Viral Video: ಕಾವಾಲಾ ಕಾವು; ರಜಿನಿ ಅಭಿಮಾನಿ ಜಪಾನ್ ರಾಯಭಾರಿ ಯೂಟ್ಯೂಬರ್​ನೊಂದಿಗೆ ಡ್ಯಾನ್ಸ್

Jailer : ಸೂಪರ್ ಸ್ಟಾರ್ ಅಭಿಮಾನಿಗಳು ಜಗತ್ತಿನಾದ್ಯಂತ ಇದ್ದಾರೆ ಎನ್ನುವುದಕ್ಕೆ ಈ ರೀಲ್​ ಕೂಡ ಸಾಕ್ಷಿ. ಇದೀಗ ಜಪಾನಿನ ರಾಯಭಾರಿ ಹಿರೋಷಿ ಸುಝುಕಿ ಜನಪ್ರಿಯ ಯೂಟ್ಯೂಬರ್ ಮಾಯೋ ಸ್ಯಾನ್​ ಜೊತೆ ಕಾವಾಲಾ ಹಾಡಿಗೆ ಹೆಜ್ಜೆ ಹಾಕಿದ್ದು ನೆಟ್ಟಿಗರ ಗಮನವನ್ನು ಭಾರೀ ಸೆಳೆದಿದೆ. ಹಿರೋಷಿ ಈ ಹಿಂದೆ ಕೂಡ ತಲೈವರ್​ ಚಾಲೆಂಜ್​ ಸ್ವೀಕರಿಸಿ ರೀಲ್ ಮಾಡಿದ್ದರು.

Viral Video: ಕಾವಾಲಾ ಕಾವು; ರಜಿನಿ ಅಭಿಮಾನಿ ಜಪಾನ್ ರಾಯಭಾರಿ ಯೂಟ್ಯೂಬರ್​ನೊಂದಿಗೆ ಡ್ಯಾನ್ಸ್
ಜಪಾನ್​ ರಾಯಭಾರಿ ಹಿರೋಷಿ ಸುಝುಕಿ ಕಾವಾಲಾ ಹಾಡಿಗೆ ಯೂಟ್ಯೂಬರ್ ಮೇಯೋ ಸ್ಯಾನ್​ ಜೊತೆ ಹೆಜ್ಜೆ ಹಾಕುತ್ತಿರುವುದು
Follow us
|

Updated on:Aug 17, 2023 | 2:50 PM

Japan: ಕಾವಾಲಾದ ಕಾವು ದಿನೇದಿನೇ ಏರುತ್ತಿದೆ. ಜಗತ್ತಿನ ನೃತ್ಯಾಸಕ್ತರು ಮತ್ತು ಭಾರತೀಯ ಸಿನೆಮಾಪ್ರಿಯರೆಲ್ಲ ರೀಲ್ಸ್ ಮಾಡುತ್ತಿರುವುದು ಇದಿಗ ಸಹಜವೆನ್ನಿಸುತ್ತಿದೆ. ಆದರೆ ಇದೀಗ ವಿಶೇಷವಾಗಿ ಗಮನ ಸೆಳೆಯುತ್ತಿರುವುದು ರಜಿನಿಕಾಂತ ಅಭಿಮಾನಿಗಳ ಸರದಿ. ಜಪಾನಿನ ರಾಯಭಾರಿ ಹಿರೋಷಿ ಸುಝುಕಿ (Hiroshi Suzuki) ತಮ್ಮ ನೆಚ್ಚಿನ  ನಟ ರಜಿನಿಕಾಂತರಿಗಾಗಿ ಜಪಾನಿನ ಜನಪ್ರಿಯ ಯೂಟ್ಯೂಬರ್ ಮೇಯೋ ಸ್ಯಾನ್​ ಜೊತೆ ಕಾವಾಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೈಲರ್ (Jailer)​ ಸಿನೆಮಾದ ಈ ಹಾಡಿನ ಟ್ರೆಂಡ್​ ಇನ್ನೂ ಯಾರ್ಯಾರನ್ನೆಲ್ಲ ಕುಣಿಸುತ್ತದೆಯೋ!? ನೆಟ್ಟಿಗರಂತೂ ಬಿಟ್ಟಗಣ್ಣಿನಿಂದ ನೋಡುತ್ತಿದ್ದಾರೆ.

ಇದನ್ನೂ ಓದಿ : Viral Video: ಜೈಲರ್; ಕೊರಿಯನ್​ ಕಾವಾಲಾ ರೀಲ್ 15 ಮಿಲಿಯನ್ ವೀಕ್ಷಣೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೂಪರ್ ಸ್ಟಾರ್ ರಜಿನಿಕಾಂತ್ ಮೇಲಿನ ಪ್ರೀತಿಗಾಗಿ ಈ ರೀಲ್ ಮಾಡಲಾಗಿದೆ ಎಂದು ಜಪಾನ್​ನ ರಾಯಭಾರಿ  ಹಿರೋಷಿ ಸುಝುಕಿ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಯೂಟ್ಯೂಬರ್​ ಮೇಯೊ ಸ್ಯಾನ್‌ನೊಂದಿಗೆ ಭಾರೀ ಲವಲವಿಕೆಯಿಂದ ಕಾವಾಲಾದ ಸ್ಟೆಪ್ಸ್ ಹಾಕಿದ್ದಾರೆ ಸುಝುಕಿ. ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುವ ಪರಿಯಂತೂ ಭಾರೀ ಗಮನ ಸೆಳೆದಿದೆ!

ನೋಡಿ ಜಪಾನ್​ ರಾಯಭಾರಿಯ ಕಾವಾಲಾ ರೀಲ್​

ಈ ವಿಡಿಯೋ ಅನ್ನು X (Twitter)ನಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 8 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. 2,500 ಜನರು ಈತನಕ ರೀಪೋಸ್ಟ್ ಮಾಡಿದ್ದಾರೆ ಮತ್ತು ಸುಮಾರು 13,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ರಜಿನಿಕಾಂತ ಪ್ರಭಾವ ಸಾಗರಗಳನ್ನೂ ದಾಟಿದೆ ಎನ್ನುವುದನ್ನು ತಿಳಿದು ಅತ್ಯಂತ ಹೆಮ್ಮೆಯಾಗುತ್ತಿದೆ ಎಂದು ರಜಿನಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ಉಬರ್ ಆಟೋ ರೈಡ್ ಕೇವಲ ರೂ 6, ಏನಿದು ಬೆಂಗಳೂರಿನಲ್ಲಿ ಮ್ಯಾಜಿಕ್?

ಇವರು ತುಂಬಾ ಪ್ರಭಾವಶಾಲಿಯಾದ ರಾಯಭಾರಿ ಎಂದು ಹಿರೋಷಿ ಅವರನ್ನು ಕೆಲವರು ಶ್ಲಾಘಿಸಿದ್ದಾರೆ. ನಿಮ್ಮ ಈ ಪ್ರೀತಿ ನಿಜಕ್ಕೂ ಖುಷಿ ತಂದಿದೆ. ಸದ್ಯದಲ್ಲೇ ಜೈಲರ್ ಜಪಾನೀ ಭಾಷೆಯಲ್ಲಿ ಬಿಡುಗಡೆಯಾಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ ಒಬ್ಬರು. ಸುಝುಕಿ ಮತ್ತು ಮಾಯೋ ನೀವಿಬ್ಬರೂ ಬಾಲಿವುಡ್​ ನೃತ್ಯ ಪಾರಂಗತರಾಗಿದ್ದೀರಿ ಎಂದಿದ್ದಾರೆ ಇನ್ನೊಬ್ಬರು. ತಲೈವರ್ ಟಚ್​ನೊಂದಿಗೆ ಭಾರತ-ಜಪಾನ್​ ರಾಜತಾಂತ್ರಿಕತೆ! ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಅಟ್ಟಾವೇರ್; ಈ ತಟ್ಟೆಯಲ್ಲಿ ತಿನ್ನಿ ಅದರೊಂದಿಗೆ ಲೋಟ, ಚಮಚ, ಬಟ್ಟಲನ್ನೂ ತಿಂದುಬಿಡಿ

ಸುಝುಕಿ ಇದೇ ಮೊದಲಲ್ಲ ರೀಲ್ಸ್ ಮಾಡಿರುವುದು. ಈ ಹಿಂದೆ ತಲೈವರ್ ಚಾಲೇಂಜ್ ಸ್ವೀಕರಿಸಿದ್ದರು. ಆ ರೀಲ್​ನಲ್ಲಿ ರಜಿನಿಯಂತೆ ಕನ್ನಡಕವನ್ನು ತಿರುಗಿಸಿ ನೆಟ್ಟಿಗರ ಗಮನ ಸೆಳೆದಿದ್ದರು. ರಜಿನಿಕಾಂತ್, ತಮನ್ನಾ ಭಾಟಿಯಾ, ಮೋಹನ್​ಲಾಲ್​, ಜಾಕಿ ಶ್ರಾಫ್​, ಶಿವರಾಜಕುಮಾರ್, ರಮ್ಯಾ ಕೃಷ್ಣನ್​, ಯೋಗಿ ಬಾಬು, ವಸಂತ ರವಿ ಮತ್ತ ವಿನಾಯಕನ್​ ನಟಿಸಿರುವ ಜೈಲರ್ ಚಿತ್ರ ಇದೀಗ ಜಾಗತಿಕ ಮಟ್ಟದಲ್ಲಿ ಟ್ರೆಂಡ್​ ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:49 pm, Thu, 17 August 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ