Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆನ್ನಿಗೆ ನಿಲ್ಲುವುದು ಎಂದರೆ ಇದೇ; ಇವರಿಬ್ಬರ ಬದುಕೀಗ ಮತ್ತೆ ಮೊದಲಿನಂತೆ

Love : ಹಕ್ಕಿಯಂತೆ ಹಾರಾಡಿಕೊಂಡಿದ್ದ ಈ ಪ್ರೇಮಿಗಳು ಇನ್ನೇನು ನಿಶ್ಚಿತಾರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಇವರ ಬದುಕಿನಲ್ಲಿ ಅನಿರೀಕ್ಷಿತವಾದದ್ದೊಂದು ಘಟಿಸಿತು. ಕನ್ನಡ ಕಿರುತೆರೆ ನಟಿಯಾದ ಈಕೆ ತೀವ್ರತರವಾದ ಅನಾರೋಗ್ಯಕ್ಕೆ ತುತ್ತಾದರು. ಶೇ. 50 ಮಾತ್ರ ಬದುಕುಳಿಯುವ ಸಾಧ್ಯತೆ ಇತ್ತು. ಬೇರೆ ಮದುವೆ ಮಾಡಿಕೋ ಎಂದು ಈಕೆ ಪ್ರಿಯಕರನಿಗೆ ಹೇಳಿದರು. ಮುಂದೆ?

Viral Video: ಬೆನ್ನಿಗೆ ನಿಲ್ಲುವುದು ಎಂದರೆ ಇದೇ; ಇವರಿಬ್ಬರ ಬದುಕೀಗ ಮತ್ತೆ ಮೊದಲಿನಂತೆ
ಪ್ರಿಯಾಂಕಾ ಕಾಮತ್ ಮತ್ತು ಅಮಿತ ನಾಯಕ
Follow us
ಶ್ರೀದೇವಿ ಕಳಸದ
|

Updated on:Aug 14, 2023 | 11:16 AM

Bonding : ಅವನು ಎಂದೂ ಐ ಲವ್​ ಯೂ ಎಂದು ಈತನಕ ಮಾತಿನಲ್ಲಿ ಹೇಳಲೇ ಇಲ್ಲ. ಆದರೆ ಪ್ರೀತಿ ಎಂದರೇನು ಎನ್ನುವುದನ್ನು ಕೃತಿಯಲ್ಲಿ ವ್ಯಕ್ತಪಡಿಸುತ್ತಾ ಹೋದ; ಇವರಿಬ್ಬರೂ ಪರಸ್ಪರ ಪ್ರೀತಿಸಿದರು. ನಂತರ ಮನೆಯಲ್ಲಿ ತಿಳಿಸಿದರು. ನಿಶ್ಚಿತಾರ್ಥವೂ ನಿಗದಿಯಾಯಿತು. ಆದರೆ ದೊಡ್ಡ ಆಘಾತವೊಂದು ಈಕೆಯ ಜೀವನದಲ್ಲಿ ಕಾದು ಕುಳಿತಿತ್ತು. ಇದ್ದಕ್ಕಿದ್ದ ಹಾಗೆ ನಡೆಯಲು ಕುಳಿತುಕೊಳ್ಳಲು ಕಷ್ಟವಾಗತೊಡಗಿತು. ನಂತರ ವೈದ್ಯರ ಬಳಿ ಹೋದಾಗ ಡಿಸ್ಕ್​ ಬಲ್ಜ್ (Disk Bulge) ಎಂದು ತಿಳಿಯಿತು. ಬೆನ್ನಿನ ಮೂಳೆಗೆ ಶೇ 70 ರಷ್ಡು ಸೋಂಕು ತಗಲಿತ್ತು. ಬದುಕುಳಿಯುವ ಸಾಧ್ಯತೆ ಶೇ 50 ಇತ್ತು. ಆಗ ಈಕೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅನಿವಾರ್ಯವಾಯಿತು. ಈ ಮಧ್ಯೆ ನೀನು ಬೇರೆ ಮದುವೆ ಮಾಡಿಕೋ ಎಂದು ಆಕೆ ಅವನಿಗೆ ಹೇಳಿದೆ. ಆದರೆ… ಅಕ್ಷರಶಃ ಅವನು ಈಕೆಯ ಬೆನ್ನಿಗೆ ನಿಂತ.

ಇದನ್ನೂ ಓದಿ : Viral Video: ಚೆನ್ನೈ; ಭಾರತ ಸುತ್ತಿದ ಹಿಜಾಬಿ ಸೋಲೋ ಬೈಕ್ ರೈಡರ್ ರೇಷ್ಮಾ ಕಾಸೀಮ್​ ನೂರ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈಕೆ ಮಜಾ ಟಾಕೀಸ್​, ಗಿಚ್ಚಿ ಗಿಲಿಗಿಲಿ ಮತ್ತು ಕಿರುತೆರೆಯಲ್ಲಿ ನಟಿಸಿದ ಪ್ರಿಯಾಂಕಾ ಕಾಮತ್.  ಆತ ಕುಂದಾಪುರ ಮೂಲದ ಎಂಜಿನಿಯರ್ ಅಮಿತ ನಾಯಕ. ಇವರಿಬ್ಬರೂ ಪ್ರೇಮಿಗಳು. ಇವರ ಪ್ರೇಮಕ್ಕೆ ಎರಡೂ ಕುಟುಂಬದವರ ಒಪ್ಪಿಗೆಯೂ ದೊರೆತು ಇನ್ನೇನು ನಿಶ್ಚಿತಾರ್ಥಕ್ಕೆ ತಯಾರಿ ಮಾಡಿಕೊಳ್ಳಬೇಕೆನ್ನುವ ಹೊತ್ತಿಗೆ ಪ್ರಿಯಾಂಕಾ ತೀವ್ರತರವಾದ ಬೆನ್ನುಮೂಳೆ ಸಮಸ್ಯೆಗೆ ಈಡಾದರು. ಬದುಕುವ ಭರವಸೆಯನ್ನೇ ಕಳೆದುಕೊಂಡರು. ಆದರೆ ಅಮಿತ…

ಪ್ರಿಯಾಂಕಾ ಆರೈಕೆಯಲ್ಲಿದ್ದಾಗಿನ ವಿಡಿಯೋ

ಆದರೆ ಅಮಿತ ಒಂದು ಕ್ಷಣವೂ ವಿಚಲಿತನಾಗದೆ ಪ್ರಿಯಾಂಕಾರನ್ನು ಮತ್ತಷ್ಟು ಕಾಳಜಿಯಿಂದ ನೋಡಿಕೊಳ್ಳತೊಡಗಿದರು. ಆಕೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರು. ರಾಡ್​ ಮತ್ತು ಸ್ಕ್ರ್ಯೂಗಳು ಬೆನ್ನನ್ನು ಒಳಸೇರಿದ ನಂತರ ತಾನು ಬದುಕಿಡೀ ಹಾಸಿಗೆಯ ಮೇಲೆಯೇ ಉಳಿಯುತ್ತೇನೇನೋ ಎಂದುಕೊಂಡರು ಆಕೆ. ಆದರೆ ಅಮಿತ ಇಡೀದಿನ ಪ್ರಿಯಾಂಕಾರ ಬಟ್ಟೆಯಿಂದ ಹಿಡಿದು ಡೈಪರ್​ ಬದಲಾಯಿಸುವವರೆಗೂ ಒಳಗೊಳ್ಳುತ್ತಿದ್ದರು. ಪ್ರಿಯಾಂಕಾ ಅಮ್ಮನಂತೂ ಮತ್ತೆ ಮಗುವಿನಂತೆ ನೋಡಿಕೊಂಡರು. 8 ತಿಂಗಳ ನಂತರ ಮನೆಮಂದಿಯೆಲ್ಲರ ಆರೈಕೆಯಿಂದ ಆಕೆ ಎದ್ದು ಓಡಾಡಲು ಕಲಿತರು. ಬದುಕು ಮತ್ತೆ ಮೊದಲಿನಂತಾಯಿತು. ನಿಶ್ಚಿತಾರ್ಥವೂ ನಡೆಯಿತು.

ಈ ವಿಡಿಯೋಗಳನ್ನು ನೋಡಿದ ಕೆಲ ನೆಟ್ಟಿಗರು, ಹೌದು ಇಂಥ ಕಥೆಗಳು ನಿಜಕ್ಕೂ ಜಗತ್ತಿನಲ್ಲಿ ಪ್ರೀತಿ ಜೀವಂತವಾಗಿದೆ ಎಂಬುದನ್ನು ಸಾಕ್ಷೀಕರಿಸುತ್ತವೆ ಎಂದಿದ್ದಾರೆ. ಅಕಸ್ಮಾತ್​ ಹುಡುಗಿಯ ಬದಲಾಗಿ ಹುಡುಗನಿಗೆ ಈ ಸ್ಥಿತಿ ಒದಗಿದ್ದರೆ ಏನಾಗುತ್ತಿತ್ತು? ಎಂದು ಕೆಲವರು ಕೇಳಿದ್ದಾರೆ. ಇದೆಲ್ಲಾ ಸರಿ, ಆದರೆ ಇದೆಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿದ್ದು ಯಾಕೆ? ಏಕೆಂದರೆ ಯಾರಾದರೂ ಬದುಕುಳಿಯುವ ಸಾಧ್ಯತೆ ಶೇ 50 ಇದೆ ಎಂದಾಗ ಯಾರಿಗಾದರೂ ಹೀಗೆ ರೆಕಾರ್ಡ್​ ಮಾಡಲು ಮನಸ್ಸಾಗುತ್ತದೆಯೇ? ಅಚ್ಚರಿಯಿಂದ ಕೇಳಿದ್ದಾರೆ. ಆಕೆ ನಟಿಯಾಗಿರುವುದರಿಂದ ರೆಕಾರ್ಡ್ ಮಾಡಿರುವ ಸಾಧ್ಯತೆ ಇದೆ ಎಂದು ಮತ್ತೆ ಕೆಲವರು ಬೆಂಬಲಿಸಿದ್ದಾರೆ.

ಈ ವಿಡಿಯೋಗಳನ್ನು ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ. ಅನೇಕರು ಇವರಿಬ್ಬರ ಪ್ರೀತಿ ಚಿರಾಯುವಾಗಿರಲಿ ಎಂದು ಹಾರೈಸಿದ್ದಾರೆ. ಪ್ರೀತಿ ಗಟ್ಟಿಯಾಗಿದ್ದಲ್ಲಿ ಎಂಥ ಆರೋಗ್ಯ ಸಮಸ್ಯೆಯನ್ನೂ ಮೆಟ್ಟಿ ನಿಲ್ಲಬಹುದು ಎಂದಿದ್ದಾರೆ ಸಾವಿರಾರು ಜನ.

ಈ ವಿಷಯವಾಗಿ ನೀವು ಏನು ಹೇಳುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:09 am, Mon, 14 August 23

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್