Viral Video: ಸ್ವಾತಂತ್ರ್ಯೋತ್ಸವದ ನಿಮಿತ್ತ ಖಾಲೀಬಾಟಲಿ ತಾಳವಾದ್ಯ ಕಛೇರಿಗೆ ನಿಮ್ಮನ್ನು ಆಹ್ವಾನಿಸಲಾಗಿದೆ

Children : ನಮ್ಮ ಮಕ್ಕಳಿಗೆ ಸಂಗೀತ ಕಲಿಸಬೇಕು. ಗುರುಗಳನ್ನು, ಶಾಲೆಗಳನ್ನು ಹುಡುಕಬೇಕು. ವಾದ್ಯಗಳನ್ನು ಕೊಡಿಸಬೇಕು ಎಂದು ಓಡಾಡುತ್ತಿರುವ ಪೋಷಕರು ಒಮ್ಮೆ ಇತ್ತ ಗಮನಿಸಿ. ಸಂಗೀತ ಕಲಿಸುವ ಮೊದಲು ಸಂಗೀತದ ಗುಂಗು ಹಿಡಿಸುವುದನ್ನು ಕಲಿಸಿ. ಅದು ಹೇಗೆ? ಈ ವಿಡಿಯೋ ನೋಡಿದರೆ ಖಂಡಿತ ನಿಮಗೂ ಸೃಜನಶೀಲ ವಿಚಾರಗಳು ಹೊಮ್ಮುತ್ತವೆ!

Viral Video: ಸ್ವಾತಂತ್ರ್ಯೋತ್ಸವದ ನಿಮಿತ್ತ ಖಾಲೀಬಾಟಲಿ ತಾಳವಾದ್ಯ ಕಛೇರಿಗೆ ನಿಮ್ಮನ್ನು ಆಹ್ವಾನಿಸಲಾಗಿದೆ
ಖಾಲೀ ಬಾಟಲಿಗಳಿಂದ ಚೆಂಡೆ ವಾದನ
Follow us
ಶ್ರೀದೇವಿ ಕಳಸದ
|

Updated on:Aug 15, 2023 | 11:01 AM

Percussion : ಮಕ್ಕಳು ಅಳಲು ಶುರು ಮಾಡಿದರೆ ಕೈಯಲ್ಲಿದ್ದ ಸಾಮಾನುಗಳಿಂದಲೇ ತಾಳಬದ್ಧವಾಗಿ ಕುಟ್ಟುತ್ತ ಗಮನವನ್ನು ಸೆಳೆಯುತ್ತೇವಲ್ಲ. ಅದು ಬಟ್ಟಲೋ, ಚಮಚವೋ, ಪ್ಲೇಟೋ ಇನ್ನೊಂದೇನೋ. ಆ ಶಬ್ದ ಮತ್ತು ಲಯದತ್ತ ಮನಸ್ಸನ್ನು ಕೇಂದ್ರೀಕರಿಸುವ ಮಕ್ಕಳು ಯಾವುದಕ್ಕೆ ಹಠ ಬಂದಿತ್ತು ಅನ್ನುವುದನ್ನೇ ಮರೆತು ಹೋಗುತ್ತವೆ. ಸಂಗೀತದ ಮಾಂತ್ರಿಕತೆ ಅದು. ಸಂಗೀತವೆಂದಾಕ್ಷಣ ಮಕ್ಕಳಿಗೆ ದುಬಾರಿ ವಾದ್ಯಗಳನ್ನು ಕೊಡಿಸಬೇಕು, ಕ್ಲಾಸುಗಳಿಗೆ ಕರೆದುಕೊಂಡು ಹೋಗಬೇಕು ಅಂತೇಲ್ಲ ಏನಿಲ್ಲ. ವಾತಾವರಣ ಮತ್ತು ಅದರ ರುಚಿ ಬೆಳೆಸುವುದು ಮತ್ತು ನಾದದ ಗುಂಗಿಗೆ ಬೀಳಿಸುವುದು ಮುಖ್ಯ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ಈ ನಾಲ್ಕು ಮಕ್ಕಳು  ‘ಚೆಂಡೆವಾದನ’ದಲ್ಲಿ ಮುಳುಗಿವೆ.

ಇದನ್ನೂ ಓದಿ : Viral Video: ತಿನ್ನಲು ಎಲೆ ಕೊಟ್ಟ ಬಾಲಕನನ್ನೇ ಮೇಲೆತ್ತಿದ ಜಿರಾಫೆಯ ವಿಡಿಯೋ ವೈರಲ್, ಮುಂದೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಕ್ಕಳನ್ನು ಯಾವ ಕ್ಲಾಸಿಗೆ ಸೇರಿಸಬೇಕು, ಯಾರ ಬಳಿ ಸೇರಿಸಬೇಕು, ಯಾವ ವಾದ್ಯ ಕೊಡಿಸಬೇಕು, ರಿಯಾಝ್ ಮಾಡಿಸಬೇಕು ಅಂತೆಲ್ಲ ತಲೆಬಿಸಿ ಇವರ ಪೋಷಕರಿಗಿಲ್ಲ. ಈ ಮಕ್ಕಳೂ ಇಂಥ ಯಾವ ಒತ್ತಡಕ್ಕೂ ಇಲ್ಲಿ ಒಳಪಟ್ಟಿಲ್ಲ. ಅತ್ಯಂತ ಸಹಜವಾಗಿ ಇದ್ದ ಪರಿಕರಗಳನ್ನೇ ವಾದ್ಯವಾಗಿಸಿಕೊಂಡಿದ್ದಾರೆ. ಆದರೂ ಇವರು ಹೀಗೆ ನುಡಿಸುವುದನ್ನು ಹೇಗೆ ಕಲಿತರು?

ನೀವೀಗ ಪ್ರವೇಶಿಸುತ್ತಿದ್ದೀರಿ ಖಾಲೀಬಾಟಲಿ ತಾಳವಾದ್ಯ ಕಛೇರಿ

ಚೆಂಡೆವಾದನದ ಧ್ವನಿಯನ್ನು ಹೋಲುತ್ತಿದೆ ಖಾಲೀ ಪ್ಲಾಸ್ಟಿಕ್ ಬಾಟಲಿಗಳ ವಾದನ. ಇವರು ಯಾರ ಬಳಿಯೂ ಕ್ಲಾಸಿಗೆ ಹೋಗಿಲ್ಲ. ಇವರದೇನಿದ್ದರೂ ನೋಡಿಕೆಯ ಕಲಿಕೆ. ಈ ವಿಡಿಯೋ ಅನ್ನು ಈತನಕ 8.7 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇವರೆಲ್ಲರೂ ಭವಿಷ್ಯದಲ್ಲಿ ಅತ್ಯುತ್ತಮ ಕಲಾವಿದರಾಗುವ ಗುಣಲಕ್ಷಣವನ್ನು ಹೊಂದಿದ್ದಾರೆ ಎಂದಿದ್ದಾರೆ. ಸಂಗೀತ ಉಳ್ಳವರದ್ದಷ್ಟೇ ಸ್ವತ್ತಲ್ಲ, ಯಾರೂ ಅವರವರಿಗೆ ಬೇಕಾದ ಹಾಗೆ ಅದನ್ನು ಅಪ್ಪಬಹುದು ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಪರ್ಸ್, ಬ್ಯಾಗ್​, ಇಟ್ಟಿಗೆ, ಚೆಂಡು ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವ ಇಸ್ತಾನ್​ಬುಲ್​ ಮಹಿಳೆ

ನನ್ನ ಶಾಲಾ ದಿನಗಳನ್ನು ಈ ವಿಡಿಯೋ ನೆನಪಿಸಿದೆ, ಇದು ಖಂಡಿತ ವೈರಲ್ ಆಗುತ್ತದೆ ಎಂದು ಅನೇಕರು ಹೇಳಿದ್ದಾರೆ. ಇವರಿಗೆ ಒಳ್ಳೆಯ ಗುರುವಿನೆಡೆ ತರಬೇತಿ ಕೊಡಿಸಬೇಕು, ಪಾಲಕರು ದುಡಿಯುವುದರಲ್ಲಿ ಮುಳುಗಿರುತ್ತಾರೆ. ಆದರೆ ಈ ಮಕ್ಕಳ ಕಲೆಯನ್ನು ಪೋಷಿಸುವವರು ಯಾರು? ಅಂತೆಲ್ಲ ನೆಟ್ಟಗರು ಚರ್ಚಿಸಿದ್ದಾರೆ. ಏನೇ ಆಗಲಿ ಮಕ್ಕಳು ಆಡಾಡುತ್ತಲೇ ಕಲೆಯ ಗುಂಗನ್ನು ಹಿಡಿಸಿಕೊಳ್ಳಬೇಕು. ಅಂದಾಗಲೇ ಅದರಲ್ಲಿ ಅವುಗಳಿಗೆ ಪ್ರೀತಿ ಹುಟ್ಟುತ್ತದೆ. ಅಂದಹಾಗೆ ಕಲೆ ಒತ್ತಾಯಿಸಿದರೆ ಬರುವಂಥದ್ದಲ್ಲ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:57 am, Tue, 15 August 23

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ