AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day 2023: ತಮಿಳುನಾಡು; ನೀರಿನಾಳದೊಳಗೆ ತ್ರಿವರ್ಣ ಧ್ವಜಾರೋಹಣ; ಹೆಮ್ಮೆಪಟ್ಟ ನೆಟ್ಟಿಗರು

Underwater: ಇಂಡಿಯನ್ ಕೋಸ್ಟ್ ಗಾರ್ಡ್​ ಮತ್ತು ನೌಕಾದಳ ಪ್ರತ್ಯೇಕವಾಗಿ ನೀರಿನಾಳದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿವೆ. ರಾಷ್ಟ್ರಧ್ವಜಕ್ಕೆ ಮಣ್ಣು ಮತ್ತು ನೀರು ತಾಕಿಸಬಾರದು ಎಂದು ಒಬ್ಬರು. ಎಲ್ಲಿ ಧ್ವಜ ಹಾರಿಸಿದರೇನು? ಮಣಿಪುರವು ಹೊತ್ತಿ ಉರಿಯುತ್ತಿದೆ, ಸಾವಿನ ಸಂಖ್ಯೆ 180ಕ್ಕೆ ಏರಿದೆ ಎಂದು ಇನ್ನೊಬ್ಬರು. ನೀವೇನು ಹೇಳುತ್ತೀರಿ?

Independence Day 2023: ತಮಿಳುನಾಡು; ನೀರಿನಾಳದೊಳಗೆ ತ್ರಿವರ್ಣ ಧ್ವಜಾರೋಹಣ; ಹೆಮ್ಮೆಪಟ್ಟ ನೆಟ್ಟಿಗರು
ತಮಿಳುನಾಡಿನ ರಾಮೇಶ್ವರಂನ ನೀರಿನಾಳದಲ್ಲಿ ಇಂಡಿಯನ್​ ಕೋಸ್ಟ್​ ಗಾರ್ಡ್​ ತ್ರಿವರ್ಣಧ್ವಜ ಹಾರಿಸುತ್ತಿರುವುದು
ಶ್ರೀದೇವಿ ಕಳಸದ
|

Updated on:Aug 15, 2023 | 1:29 PM

Share

Tamil Nadu : ನಮ್ಮ ದೇಶವು ಇಂದು 77ನೇ ಸ್ವಾತಂತ್ರ್ಯೋತ್ಸವದ (Independence Day) ಸಂಭ್ರಮದಲ್ಲಿದೆ. ಎಲ್ಲಿ ನೋಡಿದರೂ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ. ಮನೆ, ಶಾಲೆ, ಕಾಲೇಜು, ಕಚೇರಿ, ಬೆಟ್ಟ ಗುಡ್ಡಗಳ ಮೇಲೂ! ಆದರೆ ನೀರಿನೊಳಗೆ ಧ್ವಜಾರೋಹಣ ಮಾಡಿದ್ದನ್ನು ನೋಡಿದ್ದೀರೇ? ಚೆನ್ನೈನ ರಾಮೇಶ್ವರಂನಲ್ಲಿ ಇಂಡಿಯನ್​ ಕೋಸ್ಟ್​ ಗಾರ್ಡ್​ ನೀರಿನೊಳಗೆ ಧ್ವಜಾರೋಹಣ ಮಾಡಿದ ವಿಡಿಯೋ ಮಾಡಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಅನೇಕ ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ, ಅಲ್ಲದೆ ಈ ಸಂಗತಿಯನ್ನು ಹೀಗೆ ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದರ ಬಗ್ಗೆ ಹೆಮ್ಮೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Viral Brain Teaser: ಕೆಂಪು ಪಾಂಡಾಗಳ ನಡುವೆ ಮೂರು ನರಿಗಳು ಅಡಗಿವೆ, ಹುಡುಕುವಿರಾ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಎಎನ್​ಐ ಸುದ್ದಿಸಂಸ್ಥೆಯು ಟ್ವೀಟ್ ಮಾಡಿದೆ. ಇಂಡಿಯನ್ ಕೋಸ್ಟ್​ ಗಾರ್ಡ್ ಸಿಬ್ಬಂದಿಯು ನೀರಿನಾಳಕ್ಕಿಳಿದು ರಾಷ್ಟ್ರಧ್ವಜವನ್ನು ಹಾರಿಸಿ ಸೆಲ್ಯೂಟ್​ ಹೊಡೆದು ಗೌರವ ತೋರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. 2 ಗಂಟೆಗಳ ಹಿಂದೆಯಷ್ಟೇ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 93,000 ಜನರು ನೋಡುತ್ತಿದ್ದಾರೆ. ಈ ವಿಡಿಯೋ ಶರವೇಗದಲ್ಲಿ ಜನರನ್ನು ತಲುಪುತ್ತಿದೆ. ಸುಮಾರು 6,000 ಜನರು ಲೈಕ್ ಮಾಡಿದ್ದು, 800 ಜನರು ರೀಟ್ವೀಟ್ ಮಾಡಿದ್ದಾರೆ.

ರಾಮೇಶ್ವರಂನ ನೀರಿನಾಳದಲ್ಲಿ ಧ್ವಜಾರೋಹಣ ಮಾಡಿರುವ ವಿಡಿಯೋ ನೋಡಿ

ನಿಜಕ್ಕೂ ಇದು ಅತ್ಯಂತ ಹೆಮ್ಮೆಯ ಕ್ಷಣ ಎಂದಿದ್ದಾರೆ ಕೆಲವರು. ಜೈಹಿಂದ್​, ಭಾರತಮಾತಾಕೀ ಹೈ, ಇದು 2023ರ ಸಾಧನೆ ಮತ್ತು ನಮ್ಮ ಸೇನೆ ಮತ್ತು ದೇಶದ ಬಗ್ಗೆ ಹೆಮ್ಮೆ ಮೂಡಿಸುವ ಸಂಗತಿ ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ ಅನೇಕರು. ಹೀಗೆ ನೀರಿನಲ್ಲಿ ಧ್ವಜವನ್ನು ಹಾರಿಸಿದ ಮಾತ್ರಕ್ಕೆ ದೇಶದ ಸಮಸ್ಯೆಗಳು ಪರಿಹಾರವಾದಂತೆಯೇ? ಮಣಿಪುರ ಹೊತ್ತಿ ಉರಿಯುತ್ತಿದೆ, ಸಾವಿನ ಸಂಖ್ಯೆ 180ಕ್ಕೆ ಏರಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಒಬ್ಬರು.

ಭಾರತೀಯ ನೌಕಾಪಡೆಯು ಸಮುದ್ರದಾಳದಲ್ಲಿ ಧ್ವಜಾರೋಹಣ ಮಾಡಿದ ವಿಡಿಯೋ

ಧ್ವಜವು ನೀರು ಮತ್ತು ಮಣ್ಣನ್ನು ತಾಕಬಾರದು ಎಂದು ಹೇಳಲಾಗಿದೆ ಎಂದಿದ್ದಾರೆ ಇನ್ನೊಬ್ಬರು. ನಾನು ಈ ಎರಡೂ ವಿಡಿಯೋಗಳನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ ದೇಶದ ಸೈನಿಕರ ಬಗ್ಗೆ ಮತ್ತು ದೇಶದ ಬಗ್ಗೆ ಅಭಿಮಾನ ಪ್ರೀತಿ ಮೂಡುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:27 pm, Tue, 15 August 23

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್