Viral Video: ಅವರ ಮನೆಗೆ ‘ಹಾವುಕೋಸು’ ಬಂದಿತ್ತಂತೆ! ನೋಡಿ ಅದು ಹೇಗಿತ್ತೆಂದು

Viral Video: ಈಗ ಮಳೆಗಾಲ. ತರಕಾರಿ, ಸೊಪ್ಪುಗಳನ್ನು ಅಡುಗೆ ಮನೆ ಅಥವಾ ಫ್ರಿಡ್ಜಿನಲ್ಲಿಡುವ ಮೊದಲು ಬಹಳ ಎಚ್ಚರಿಕೆಯಿಂದ ಗಮನಿಸಬೇಕು. ಅದರಲ್ಲಿ ಅಡಗಿರುವ ಸಣ್ಣಪುಟ್ಟ ಕ್ರಿಮಿ ಕೀಟಗಳ ಬಗ್ಗೆ ಎಲ್ಲರಿಗೂ ತಿಳಿದಿರುವಂಥದ್ದೇ. ಆದರೆ ಹಾವು? ಬ್ರೊಕೊಲಿ ಮತ್ತು ಹೂಕೋಸಿನಲ್ಲಿ ಹಾವುಗಳು ನುಸುಳಾಡುತ್ತಿರುವ ಪರಿ ನೋಡಿ.

Viral Video: ಅವರ ಮನೆಗೆ 'ಹಾವುಕೋಸು' ಬಂದಿತ್ತಂತೆ! ನೋಡಿ ಅದು ಹೇಗಿತ್ತೆಂದು
ಹೂಕೋಸಿನಲ್ಲಿ ಹಾವು
Follow us
ಶ್ರೀದೇವಿ ಕಳಸದ
|

Updated on:Aug 15, 2023 | 2:50 PM

Snake: ಗೋಬಿ, ಹೂಕೋಸು, ಕಾಲಿಫ್ಲವರ್ ಎಂದರೆ ಅನೇಕರಿಗೆ ಪಂಚಪ್ರಾಣ. ಇನ್ನೂ ಕೆಲವರು ಅದರಲ್ಲಿರುವ ಸಣ್ಣ ಕ್ರಿಮಿಗಳಿಂದಾಗಿ ದೂರ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ದೊಡ್ಡ ಕ್ರಿಮಿಯೊಂದು ಪತ್ತೆಯಾಗಿದೆ. ಅದು ಅಂತಿಂಥದ್ದಲ್ಲ ಸಾಕ್ಷಾತ್ ಹಾವು! ಮಳೆಗಾಲದ (Rainy Season) ಸಮಯದಲ್ಲಿ ಯಾವುದೇ ತರಕಾರಿಗಳಲ್ಲಿಯೂ ಕ್ರಿಮಿ ಕೀಟಗಳು ಕಂಡುಬರುವುದು ಸಹಜ. ಆದರೆ ಹಾವು? ಇದು ಎಂಥವರಿಗೂ ಭಯವುಂಟು ಮಾಡುವಂಥದ್ದೇ. ಈ ಅನಿರೀಕ್ಷಿತ ಹಾವಿನ ಮರಿಯನ್ನು ಹೂಕೋಸಿನಲ್ಲಿ ಕಂಡ ಈ ಕುಟುಂಬದವರು ಗಾಬರಿಯಾಗಿದ್ದಾರೆ. ಇದನ್ನು ಟ್ವೀಟ್ ಮಾಡಿದ ನಂತರ ನೆಟ್ಟಿಗರೂ ಅವರ ಹಾದಿಯನ್ನೇ ಅನುಸರಿಸಿದ್ದಾರೆ.

ಇದನ್ನೂ ಓದಿ : Viral Video: ಸ್ವಾತಂತ್ರ್ಯೋತ್ಸವದ ನಿಮಿತ್ತ ಖಾಲೀಬಾಟಲಿ ತಾಳವಾದ್ಯ ಕಛೇರಿಗೆ ನಿಮ್ಮನ್ನು ಆಹ್ವಾನಿಸಲಾಗಿದೆ  

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಾರುಕಟ್ಟೆಯಿಂದ ತರಕಾರಿ ಖರೀದಿಸಿದ ಈ ಕುಟುಂಬದವರು ತರಕಾರಿಯನ್ನು ನೆಲದ ಮೇಲೆ ಹರಡಿದ್ದಾರೆ. ಆಗ ಹೂಕೋಸಿನೊಳಗೆ ಏನೋ ಮಿಸುಕಾಡುವುದು ಕಂಡಿದೆ. ನಂತರ ಹೂಕೋಸಿನ ಎಸಳುಗಳನ್ನು ಒಂದೊಂದೇ ಬಿಡಿಸುತ್ತ ಹಾವಿಗೆ ಹೊರಬರಲು ಸಹಾಯ ಮಾಡಿದ್ದಾರೆ ಆ ಮನೆಯವರೊಬ್ಬರು. ಆದರೂ ಅದು ಮತ್ತಷ್ಟು ಒಳಗೊಳಗೇ ನುಸುಳಲು ಪ್ರಯತ್ನಿಸಿದೆ.

ನೋಡಿ ಈ ವಿಡಿಯೋ, ಇದೇ ಹಾವುಕೋಸು!

ಆ. 4ರಂದು X (Twitter) ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ದೇವೇಂದ್ರ ಸೈನಿ ಎನ್ನುವವರು ಇದನ್ನು ಟ್ವೀಟ್ ಮಾಡಿದ್ದಾರೆ. ಆದರೆ ಇದು ಯಾವ ಸ್ಥಳದಲ್ಲಿ ನಡೆದಿದೆ ಎನ್ನುವುದನ್ನು ಅವರು ತಿಳಿಸಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರಂತೂ ಭಯಭೀತರಾಗಿದ್ದಾರೆ. ಇನ್ನುಮುಂದೆ ಯಾವುದೇ ಸೊಪ್ಪು ತರಕಾರಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಅಡುಗೆ ಮಾಡಬೇಕು, ತಿನ್ನಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Viral Video: ತಿನ್ನಲು ಎಲೆ ಕೊಟ್ಟ ಬಾಲಕನನ್ನೇ ಮೇಲೆತ್ತಿದ ಜಿರಾಫೆಯ ವಿಡಿಯೋ ವೈರಲ್, ಮುಂದೆ?

ಈ ಘಟನೆ ಇದೇ ಮೊದಲೇನಲ್ಲ. ಆಗಸ್ಟ್​ನ ಆರಂಭದಲ್ಲಿ ಇಂಗ್ಲೆಂಡ್​ನ ವೆಸ್ಟ್  ಮಿಡ್‌ಲ್ಯಾಂಡ್ಸ್‌ನಲ್ಲಿ ಬ್ರೊಕೊಲಿಯಲ್ಲಿ ಜೀವಂತ ಹಾವೊಂದು ಪತ್ತೆಯಾಗಿತ್ತು. ಇದನ್ನು ಕಂಡ 63 ವರ್ಷದ ವ್ಯಕ್ತಿ ನೆವಿಲ್ಲೆ ಲಿಂಟನ್ ಎನ್ನುವವರು ಆಘಾತಕ್ಕೊಳಗಾಗಿದ್ದರು. ನೆವಿಲ್ಲೆ ಅಡುಗೆ ಮಾಡಲೆಂದು ತಮ್ಮ ಫ್ರಿಜ್‌ನಿಂದ ತರಕಾರಿಯನ್ನು ಹೊರತೆರೆದಾಗ ಹಾವೊಂದು ಅದರಲ್ಲಿ ಅಡಗಿರುವುದನ್ನು ನೋಡಿದರು. ಸದ್ಯ ಅದು ವಿಷಕಾರಿ ಹಾವಾಗಿರಲಿಲ್ಲ!

ನೋಡಿ ‘ಹಾವುಬ್ರೋಕೋಲಿ’ಯ ವಿಡಿಯೋ

‘ಬ್ರೊಕೊಲಿಯಲ್ಲಿರುವ ಹಾವನ್ನು ನೋಡಿದಾಗ ನಿಜಕ್ಕೂ ಭಯಪಟ್ಟೆ. ಮೊದಲೇ ನನಗೆ ಹಾವುಗಳನ್ನು ಸಂಭಾಳಿಸುವ ಬಗ್ಗೆ ತಿಳಿವಳಿಕೆ ಇಲ್ಲ. ಅದೃಷ್ಟವಶಾತ್ ನಾನು ಆ ಬ್ರೊಕೊಲಿಯನ್ನು ಅಡುಗೆಮನೆಯಲ್ಲಿ ಬಿಡಲಿಲ್ಲ. ನೆನೆಸಿಕೊಂಡರೆ ಈಗಲೂ ಭಯವಾಗುತ್ತದೆ’ ಎಂದಿದ್ದಾರೆ ಲಿಂಟನ್.

ಇದನ್ನೂ ಓದಿ : Viral Video: ಪರ್ಸ್, ಬ್ಯಾಗ್​, ಇಟ್ಟಿಗೆ, ಚೆಂಡು ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವ ಇಸ್ತಾನ್​ಬುಲ್​ ಮಹಿಳೆ

ಈ ಬ್ರೊಕೊಲಿಯನ್ನು ಮಾರಾಟ ಮಾಡಿದ ಆಲ್ಡಿ ಸ್ಟೋರ್​, ‘ಮೊದಲ ಸಲ ಇಂಥ ದೂರು ಕೇಳಿಬಂದಿದೆ. ಗ್ರಾಹಕರಿಗೆ ಪರಿಹಾರವನ್ನು ನೀಡಲಾಗಿದೆ’ ಎಂದು ತಿಳಿಸಿದೆ. ಆದರೆ ವಯಸ್ಸಾದ ಲಿಂಟನ್​ ತಮ್ಮ ಅಂಗವಿಕಲ ಮಗನೊಂದಿಗೆ ವಾಸಿಸುತ್ತಿದ್ದು ಈ ಪರಿಹಾರದಿಂದ ನಮ್ಮ ಆಘಾತ ಕಡಿಮೆಯಾಗುವುದೆ? ಎಂದು ಕೇಳಿದ್ದಾರೆ.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:47 pm, Tue, 15 August 23

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ