Viral Video: ‘ಎಚ್ಚರ! ಹೊಸ ಅಮ್ಮ ಬಂದಿದ್ದಾಳೆ’; ಕಕ್ಕಾವಿಕ್ಕಿಯಾದ ಅಮ್ಮಕೋಳಿ

Motherhood : ನೀವು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ತಾನೆ, ಏನು ಆಗ್ತಿದೆ ಇಲ್ಲಿ? ಎಂದು ಗಾಬರಿಗೆ ಒಳಗಾಗದಂತಿದೆ ಈ ಕೋಳಿ. ಕೋಳಿಮರಿಗಳೋ, ಅಮ್ಮನಿಗಿಂತ ಬೆಚ್ಚಗೆ, ಮೆತ್ತಗೆ ಇರೋ ಹೊಸ ಅಮ್ಮ ಬಂದಿದೆ ಎಂದು ಖುಷಿಯಿಂದ ಆಟವಾಡಿಕೊಂಡಿವೆ. ಅಷ್ಟೇ ಅಲ್ಲ ತಮ್ಮ ಅಮ್ಮನ ಬಳಿ ಹೋಗಬೇಕೆಂದು ಅವುಗಳಿಗೆ ಅನ್ನಿಸುತ್ತಲೇ ಇಲ್ಲ. ಪಾಪ ಅಮ್ಮಕೋಳಿ.

Viral Video: 'ಎಚ್ಚರ! ಹೊಸ ಅಮ್ಮ ಬಂದಿದ್ದಾಳೆ'; ಕಕ್ಕಾವಿಕ್ಕಿಯಾದ ಅಮ್ಮಕೋಳಿ
'ಹೊಸ ಅಮ್ಮ ಬಂದಿದಾಳೆ ಗೊತ್ತೇ?'
Follow us
ಶ್ರೀದೇವಿ ಕಳಸದ
|

Updated on:Aug 15, 2023 | 3:34 PM

Mother : ಗಬಕ್ ಗಬಕ್ಕೆಂದು ಒಂದೊಂದನ್ನೇ ಈ ಬೆಕ್ಕು ನುಂಗಿಬಿಟ್ಟಿದ್ದರೆ ಮೃಷ್ಟಾನ್ನ ಭೋಜನ! ಆದರೆ ಅದು ಹಾಗೆ ಮಾಡದೆ ಪುಟಾಣಿ ಕೋಳಿಮರಿಗಳನ್ನು ಬೆಚ್ಚಗೆ ತನ್ನ ಬಳಿ ಕರೆದುಕೊಂಡು ಸಂಭಾಳಿಸುತ್ತಿದೆ. ನಾನೇ ನಿಮ್ಮಮ್ಮ ಎನ್ನುತ್ತ ಅವುಗಳೆಡೆ ನೋಡುತ್ತಿದೆ. ಆ ಮರಿಗಳೂ ಹೊಸ ಅಮ್ಮನೊಂದಿಗೆ ಅತ್ಯಂತ ಸಲೀಸಾಗಿ ಹೊಂದಿಕೊಂಡಿವೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಕೋಳಿಯಮ್ಮ ಗಾಬರಿಯಿಂದ ಈ ದೃಶ್ಯವನ್ನು ನೋಡುತ್ತಿದೆ. ಮರಿಗಳೆಲ್ಲ ಒಂದೊಂದೇ ಕೋಳಿಯಮ್ಮನಿಗೆ ಹೊಸ ಅಮ್ಮ ಬಂದಿದ್ದಾಳೆ ಎಂದು ಹೇಳುತ್ತಿವೆ. ಹೀಗಿಲ್ಲವೆ ಈ ದೃಶ್ಯ?  ಈ ವಿಡಿಯೋ ನೋಡಿದ ನೆಟ್ಟಿಗರಂತೂ (Netizens) ತಮಾಷೆ ಮೇಲೆ ತಮಾಷೆ ಮಾಡುತ್ತಿದ್ದಾರೆ.

ಇದನ್ನೂ ಓದಿ : \Viral Video: ಅವರ ಮನೆಗೆ ‘ಹಾವುಕೋಸು’ ಬಂದಿತ್ತಂತೆ! ನೋಡಿ ಅದು ಹೇಗಿತ್ತೆಂದು 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

@ cats_of_day ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ತಾಯಿಕೋಳಿ ನಿಜಕ್ಕೂ ಗಾಬರಿಗೆ, ಆಘಾತಕ್ಕೆ, ಗೊಂದಲಕ್ಕೆ ಮತ್ತಿನ್ನೇನೆಲ್ಲ ಅನುಭವಿಸಿದೆಯೋ ಈ ವಿಡಿಯೋ ನೋಡಿ. ಅನೇಕರು ಕೋಳಿಯಮ್ಮನ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ್ದಾರೆ. ತಾಯಿಕೋಳಿ ಹೊಸ ಬೇಬಿಸಿಟ್ಟರ್​ ನೇಮಿಸಿಕೊಂಡಿದೆಯಷ್ಟೇ ಅಂಥದ್ದೇನೂ ಆಗಿಲ್ಲ ಇಲ್ಲಿ, ಏನೇನೋ ಊಹಿಸಿಕೊಳ್ಳಬೇಡಿ ಎಂದು ತಮಾಷೆ ಮಾಡಿದ್ದಾರೆ ಕೆಲವರು.

ನೋಡಿ ವಿಡಿಯೋದಲ್ಲಿ ಈ ಕೋಳಿಯಮ್ಮನ ಅವಸ್ಥೆ

ಬೆಕ್ಕು ತಾನು ತಾಯಿಯಾಗಬೇಕೆಂದುಕೊಂಡು ಈ ಮರಿಗಳನ್ನು ದತ್ತು ತೆಗೆದುಕೊಂಡಿದೆ. ದತ್ತುಪ್ರಕ್ರಿಯೆ ಎಷ್ಟೊಂದು ಸರಳವಾಗಿದೆ ನೋಡಿ! ಎಂದಿದ್ದಾರೆ ಒಬ್ಬರು. ಬೇಬಿ ಸಿಟ್ಟರ್ ತುಂಬಾ ಮುದ್ದಾಗಿದ್ದಾರೆ, ಅಮ್ಮನಿಗಿಂತ ಅವರೇ ಮೆತ್ತಮೆತ್ತಗೆ ಇದ್ದಾರೆ ಎಂದು ಮರಿಗಳು ಅಂದುಕೊಂಡು ಬೆಚ್ಚಗೆ ಕುಳಿತಿವೆ ಎನ್ನಿಸುತ್ತೆ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋಗೆ ಇಷ್ಟು ಕೆಟ್ಟದಾದ ಹಿನ್ನೆಲೆ ಸಂಗೀತ ಸೇರಿಸುವುದು ಏಕೆ? ಎಂದು ಕೇಳಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಪರ್ಸ್, ಬ್ಯಾಗ್​, ಇಟ್ಟಿಗೆ, ಚೆಂಡು ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವ ಇಸ್ತಾನ್​ಬುಲ್​ ಮಹಿಳೆ

ಸುಮ್ಮನೇ ಈಗ ಈ ಜಾಗ ಬಿಟ್ಟು ಎದ್ದರೆ ಸರಿ, ಅವರು ನನ್ನ ಮಕ್ಕಳು ನಿನಗೆ ನನ್ನ ಮಕ್ಕಳನ್ನು ಕೊಡುವುದಿಲ್ಲ ಎನ್ನುತ್ತಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಅನೇಕರು ಇಂಥ ಸುಂದರವಾದ ವಿಡಿಯೋಗಳಿಗೆ ಹಾಕುವ ಚಿತ್ರವಿಚಿತ್ರ ಹಿನ್ನೆಲೆ ಧ್ವನಿ, ಸಂಗೀತದ ಬಗ್ಗೆ ತಕರಾರು ಎತ್ತಿದ್ದಾರೆ. ಆ ವಿಡಿಯೋದ ಸೂಕ್ಷ್ಮತೆಯನ್ನೇ ಅದು ಕಳೆದುಬಿಡುತ್ತದೆ ಎಂದಿದ್ದಾರೆ.

ಏನಂತೀರಿ ನೀವು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:31 pm, Tue, 15 August 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ