Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Optical Illusion: ಪ್ರೇಮಸಂಬಂಧದಲ್ಲಿ ಬದ್ಧತೆಯ ಸಮಸ್ಯೆ ಎದುರಿಸುತ್ತಿದ್ದೀರೆ? ಈ ಚಿತ್ರ ನೋಡಿ ಉತ್ತರ ಕಂಡುಕೊಳ್ಳಿ

Optical Illusion : ಟಿಕ್​ಟಾಕ್​ನಲ್ಲಿ ಭಾರೀ ಗಮನ ಸೆಳೆದಿದೆ ಈ ಭ್ರಮಾತ್ಮಕ ಚಿತ್ರ. ಇದು ನೋಡುಗರ ಅಂತರಂಗದ ಭಾವನೆಗಳನ್ನು ಬಹಿರಂಗಪಡಿಸುತ್ತದೆ ಎಂದು ಹೇಳಲಾಗಿದೆ. ಕೆಲವರಿಗೆ ಈ ಚಿತ್ರದಲ್ಲಿ ಮೊದಲಿಗೆ ಮೀನು ಕಾಣಿಸಬಹುದು. ಇನ್ನೂ ಕೆಲವರಿಗೆ ಬರೀ ಮೋಡ. ಹಾಗಿದ್ದರೆ ನಿಮಗೆ ಮೀನು ಕಂಡಿತೇ, ಮೋಡವೇ? ಇದರ ಅರ್ಥವೇನು? ತಿಳಿದುಕೊಳ್ಳಿ.

Viral Optical Illusion: ಪ್ರೇಮಸಂಬಂಧದಲ್ಲಿ ಬದ್ಧತೆಯ ಸಮಸ್ಯೆ ಎದುರಿಸುತ್ತಿದ್ದೀರೆ? ಈ ಚಿತ್ರ ನೋಡಿ ಉತ್ತರ ಕಂಡುಕೊಳ್ಳಿ
ಈ ಚಿತ್ರದಲ್ಲಿ ಮೊದಲಿಗೆ ಏನು ಕಾಣುತ್ತದೆ?
Follow us
ಶ್ರೀದೇವಿ ಕಳಸದ
|

Updated on:Aug 14, 2023 | 3:44 PM

Optical Illusion : ಮತ್ತೊಂದು ಹೊಸ ಭ್ರಮಾತ್ಮಕ ಚಿತ್ರವಿದೀಗ ನಿಮ್ಮ ಮುಂದಿದೆ. ನಿತ್ಯದ ಕೆಲಸ ಮತ್ತು ಜವಾಬ್ದಾರಿಗಳ ನಡುವೆ ನೀವು ಸುಸ್ತಾಗಿ ಹೋಗಿರುತ್ತೀರಿ ಎಂಬುದು ನಮಗೆ ಅರಿವಿದ್ದೇ ನಾವು ಆಗಾಗ ಇಂಥ ಸಣ್ಣ ಚಟುವಟಿಕೆಗಳನ್ನು ನಿಮ್ಮೆದುರಿಗೆ ಇಡುತ್ತಿರುತ್ತೇವೆ. ಈ ಸಲ ಯಾವುದೇ ಸವಾಲು ಮತ್ತು ಸಮಯಮಿತಿಯನ್ನು ನಿಮಗೆ ಇಲ್ಲಿ ಒಡ್ಡಿಲ್ಲ. ಏಕೆಂದರೆ ಈ ಚಿತ್ರದಲ್ಲಿ ನೀವು ಏನು ಕಾಣುತ್ತೀರೋ ಆ ಪ್ರಕಾರ ನಿಮಗೆ ಉತ್ತರ ದೊರೆಯುತ್ತದೆ. ಈ ಚಿತ್ರಕ್ಕೆ ತುಸು ದಟ್ಟ ನೀಲಾಕಾಶದ ಹಿನ್ನೆಲೆ ಇದೆ. ಕೆಲವರಿಗೆ ಈ ಆಕಾಶದಲ್ಲಿ ಮೊದಲ ನೋಟಕ್ಕೆ ಬಿಳಿಮೀನು (Fish) ಕಂಡರೆ ಇನ್ನೂ ಕೆಲವರಿಗೆ ಬಿಳಿಮೋಡ (Cloud) ಕಾಣುವ ಸಾಧ್ಯತೆ ಇದೆ. ಹಾಗಿದ್ದರೆ ಈ ಕಾಣುವಿಕೆಗೆ ತಕ್ಕಂತೆ ಅರ್ಥಗಳೂ ಇರಬೇಕಲ್ಲ?

ಇದನ್ನೂ ಓದಿ : Viral: ಜಪಾನ್; ‘ನಾನಿನ್ನು ನಾಯಿಯಂತೆ ಬದುಕಲಾರೆ’ ನಾಯಿವೇಷಕ್ಕಾಗಿ ಈತ ರೂ 12 ಲಕ್ಷ ವ್ಯಯಿಸಿದ್ದ

ಮಿಯಾ ಮಿಲಿನ್​ ಎನ್ನುವವರು ಟಿಕ್​ ಟಾಕ್​ನಲ್ಲಿ ಅಪ್​ಲೋಡ್ ಮಾಡಿರುವ ಈ ಭ್ರಮಾತ್ಮಕ ಚಿತ್ರವನ್ನು ಈತನಕ 80,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೀವು ಯಾವುದಾದರೂ ವ್ಯಕ್ತಿಯೊಂದಿಗೆ ಸಂಬಂಧದಲ್ಲಿದ್ದು (Relationship) ಬದ್ಧತೆಗೆ ಸಂಬಂಧಿಸಿ ಏನಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ಚಿತ್ರವು ಸ್ಪಷ್ಟ ಸೂಚನೆಯನ್ನು ಕಂಡುಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ : Viral: ‘ನನ್ನ ಮಲಮಗ ತನ್ನ ಸ್ನೇಹಿತರೆದುರು ನನ್ನನ್ನು ಮೊದಲ ಸಲ ಅಪ್ಪಾ ಎಂದು ಕರೆದಾಗ’

ನೀವು ಯಾವುದಾದರೂ ವ್ಯಕ್ತಿಯೊಂದಿಗೆ ಪ್ರೀತಿಸಂಬಂಧದಲ್ಲಿದ್ದರೆ ಆಗಾಗ ಅವರ ಮಾತು ನಡೆವಳಿಕೆಯಿಂದ ನೊಂದುಕೊಳ್ಳುತ್ತೀರಾ? ನಿಮಗಿಂತಲೂ ಅವರನ್ನೇ ನಿಮ್ಮ ಹೃದಯದಲ್ಲಿ ಸ್ಥಾಪಿಸಿಕೊಂಡ ನೀವು ತುಂಬಾ ಸುಲಭಕ್ಕೆ  ಅವರಿಂದ ಗಾಸಿಗೆ ಒಳಗಾಗುತ್ತೀರಾ? ಅವರ ಮನಸ್ಸನ್ನು ತಿಳಿದುಕೊಳ್ಳಲು ಮತ್ತು ಹೊಂದಾಣಿಕೆ ಮಾಡಿಕೊಳ್ಳಲು ಬಹಳ ಒದ್ದಾಡುತ್ತಿರುತ್ತೀರಾ? ಹಾಗಿದ್ದರೆ, ಇದೀಗ ವೈರಲ್ ಆಗುತ್ತಿರುವ ಈ ಭ್ರಮಾತ್ಮಕ ಚಿತ್ರವನ್ನು ಗಮನಿಸಿ.

Do you have commitment issue in relationship Check through optical illusion

ಈ ಚಿತ್ರದಲ್ಲಿ ಮೊದಲಿಗೆ ಏನು ಕಾಣುತ್ತದೆ?

ಮೊದಲಿಗೆ ಮೋಡ ಕಂಡರೆ

ಮೇಲಿನ ಚಿತ್ರ ನೋಡಿದಾಗ ಮೊದಲಿಗೆ ನಿಮಗೆ ಮೋಡ ಕಂಡರೆ, ನೀವು ಸುಲಭಕ್ಕೆ ನಿಮ್ಮ ಪ್ರೇಮಿಯಿಂದ ನೋವನ್ನು ಅನುಭವಿಸುತ್ತೀರಿ. ಬದ್ಧತೆಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುತ್ತಿರುವಿರಿ ಎಂದರ್ಥ. ಹಾಗಾಗಿ ಎಲ್ಲಾ ರೀತಿಯಿಂದ ಇನ್ನೂ ಉತ್ತಮ ಎನ್ನಿಸುವ ಪ್ರೇಮಿಯ ಹುಡುಕಾಟಕ್ಕೆ ನೀವು ತೆರೆದುಕೊಳ್ಳಬಹುದು.

ಮೊದಲಿಗೆ ಮೀನು ಕಂಡರೆ

ಮೇಲಿನ ಚಿತ್ರದಲ್ಲಿ ನಿಮಗೆ ಮೊದಲಿಗೆ ಮೀನು ಕಂಡರೆ, ನೀವು ಸಂಬಂಧಕ್ಕಿಂತ ಹೊರತಾಗಿ ಬದುಕಿನಲ್ಲಿ ಇನ್ನೂ ಹೆಚ್ಚಿನದೇನನ್ನೋ ಸಾಧಿಸಲು ಇಷ್ಟಪಡುತ್ತೀರಿ ಎಂದರ್ಥ. ಹಾಗಾಗಿ ನಿಮ್ಮ ನಿರೀಕ್ಷೆಗೆ ತಕ್ಕಂಥ ವ್ಯಕ್ತಿ ಅವರಲ್ಲ ಎಂದೆನ್ನಿಸಿದಾಗ ನೀವು ಅವರೆಡೆ ಗಮನಿಸುವುದೂ ಇಲ್ಲ ಮತ್ತು ಸಮಯವನ್ನೂ ವ್ಯರ್ಥ ಮಾಡುವುದಿಲ್ಲ.

ಈ ಬಗ್ಗೆ ಮಿಯಾ ಮಿಲಿನ್​ ಏನೆನ್ನುತ್ತಾರೆ? 

ನೀವು ಮೊದಲಿಗೆ ಮೋಡವನ್ನು ಕಂಡರೆ, ಕಠಿಣ ಪರಿಶ್ರಮದಿಂದಾಗಿ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವಂಥ ವ್ಯಕ್ತಿತ್ವ ನಿಮ್ಮದು. ನೀವು ಅಂದುಕೊಂಡಂತೆ ಬದುಕಿನಲ್ಲಿ ಯಶಸ್ಸನ್ನೂ ಪಡೆಯುತ್ತೀರಿ. ಆದರೂ ಭವಿಷ್ಯದ ಅನಿಶ್ಚಿತತೆಗಳಿಂದಾಗಿ ನೀವು ಸಾಕಷ್ಟು ಒತ್ತಡ ಮತ್ತು ಸಂಕಟವನ್ನು ಅನುಭವಿಸುತ್ತೀರಿ.

ಇದನ್ನೂ ಓದಿ : Viral Video: ಮಹಾರಾಷ್ಟ್ರ; ಕಾರು ಚಾಲಕನ ಬೇಜವಾವ್ದಾರಿತನ, 2 ವರ್ಷದ ಹೆಣ್ಣುಹುಲಿ ಸಾವು

ನೀವು ಮೊದಲಿಗೆ ಮೀನುಗಳನ್ನು ನೋಡಿದ್ದರೆ, ನಿಮ್ಮ ಪ್ರಕಾರ ಬದುಕು ಬಹಳ ಚಿಕ್ಕದು, ಒಂದಿಲ್ಲಾ ಒಂದು ದಿನ  ಎಲ್ಲರೂ ಸಾಯುತ್ತೇವೆ ಎಂಬ ಸತ್ಯದ ಬಗ್ಗೆ ನಿಮಗೆ ಚೆನ್ನಾಗಿ ಅರಿವಿದೆ. ಹಾಗಾಗಿ ನೀವು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾರಿರಿ. ಹಾಗೆಯೇ ಸಮಯ ವ್ಯರ್ಥ ಮಾಡುವ ಜನರಿಂದ ನೀವು ದೂರ ಇರುತ್ತೀರಿ. ಮಾತಿಗಿಂತ ಕೃತಿಗೆ ಹೆಚ್ಚು ಗಮನ ಕೊಡುವವರನ್ನು ಗೌರವಿಸುತ್ತೀರಿ. ನಿಮ್ಮ ಗುರಿಗೆ ಬೆಂಬಲಿಸಿದವರನ್ನು ಸಂಪೂರ್ಣವಾಗಿ ಗೌರವಿಸುತ್ತೀರಿ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:43 pm, Mon, 14 August 23

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು