Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೊಸ ಸ್ಪ್ಯಾನಿಷ್ ಟೀಚರ್​ ಬಂದಿದಾರೆ ಎಲ್ಲ ಆನ್​ಲೈನ್ ಕ್ಲಾಸಿಗೆ ಬನ್ನಿ

Spanish : ಮ್ಯಾಡ್ರಿಡ್​ನ ಈ ಟೀಚರ್ ಬಹಳ ಸುಲಭವಾಗಿ, ಉಲ್ಲಾಸಮಯವಾಗಿ ಸ್ಪ್ಯಾನಿಷ್​ ಅನ್ನು ಆನ್​ಲೈನ್​ನಲ್ಲಿ ಹೇಳಿಕೊಡುತ್ತಾರೆ. ಇಂಥ ಟೀಚರ್ ಸಿಕ್ಕರೆ ಎಂಥ ಭಾಷೆಯನ್ನೂ ಬಹಳ ಬೇಗ ಕಲಿಯಬಹುದು ಎಂದು ನೆಟ್ಟಿಗರು ವಿಸ್ಮಯಗೊಂಡಿದ್ದಾರೆ. 'ಕೊಮೊ ಪೊಕೋ ಕೋಕೋ ಕೋಮೋ ಪೋಕೋ, ಕೋಕೋ ಕೋಂಪ್ರೋ' ಹೀಗೆಂದರೆ ಏನು ಗೊತ್ತೆ? ಸುಳಿವು ಬೇಕೆ? ಕೋಕೊ ಎಂದರೆ ಕೊಬ್ಬರಿ.

Viral Video: ಹೊಸ ಸ್ಪ್ಯಾನಿಷ್ ಟೀಚರ್​ ಬಂದಿದಾರೆ ಎಲ್ಲ ಆನ್​ಲೈನ್ ಕ್ಲಾಸಿಗೆ ಬನ್ನಿ
ಮ್ಯಾಡ್ರಿಡ್​ನ ಸ್ಪ್ಯಾನಿಷ್ ಟೀಚರ್ ಮರ್ಯಮ್ ಎಸ್ಮಾಯಿಲ್​ಪೋರ್
Follow us
ಶ್ರೀದೇವಿ ಕಳಸದ
|

Updated on:Aug 15, 2023 | 4:37 PM

Language: ಮಾತೃಭಾಷೆ ಬಿಟ್ಟು ಇನ್ನೊಂದು ಭಾಷೆ ಕಲಿಯಬೇಕೆಂದರೆ ಆ ಭಾಷೆ ನಮ್ಮ ಪರಿಸರದ ಭಾಷೆಯಾಗಿರಬೇಕು. ಅಂದಾಗ ಮಾತ್ರ ಬಲುಬೇಗನೆ ನಮ್ಮ ನಾಲಗೆಯ ಮೇಲೆ ನಲಿದಾಡುತ್ತದೆ. ಈಗಂತೂ ನಮ್ಮ ಭಾಷೆಯೊಂದಿಗೆ ಇಂಗ್ಲಿಷ್​ ಒಳಗೊಂಡಂತೆ ಪರರಾಜ್ಯ ಮತ್ತು ಪರದೇಶಗಳ ಭಾಷೆ ಕಲಿಯುವುದು ಅನಿವಾರ್ಯ. ಏಕೆಂದರೆ ಭಾಷೆ ಎನ್ನುವುದು ಇಂದು ಅನ್ನದ ಮಾರ್ಗವೂ ಹೌದು. ಭಾಷೆಗಳು ಗೊತ್ತಿದ್ದಷ್ಟೂ ನಿಮ್ಮ ಜಗತ್ತು ವಿಸ್ತರಿಸುತ್ತಾ ಹೋಗುತ್ತದೆ. ಉದ್ಯೋಗವರಸಿ ವಿದೇಶಕ್ಕೆ ಹೋಗುವವರಿಗೆ ಒತ್ತಾಸೆಯಾಗುವ ಬಗೆ ಒಂದು. ಆದರೆ ಇದ್ದಲ್ಲಿಯೇ ಇದ್ದು ಅನುವಾದದ (Translation) ಮೂಲಕ ಇತರೇ ಭಾಷೆದೇಶಗಳೊಂದಿಗೆ ಒಡನಾಡುವ ಬಗೆ ಇನ್ನೊಂದು. ಇದೀಗ ಸ್ಪ್ಯಾನಿಷ್​ ಕಲಿಯುವುದು ಬಹಳ ಸರಳ ಎನ್ನುತ್ತಿದ್ದಾರೆ ಮ್ಯಾಡ್ರಿಡ್​ನ ಈ ಟೀಚರ್ ಮರ್ಯಮ್​ ಎಸ್ಮಾಯಿಲ್ಪೋರ್. 17 ವರ್ಷಗಳ ಕಾಲ ಸ್ಪ್ಯಾನಿಷ್ ಕಲಿಸಿದ ಅನುಭವ ಹೊಂದಿದ ಇವರು ನಿಮಗೂ ಸ್ಪ್ಯಾನಿಷ್​ನ ರುಚಿ ತೋರಿಸಲಿದ್ದಾರೆ.

ಇದನ್ನೂ ಓದಿ : Viral Video: ‘ಎಚ್ಚರ! ಹೊಸ ಅಮ್ಮ ಬಂದಿದ್ದಾಳೆ’; ಕಕ್ಕಾವಿಕ್ಕಿಯಾದ ಅಮ್ಮಕೋಳಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಕೆಳಗಿನ ವಿಡಿಯೋದಲ್ಲಿ ಮರ್ಯಮ್ ಟೀಚರ್,​ ‘ನಾನು ಸ್ವಲ್ಪ ಕೊಬ್ಬರಿಯನ್ನು ತಿನ್ನುತ್ತೇನೆ ಹಾಗಾಗಿ ಸ್ವಲ್ಪೇ ಕೊಬ್ಬರಿಯನ್ನು ಖರೀದಿಸುತ್ತೇನೆ’ ಎನ್ನುವುದನ್ನು ಸ್ಪ್ಯಾನಿಷ್​ನಲ್ಲಿ ಹೇಳುವುದು ಹೇಗೆ ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಇಂಗ್ಲಿಷ್​ನಲ್ಲಿ I eat coconut little, so I buy little coconut, ಸ್ಪ್ಯಾನಿಷ್​ನಲ್ಲಿ Como Poco Coco Como Poco, Coco Compro (ಕೊಮೊ ಪೊಕೋ ಕೋಕೋ ಕೋಮೋ ಪೋಕೋ, ಕೋಕೋ ಕೋಂಪ್ರೋ) ಅರ್ಥವಾಗಲಿಲ್ಲವಾ? ಹಾಗಿದ್ದರೆ ಟೀಚರ್ ವಿವರಣೆ ಕೇಳಿ.

 ಸ್ಪ್ಯಾನಿಷ್​ ಆನ್​ಲೈನ್​ ಕ್ಲಾಸ್​ 1

ಹೇಗೆ ಇದನ್ನು ಕಲಿಯೋದು ಅರ್ಥ ಮಾಡಿಕೊಳ್ಳೋದು ಅಂತ ಯೋಚಿಸುವ ಮೊದಲು ನಗು ಬರುತ್ತಿರುವಂತೆ ಇದೆಯಲ್ಲವಾ? ನಿಜಕ್ಕೂ ನಿಮ್ಮ ಈ ಟಂಗ್​ ಟ್ವಿಸ್ಟರ್​ ಇಷ್ಟವಾಯಿತು ಎಂದಿದ್ದಾರೆ ಒಬ್ಬರು. ನಾನು 30 ವರ್ಷಗಳಿಂದ ಈ ಭಾಷೆಯನ್ನು ಕಲಿತು ನಿರರ್ಗಳವಾಗಿ ಮಾತನಾಡುತ್ತಿದ್ದೇನೆ. ಎಂದೂ ಈ ಭಾಷೆ ನನಗೆ ಟಂಗ್​ ಟ್ವಿಸ್ಟರ್​ನಂತೆ ಅನ್ನಿಸಿಲ್ಲ, ಹಾಗೆ ನೋಡಿದರೆ ಇಂಗ್ಲಿಷ್ ಕಷ್ಟವೆನ್ನಿಸುತ್ತದೆ ಎಂದು ಪ್ರತಿಯಾಗಿ ಉತ್ತರಿಸಿದ್ದಾರೆ ಇನ್ನೊಬ್ಬರು. ನೀವು ಮಾಡುವ ವಿಡಿಯೋಗಳು ನಿಜಕ್ಕೂ ಅದ್ಭುತವಾಗಿವೆ, ಹೊಸ ಭಾಷೆಯಲ್ಲಿ ಸಹಜವಾಗಿ ಅಸಕ್ತಿ ಮೂಡಿಸುವಂತೆ ಇವೆ ಎಂದಿದ್ದಾರೆ ಇನ್ನೊಬ್ಬರು. ಇನ್ನೊಂದು ಟಂಗ್​ ಟ್ವಿಸ್ಟರ್ ಈ ಕೆಳಗಿನಂತಿದೆ.

ಸ್ಪ್ಯಾನಿಷ್ ಆನ್​ಲೈನ್ ಕ್ಲಾಸ್​ 2

ಒಂದು ಭಾಷೆಯನ್ನು ಹೀಗೆ ಉಲ್ಲಾಸಮಯವಾಗಿ ಕಲಿಸುವ ವಿಡಿಯೋಗಳನ್ನು ಈತನಕ ನೋಡಿರಲಿಲ್ಲ. ನಿಜಕ್ಕೂ ನಿಮ್ಮ ವಿಡಿಯೋಗಳು ಅನನ್ಯವಾಗಿವೆ, ನನಗೆ ಭಾಷೆ ಕಲಿಯಲು ಸಹಾಯ ಮಾಡುತ್ತಿವೆ ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ನಾನು ಇಂಥದ್ದನ್ನು ಈ ಮೊದಲು ಕೇಳಿಯೇ ಇರಲಿಲ್ಲ. ನನಗೂ ಈಗ ಸ್ಪ್ಯಾನಿಷ್ ಕಲಿಯಬೇಕೆಂಬ ಆಸೆ ಹುಟ್ಟುತ್ತಿದೆ, ಹಾಗಿದೆ ನೀವು ಕಲಿಸುತ್ತಿರುವ ರೀತಿ ಎಂದಿದ್ದಾರೆ ಅನೇಕರು. ಮತ್ತಷ್ಟು ವಿಡಿಯೋಗಳನ್ನು ಮರ್ಯಮ್ ಟೀಚರ್​ ಇನ್​ಸ್ಟಾಗ್ರಾಂ ಪುಟದಲ್ಲಿ ನೋಡಬಹುದು.

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:31 pm, Tue, 15 August 23

ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು