Viral: ಕುಡಿದ ಅಮಲಿನಲ್ಲಿ ಐಫೆಲ್ ಟವರ್​ ಮೇಲೆ ನಿದ್ದೆಹೋದ ಅಮೆರಿಕದ ಪ್ರವಾಸಿಗರು

France : ಇತ್ತೀಚೆಗೆ ಐಫೆಲ್​ ಟವರ್​ಗೆ ಭಯೋತ್ಪಾದಕರು ಬಾಂಬ್​ ಬೆದರಿಕೆ ಒಡ್ಡಿದ್ದ ಸುದ್ದಿ ಇನ್ನೂ ಹಸಿಹಸಿಯಾಗಿರುವಾಗಲೇ ಅಮೆರಿಕದ ಪ್ರವಾಸಿಗಳಿಬ್ಬರು ಕುಡಿದ ಮತ್ತಿನಲ್ಲಿ ಈ ಗೋಪುರದ ಮೇಲೆ ರಾತ್ರಿಯಿಡೀ ಮಲಗಿದ್ದಾರೆ. ನಂತರ ಅವರು ಪೊಲೀಸರ ಅತಿಥಿಗಳು ಆದರು. ಇನ್ನು ಫ್ರಾನ್ಸ್​ ಫ್ರಾನ್ಸ್​ ಆಗಿ ಉಳಿಯಲಾರದು ಎಂಬ ಆತಂಕವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

Viral: ಕುಡಿದ ಅಮಲಿನಲ್ಲಿ ಐಫೆಲ್ ಟವರ್​ ಮೇಲೆ ನಿದ್ದೆಹೋದ ಅಮೆರಿಕದ ಪ್ರವಾಸಿಗರು
ಫ್ರಾನ್ಸಿನ ಐಫೆಲ್ ಗೋಪುರ
Follow us
ಶ್ರೀದೇವಿ ಕಳಸದ
|

Updated on: Aug 16, 2023 | 4:38 PM

Eiffel Tower : ಕುಡಿದ ಮತ್ತಿನಲ್ಲಿ ಅಮೆರಿಕದ ಇಬ್ಬರು ಪ್ರವಾಸಿಗರು ಐಫೆಲ್​ ಟವರಿನ ಮೇಲೆ ನಿದ್ದೆ ಹೋದ ಘಟನೆ ಸೋಮವಾರ ನಡೆದಿದೆ. ಭದ್ರತಾ ನಿಯಮಗಳನ್ನು ಮೀರಿದ ಈ ಪ್ರವಾಸಿಗರು ಐಫೆಲ್​ ಟವರಿನ ಮಹಡಿಗಳಲ್ಲಿ ಒಂದಿಡೀ ರಾತ್ರಿಯನ್ನು ಕಳೆದಿದ್ದಾರೆ. ಹಾಗಾಗಿ ಪೊಲೀಸರು ಇವರಿಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಭದ್ರತಾ ಸಿಬ್ಬಂದಿಯು (Security) ನಿತ್ಯದ ತಪಾಸಣೆಗೆ ಹೋದಾಗ ಈ ವಿಷಯ ಬಹಿರಂಗಗೊಂಡಿದೆ. ಗೋಪುರದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಇವರು ರಾತ್ರಿಯನ್ನು ಕಳೆದಿದ್ದಾರೆ ಎಂದು ಸ್ಥಳೀಯ ಮಾದ್ಯಮ ವರದಿ ಮಾಡಿದೆ. ಐಫೆಲ್​ ಟವರ್​ಗೆ ಬಾಂಬ್​ ಬೆದರಿಕೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಎಡೆಮಾಡಿದೆ.

ಇದನ್ನೂ ಓದಿ : Viral Video:’ಅನ್​ಕನ್ಫ್ಯೂಸ್​ ಮೀ’; ಬಿಲ್​ ಗೇಟ್ಸ್​ ಖಾನ್​ ಅಕಾಡೆಮಿಯ ಸಲ್ ಖಾನ್​ರನ್ನು​ ಸಂದರ್ಶಿಸಿದ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅವರು ಸಾಕಷ್ಟು ಮದ್ಯಪಾನ ಮಾಡಿದ್ದರಿಂದ ಹೀಗೆ ಪೊಲೀಸರ ಕೈಗೆ ಸಿಕ್ಕಿದ್ದಾರೆ ಎಂದು ಪ್ಯಾರೀಸ್​ ಪ್ರಾಸಿಕ್ಯೂಟರ್​ ಹೇಳಿದ್ದಾರೆ. ಭಾನುವಾರ ರಾತ್ರಿ 10.40ಕ್ಕೆ ಐಫೆಲ್ ಟವರ್ ಪ್ರವೇಶಿಸಲು ಇವರಿಬ್ಬರೂ ಟಿಕೆಟ್ ಖರೀದಿಸಿದ್ದಾರೆ. ಆದರೆ ವಾಪಾಸು ಇಳಿಯುವಾಗ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಲ್ಲಿಯೇ ಮಲಗಿದ್ದಾರೆ.

ಇದನ್ನೂ ಓದಿ : Viral Video: ಕಾವಾಲಾ; ಜಪಾನಿನ ಕಕೆಟಕು ಮತ್ತು ಭಾರತದ ಸೋನಲ್ ವರ್ಷನ್

ಇವರಿಬ್ಬರನ್ನೂ ಅಗ್ನಿಶಾಮಕ ದಳದ ಸಹಾಯದಿಂದ ಕೆಳಗಿಳಿಸಲಾಗಿದೆ. ನಂತರ ಪ್ಯಾರೀಸ್​ನ ಪೊಲೀಸ್​ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಗಿದ್ದು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯಿಂದಾಗಿ ಪ್ರಸಿದ್ಧ ಐಫೆಲ್​ ಟವರ್​​ಗೆ ದೊಡ್ಡ ಎಚ್ಚರಿಕೆ ಘಂಟೆಯಂತೆ ಪರಿಣಮಿಸಿದೆ!

ಐಫೆಲ್​ ಟವರ್​ನಲ್ಲಿ ಬಾಂಬ್​ ಬೆದರಿಕೆ ವಿಡಿಯೋ

ಶನಿವಾರ ಬೆಳಗ್ಗೆಯಷ್ಟೇ ಐಫೆಲ್​ ಟವರ್​ನಲ್ಲಿ ಬಾಂಬ್ ಬೆದರಿಕೆಯ ಸುದ್ದಿ ಹರಡಿತ್ತು. ಇಲ್ಲಿಯ ರೆಸ್ಟೋರೆಂಟ್ ಸೇರಿದಂತೆ ಗೋಪುರವನ್ನು ಬಾಂಬ್ ನಿಷ್ಕ್ರಿಯ ತಜ್ಞರು ಮತ್ತು ಪೊಲೀಸರು ಶೋಧನೆ ನಡೆಸಿದ್ದು ತನಿಖೆ ಮುಂದುವರಿದಿದೆ. ಆ ಬೆನ್ನಲ್ಲೇ ಈ ಘಟನೆ ನಡೆದಿದ್ದು ಹೆಚ್ಚಿನ ಭೀತಿಗೆ ಕಾರಣವಾಗಿದೆ. ಫ್ರಾನ್ಸ್ ಇನ್ನು ಫ್ರಾನ್ಸ್ ಆಗಿ ಉಳಿಯಲಾರದು ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು