Viral Optical Illusion; ಇಷ್ಟೊತ್ತಾದರೂ ಏಳುತ್ತಲೇ ಇಲ್ಲ, ವಾಕಿಂಗ್​ಗೆ ತಡವಾಗುತ್ತಿದೆ ಇವರನ್ನು ಹುಡುಕಿ ಕಳಿಸುವಿರಾ?

Dog : ಯಾರಿಗೆ ತಾನೆ ಬೆಳಗ್ಗೆ ಹಾಸಿಗೆ ಬಿಟ್ಟು ಏಳೋದಕ್ಕೆ ಮನಸಿರುತ್ತೆ? ಹೀಗೇ ಒಬ್ಬರು ನಾಲ್ಕು ಕಾಲಿನವರು ಈ ಹಾಸಿಗೆಯಲ್ಲಿ ಬಂದು ಮಲಗಿದ್ದಾರೆ. ಎಷ್ಟೊತ್ತಾದರೂ ಏಳ್ತಾನೇ ಇಲ್ಲ. ಬೆಚ್ಚಗೆ ಮುದುರಿ ಮಲಗಿಬಿಟ್ಟಿದ್ದಾರೆ. ಅವರನ್ನು ವಾಕಿಂಗ್ ಕರೆದುಕೊಂಡು ಹೋಗೋಣ ಅಂದ್ರೆ ಎದ್ದು ಬರ್ತಾನೇ ಇಲ್ಲ. ಈ ಹಾಸಿಗೆಯಲ್ಲಿ ಅವರು ಎಲ್ಲಿದ್ದಾರೆ ಅಂತ ಹುಡುಕಿ ಆಚೆ ಕಳಿಸ್ತೀರಾ?

Viral Optical Illusion; ಇಷ್ಟೊತ್ತಾದರೂ ಏಳುತ್ತಲೇ ಇಲ್ಲ, ವಾಕಿಂಗ್​ಗೆ ತಡವಾಗುತ್ತಿದೆ ಇವರನ್ನು ಹುಡುಕಿ ಕಳಿಸುವಿರಾ?
ಈ ಹಾಸಿಗೆಯಲ್ಲಿ ಅಡಗಿರುವ ನಾಯಿಯನ್ನು ಗುರುತಿಸಿ
Follow us
|

Updated on:Aug 18, 2023 | 10:52 AM

Optical Illusion: ನಿಮ್ಮ ಕಣ್ಣುಗಳು ಎಷ್ಟು ಚುರುಕಾಗಿವೆ? ಆಗಾಗ ಪರೀಕ್ಷಿಸಿಕೊಳ್ಳಲೆಂದೇ ನಿಮಗೆ ಇಂಥ ಸವಾಲುಗಳನ್ನು ನೀಡಲಾಗುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ಫೋಟೋ ನೋಡಿ. ಈ ಬೆಡ್​ರೂಮಿನಲ್ಲಿ ಒಂದು ನಾಯಿ ಅಡಗಿದೆ. ಅದನ್ನು ಪತ್ತೆ ಹಚ್ಚುವ ಕೆಲಸವನ್ನು ನಿಮಗೆ ವಹಿಸಲಾಗುತ್ತಿದೆ. ವಾರಾಂತ್ಯದ ಮೂಡ್ (Weekend Mood) ​ನಲ್ಲಿರುವ ನಿಮಗೀಗ ಕೆಲಸ ಮಾಡಲು ತುಸು ಕಷ್ಟವೆನ್ನಿಸುತ್ತಿರಬಹುದು. ಈ ಶುಕ್ರವಾರ ಮುಗಿದು ಶನಿವಾರ ಯಾವಾಗ ಬರುತ್ತದೆ, ಆರಾಮಾಗಿ ಕಾಲು ಚಾಚಿಕೊಂಡು ನಿದ್ದೆ ಮಾಡಬೇಕು, ಬೇಕಾಗಿದ್ದನ್ನು ತಿನ್ನಬೇಕು, ಆಚೆ ಸುತ್ತಾಡಬೇಕು ಎಂದೆಲ್ಲ ಯೋಚಿಸುತ್ತಿದ್ದೀರಿ ತಾನೆ? ಈ ಎಲ್ಲ ಆಲೋಚನೆಗಳ ಮಧ್ಯೆ ಮಾಡುತ್ತಿರುವ ಕೆಲಸ ಕುಂಟುತ್ತಿರಬಹುದು. ಹಾಗಾಗಿ ನಿಮ್ಮ ಮೆದುಳಿಗೆ ಕಣ್ಣಿಗೆ ಈ ಕಸರತ್ತನ್ನು ಕೊಟ್ಟುನೋಡಿ.

ಇದನ್ನೂ ಓದಿ : Viral Video: ವಾಟ್​ ಝುಮ್ಕಾ: ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಹಾಡಿಗೆ ವಧುವಿನ ಡ್ಯಾನ್ಸ್

ರೆಡ್ಡಿಟ್​ನಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅನೇಕರು ಈ ಭ್ರಮಾತ್ಮಕ ಚಿತ್ರದಲ್ಲಿರುವ ನಾಯಿಯನ್ನು ಗುರುತಿಸುವಲ್ಲಿ ವೈಫಲ್ಯ ಕಂಡಿದ್ದಾರೆ. ಹಾಸಿಗೆಯ ಮೇಲೆ ಎಲ್ಲಿ ಮಲಗಿದೆ ನಾಯಿ? ಕಾಣುತ್ತಲೇ ಇಲ್ಲ, ನಿಮಿಷಗಳ ಕಾಲ ನೋಡೇನೋಡಿದೆ ಎನ್ನುತ್ತಿದ್ದಾರೆ. ಹಾಸಿಗೆಯ ಒಳಗೆ ಮಲಗಿದ್ದರೆ ಹೇಗೆ ಪತ್ತೆ ಹಚ್ಚುವುದು? ಛೆ ನನಗಂತೂ ಆಗಲ್ಲಾ, ನಾನು ಹುಡುಕುವುದನ್ನು ನಿಲ್ಲಿಸಿದೆ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೋಡಿ ಹಾಸಿಗೆಯೊಳಗೆ ಮಲಗಿರುವ ನಾಯಿಯನ್ನು ನೀವು ಪತ್ತೆ ಹಚ್ಚಬಹುದೆ?

I was frantically looking for my dog for 10 minutes. by u/shetarp429 in aww

ನಾನು ನನ್ನ ನಾಯಿಯನ್ನು 10 ನಿಮಿಷಗಳಿಂದ ಹುಡುಕುತ್ತಲೇ ಇದ್ದೆ ಎಂಬ ತಲೆಬರಹದಡಿ ಈ ಫೋಟೋ ಪೋಸ್ಟ್ ಮಾಡಲಾಗಿದೆ. ಹೊದಿಕೆ, ಹಾಸಿಗೆ, ದಿಂಬುಗಳ ಮಧ್ಯೆ ನಾಯಿ ಎಲ್ಲಿ ಅಡಗಿದೆಯೋ ಏನೋ. ಹೊದಿಕೆಯಡಿಯೇ ನಾಯಿ ಮಲಗಿದೆ ಎಂದು ಹಲವಾರು ಜನ ಹೇಳಿದ್ಧಾರೆ. ಅಲ್ಲದೆ, ಅದರ ಮೂಗನ್ನು ನೋಡಿದೆ ಎಂದಿದ್ದಾರೆ ಕೆಲವರು. ಈ ಪೋಸ್ಟ್​ ಅನ್ನು 3 ವರ್ಷಗಳ ಹಿಂದೆ ಹಂಚಿಕೊಳ್ಳಲಾಗಿದೆ, ಆದರೆ ಇದೀಗ ಇದು ವೈರಲ್ ಆಗಿದೆ. ಈತನಕ 21,000 ಜನರು ಲೈಕ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಕಾರಿನ ಅಣ್ಣನಿಗೆ ಜೈ; ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಸೆದೆಬಡಿಯುತ್ತಿರುವ ಕಾರ್​ ಚಾಲಕ

ಹಾಂ ನನಗೆ ಅವನ ಪುಟ್ಟಮೂಗು ಕಂಡಿತು! ಎಂದು ಹಲವಾರು ಜನ ಹೇಳಿದ್ದಾರೆ. ಆಕೆ ಆರಾಮಾಗಿ ಹೊದಿಕೆಯೊಳಗೆ ನಿದ್ರೆ ಹೋಗಿದ್ದಾಳೆ ಎಂದಿದ್ದಾರೆ ಇನ್ನಷ್ಟು ಜನ. ನನ್ನ ನಾಯಿ ಕೂಡ ಹೀಗೆಯೇ ನಮ್ಮನ್ನು ಆಟವಾಡಿಸುತ್ತದೆ ಎಂದಿದ್ದಾರೆ ಇನ್ನೊಂದಿಷ್ಟು ಜನ. ಬಟನ್​ ನೋಸ್ ಕಂಡಿತು ನನಗೆ!

ನಿಮಗೆ ಕಂಡಿತೇ ಇಲ್ಲಿ ಅಡಗಿರುವ ನಾಯಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:52 am, Fri, 18 August 23

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ