Viral: ಜಪಾನ್; ‘ನಾನಿನ್ನು ನಾಯಿಯಂತೆ ಬದುಕಲಾರೆ’ ನಾಯಿವೇಷಕ್ಕಾಗಿ ಈತ ರೂ 12 ಲಕ್ಷ ವ್ಯಯಿಸಿದ್ದ

Dogman : ಒಂದು ವರ್ಷದಿಂದ ಸಾಮಾಜಿಕ ಜಾಲತಾಣಿಗರ ಪ್ರೀತಿ ಗಳಿಸಿದ್ದ ಜಪಾನಿನ ಟೋಕೊ ಎಂಬ ನಾಯಿ ವೇಷಧಾರಿ ಮನುಷ್ಯ ಇದೀಗ ಮಹತ್ತರ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾನೆ. ಇನ್ನು ಮುಂದೆ ತಾನು ನಾಯಿ ವೇಷ ಧರಿಸಲಾರೆ. ತನ್ನ ಜೀವಮಾನದ ಈ ಕನಸನ್ನು ನನಸಾಗಿಸಲು ಈಡೇರಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾನೆ. ಈ ಹಠಾತ್​ ನಿರ್ಧಾರಕ್ಕೆ ಕಾರಣವೇನು? ಓದಿ .

Viral: ಜಪಾನ್; 'ನಾನಿನ್ನು ನಾಯಿಯಂತೆ ಬದುಕಲಾರೆ' ನಾಯಿವೇಷಕ್ಕಾಗಿ ಈತ ರೂ 12 ಲಕ್ಷ ವ್ಯಯಿಸಿದ್ದ
ಟೋಕೊ ಸಾರ್ವಜನಿಕ ಉದ್ಯಾನದಲ್ಲಿ ಕಾಣಿಸಿಕೊಂಡಾಗಿನ ಸಂದರ್ಭ
Follow us
|

Updated on:Aug 14, 2023 | 1:47 PM

Japan : ‘ನನ್ನ ಜೀವಮಾನದ ಕನಸು ನನಸಾಯಿತು, ನಾನು ನಾಯಿಯಂತೆ ಕಾಣಿಸಿಕೊಳ್ಳಬೇಕೆನ್ನುವ ತೀವ್ರ ಹಂಬಲ ನೆರವೇರಿತು’ ಎಂದು ಸಾರ್ವಜನಿಕ ಉದ್ಯಾನದಲ್ಲಿ ಓಡಾಡಿದ್ದ ಟೋಕೊ ಎಂಬ (Toco, Border Collie) ನಾಯಿವೇಷಧಾರಿಯ ವಿಡಿಯೋ ವೈರಲ್ ಆದ ಸುದ್ದಿಯನ್ನು ಇದೇ ತಾಣದಲ್ಲಿ ಓದಿದ್ದಿರಿ ಮತ್ತು ವಿಡಿಯೋ ಕೂಡ ನೋಡಿದ್ದಿರಿ. ರೂ. 12 ಲಕ್ಷ ಖರ್ಚು ಮಾಡಿ ನಾಯಿಯ ವೇಷವನ್ನು ಖರೀದಿಸಿದ್ದ ಈತ ವಾರಕ್ಕೊಮ್ಮೆ ಆ ವೇಷ ಧರಿಸಿ ನಾಯಿಯಂತೆ ರೂಪಾಂತರಗೊಂಡು ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳುತ್ತಿದ್ದ. ಆದರೆ ಇದೀಗ ಇದ್ದಕ್ಕಿದ್ದಂತೆ ಈ ‘ನಾಯಿಬದುಕು’ ತನಗೆ ಬೇಡ ಎಂದು ತೀರ್ಮಾನಿಸಿದ್ದಾನೆ!

ಇದನ್ನೂ ಓದಿ : Viral: ‘ನನ್ನ ಮಲಮಗ ತನ್ನ ಸ್ನೇಹಿತರೆದುರು ನನ್ನನ್ನು ಮೊದಲ ಸಲ ಅಪ್ಪಾ ಎಂದು ಕರೆದಾಗ’

ನ್ಯೂಯಾರ್ಕ್​ ವರದಿಯ ಪ್ರಕಾರ, ಟೋಕೊ ಈತನಕ ತನ್ನ ನಿಜವಾದ ಹೆಸರನ್ನು ಬಹಿರಂಗಪಡಿಸಿಲ್ಲ. ಅಕಸ್ಮಾತ್ ತಾನು ಹೆಸರನ್ನು ಬಹಿರಂಗಪಡಿಸಿದರೆ ತನ್ನ ಸಹೋದ್ಯೋಗಿಗಳು ತನ್ನನ್ನು ವಿಚಿತ್ರವಾಗಿ ಕಾಣಬಹುದು ಎಂದು ಈ ಹಿಂದೆ ಪತ್ರಕರ್ತರೆದುರು ಹೇಳಿಕೊಂಡಿದ್ದ. ಇವನ ಈ ಬಯಕೆ ಮೊದಲಿಗೆ ಪೋಷಕರಿಗೆ ಆಘಾತ ತಂದಿತ್ತು. ಆದರೂ ಅವನ ಆಸೆಗೆ ಬೆಂಬಲಿಸಿದ್ದರು. ಮೊದಲಿಗೆ ವಾರಾಂತ್ಯದಲ್ಲಿ ಮನೆಯಲ್ಲಿಯೇ ನಾಯಿವೇಷ ಧರಿಸಿರುತ್ತಿದ್ದ ಈತನಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಉಂಟಾದಾಗ ಅದನ್ನೂ ಈಡೇರಿಸಿದರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಟೋಕೊ ಉದ್ಯಾನಕ್ಕೆ ಹೋದ ವಿಡಿಯೋ ಇಲ್ಲಿದೆ

ಟಿವಿ ಜಾಹೀರಾತು, ಸಿನೆಮಾಗಳಿಗೆ ವೇಷಭೂಷಣ ತಯಾರಿಸುವ ಜಪಾನಿನ ಕಂಪೆನಿ ಝೆಪೆಟ್ಟೋ ಟೋಕೊಗೆ ವೇಷ ತಯಾರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನು ನೋಡಿದ ನೆಟ್ಟಿಗರು, ಖಂಡಿತ ಟೋಕೋ ನಿಜವಾದ ನಾಯಿಯಂತೆಯೇ ಕಾಣುತ್ತದೆ, ಮನುಷ್ಯನೆಂದು ಹೇಳಲು ಸಾಧ್ಯವೇ ಇಲ್ಲ ಎಂದು ಪ್ರೋತ್ಸಾಹಿಸಿದ್ದರು. ಆದರೆ ಇದೀಗ ಅಮೆರಿಕದ ಕೆನಲ್ ಕ್ಲಬ್​ನ (American Kennel Club) ನ್ಯಾಯಾಧೀಶರು ಟೋಕೊ ವಿಷಯವಾಗಿ ಟೀಕಿಸಿದ್ದು ಟೋಕೊ ವೇಷಧಾರಿ ಯುವಕನಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ : Viral Video: ಬೆನ್ನಿಗೆ ನಿಲ್ಲುವುದು ಎಂದರೆ ಇದೇ; ಇವರಿಬ್ಬರ ಬದುಕೀಗ ಮತ್ತೆ ಮೊದಲಿನಂತೆ

ತನಗಿರುವ ಪ್ರಾಣಿಪ್ರೇಮ ಮತ್ತು ತಾನು ನಾಯಿಯಂತೆ ವೇಷ ಧರಿಸುವುದು ತನಗೆ ಮತ್ತು ತನ್ನ ಅಭಿಮಾನಿಗಳಿಗೆ ಸಂತೋಷವನ್ನು ನೀಡುತ್ತದೆ ಎಂದು ನ್ಯಾಯಾಧೀಶರ ಮುಂದೆ ಸಮರ್ಥಿಸಿಕೊಂಡನಾದರೂ ಯೂಟ್ಯೂಬ್​ನಿಂದ ತಾನು ಗಳಿಸುತ್ತಿರುವ ಹಣದ ಬಗ್ಗೆ ನಿಖರವಾದ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅಲ್ಲದೇ ಇದೀಗ ಇವನ ಯೂಟ್ಯೂಬ್​ ಚಂದಾದಾರರ ಸಂಖ್ಯೆ 51,000ಕ್ಕೆ ಏರಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಈತ ಇದೀಗ ತನಗೆ ಖುಷಿ ನೀಡುತ್ತಿದ್ದ ಹವ್ಯಾಸವನ್ನು ತೊರೆಯಲು ಸಿದ್ಧನಾಗಿದ್ದಾನೆ. ಒಂದು ವರ್ಷದಿಂದ ತನ್ನ ಈ ಆಸೆಯನ್ನು ಬೆಂಬಲಿಸಿದ ಝೆಪೆಟ್ಟೋ ಕಂಪೆನಿ, ಮಾಧ್ಯಮಗಳು, ಪೋಷಕರು ಮತ್ತು ಯೂಟ್ಯೂಬ್ ಫಾಲೋವರ್ಸ್​ಗೆ ಈ ಸಂದರ್ಭದಲ್ಲಿ ಈತ ಧನ್ಯವಾದ ಅರ್ಪಿಸಿದ್ದಾನೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:36 pm, Mon, 14 August 23

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?