಿ ನನಗೆ ಏನಾದರೂ ಒಂದು ಕೆಲಸ ಕೊಡಿ, ಸಂಬಳ ಕಡಿಮೆ ಇದ್ದರೂ ಸರಿ ಎಂದು ಅನೇಕರು ಹೇಳಿದ್ದಾರೆ. ಈತನಕ ಇಂಥ ಡಾಕ್ಟರ್​ ಅನ್ನು ಜೀವಮಾನದಲ್ಲಿಯೇ ನಾ ನೋಡಿಲ್ಲ ಎಂದಿದ್ದಾರೆ ಅನೇಕರು. ನಿಮ್ಮನ್ನು ತುಂಬಾ ತುಂಬಾ ಪ್ರೀತಿಸುತ್ತೇನೆ, ಇದರ ಆಚೆಗೆ ಏನೂ ಹೊಳೆಯುತ್ತಿಲ್ಲ ಡಾಕ್ಟರ್​ ಎಂದು ಹೇಳುವವರಿಗೆ ಲೆಕ್ಕವೇ ಇಲ್ಲ.

ಇರುವೆ ಕಚ್ಚಿತೋ? ನೋಡಿಕೊಳ್ಳಲೂ ಬಿಡುವುದಿಲ್ಲವಲ್ಲ ಈ ಡಾಕ್ಟರ್​!

ನನಗೆ ಮಕ್ಕಳಾದ ಮೇಲೆ ನಿಮ್ಮ ಬಳಿಯೇ ಕರೆದುಕೊಂಡು ಬರುವೆ ಎಂದು ಹೇಳುವವರ ಸಂಖ್ಯೆ ಏನು ಕಡಿಮೆ ಇಲ್ಲ ಮತ್ತೆ! ಹಾಗೆಯೇ ನಾನೂ ನಿಮ್ಮಂತೆ ಸಹೃದಯಿ ವೈದ್ಯನಾಗಬೇಕು ಎಂದು ಹೇಳುವವರಿಗೂ. ಇಷ್ಟೊಂದು ತಾಳ್ಮೆಯನ್ನು ಎಲ್ಲಿಂದ ಬಸಿದು ತರುತ್ತೀರಿ ಎಂದು ಕೇಳುವವರಿಗೂ.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:41 pm, Wed, 16 August 23

ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ