Viral Video: ಪ್ಯಾನ್​ಕೇಕ್ ಅಲ್ಲ ದೋಸೆ​! ಭಾರತೀಯರಿಗೆ ನೋವುಂಟು ಮಾಡಿದ ಈ ಫೇಸ್​ಬುಕ್​ ಪುಟ ಡಿಲೀಟ್ ಆಗಬೇಕು

Indian Food : ಅನೇಕ ಜನರು ಒಡಗೂಡಿ ಮಾಡಿರುವ ದೊಡ್ಡದಾದ ದೋಸೆ ಇದು. ಇದನ್ನು ತಯಾರಿಸಿದ ರೀತಿ, ಇದರೊಂದಿಗಿರುವ ಪದಾರ್ಥಗಳಿಂದಾಗಿ ಇದನ್ನು 'ದಕ್ಷಿಣೋತ್ತರ ದೋಸೆ' ಎಂದು ಕರೆಯಲಡ್ಡಿಯಿಲ್ಲ. ಆದರೆ ಒಬ್ಬ ವಿದೇಶಿ ವ್ಲಾಗರ್​​, ಇದು ಜಗತ್ತಿನ ಅತೀ ದೊಡ್ಡ ಪ್ಯಾನ್​ ಕೇಕ್​ ಎಂದು ಹೇಳಿ ದೋಸೆಪ್ರಿಯರನ್ನು ಕೆಣಕಿಬಿಟ್ಟಿದ್ದಾರೆ.

Viral Video: ಪ್ಯಾನ್​ಕೇಕ್ ಅಲ್ಲ ದೋಸೆ​! ಭಾರತೀಯರಿಗೆ ನೋವುಂಟು ಮಾಡಿದ ಈ ಫೇಸ್​ಬುಕ್​ ಪುಟ ಡಿಲೀಟ್ ಆಗಬೇಕು
ಜಗತ್ತಿನಲ್ಲಿಯೇ ದೊಡ್ಡದಾದ ಮಸಾಲೆ ದೋಸೆ
Follow us
ಶ್ರೀದೇವಿ ಕಳಸದ
|

Updated on:Aug 14, 2023 | 5:03 PM

Dose : ಸುಮಾರು ಆರನೂರು ಜನರು ಈ ಪೋಸ್ಟ್​ನಡಿ ಪ್ರತಿಕ್ರಿಯಿಸಿದ್ದಾರೆ. ಅವರೆಲ್ಲರೂ ಹೇಳಿದ್ದು ಒಂದೇ, ಇದು ಪ್ಯಾನ್​ ಕೇಕ್​ ಅಲ್ಲ ದೋಸೆ; ದೋಸೆಯನ್ನು ಪ್ಯಾನ್​ಕೇಕ್​ ಎಂದು ಕರೆಯುವುದನ್ನು ನಿಲ್ಲಿಸಿ. ಡೋನಟ್ ಅನ್ನು ನಾವು ವಡಾ ಎಂದು ಕರೆಯುವುದಿಲ್ಲವಲ್ಲ? ಈ ವ್ಲಾಗರ್ ಗೆ ಭಾರತೀಯ ಖಾದ್ಯಗಳ ಬಗ್ಗೆ ತಿಳಿವಳಿಕೆಯೇ ಇಲ್ಲ, ದೋಸೆ ಮತ್ತು ಪ್ಯಾನ್​ಕೇಕ್ (Pan Cake) ನಡುವಿನ ವ್ಯತ್ಯಾಸವೂ ಗೊತ್ತಿಲ್ಲ. ಈ ಫೇಸ್​ಬುಕ್​ ಪುಟವನ್ನು ಡಿಲೀಟ್ ಮಾಡಬೇಕು. ಏಕೆಂದರೆ ದೋಸೆಯನ್ನು ಪ್ಯಾನ್​ಕೇಕ್ ಎಂದು ಕರೆದು ಅನೇಕ ಭಾರತೀಯರಿಗೆ ನೋವನ್ನುಂಟು ಮಾಡಿದ್ದಾರೆ. ಅಬ್ಬಬ್ಬಾ! ಮಸಾಲೆ ದೋಸೆಯ ಅಭಿಮಾನಿಗಳೆಲ್ಲ ವೈರಲ್ ಆಗಿರುವ ಈ ಪೋಸ್ಟ್​​ಗೆ ಮುತ್ತಿಗೆ ಹಾಕಿದ್ದಾರೆ.

ಇದನ್ನೂ ಓದಿ : Viral Optical Illusion: ಪ್ರೇಮಸಂಬಂಧದಲ್ಲಿ ಬದ್ಧತೆಯ ಸಮಸ್ಯೆ ಎದುರಿಸುತ್ತಿದ್ದೀರೆ? ಈ ಚಿತ್ರ ನೋಡಿ ಉತ್ತರ ಕಂಡುಕೊಳ್ಳಿ

ಇನ್ನೊಂದಿಷ್ಟು ಜನ ನೋಡೋದಕ್ಕೇನೋ ಚೆನ್ನಾಗಿದೆ, ಆದರೆ ಅದೆಷ್ಟು ಕೈಗಳನ್ನು ಈ ದೊಡ್ಡ ದೋಸೆ ತಯಾರಿಕೆಯಲ್ಲಿ ಒಳಗೊಂಡಿವೆ, ಅದೂ ಬರೀಗೈಯಲ್ಲಿ! ಉಫ್​… ಇದು ಎಷ್ಟು ದೊಡ್ಡದಿದ್ದರೇನು ರುಚಿ ಇದ್ದರೇನು ಅಶುಚಿಯಾಗಿದೆ ಹಾಗಾಗಿ ನಾನಿದನ್ನು ಇಷ್ಟಪಡುವುದಿಲ್ಲ. ಪ್ಯಾನ್​ಕೇಕಾದರೂ ಅನ್ನಿ ದೋಸಾ ಆದರೂ ಅನ್ನಿ. ಈ ಹೋಟೆಲ್​ನ ಅಡುಗೆಕೋಣೆ ಮಾತ್ರ ನೋಡಲಾಗದು, ಇನ್ನು ತಿನ್ನುವುದೆಂತು? ಹೀಗೆ ಪ್ರತಿಕ್ರಿಯೆಗಳ ಸುರಿಮಳೆ ಸುರಿಯುತ್ತಲೇ ಇದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದು ಜಗತ್ತಿನ ಅತೀ ದೊಡ್ಡ ಪ್ಯಾನ್​ಕೇಕ್​ ಅಥವಾ ದೋಸೆಯೇ? ಹೇಳಿ ನೀವೇ…

ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ವ್ಯಕ್ತಿ ಈ​​ ‘ದಕ್ಷಿಣೋತ್ತರ ದೋಸೆ’ಗೆ ‘ಜಗತ್ತಿನ ಅತೀ ದೊಡ್ಡ ಪ್ಯಾನ್​ಕೇಕ್​’ ಎಂದು ಹೇಳಿರುವುದೇ ನೆಟ್ಟಿಗರ ಪಿತ್ತ ಕೆರಳಲು ಕಾರಣವಾಗಿದೆ. ಆದರೆ ಇನ್ನೂ ಕೆಲವರು ದೋಸೆನೋ ಪ್ಯಾನ್​ಕೇಕೋ ಇಷ್ಟು ದೊಡ್ಡದಾಗಿ ಮಾಡಿರುವ ಕಾಣರವೇನು? ಒಬ್ಬ ಮನುಷ್ಯ ತಿನ್ನುವುದು ಎರಡು ದೋಸೆ ಅಲ್ಲವೆ? ಎಂದು ಕೇಳಿದ್ದಾರೆ ಕೆಲವರು. ಈ ವ್ಲಾಗರ್​ಗಳ ಹುಚ್ಚಾಟದ ಮಹಿಮೆ ಇದು ಎಂದು ಕೆಲವರು ಹೇಳಿದ್ದಾರೆ.

ಅತೀ ದೊಡ್ಡ ಪ್ಯಾನ್​ಕೇಕ್ ಮಾಡುತ್ತಿರುವ ವಿಡಿಯೋ ಗಮನಿಸಿ ​

ಈ ವಿಡಿಯೋ ಅನ್ನು ಸುಮಾರು 14 ಮಿಲಿಯನ್ ಜನರು ನೋಡಿದ್ದಾರೆ. 71,000 ಜನರು ಲೈಕ್ ಮಾಡಿದ್ದಾರೆ. 625 ಜನರು ಪ್ರತಿಕ್ರಿಯಿಸಿದ್ದಾರೆ. ಇವರು ಇಷ್ಟೊಂದು ಆಹಾರವನ್ನು ಯಾಕೆ ಹಾಳು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ ಕೆಲವರು. ಇಷ್ಟು ಅಶುಚಿಯಾದ ಅಡುಗೆಮನೆಯಲ್ಲಿ ಇಷ್ಟು ದೊಡ್ಡ ದೋಸೆಯನ್ನು ಮಾಡುವುದರಿಂದ ಪ್ರಯೋಜನವೇನು? ಎಂದು ಕೇಳಿದ್ದಾರೆ ಇನ್ನೂ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:53 pm, Mon, 14 August 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ