ಚುಂಬನ ವಿದ್ ಧೂಮಪಾನ! ನವಜೋಡಿಯ ಪ್ರಿ ವೆಡ್ಡಿಂಗ್ ಫೋಟೊಶೂಟ್ ಅವತಾರಕ್ಕೆ ನೆಟ್ಟಿಗರು ಗರಂ
Smoke-themed pre-wedding photoshoot; ಕಲಿಕಾಲ. ಈ ಸಾಂಸ್ಕೃತಿಕ ವಿಘಟನೆಯ ಬಗ್ಗೆ ಏನು ಹೇಳಬೇಕು! ಇಂಥದ್ದನ್ನು ಪ್ರೋತ್ಸಾಹಿಸುವ ಹೆಂಡತಿ ಯಾರಿಗೆ ಬೇಕು... ತನ್ನ ಗಂಡನ ಆರೋಗ್ಯ ಹದಗೆಡುವುದನ್ನು ನೋಡಲು ಯಾರು ಬಯಸುತ್ತಾರೆ ಎಂದು ರಾಜೇಶ್ವರಿ ಅಯ್ಯರ್ ಎಂಬವರು ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು, ಆಗಸ್ಟ್ 16: ಇದು ಪ್ರಿ ವೆಡ್ಡಿಂಗ್ ಫೋಟೊಶೂಟ್ (Pre-Wedding photoshoot) ಕಾಲ. ಮದುವೆಗೆ ಮುಂಚೆ ವಧು ಹಾಗೂ ವರ ಜತೆಯಾಗಿ ಫೋಟೊಶೂಟ್ ಮಾಡಿಸುವುದು ಸಾಮಾನ್ಯ. ಪ್ರವಾಸಿ ತಾಣಗಳಲ್ಲಿಯೋ, ಪ್ರೇಕ್ಷಣೀಯ ಸ್ಥಳಗಳಲ್ಲಿಯೋ ಫೋಟೊಶೂಟ್ ಮಾಡಿಸುವುದು ಸಹಜ. ಆದರೆ, ಇಲ್ಲೊಂದು ವಿಲಕ್ಷಣ ಪ್ರಿ ವೆಡ್ಡಿಂಗ್ ಅಥವಾ ಮದುವೆಗೆ ಮುಂಚಿನ ಫೋಟೋಶೂಟ್ ನಡೆದಿದ್ದು, ಸಾಮಾಜಿಕ ಮಾಧ್ಯಮ ಟ್ವಿಟರ್ನಲ್ಲಿ (Twitter) ವೈರಲ್ ಆಗಿದೆ. ಫೋಟೊಶೂಟ್ನಲ್ಲಿ ವರನು ಧೂಮಪಾನ ಮಾಡಿ ವಧುವಿಗೆ ಚುಂಬಿಸುವುದು ಮತ್ತು ಆಕೆ ಹೊಗೆಯನ್ನು ಹೊರಬಿಡುತ್ತಾ ಫೋಟೊಗೆ ಪೋಸ್ ನೀಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಲಕ್ಷಣ ಫೊಟೊಶೂಟ್ಗೆ ನೆಟ್ಟಿಗರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕಲಿಕಾಲ. ಈ ಸಾಂಸ್ಕೃತಿಕ ವಿಘಟನೆಯ ಬಗ್ಗೆ ಏನು ಹೇಳಬೇಕು! ಇಂಥದ್ದನ್ನು ಪ್ರೋತ್ಸಾಹಿಸುವ ಹೆಂಡತಿ ಯಾರಿಗೆ ಬೇಕು… ತನ್ನ ಗಂಡನ ಆರೋಗ್ಯ ಹದಗೆಡುವುದನ್ನು ನೋಡಲು ಯಾರು ಬಯಸುತ್ತಾರೆ ಎಂದು ರಾಜೇಶ್ವರಿ ಅಯ್ಯರ್ ಎಂಬವರು ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.
Kali-kalam… What to say about this cultural disintegration !! Who all wants such an encouraging wife …who is ok to see her husband’s health deteriorating ?!? pic.twitter.com/U5gqZMovbq
— RajeIyer (@RajeswariAiyer) August 13, 2023
ಈ ಪೋಸ್ಟ್‌ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, ಚಲನಚಿತ್ರಗಳು ಮತ್ತು ಇಂಟರ್ನೆಟ್ ಯುವಕರ ಮೇಲೆ ಕೆಟ್ಟ ಪ್ರಭಾವ ಬೀರುತ್ತಿವೆ ಎಂದು ಉಲ್ಲೇಖಿಸಿದ್ದಾರೆ.
Basically young generations feel smoking is cool. Well our movies too have such strong impression on young minds. Moreover Indian govt instead of trying to pull out youth from this habit by helping them with Vape modes availability has banned vaping devices in INDIA.
— prashanth (@shanthsp2002) August 13, 2023
ಯುವಜನರಿಗೆ ಮದುವೆ ಮತ್ತು ಸಂಬಂಧಿತ ಆಚರಣೆಗಳ ಬಗ್ಗೆ ಗೌರವವಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
Why to get married traditionally when there is no respect for the wedding customs!?. Show some respect to the Kalyana vastram and understand the vows taken during the Kalyanam. By seeing this people may presume that it’s widely accepted & many may want such an encouraging wife.
— Aishwarya Pedapati🇮🇳 (@TrulyVedh_aish) August 13, 2023
ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು, ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಲು ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದ್ದಾರೆ.
Mistakes happen for the sake of popularity. But, how did the parents of both family allow to happen these in public ? 🤔They should have guided these young couple. God Bless them! And IMHO, Intimacy between husband and wife in private is absolutely fine! Not to mix with culture!
— Banknifty options trader (ஸ்ரீநி வேகா வர்த்தகர்) (@SriniVega) August 13, 2023
ಇವು ಕೇರಳದಲ್ಲಿ ಸಾಮಾನ್ಯ ಫೋಟೋಶೂಟ್ ಥೀಮ್ಗಳಾಗಿವೆ. ಕೇರಳದ ಎಲ್ಲಾ ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗಳನ್ನು ಪರಿಶೀಲಿಸಿದರೆ ಜನರು ಆಘಾತಕ್ಕೊಳಗಾಗಬಹುದು ಎಂದು ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
This video is post wedding shoot photographer is responsible Kerala photographers do this kind of video to create business for them, check Kerala wedding shoots u will be shocked,
— boghi0612 (@boghibasker26) August 14, 2023
ಮದುವೆಯ ಪೂರ್ವ ಮತ್ತು ನಂತರದ ಫೋಟೋಶೂಟ್‌ಗಳು ಈಗ ಸಾಮಾನ್ಯವಾಗಿದೆ. ಈ ಸಮಯದಲ್ಲಿ ನವಜೋಡಿ ವಿವಿಧ ಥೀಮ್‌ಗಳನ್ನು ಆಧರಿಸಿ ಫೋಟೋಶೂಟ್‌ಗಳಿಗೆ ಹೋಗುತ್ತಾರೆ. ಫೋಟೊಶೂಟ್ಗಳನ್ನು ನೆಟ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಕೆಲವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಗಮನ ಸೆಳೆಯಲು ವಿಲಕ್ಷಣ ಸ್ಥಳಗಳನ್ನು ಮತ್ತು ವಿಲಕ್ಷಣ ಥೀಮ್‌ಗಳನ್ನು ಆಯ್ಕೆ ಮಾಡುತ್ತಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ