Viral Brain Teaser: ಕೆಂಪು ಪಾಂಡಾಗಳ ನಡುವೆ ಮೂರು ನರಿಗಳು ಅಡಗಿವೆ, ಹುಡುಕುವಿರಾ?

Brain Teaser : ಈ ಚಿತ್ರದಲ್ಲಿ ತಂತ್ರವೊಂದು ಅಡಗಿದೆ, ಅದೇನೆಂದರೆ ಪಾಂಡಾಗಳು ಮತ್ತು ನರಿಗಳು ಕೆಂಪುಬಣ್ಣದಿಂದ ಕೂಡಿರುವುದು. ಹಾಗಾಗಿ ಬಹಳಷ್ಟು ಜನರಿಗೆ ಕಡಿಮೆ ಸಮಯದಲ್ಲಿ ನರಿಗಳನ್ನು ಗುರುತಿಸುವಲ್ಲಿ ಕಷ್ಟವೆನ್ನಿಸಿದೆ. ಆದರೆ ಒಬ್ಬರು, ನನ್ನ ಮಗಳ ಸಹಾಯದಿಂದ ನಾನು ನರಿಗಳನ್ನು ಹುಡುಕಿದೆ. ಆದರೆ ಆಕೆ ಈಗ ಬ್ರೇನ್​ ಟೀಸರ್​ ಪುಸ್ತಕವನ್ನೇ ತಂದುಕೊಡು ಎನ್ನುತ್ತಿದ್ದಾಳೆ ಎಂದಿದ್ದಾರೆ.

Viral Brain Teaser: ಕೆಂಪು ಪಾಂಡಾಗಳ ನಡುವೆ ಮೂರು ನರಿಗಳು ಅಡಗಿವೆ, ಹುಡುಕುವಿರಾ?
ಪಾಂಡಾಗಳ ರಾಶಿಯಲ್ಲಿ ಮೂರು ನರಿಗಳನ್ನು ಹುಡುಕಿ
Follow us
ಶ್ರೀದೇವಿ ಕಳಸದ
|

Updated on: Aug 15, 2023 | 12:15 PM

Brain Activity : ನಿಮ್ಮ ಕಣ್ಣಿನ ದೃಷ್ಟಿ ಎಷ್ಟು ಚುರುಕಾಗಿದೆ ಎನ್ನುವುದನ್ನು ಈ ಬ್ರೆನ್ ಟೀಸರ್ ಮೂಲಕ ಕಂಡುಕೊಳ್ಳಬಹುದಾಗಿದೆ. ಹಂಗೇರಿಯನ್ ಕಲಾವಿದ ಗೆರ್ಗೆಲಿ ಡುಡಾಸ್​ ಈ ಚಿತ್ರವನ್ನು ರಚಿಸಿದ್ದಾರೆ. ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಈ ಚಿತ್ರವು ಸಾಕಷ್ಟು ಜನರ ಮೆದುಳಿಕೆ ಕೈಹಾಕಿದೆ. ಜಗತ್ತಿನಾದ್ಯಂತ ಅನೇಕರು ಇಲ್ಲಿರುವ ಕೆಂಪು ಪಾಂಡಾಗಳ ಗುಂಪಿನಲ್ಲಿ ಮೂರು ನರಿಗಳ (Foxes) ಹುಡುಕಾಟದಲ್ಲಿ ತೊಡಗಿದ್ದಾರೆ. ಕೆಲವರಿಗೆ ನರಿಗಳನ್ನು ಗುರುತಿಸುವುದು ಸುಲಭವಾಗಿದೆ. ಇನ್ನೂ ಕೆಲವರಿಗೆ ಕಷ್ಟವಾಗಿದೆ. ಎಷ್ಟು ಬೇಗ ನೀವು ಈ ನರಿಗಳನ್ನು ಕಂಡುಹಿಡಿಯುತ್ತೀರಿ ಎನ್ನುವುದು ಇಲ್ಲಿ ಮುಖ್ಯ ಎಂದಿದ್ದಾರೆ ಡುಡಾಸ್.

ಇದನ್ನೂ ಓದಿ : Viral Video: ಸ್ವಾತಂತ್ರ್ಯೋತ್ಸವದ ನಿಮಿತ್ತ ಖಾಲೀಬಾಟಲಿ ತಾಳವಾದ್ಯ ಕಛೇರಿಗೆ ನಿಮ್ಮನ್ನು ಆಹ್ವಾನಿಸಲಾಗಿದೆ

ನಿಮ್ಮನ್ನು ಗೊಂದಲಕ್ಕೆ ಬೀಳಿಸುವ ತಂತ್ರವೆಂದರೆ, ಈ ಚಿತ್ರದಲ್ಲಿ ನರಿಗಳು ಮತ್ತು ಪಾಂಡಾಗಳು ಕೆಂಪು ಬಣ್ಣವನ್ನೇ ಹೊಂದಿರುವುದು. ನೀವು ಸುಲಭಕ್ಕೆ ನರಿಗಳನ್ನು ಅದರಲ್ಲೂ ಕಡಿಮೆ ಸಮಯದಲ್ಲಿ ಗುರುತಿಸುವಲ್ಲಿ ವಿಫಲಗೊಳ್ಳುವ ಸಾಧ್ಯತೆ ಇದೆ. ಈ ಪೋಸ್ಟ್​ ಅನ್ನು ನಾಲ್ಕು ದಿನಗಳ ಹಿಂದೆ ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾಗಿದ್ದು ಈತನಕ 1,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯೆಗಳ ಮೂಲಕ ಉತ್ತರಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೆಲವರು ತುಂಬಾ ವೇಗವಾಗಿ ಫಲಿತಾಂಶ ಕಂಡುಕೊಂಡಿದ್ದಾರೆ. ನಾನಂತೂ ಬೇಗನೇ ಆ ಮೂರು ನರಿಗಳನ್ನು ಹುಡುಕಿದೆ ಎಂದಿದ್ದಾರೆ. ನನ್ನ ನಾಲ್ಕು ವರ್ಷದ ಮಗಳ ಸಹಾಯದಿಂದ ಮೊದಲಿಗೆ ಒಂದು ನರಿ ಕಂಡುಕೊಂಡೆ, ನಂತರ ಉಳಿದೆರಡನ್ನು. ಇದೀಗ ನಿಮ್ಮ ಚಿತ್ರಗಳಿರುವ ಪುಸ್ತಕವನ್ನು ತಂದುಕೊಡು ಎಂದು ಕೇಳುತ್ತಿದ್ದಾಳೆ ಎಂದಿದ್ದಾರೆ ಒಬ್ಬರು. ನಾನು ಒಂದು ನಿಮಿಷದೊಳಗೆ ಎಲ್ಲವನ್ನೂ ಹುಡುಕಿದೆ ಎಂದಿದ್ದಾರೆ ಇನ್ನೊಬ್ಬರು.

ಆ ಮೂರು ನರಿಗಳು ಇಲ್ಲಿವೆ!

Viral Brain Teaser Three Foxes hidden in Pandas group find quickly

ಉತ್ತರ ಇಲ್ಲಿದೆ

ನನಗೆ ಆ ಮೂವರು ಸಿಕ್ಕಿದ್ದಾರೆ ಆದರೆ ಚೂರು ಗೊಂದಲವಿದೆ. ನಿಜಕ್ಕೂ ಇದು ಒಳ್ಳೆಯ ಬ್ರೇನ್​ ಟೀಸರ್ ಎಂದಿದ್ದಾರೆ ಮತ್ತೊಬ್ಬರು. ನೀವು ಒಂದನ್ನು ಹುಡುಕಿದರೆ ಸಾಕು ಉಳಿದ ಎರಡೂ ತಾವಾಗಿಯೇ ಸಿಗುತ್ತವೆ ಎಂದು ಮಗದೊಬ್ಬರು ಹೇಳಿದ್ದಾರೆ.

ನೀವು ಪ್ರಯತ್ನಿಸಿದಿರಾ? ನಿಮಗೆ ಆ ಮೂರು ನರಿಗಳು ಸಿಕ್ಕವಾ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ