Viral Video: ಕಾವಾಲಾ; ಜಪಾನಿನ ಕಕೆಟಕು ಮತ್ತು ಭಾರತದ ಸೋನಲ್ ವರ್ಷನ್

Jailer : ಭಾರತೀಯ ಪುರುಷರೊಬ್ಬರು ಕಾವಾಲಾ ಹಾಡಿಗೆ ಸ್ವಂತ ಉಡುಪು ವಿನ್ಯಾಸ ಮಾಡಿ ತಮನ್ನಾಗೇ ಸ್ಪರ್ಧೆಯೊಡ್ಡಿದ ವಿಡಿಯೋದ ನಂತರ ಜಪಾನೀ ಯುವಕನೊಬ್ಬನ ವಿಡಿಯೋ ವೈರಲ್ ಆಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸೋನಾ ಎಂಬ ಕಲಾವಿದೆ ತಮನ್ನಾಗೆ ಸ್ಪರ್ಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇವರಿಬ್ಬರ ರೀಲ್ಸ್​ ನೋಡಿ.

Viral Video: ಕಾವಾಲಾ; ಜಪಾನಿನ ಕಕೆಟಕು ಮತ್ತು ಭಾರತದ ಸೋನಲ್ ವರ್ಷನ್
ಜಪಾನಿನ ಕಕೆಟಕು, ತಮನ್ನಾ ಮತ್ತು ಸೋನಲ್
Follow us
ಶ್ರೀದೇವಿ ಕಳಸದ
|

Updated on:Aug 16, 2023 | 4:00 PM

Kaavaalaa: ವೃತ್ತಿಪರ ನೃತ್ಯಕಲಾವಿದರು, ರೂಪದರ್ಶಿಗಳು, ಡಿಜಿಟಲ್ ಕ್ರಿಯೇಟರ್​ಗಳು ತಮನ್ನಾಳ ‘ಕಾವಾಲಾ’ ಹಾಡಿಗೆ ರೀಲ್ಸ್ ಮಾಡಿದ್ದೇ ಮಾಡಿದ್ದು. ಇದೀಗ ಇದೇ ಹಾಡಿಗೆ ಜಪಾನೀ ಯುವಕನೊಬ್ಬ ಹೆಜ್ಜೆ ಹಾಕಿದ ವಿಡಿಯೋ ವೈರಲ್ ಆಗುತ್ತಿದೆ. ರಜಿನಿಕಾಂತ್ ಮತ್ತು ತಮನ್ನಾ ಭಾಟಿಯಾ (Rajinikanth and Tamanna Bhatia) ಅಭಿನಯದ ತಮಿಳು ಸಿನೆಮಾ ‘ಜೈಲರ್​’ನಲ್ಲಿರುವ ಈ ಹಾಡು ಚಿಕ್ಕಮಕ್ಕಳಿಂದ ಹಿಡಿದು ಮುದುಕರತನಕವೂ ಹುಚ್ಚು ಹಿಡಿಸಿದೆ. ಸುಮಾರು ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿನದ್ದೇ ಭರಾಟೆ. ಈ ಲಯಪ್ರಧಾನ ಸಿನೆಮಾ ಗೀತೆಯನ್ನು ಭಾರತೀಯ ಪುರುಷರೊಬ್ಬರು ನರ್ತಿಸಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದು.

ಇದನ್ನೂ ಓದಿ : Viral Video: ‘ಅನ್​ಕನ್ಫ್ಯೂಸ್​ ಮೀ’ ; ಬಿಲ್​ ಗೇಟ್ಸ್​ ಖಾನ್​ ಅಕಾಡೆಮಿಯ ಸಲ್ ಖಾನ್​ರನ್ನು​ ಸಂದರ್ಶಿಸಿದ ವಿಡಿಯೋ ವೈರಲ್ 

ಇದೀಗ ಜಪಾನಿನ ಕಕೆಟಕು ಎನ್ನುವ ಯುವಕ ತಮ್ಮ ಈ ವಿಡಿಯೋ ಅನ್ನು ಯೂಟ್ಯೂಬ್​ನಲ್ಲಿ ಹಂಚಿಕೊಂಡಿದ್ದಾರೆ. ತಮನ್ನಾರನ್ನು ಅನುಕರಿಸುವಲ್ಲಿ ಪ್ರಯತ್ನಿಸಿದ್ದನ್ನು ನೆಟ್ಟಿಗರು ಮೆಚ್ಚಿದ್ದಾರೆ. ಈತನಕ ಈವಿಡಿಯೋ ಅನ್ನು ಸುಮಾರು 5 ಲಕ್ಷ ಜನರು ನೋಡಿದ್ದಾರೆ. ಸುಮಾರು 36,000 ಜನರು ಲೈಕ್ ಮಾಡಿದ್ದಾರೆ. 600 ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜಪಾನೀ ಯುವಕನ ಕಾವಾಲಾ ವರ್ಷನ್​

ಕೇರಳದಿಂದ ನಿಮಗೆ ಪ್ರೀತಿ ಮತ್ತು ಪ್ರೋತ್ಸಾಹವನ್ನು ಕಳಿಸುತ್ತಿದ್ದೇನೆ. ಮಲಯಾಳಂ ವರ್ಷನ್​ ಅನ್ನು  ನೀವು ಆದಷ್ಟು ಬೇಗ ಪ್ರದರ್ಶಿಸುತ್ತೀರಿ ಎಂದುಕೊಂಡಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ತುಂಬಾ ಕರೆಕ್ಟ್ ಆಗಿ ನೀವು ಅನುಕರಿಸಿದ್ದೀರಿ, ನಿಜವಾಗಲೂ ಆಹ್ಲಾದಕರವಾಗಿದೆ ಎಂದಿದ್ದಾರೆ ಇನ್ನೊಬ್ಬರು. ನೀವು ಈ ಹಾಡಿನ ಸ್ಟೆಪ್​​ಗಳನ್ನು ಸ್ಟೈಲಿಷ್ ಆಗಿ ಬದಲಾಯಿಸಿಕೊಂಡಿದ್ದು ನನಗೆ ತುಂಬಾ ಇಷ್ಟವಾಯಿತು ಎಂದಿದ್ದಾರೆ ಮತ್ತೊಬ್ಬರು. ಇಷ್ಟು ದಿನ ಯಾವುದಕ್ಕೆ ಕಾಯುತ್ತಿದ್ದೆವೋ ಆ ಸಂತೋಷ ನಮಗೂ ಲಭಿಸಿದೆ ಜೊತೆಗೆ ಈ ರೀಲ್ ಮಾಡುವ ಮೂಲಕ ನಿಮಗೂ ಎಂದಿದ್ದಾರೆ ಮಗದೊಬ್ಬರು.

ಸೋನಲ್ ವರ್ಷನ್​ಗೆ 1.2 ಮಿಲಿಯನ್ ಲೈಕ್ಸ್​!

ಸೋನಲ್ ಎನ್ನುವವರು ಇದೇ ಹಾಡಿಗೆ ರೀಲ್ ಮಾಡಿದ್ದಾರೆ. ತಮನ್ನಾರನ್ನು ನೀವು ಮೀರಿಸಿದ್ದೀರಿ ಎಂದು ಹೇಳಿದ್ದಾರೆ ನೆಟ್ಟಿಗರು. ಈತನಕ ಈ ವಿಡಿಯೋ 6,600 ಜನರು ಪ್ರತಿಕ್ರಿಯಿಸಿದ್ದಾರೆ. ನೀವು ಅದ್ಭುತವಾದ ಕಲಾವಿದರು, ಈ ಹಾಡಿಗೆ ನೀವೇ ನರ್ತಿಸಬೇಕಿತ್ತು ಎಂಥ ಲಾಸ್ಯ, ಎಂಥ ಅಭಿವ್ಯಕ್ತಿ ಎಂದಿದ್ದಾರೆ ಒಬ್ಬರು. ಸೌಂಡ್​ ಟ್ರ್ಯಾಕ್​ ಚೆನ್ನಾಗಿದೆಯೋ ನಿಮ್ಮ ನೃತ್ಯ ಚೆನ್ನಾಗಿದೆಯೋ? ನಿರ್ಧರಿಸುವಲ್ಲಿ ಸೋಲುತ್ತಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ತಮನ್ನಾರ ನಂತರ ತುಂಬಾ ಚೆನ್ನಾಗಿ ನರ್ತಿಸಿದವರು ಯಾರೆಂದು ಕೇಳಿದರೆ ನಿಮ್ಮದೇ ಹೆಸರು ಹೇಳುತ್ತೇನೆ ಎಂದು ಮಗದೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 3:56 pm, Wed, 16 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ