Viral Video: ವಾಟ್ ಝುಮ್ಕಾ ದಾದೀಜಿ! 65ರ ಅಜ್ಜಿಯಿಂದ ರಣವೀರ್ ಸಿಂಗ್​, ಅಲಿಯಾ ಭಟ್ ಹಾಡಿಗೆ ನೃತ್ಯ

Grandmother : ವಯಸ್ಸು ಎನ್ನುವುದು ಬರೀ ಸಂಖ್ಯೆ ಮಾತ್ರ, ನಮ್ಮಂಥ ಚಿಕ್ಕವರಿಗೂ ನೀವು ಮಾದರಿ ಎಂದು ತಮ್ಮ ನೆಚ್ಚಿನ ದಾದೀಮಾರನ್ನು ಮತ್ತೆ ಮತ್ತೆ ಅಚ್ಚರಿಯಿಂದ ನೋಡುತ್ತಿದ್ದಾರೆ ನೆಟ್ಟಿಗರು. ಈ ಹೊಸ ರೀಲ್​ನೊಂದಿಗೆ ಡೋಲಾರೇ ಡೋಲಾರೇ ರೀಲ್​ ಅನ್ನೂ ನೀವು ಇಲ್ಲಿ ನೋಡಬಹುದು. ನಾವೂ ಯಾಕೆ ಒಮ್ಮೆ ಕುಣಿಯಬಾರದು ಎಂದೆನ್ನಿಸದಿದ್ದರೆ ಹೇಳೀ!

Viral Video: ವಾಟ್ ಝುಮ್ಕಾ ದಾದೀಜಿ! 65ರ ಅಜ್ಜಿಯಿಂದ ರಣವೀರ್ ಸಿಂಗ್​, ಅಲಿಯಾ ಭಟ್ ಹಾಡಿಗೆ ನೃತ್ಯ
ರವಿ ಬಾಲಾ ಶರ್ಮಾ
Follow us
ಶ್ರೀದೇವಿ ಕಳಸದ
|

Updated on:Aug 16, 2023 | 10:37 AM

Dance : ರವಿ ಬಾಲಾ ಶರ್ಮಾ 65 ವರ್ಷದ ನೃತ್ಯಪ್ರಿಯೆ. ಯಾವ ವಯಸ್ಸಿನಲ್ಲಿಯೂ ನಿಮಗಿಷ್ಟವಾದ ಕಲೆಯನ್ನು ಕಲಿಯಬಹುದು ಎಂದು ಸಾಬೀತು ಮಾಡುತ್ತಿರುವ ಮಹಿಳೆ. ಇವರ ಫಾಲೋವರ್ಸ್​ ಇವರ ಉತ್ಸಾಹಕ್ಕೆ, ನೃತ್ಯಕೌಶಲಕ್ಕೆ ಬೆರಗಿನಿಂದ ಪ್ರತಿಕ್ರಿಯಿಸಿ ಹುರಿದುಂಬಿಸುತ್ತಿರುತ್ತಾರೆ. ಇದೀಗ ಇವರು ರಣವೀರ್​ ಸಿಂಗ್ ಮತ್ತು ಅಲಿಯಾ ಭಟ್​ ಅಭಿನಯಿಸಿದ ವಾಟ್​ ಝುಮ್ಕಾ (What Jhumka) ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನೆಮಾದ್ದು. ರವಿ ಬಾಲಾ ಶರ್ಮಾ ಲೆಹಂಗಾ ಚೋಲಿಯನ್ನು ಧರಿಸಿ ಚೆಂದವಾಗಿ ಅಲಂಕರಿಸಿಕೊಂಡು ಆಕರ್ಷಕವಾಗಿ ಹೆಜ್ಜೆ ಹಾಕಿದ್ದಾರೆ. ಇವರ ಭಾವಾಭಿವ್ಯಕ್ತಿಗೆ ನೆಟ್ಟಿಗರು ಭಲೇ ಎಂದಿದ್ದಾರೆ.

ಇದನ್ನೂ ಓದಿ : Viral Video: ಹೊಸ ಸ್ಪ್ಯಾನಿಷ್ ಟೀಚರ್​ ಬಂದಿದಾರೆ ಎಲ್ಲ ಆನ್​ಲೈನ್ ಕ್ಲಾಸಿಗೆ ಬನ್ನಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜುಲೈ 28 ರಂದು ಇನ್ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಅಪ್​ಲೋಡ್ ಮಾಡಲಾಗಿದೆ. ಈತನಕ ಸುಮಾರು 1.5 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 12,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಮೆಚ್ಚುಗೆಯಿಂದ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ರೀಲ್ಸ್ ನೋಡಿದಾಗೆಲ್ಲ, ವಯಸ್ಸು ಎನ್ನುವುದು ಕೇವಲ ಸಂಖ್ಯೆ ಎನ್ನುವುದು ಮನದಟ್ಟಾಗುತ್ತದೆ. ನೀವು ಕಿರಿಯರಿಗೂ ಕೂಡ ಮಾದರಿ ಎಂದಿದ್ದಾರೆ ನೆಟ್ಟಿಗರು.

ವಾಟ್​ ಝುಮ್ಕಾ ಹಾಡಿಗೆ ರವಿ ಬಾಲಾ ಶರ್ಮಾ ಅವರ ನೃತ್ಯ ನೋಡಿ

ದಾದೀಜಿ ಎಂಥ ಮುದ್ದಾಗಿದ್ದೀರಿ, ನಿಮ್ಮ ನೃತ್ಯವೂ ಅಷ್ಟೇ ಛಂದ ಎಂದಿದ್ದಾರೆ ಒಬ್ಬರು. ನಿಜಕ್ಕೂ ನೀವು ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ, ಈ ಹವ್ಯಾಸ ನಿಮ್ಮ ಮನಸ್ಸನ್ನು ದೇಹವನ್ನು ಸುಂದರವಾಗಿಟ್ಟಿರುತ್ತದೆ ನಿಮಗೆ ಒಳ್ಳೆಯದಾಗಲಿ ಮೇಡಮ್​ ಎಂದಿದ್ದಾರೆ ಇನ್ನೊಬ್ಬರು. ಐಶ್ವರ್ಯ ರೈ ಮತ್ತು ಮಾಧುರಿ ದೀಕ್ಷಿತ್ ಅಭಿನಯಿಸಿದ ದೇವದಾಸ್ ಸಿನೆಮಾದ ಡೋಲಾರೇ ಡೋಲಾರೇ ಹಾಡಿಗೆ ಕೂಡ ರವಿ ಬಾಲಾ ಶರ್ಮಾ ನರ್ತಿಸಿದ್ದಾರೆ. ಈ ವಿಡಿಯೋ ಅನ್ನು 2 ಮಿಲಿಯನ್​ ಜನರು ನೋಡಿದ್ದಾರೆ. ಸುಮಾರು 73,000 ಜನರು ಲೈಕ್ ಮಾಡಿದ್ದಾರೆ. ‘ಢೋಲಾರೇ ಹಾಡಿನಲ್ಲಿ ಈ ಡ್ಯಾನ್ಸಿಂಗ್​ ದಾದಿ ಮಿಸ್​ ಆಗಿದ್ದಾರೆ ಎಂದು ಐಶ್ವರ್ಯಾ ಮತ್ತು ಮಾಧುರಿ ಅನ್ನಿಸಲಿ’ ಎಂದು ತಮಾಷೆಯಿಂದ ಕ್ಯಾಪ್ಷನ್​ ಬರೆದಿದ್ದಾರೆ ಈ ದಾದೀಮಾ.

ನೋಡಿ ಡೋಲಾರೇ ಡೋಲಾರೆ ಹಾಡಿಗೆ ದಾದಿಯ ನೃತ್ಯ

ನಿಮಗೀಗ ಈ ಅಜ್ಜಿಯ ಉತ್ಸಾಹವನ್ನು ನೋಡಿ ಡ್ಯಾನ್ಸ್ ಮಾಡಬೇಕು ಎನ್ನಿಸುತ್ತಿರಬೇಕಲ್ಲ? ನೃತ್ಯ ಮನಸ್ಸಿಗೆ ಮೈಗೆ ಆಹ್ಲಾದವನ್ನು ಕೊಡುತ್ತದೆ. ಮೈಚಳಿಬಿಟ್ಟು ರೂಢಿಸಿಕೊಳ್ಳಿ. ನಿಮ್ಮ ಸ್ನೇಹಿತರೊಂದಿಗೆ, ಪ್ರೀತಿಪಾತ್ರರೊಂದಿಗೆ, ಮನೆಮಂದಿಯೊಂದಿಗೆ. ಯಾರೂ ಬೇಡವೆ? ಈ ಅಜ್ಜಿಯ ಹಾಗೆ ಒಬ್ಬರೇ ಆದರೂ ಸೈ!

ಏನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:36 am, Wed, 16 August 23