Viral Video: ತಿನ್ನಲು ಎಲೆ ಕೊಟ್ಟ ಬಾಲಕನನ್ನೇ ಮೇಲೆತ್ತಿದ ಜಿರಾಫೆಯ ವಿಡಿಯೋ ವೈರಲ್, ಮುಂದೆ?

Zoo : ಆಕಸ್ಮಿಕ ಎನ್ನುವುದೆಲ್ಲ ಕೆಲ ಕ್ಷಣಗಳಲ್ಲೇ ಘಟಿಸುತ್ತದೆ. ಪ್ರಾಣಿಸಂಗ್ರಹಾಲಯಕ್ಕೆ ಹೋದರೆ ಹತ್ತಿರದಿಂದ ಪ್ರಾಣಿಗಳನ್ನು ನೋಡುವ ಖುಷಿಯೇನೋ ಸರಿ. ಆದರೆ ಅವುಗಳಿಗೆ ತಿಂಡಿತಿನಿಸು ಇನ್ನೇನೋ ತಿನ್ನಿಸುವ ಖಯಾಲಿ ಯಾಕೋ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಗಾಬರಿಯಾಗಿದ್ದಾರೆ. ಇನ್ನು ಈ ಮಗುವಿನ ಅವಸ್ಥೆ ಏನಾಗಿರಬಾರದು?

Viral Video: ತಿನ್ನಲು ಎಲೆ ಕೊಟ್ಟ ಬಾಲಕನನ್ನೇ ಮೇಲೆತ್ತಿದ ಜಿರಾಫೆಯ ವಿಡಿಯೋ ವೈರಲ್, ಮುಂದೆ?
ಎಲೆಸಮೇತ ಮಗುವನ್ನೇ ಎತ್ತಿದ ಜಿರಾಫೆ
Follow us
ಶ್ರೀದೇವಿ ಕಳಸದ
|

Updated on: Aug 14, 2023 | 6:57 PM

Giraffe : ಪ್ರಾಣಿಸಂಗ್ರಹಾಲಯಕ್ಕೆ ಹೋದಾಗ ಕೋತಿ ಕಂಡರೆ ಬಾಳೆಹಣ್ಣು, ಕೊಬ್ಬರಿ, ಕಡಲೆಕಾಯಿ, ಬಿಸ್ಕೆಟ್​, ಚಿಪ್ಸ್​ ಹೀಗೆ… ತಮ್ಮ ಬಳಿ ಇದ್ದ ತಿನಿಸನ್ನೆಲ್ಲ ಧಾರೆ ಎರೆದುಬಿಡುತ್ತವೆ ಮಕ್ಕಳು. ಅದೇ ಮೊಲ ಕಂಡರೆ ಕ್ಯಾರೆಟ್​, ಸೊಪ್ಪು, ಕ್ಯಾಬೇಜ್​ ಅನ್ನು ಕೊಡುತ್ತವೆ. ಪಕ್ಷಿಗಳು (Birds) ಕಂಡರೆ ಕಾಳುಗಳನ್ನು ಹಾಕುತ್ತವೆ. ಜಿರಾಫೆ ಕಂಡರೆ? ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ತಮ್ಮ ಮಗನನ್ನು ಪ್ರಾಣಿಸಂಗ್ರಹಾಲಯಕ್ಕೆ ಕರೆದೊಯ್ದಿದ್ದಾರೆ ಈ ದಂಪತಿ. ಜಿರಾಫೆ ನೋಡಲು ಹೋದಾಗ ಒಂದು ದೊಡ್ಡ ಎಲೆಯನ್ನು ತಿನ್ನಿಸಲು ಮಗು ಹತ್ತಿರ ಹೋಗಿದೆ. ಆದರೆ ಆ ಜಿರಾಫೆ ಎಲೆಸಮೇತ ಆ ಮಗುವನ್ನು ಮೇಲಕ್ಕೆತ್ತಿಬಿಟ್ಟಿದೆ!

ಇದನ್ನೂ ಓದಿ : Viral Video: ಪರ್ಸ್, ಬ್ಯಾಗ್​, ಇಟ್ಟಿಗೆ, ಚೆಂಡು ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವ ಇಸ್ತಾನ್​ಬುಲ್​ ಮಹಿಳೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತಕ್ಷಣವೇ ಗಂಡ ಹೆಂಡತಿ ಮಗುವನ್ನು ರಕ್ಷಿಸುತ್ತಾರೆ. ಆ ಮಗು ಕೈಲಿದ್ದ ಎಲೆಯನ್ನು ಬಿಟ್ಟುಬಿಡುತ್ತಾನೆ. ಜಿರಾಫೆ ತನ್ನ ಪಾಡಿಗೆ ತಾನು ಎಲೆಯನ್ನು ಮೆಲ್ಲತೊಡಗುತ್ತದೆ. ಓಡಿಬಂದ ಅಮ್ಮ, ವಿಡಿಯೋ ಮಾಡಲು ಇಟ್ಟಿದ್ದ ಕ್ಯಾಮೆರಾ ಬಟನ್ ಆಫ್ ಮಾಡುತ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು, ಅಬ್ಬಾ ಆ ಎಲೆ ಎಂಥಾ ಗಟ್ಟಿ ಇರಬೇಕು ಎಂದು ತಮಾಷೆ ಮಾಡುತ್ತಿದ್ದಾರೆ. ಅಕಸ್ಮಾತ್ ಅಲ್ಲಿ ಅಪ್ಪ ಅಮ್ಮ ಇಲ್ಲದಿದ್ದರೆ!?

ಎಲ್ಲವೂ ಸೆಕೆಂಡುಗಳ ಲೆಕ್ಕದಲ್ಲಿ ಮುಗಿಯುತ್ತದೆ! ನೋಡಿ ಈ ವಿಡಿಯೋ

View this post on Instagram

A post shared by Giraffe (@giraffe__gram)

ಈತನಕ ಈ ವಿಡಿಯೋ ಅನ್ನು 10 ಮಿಲಿಯನ್​ ಜನರು ನೋಡಿದ್ದಾರೆ. 2 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಬ್ಬಾ ಎಂಥ ಅನಾಹುತವಾಗುತ್ತಿತ್ತು ಎಂದಿದ್ದಾರೆ ಅನೇಕರು. ಆ ಜಿರಾಫೆಯ ದವಡೆ ಎಷ್ಟು ಗಟ್ಟಿ ಇರಬೇಡ ಎಂದಿದ್ದಾರೆ ಒಬ್ಬರು. ಆದರೆ ಆ ಮಗು ಅದೆಷ್ಟು ಗಟ್ಟಿಯಾಗಿ ಆ ಎಲೆಯನ್ನು ಹಿಡಿದುಕೊಂಡಿತ್ತಲ್ಲ ಎಂದಿದ್ದಾರೆ ಇನ್ನೊಬ್ಬರು. ಆ ಎಲೆ ತುಂಡಾಗಲೇ ಇಲ್ಲವಲ್ಲ ಅದನ್ನು ಹೇಳಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಪ್ಯಾನ್​ಕೇಕ್ ಅಲ್ಲ ದೋಸೆ​! ಭಾರತೀಯರಿಗೆ ನೋವುಂಟು ಮಾಡಿದ ಈ ಫೇಸ್​ಬುಕ್​ ಪುಟ ಡಿಲೀಟ್ ಆಗಬೇಕು

ಅಪ್ಪಅಮ್ಮನೇನೋ ಕೊನೆಗೆ ಖುಷಿಯಲ್ಲಿ ನಕ್ಕುಬಿಟ್ಟಿದ್ದಾರೆ, ಮಗುವನ್ನೂ ಅವರ ಕೈಗೆ ಸಿಗದಂತೆ ಬೀಸಿ ಒಗೆದಿದ್ದರೆ? ಎಂದು ಕೆಲವರು ಗಾಬರಿಗೆ ಒಳಗಾಗಿದ್ದಾರೆ. ನನಗನ್ನಿಸಿದಂತೆ ಆ ಮಗು ಅಮ್ಯೂಸ್​ಮೆಂಟ್ ಪಾರ್ಕಿಗೆ ಹೋಗೋಣ ಎಂದು ಹಠ ಮಾಡಿರುತ್ತಾನೆ. ಆದರೆ ಅವನ ಪೋಷಕರು, ಅದೆಲ್ಲ ತುಂಬಾ ದುಬಾರಿ, ಪ್ರಾಣಿಸಂಗ್ರಹಾಲಯಕ್ಕೆ ಹೋಗೋಣ ಎಂದು ಕರೆದುಕೊಂಡು ಬಂದಿರುತ್ತಾರೆ. ಅಂತೂ ಮಗುವಿನ ಆಸೆಯೇ ಇಲ್ಲಿ ಫಲಿಸಿದೆ! ಎಂದು ತಮಾಷೆ ಮಾಡಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ