AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಅನ್​ಕನ್ಫ್ಯೂಸ್​ ಮೀ’; ಬಿಲ್​ ಗೇಟ್ಸ್​ ಖಾನ್​ ಅಕಾಡೆಮಿಯ ಸಲ್ ಖಾನ್​ರನ್ನು​ ಸಂದರ್ಶಿಸಿದ ವಿಡಿಯೋ ವೈರಲ್

Khan Academy : ಸಲ್​ ಖಾನ್, 'ಹೌದು, ಖಾನ್​ ಅಕಾಡೆಮಿ ಶುರುಮಾಡಿದ ಹೊತ್ತಿನಲ್ಲಿ ಸಲ್ಮಾನ್​ ಖಾನ್​ ಅಭಿಮಾನಿಗಳಿಂದ ನನಗೆ ಸಾಕಷ್ಟು ಇಮೇಲ್​ಗಳು ಬಂದಿದ್ದವು. 'ನಿಮ್ಮನ್ನು ನಾನು ಮೊದಲಿನಿಂದಲೂ ಪ್ರೀತಿಸುತ್ತಿದ್ದೇನೆ. ಆದರೆ ನೀವು ಗಣಿತ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಬಗ್ಗೆ ತಿಳಿದಿರಲಿಲ್ಲ' ಎಂದು ಅನೇಕರು ಪತ್ರ ಬರೆದಿದ್ದರು' ಎಂದಿದ್ದಾರೆ.

Viral Video: 'ಅನ್​ಕನ್ಫ್ಯೂಸ್​ ಮೀ'; ಬಿಲ್​ ಗೇಟ್ಸ್​ ಖಾನ್​ ಅಕಾಡೆಮಿಯ ಸಲ್ ಖಾನ್​ರನ್ನು​ ಸಂದರ್ಶಿಸಿದ ವಿಡಿಯೋ ವೈರಲ್
ಖಾನ್ ಅಕಾಡೆಮಿಯ ಸಲ್ ಖಾನ್​ರನ್ನು ಬಿಲ್​ ಗೇಟ್ಸ್ ಸಂದರ್ಶಿಸುತ್ತಿರುವುದು
ಶ್ರೀದೇವಿ ಕಳಸದ
|

Updated on:Aug 16, 2023 | 1:26 PM

Share

Bill Gates : ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಇತ್ತೀಚೆಗೆ ತಮ್ಮ ಪಾಡ್​ಕಾಸ್ಟ್​ ‘ಅನ್​ಕನ್ಫ್ಯೂಸ್​ ಮೀ (Unconfuse Me)’ಗೆ ಖಾನ್ ಅಕಾಡೆಮಿಯ ಸಂಸ್ಥಾಪಕ ಸಲ್ ಖಾನ್ (Sal Khan) ಅವರನ್ನು ಸಂದರ್ಶಿಸಿದ್ದರು. ನಾಲ್ಕು ದಿನಗಳ ಹಿಂದೆ ಯೂಟ್ಯೂಬ್​ನಲ್ಲಿ ಹಂಚಿಕೊಂಡ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ಎಪಿಡೋಡ್​ನಲ್ಲಿ ಬಿಲ್​ಗೇಟ್ಸ್​ ಸಾಕಷ್ಟು ವಿಷಯಗಳನ್ನು ಚರ್ಚಿಸುತ್ತಾ ‘ಸಲ್​ ಖಾನ್ ಮತ್ತು ಸಲ್ಮಾನ್​ ಖಾನ್​ ನಡುವೆ ಏನಾದರೂ ಗೊಂದಲ ಉಂಟಾಗಿದ್ದಿದೆಯಾ? ಎಂದು ಸಲ್​ ಖಾನ್ ಅವರಿಗೆ ಕೇಳಿದಾಗ, ‘2015ರಲ್ಲಿ ಸಲ್ಮಾನ್​ ಖಾನ್​ ಅಭಿಮಾನಿಗಳಿಂದ ಸಾಕಷ್ಟು ಇಮೇಲ್​​ಗಳು ನನ್ನ ಇನ್​ಬಾಕ್ಸ್​ಗೆ ಬಂದಿರುವುದು ನಿಜ’ ಎಂದು ಅವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : Viral Video: ಈ ಬಾರ್ಬಿ ಭಾರತದ ಬಡಕುಟುಂಬದಲ್ಲಿ ಜನಿಸಿದಾಕೆ, ಏನೀಗ? ಭಾವುಕರಾದ ನೆಟ್ಟಿಗರು

ಖಾನ್ ಅಕಾಡೆಮಿಯು ಅಮೆರಿಕದ ಲಾಭರಹಿತ ಶಿಕ್ಷಣ ಸಂಸ್ಥೆಯಾಗಿದ್ದು ಜಗತ್ತಿನಾದ್ಯಂತ ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕ ಶೈಕ್ಷಣಿಕ ಸಹಾಯ ಮಾಡುತ್ತಿದೆ. ಇದರ ಸಂಸ್ಥಾಪಕರಾದ ಸಲ್​ ಖಾನ್​ ಅವರನ್ನು ತಮ್ಮ ಪಾಡ್‌ಕಾಸ್ಟ್​ಗೆ ಸಂದರ್ಶಿಸುವ ಸಮಯದಲ್ಲಿ ಬಿಲ್​ ಗೇಟ್ಸ್​ ಸಲ್ಮಾನ್​ ಖಾನ್​ನ ಚಿತ್ರವೊಂದನ್ನು ತೋರಿಸಿ, ‘ಸಲ್ ಖಾನ್​ ಎಂದು ವೆಬ್​ ಸರ್ಚ್ ಕೊಟ್ಟರೆ ಸಲ್ಮಾನ್​ ಖಾನ್​ ಬಗ್ಗೆ ವಿವರ ಬರುವುದಲ್ಲವೆ?’ ಎಂದು ಕೇಳಿದರು. ಆಗ ಸಲ್​ ಖಾನ್, ‘ಹೌದು, ಖಾನ್​ ಅಕಾಡೆಮಿ ಶುರುಮಾಡಿದ ಹೊತ್ತಿನಲ್ಲಿ ಸಲ್ಮಾನ್​ ಖಾನ್​ ಅಭಿಮಾನಿಗಳಿಂದ ನನಗೆ ಸಾಕಷ್ಟು ಇಮೇಲ್​ಗಳು ಬಂದಿದ್ದವು. ‘ನಿಮ್ಮನ್ನು ನಾನು ಮೊದಲಿನಿಂದಲೂ ಪ್ರೀತಿಸುತ್ತಿದ್ದೇನೆ. ಆದರೆ ನೀವು ಗಣಿತ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಬಗ್ಗೆ ತಿಳಿದಿರಲಿಲ್ಲ’ ಎಂದು ಅನೇಕರು ಪತ್ರ ಬರೆದಿದ್ದರು’ ಎಂದಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬಿಲ್ ಗೇಟ್ಸ್,​ ಸಲ್​ ಖಾನ್​ ಅವರ ಸಂದರ್ಶಿಸಿದ ವಿಡಿಯೋ ನೋಡಿ

‘2015ರಲ್ಲಿ ನಾನು ಭಾರತಕ್ಕೆ ಹೋದಾಗ ಒಂದು ಕಾರ್ಯಕ್ರಮದಲ್ಲಿ ಸಲ್ಮಾನ್​ ಖಾನ್​ರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ. ನಮ್ಮಿಬ್ಬರ ಹೆಸರಿನಲ್ಲಿ ಸಾಮ್ಯತೆ ಇರುವ ಕಾರಣಕ್ಕಾಗಿಯೇ ಚಾನೆಲ್​ವೊಂದು ನಮ್ಮಿಬ್ಬರ ನೇರ ಸಂದರ್ಶನ ಮಾಡಿತ್ತು’ ಎನ್ನುವುದನ್ನು ಈ ಸಂದರ್ಭದಲ್ಲಿ ಅವರು ನೆನಪಿಸಿಕೊಂಡಿದ್ದಾರೆ. ಮುಂದುವರಿದ ಬಿಲ್​ ಗೇಟ್​, ‘ಕೃತಕ ಬುದ್ಧಿಮತ್ತೆಯು ಶೈಕ್ಷಣಿಕವಾಗಿ ಯಾವ ರೀತಿ ಮಾರ್ಪಾಡುಗಳನ್ನು ತರಬಹುದು? AI ಯುಗದಲ್ಲಿ ತರಗತಿ ಬೋಧನೆ ಯಾವ ಸ್ವರೂಪಕ್ಕೆ ತಿರುಗಬಹುದು?’ ಎಂದಾಗ, ಸಲ್​ ಖಾನ್​ ತಮ್ಮ ನೆಚ್ಚಿನ ಶಿಕ್ಷಕರ ಬಗ್ಗೆ ಮತ್ತು ಅವರು ಬೋಧಿಸಿದ ವಿಷಯಗಳ ಬಗ್ಗೆ ನೆನಪುಗಳನ್ನು ಕೆದಕಿದ್ದಾರೆ.

ಎನ್​ಡಿಟಿವಿ ಸಲ್ಮಾನ್​ ಖಾನ್​ ಮತ್ತು ಸಲ್ ಖಾನರನ್ನು ಸಂದರ್ಶಿಸಿದ ವಿಡಿಯೋ ಇಲ್ಲಿದೆ

ಬಿಲ್​ ಗೇಟ್​ ತಮ್ಮ ಎರಡನೇ ಪಾಡ್​ಕಾಸ್ಟ್​ನಲ್ಲಿ ಸಲ್ ಖಾನ್​ ಅವರ ಸಂದರ್ಶನ ಮಾಡಿದ್ದಾರೆ. ಆಗಸ್ಟ್ 11ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 27,000 ಜನರು ನೋಡಿದ್ದಾರೆ. ಸುಮಾರು 700 ಜನರು ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:22 pm, Wed, 16 August 23

ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ