AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಹಾರಾಷ್ಟ್ರ; ಕಾರು ಚಾಲಕನ ಬೇಜವಾವ್ದಾರಿತನ, 2 ವರ್ಷದ ಹೆಣ್ಣುಹುಲಿ ಸಾವು

Rash Driving : ಈ ಅಪಘಾತದ ವಿಡಿಯೋ ನೋಡಿದ ನೆಟ್ಟಿಗರು, ಈ ವಿಷಯದಲ್ಲಿ ನಮ್ಮ ದೇಶ ಎಂದೂ ಉದ್ಧಾರವಾಗುವುದಿಲ್ಲ. ರಾಷ್ಟ್ರೀಯ ಪ್ರಾಣಿಯನ್ನು ಕೊಲ್ಲುವುದೆಂದರೆ ಸಣ್ಣ ಅಪರಾಧವಲ್ಲ. ಕಾರುಚಾಲಕನಿಗೆ ಖಂಡಿತ ಶಿಕ್ಷೆಯಾಗಬೇಕು. ಅಲ್ಲದೆ ಅರಣ್ಯ ಇಲಾಖೆಯು ವನ್ಯಜೀವಿಗಳ ಸಂರಕ್ಷಣೆಗೆ ಅನ್ಯದೇಶಗಳ ಮಾದರಿಯನ್ನು ಗಮನಿಸಬೇಕು ಎಂದಿದ್ದಾರೆ.

Viral Video: ಮಹಾರಾಷ್ಟ್ರ; ಕಾರು ಚಾಲಕನ ಬೇಜವಾವ್ದಾರಿತನ, 2 ವರ್ಷದ ಹೆಣ್ಣುಹುಲಿ ಸಾವು
1. ಅಪಘಾತದ ನಂತರದ ದೃಶ್ಯ. 2. ಮರಣವನ್ನಪ್ಪಿದ ಹೆಣ್ಣು ಹುಲಿ.
ಶ್ರೀದೇವಿ ಕಳಸದ
|

Updated on:Aug 12, 2023 | 6:46 PM

Share

Maharashtra: ಮಹಾರಾಷ್ಟ್ರದ ಗೊಂಡಿಯಾ ಅರಣ್ಯ ಪ್ರದೇಶದಲ್ಲಿ 2 ವರ್ಷದ ಹೆಣ್ಣು ಹುಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದೆ. ಗುರುವಾರ ರಾತ್ರಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಹುಲಿ ಸಾವು ಬದುಕಿನ ಮಧ್ಯೆ ಹೋರಾಡಿ ಕೊನೆಯುಸಿರೆಳೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮರಿಯನ್ನು ನಾಗ್ಝೀರಾ ವನ್ಯಜೀವಿ ಅಭಯಾರಣ್ಯ (Nagzira Wildlife Sanctuary)ಕ್ಕೆ ಸೇರಿದ T-14 ಎಂಬ ಹುಲಿಯ ಎರಡು ವರ್ಷದ ಮರಿ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ 10:30ರ ಸುಮಾರಿಗೆ ಮುರ್ಡೋಲಿ ಅರಣ್ಯ ಪ್ರದೇಶದಲ್ಲಿ ಈ ಹುಲಿಯು ಗೊಂಡಿಯಾ-ಕೊಹಮಾರಾ ಹೆದ್ದಾರಿ ದಾಟುತ್ತಿದ್ದಾಗ ವೇಗವಾಗಿ ಬಂದ ಕ್ರೆಟಾ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ : Viral Video: ಕಾವಾಲಾ; ಡ್ಯಾನ್ಸ್​ಗಿಂತ ನಿಮ್ಮ ಭಾವಾಭಿನಯವೇ ಹೆಚ್ಚು ಇಷ್ಟವಾಯಿತು ಎಂದ ನೆಟ್ಟಿಗರು

ಗೊಂಡಿಯಾದ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ ಪಂಚಭಾಯ್​ ನೇತೃತ್ವದ ತಂಡವು ಬೆಳಗ್ಗೆ 7.30ಕ್ಕೆ ನಾಗಪುರಕ್ಕೆ ಕರೆದೊಯ್ಯಿತು. ಇಲ್ಲಿಯ ವನ್ಯಜೀವಿ ರಕ್ಷಣಾ ಕೇಂದ್ರದಲ್ಲಿ ಹುಲಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು. ಈ ಹುಲಿಯು ಅಪಘಾತಕ್ಕೆ ಒಳಗಾದ ದೃಶ್ಯವನ್ನು ರೆಡ್ಡಿಟ್ ಬಳಕೆದಾರರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

 ಕಾರು ಡಿಕ್ಕಿ ಹೊಡೆದ ನಂತರ ವಿಲಿವಿಲಿ ಒದ್ದಾಡುತ್ತಿರುವ ಹುಲಿಯ ವಿಡಿಯೋ ಇಲ್ಲಿದೆ

Tiger struggling after being hit, it died later | Nagzira Wildlife Sanctuary, Maharashtra by u/rektitrolfff in unitedstatesofindia

ನೆಟ್ಟಿಗರು ಈ ವಿಡಿಯೋ ನೋಡಿ ಮಮ್ಮಲ ಮರುಗಿದ್ದಾರೆ. ಕಾರುಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯು ವನ್ಯಜೀವಿಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಸ್ಸಾಂನ ಕಾಜಿರಂಗದಲ್ಲೂ ಇದೇ ಪರಿಸ್ಥಿತಿ ಇದೆ. ರಾಷ್ಟ್ರೀಯ ಉದ್ಯಾನದ ಬಳಿಯೇ ರಾಷ್ಟ್ರೀಯ ಹೆದ್ದಾರಿ ಇದೆ. ಆದರೆ ಇಲ್ಲಿ 40kmph ವೇಗಮಿತಿ ಜಾರಿಗೊಳಿಸಲಾಗಿದೆ. ಆದರೆ ದಾರಿಯುದ್ದಕ್ಕೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಚೆನ್ನೈ; ಭಾರತ ಸುತ್ತಿದ ಹಿಜಾಬಿ ಸೋಲೋ ಬೈಕ್ ರೈಡರ್ ರೇಷ್ಮಾ ಕಾಸೀಮ್​ ನೂರ್

ಶ್ರೀಶೈಲದ ಅಭಯಾರಣ್ಯದಲ್ಲಿ ವೇಗಮಿತಿ 30kmph ಇದ್ದಾಗಲೂ 100kmph ವರೆಗೆ ಗಾಡಿ ಓಡಿಸುತ್ತಾರೆ. ತಾಯಿಕೋತಿ ಮತ್ತು ಮರಿಕೋತಿ ಕಣ್ಣೇದುರೇ ಸಾವನ್ನಪ್ಪುವುದನ್ನು ನೋಡಿದ್ದೇನೆ. ಪ್ರತೀ ದಿನ ಒಂದಿಲ್ಲಾ ಒಂದು ಪ್ರಾಣಿಗಳು ಹೀಗೆ ಅಪಘಾತಕ್ಕೆ ಒಳಗಾಗಿ ಸಾಯುತ್ತಿರುತ್ತವೆ. ಮನುಷ್ಯರು ಒಟ್ಟಾರೆ ಪರಿಸರವನ್ನು ಹದಗೆಡಿಸುತ್ತಿದ್ದಾರೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:44 pm, Sat, 12 August 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ