Viral Video: ಪರ್ಸ್, ಬ್ಯಾಗ್, ಇಟ್ಟಿಗೆ, ಚೆಂಡು ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವ ಇಸ್ತಾನ್ಬುಲ್ ಮಹಿಳೆ
Woman : ಈಕೆ ಅಕಸ್ಮಾತ್ ಆಗಿ ಕೇಕ್ ಕಲಾವಿದೆಯಾಗಿ ಜಗತ್ತಿನ ಗಮನ ಸೆಳೆದರು. 12 ವರ್ಷದವರಿದ್ದಾಗಲೇ ತರಬೇತಿ ಇಲ್ಲದೆಯೇ ಪೇಸ್ಟ್ರೀ ಕೇಕ್ ತಯಾರಿಸಲು ಆರಂಭಿಸಿದ ಈಕೆ ಚಿತ್ರಕಲಾವಿದೆ, ಶಿಕ್ಷಣತಜ್ಞೆ ಮತ್ತು ಕೇಕ್ ಕಲಾವಿದೆ ಕೂಡ. ಪತಿಯ ಬೆಂಬಲದಿಂದ ಈಕೆ ಉದ್ಯಮಿಯೂ ಆಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 1.5 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
Cake : ನೋಡನೋಡುತ್ತಿದ್ದಂತೆಯೇ ಈಕೆ ಟೇಬಲ್ ಮೇಲಿಟ್ಟಿರುವ ಚರ್ಮದ ಪರ್ಸ್ ತಿನ್ನುತ್ತಾಳೆ. ಇಟ್ಟಿಗೆಯ ಗೋಡೆ ಕಟ್ಟುತ್ತ ಇಟ್ಟಿಗೆಯನ್ನೂ ತಿನ್ನುತ್ತಾಳೆ. ಕಾರಿಗೆ ಪೆಟ್ರೋಲ್ ತುಂಬಿಸುತ್ತ ಪೆಟ್ರೋಲ್ ಪೈಪನ್ನೂ ತಿನ್ನುತ್ತಾಳೆ. ಚಹಾ ಕುಡಿಯುತ್ತಿರುವಾಗ ಮುರಿದ ಹಿಡಿಕೆಯನ್ನೂ ತಿನ್ನುತ್ತಾಳೆ. ಧರಿಸಿದ ಜಾಕೆಟ್ ಕೂಡ ತಿನ್ನುತ್ತಾಳೆ. ವಾಕ್ ಮಾಡುತ್ತಿರುವಾಗ ತಲೆಮೇಲೆ ತೂಗುತ್ತಿದ್ದ ಗಿಡದ ಕೊಂಬೆಯನ್ನೂ ಮುರಿದುಕೊಂಡು ತಿನ್ನುತ್ತಾಳೆ. ಎಲ್ಲಿಂದಲೋ ತೂರಿಬಂದ ಫುಟ್ಬಾಲ್ (Football) ಅನ್ನೂ ಕಚ್ಚಿ ತಿನ್ನುತ್ತಾಳೆ. ಸೆಲ್ಫೀ ತೆಗೆದುಕೊಳ್ಳುತ್ತ ಮೊಬೈಲನ ಮೂಲೆಯನ್ನೇ ತಿಂದುಬಿಡುತ್ತಾಳೆ. ಅಷ್ಟೇ ಏಕೆ ಜೊತೆಗೆ ಹಾಕಿಕೊಂಡ ಟೋಪಿಯನ್ನೂ, ದೊಡ್ಡ ಮರದ ತೊಗಟೆಯನ್ನೂ ಕೊನೆಗೆ ಐಫೆಲ್ ಗೋಪುರದ ತುದಿಯನ್ನೂ! ಈಕೆ ಮನುಷ್ಯಳೋ ಮತ್ತಿನ್ನೇನೋ?
ಇದನ್ನೂ ಓದಿ : Viral Video: ಪ್ಯಾನ್ಕೇಕ್ ಅಲ್ಲ ದೋಸೆ! ಭಾರತೀಯರಿಗೆ ನೋವುಂಟು ಮಾಡಿದ ಈ ಫೇಸ್ಬುಕ್ ಪುಟ ಡಿಲೀಟ್ ಆಗಬೇಕು
ನೆಟ್ಟಿಗರಂತೂ ಈಕೆಯನ್ನು ಮತ್ತು ಈಕೆ ತಿಂದ ವಸ್ತುಗಳನ್ನೆಲ್ಲಾ ಬೆರಗಿನಿಂದ ನೋಡುತ್ತ ಬಾಯಿಯಲ್ಲಿ ನೀರೂರಿಸಿಕೊಳ್ಳುತ್ತಿದ್ದಾರೆ. ಈಕೆ ನಿಜಕ್ಕೂ ಪುಣ್ಯ ಮಾಡಿದ್ದಾಳೆ ಎಂದು ಕೆಲವರು ಹೊಗಳುತ್ತಿದ್ದಾರೆ. ಈ ಎಲ್ಲ ವಸ್ತುಗಳನ್ನು ಮಾಡುವುದಲ್ಲದೇ ತಿಂದು ಕೂಡ ಅರಗಿಸಿಕೊಂಡ ಈಕೆ ನಿಜಕ್ಕೂ ಅಸಾಮಾನ್ಯಳು ಎಂದು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ನೀವೂ ಈ ಕೆಳಗಿನ ವಿಡಿಯೋಗಳನ್ನು ಒಂದೊಂದೇ ಸ್ಲೈಡ್ ಮಾಡಿ ನೋಡಿ.
ಈ ವಿಡಿಯೋ ನೋಡುವ ಮೊದಲು ಟಿಶ್ಯೂ ಪೇಪರ್ ಎತ್ತಿಟ್ಟುಕೊಳ್ಳಿ
ಈ ಎಲ್ಲ ಕೇಕ್ಗಳನ್ನು ತಯಾರಿಸಿದವರು ಇಸ್ತಾನ್‌ಬುಲ್‌ನ 43 ವರ್ಷದ ಪ್ರಶಸ್ತಿ ವಿಜೇತೆ, ದಾಖಲೆ ನಿರ್ಮಿಸಿದ ಕೇಕ್ ಕಲಾವಿದೆ ಮತ್ತು ಶಿಕ್ಷಣತಜ್ಞೆ ಟುಬಾ ಗೆಕಿಲ್ (Tuba Geckil). ಟರ್ಕಿಯ ಎಸ್ಕಿಸೆಹಿರ್ ನಗರದ ಆಹಾರಪ್ರೇಮಿ ಮತ್ತು ಕಲಾವಿದರ ಕುಟುಂಬದಲ್ಲಿ ಬೆಳೆದರು. 12 ವರ್ಷದವರಿದ್ದಾಗಲೇ ಪಾಕಕಲೆಗೆ ಆಕರ್ಷಿತರಾದರು. ನಂತರ ತರಬೇತಿ ಪಡೆಯದೆಯೇ ರುಚಿಕರವಾದ ಕೇಕ್ಗಳನ್ನು ತಯಾರಿಸಲು ಪ್ರಾರಂಭಿಸಿದರು.
View this post on Instagram
ಟುಬಾ ತನ್ನ ಯೌವನದಲ್ಲಿಯೇ ಅಸಾಧಾರಣ ಕಲಾಪ್ರೌಢಿಮೆ ಮೆರೆದರು. ತೈಲವರ್ಣ ಮತ್ತು ಜಲವರ್ಣದಲ್ಲಿ ಪ್ರಾವೀಣ್ಯ ಪಡೆದ ಇವರು ಅನೇಕ ಕಲಾ ಪ್ರದರ್ಶನಗಳನ್ನು ಏರ್ಪಡಿಸಿದರು. ಚಿತ್ರಕಲೆ ಮತ್ತು ಬೇಕಿಂಗ್ ಇವರಿಗೆ ಯಶಸ್ಸನ್ನು ತಂದುಕೊಟ್ಟಿತು. ಮದುವೆಯ ನಂತರ, ಇವರು ಇಸ್ತಾನ್‌ಬುಲ್‌ಗೆ ತೆರಳಿದರು. ಸದ್ಯ ಪತಿ ಮತ್ತು 20 ಮತ್ತು 13 ವರ್ಷದ ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದಾರೆ. ’15 ವರ್ಷಗಳ ಹಿಂದೆ ಮಗನ ಹುಟ್ಟುಹಬ್ಬಕ್ಕಾಗಿ ನಾನು ಮೊದಲ ಕಲಾತ್ಮಕ ಕೇಕ್ ತಯಾರಿಸಿದೆ. ಡಿಸ್ನಿ ಮೆಕ್ಕ್ವೀನ್ ಆಟಿಕೆ ಕಾರನ್ನು ತಯಾರಿಸಿದಾಗ ಆತ ಬಹಳ ಅಚ್ಚರಿಪಟ್ಟ. ಬಂದ ಅಥಿತಿಗಳೇ ಗ್ರಾಹಕರಾದರು. ಕೇಕ್ನ ಗಾತ್ರಕ್ಕೆ ಎಂದೂ ಮಿತಿ ಇರಬಾರದು ಆಗ ಮಾತ್ರ ಏನು ಬೇಕಾದರೂ ಸೃಷ್ಟಿಸಬಹುದು’ ಎನ್ನುತ್ತಾರೆ ಆಕೆ.
ಇದನ್ನೂ ಓದಿ : Viral Optical Illusion: ಪ್ರೇಮಸಂಬಂಧದಲ್ಲಿ ಬದ್ಧತೆಯ ಸಮಸ್ಯೆ ಎದುರಿಸುತ್ತಿದ್ದೀರೆ? ಈ ಚಿತ್ರ ನೋಡಿ ಉತ್ತರ ಕಂಡುಕೊಳ್ಳಿ
ಕ್ರಮೇಣ, ಆರ್ಡರ್‌ಗಳ ಸಂಖ್ಯೆ ಹೆಚ್ಚಾದಂತೆ ಛಾಯಾಗ್ರಾಹಕನನ್ನು ಒಳಗೊಂಡಂತೆ ಸ್ವಂತ ತಂಡವನ್ನು ಕಟ್ಟಿಕೊಂಡರು. ಕಲಾವಿದೆಯಾಗಿದ್ದ ಟುಬಾ ಒಬ್ಬ ಉದ್ಯಮಶೀಲೆಯಾಗಿ ಹೊಮ್ಮುವಲ್ಲಿ ಈಕೆಯ ಪತಿಯ ಸಂಪೂರ್ಣ ಬೆಂಬಲವಿದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:58 pm, Mon, 14 August 23