Viral Video: ಸೂರತ್​ನ ಹುರಿದ ಕಡಲೆಕಾಳು ಫ್ಯಾಕ್ಟರಿ; ಕಾರ್ಮಿಕರ ಮೈಕೈ ತುಂಬಾ ಕೊಳಕು ಎಂದ ನೆಟ್ಟಿಗರು

Unhygienic : ಕಾಡಿಬೇಡಿ ಇಸಿದುಕೊಂಡು ಕಿಸೆಯಲ್ಲಿ ತುಂಬಿಕೊಂಡು ಕದ್ದುಮುಚ್ಚಿ ತಿನ್ನುತ್ತಿದ್ದ ಬಾಲ್ಯದ ಹುರಿದ ಕಡಲೆಕಾಳಿನ ನೆನಪು ಯಾರಿಂದಲಾದರೂ ಮರೆಯಾಗಲು ಸಾಧ್ಯವೆ? ಮತ್ತೀಗ ಪ್ರೊಟೀನ್​, ಫೈಬರ್ ಎಂದು ಮೂರು ಹೊತ್ತೂ ಕುಟುಮಿಸುತ್ತ ಬಾಲ್ಯದ ರುಚಿಯನ್ನು ಸವಿಯುತ್ತಿರುವವರು ಕಡಿಮೆಯೆ? ಹಾಗಿದ್ದರೆ ಸುರತ್​ನ ಫ್ಯಾಕ್ಟರಿಯೊಂದರಲ್ಲಿ ಈ ಹುರಿದ ಕಡಲೆಕಾಳನ್ನು ತಯಾರಿಸುವ ಬಗೆ ನೋಡಿ.

Viral Video: ಸೂರತ್​ನ ಹುರಿದ ಕಡಲೆಕಾಳು ಫ್ಯಾಕ್ಟರಿ; ಕಾರ್ಮಿಕರ ಮೈಕೈ ತುಂಬಾ ಕೊಳಕು ಎಂದ ನೆಟ್ಟಿಗರು
ಹುರಿದ ಕಡಲೆಯನ್ನು ತಯಾರಿಸುತ್ತಿರುವ ಸುರತ್​ನ ಕಾರ್ಖಾನೆಯ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Aug 18, 2023 | 1:29 PM

Surat : ಇಂಥದ್ದೆಲ್ಲ ನನಗೆ ಬೇಕೇಬೇಕು ಎಂದು ಬಾಲ್ಯದಲ್ಲಿ ಹಠ ಮಾಡಿ ಕೊಡಿಸಿಕೊಂಡ ಪಟ್ಟಿಯಲ್ಲಿ ಈ ಹುರಿದ ಕಡಲೆಕಾಳೂ (Roasted Chana) ಸೇರಿದೆ. ತಕ್ಕಮಟ್ಟಿಗೆ ಹಸಿವನ್ನು ರುಚಿಯನ್ನೂ ತಣಿಸುತ್ತಿದ್ದ ಈ ಹುರಿದ ಕಡಲೆಕಾಳನ್ನು ನಿಮ್ಮಲ್ಲಿ ಅನೇಕರು ಈಗಲೂ ತಿನ್ನುತ್ತೀರಿ. ಉಪ್ಪುಪ್ಪಾದ ಕಟಮ್ ಕುಟುಮ್​ ಕಡಲೆಕಾಳನ್ನು ಹೇಗೆ ತಯಾರಿಸುತ್ತಾರೆ ಎನ್ನುವುದು ತಿಳಿದಿದೆಯೇ? ಈ ಹಿಂದೆ ಹಸಿರು ಬಟಾಣಿಯನ್ನು ತಯಾರಿಸುತ್ತಿದ್ದ ವಿಡಿಯೋ ನೋಡಿದ ನೆನಪು ಇನ್ನೂ ಹಸಿಯಾಗಿಯೇ ಇರಬೇಕಲ್ಲ/ ಹಾಗಿದ್ದರೆ ಇದೀಗ ಸೂರತ್​ನ ಫ್ಯಾಕ್ಟರಿಯೊಂದಕ್ಕೆ ಹೋಗೋಣ. ನೆಟ್ಟಿಗರೆಲ್ಲ ಈ ವಿಡಿಯೋ ನೋಡಿ ಸ್ವಲ್ಪವೂ ಸ್ವಚ್ಛತೆಯನ್ನೇ ಕಾಪಾಡಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಮಹಾರಾಷ್ಟ್ರ; 8 ವರ್ಷದ ಬಾಲಕನ ವಿರುದ್ಧ ಅತ್ಯಾಚಾರ, ಅಟ್ರಾಸಿಟಿ, ಪೋಕ್ಸೋ ಪ್ರಕರಣ ದಾಖಲು; ನೆಟ್ಟಿಗರ ಆಕ್ರೋಶ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಹುರಿದ ಕಡಲೆ ತೂಕವನ್ನು ನಿರ್ವಹಿಸುವಲ್ಲಿ ಸಹಾಯಕಾರಿ ಎಂಬ ಕಾರಣಕ್ಕೆ ಮತ್ತು ಇನ್ನಿತರೇ ಆರೋಗ್ಯಕಾರಿ ಪ್ರಯೋಜನಗಳುಂಟು ಎಂಬ ಹಿನ್ನೆಲೆಯಲ್ಲಿ ದೊಡ್ಡವರೂ ಕೂಡ ಇವುಗಳನ್ನು ಬಾಯಾಡಿಸುತ್ತಿರುತ್ತಾರೆ. ಏಕೆಂದರೆ ಹುರಿದ ಕಡಲೆಕಾಳಿನಲ್ಲಿ ಉತ್ತಮ ಪ್ರಮಾಣದಲ್ಲಿ ಫೈಬರ್ ಮತ್ತು ಪ್ರೋಟೀನ್​  ಅಂಶ ಇರುತ್ತದೆ. ಹೆಚ್ಚುಹೊತ್ತು ಹಸಿವನ್ನು ಇದು ತಡೆಗಟ್ಟುತ್ತದೆಯಾದ್ದರಿಂದ ಶರೀರದಲ್ಲಿ ಕ್ಯಾಲೊರಿಗಳ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ. ಕಡಲೆಕಾಳಿನ ಮಹಿಮೆ ಇಷ್ಟೆಲ್ಲ ಇದ್ದರೂ ನೆಟ್ಟಿಗರು ಈ ವಿಡಿಯೋ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಹುರಿದ ಕಡಲೆಕಾಳನ್ನು ತಯಾರಿಸುತ್ತಿರುವ ಸೂರತ್​ನ ಕಾರ್ಖಾನೆ

ಎಂಥ ಅಶುಚಿಯಾದ ಕಾರ್ಖಾನೆ ಇದು. ಹುರಿದ ಕಡಲೆಯನ್ನು ಹೀಗೆ ಇಂಥ ಜಾಗದಲ್ಲಿ ತಯಾರಿಸುತ್ತಾರಾ? ಈ ಕಾರ್ಮಿಕರು ಸಮವಸ್ತ್ರ, ಕೈಗವಸುಗಳನ್ನು ಧರಿಸಿಲ್ಲ, ಯಂತ್ರೋಪಕರಣಗಳನ್ನು ನೋಡಲಾಗುತ್ತಿಲ್ಲ. ಇನ್ನು ಅದನ್ನು ತಯಾರಿಸುವ ಪರಿಕರಗಳೂ ಅಷ್ಟೇ ಕೊಳಕಾಗಿವೆ. ನಿಜಕ್ಕೂ ಈ ವಿಡಿಯೋ ನೋಡಿ ನಿರಾಶೆ ಉಂಟಾಗುತ್ತಿದೆ ಎಂದು ಅನೇಕರು ಹೇಳಿದ್ದಾರೆ. ಈ ಕಡಲೆಕಾಳಿಗೆ ಉಪ್ಪು ಬೆರೆಸುವ ಅಗತ್ಯವೇ ಇಲ್ಲ, ಅವರ ಬೆವರೇ ಚೆನ್ನಾಗಿ ಮಿಶ್ರಣಗೊಳ್ಳುತ್ತಿದೆ ಎಂದಿದ್ದಾರೆ ಒಬ್ಬರು. ಕಾರ್ಮಿಕರ ಕೈ ಮೈ ತುಂಬಾ ಕೊಳಕಾಗಿದೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?

ಈ ವಿಡಿಯೋ ಅನ್ನು ಈತನಕ 1,500 ಜನರು ಲೈಕ್ ಮಾಡಿದ್ದಾರೆ. ಇಷ್ಟು ದಿನ ಇಷ್ಟು ಕೊಳಕಾದ ಕಡಲೆಗಳನ್ನು ನಾನು ತಿಂದೆನೇ? ಎಂದಿದ್ದಾರೆ ಒಬ್ಬರು. ಶ್ರಮಿಕರ ಶ್ರಮವನ್ನು ಅವಮಾನಿಸಬೇಡಿ ಎಂದಿದ್ದಾರೆ ಇನ್ನೊಬ್ಬರು. ರಾಸಾಯನಿಕಗಳನ್ನು ಬಳಸಿದ ಖಾದ್ಯಗಳನ್ನು ತಿನ್ನುವುದಕ್ಕಿಂತ ಇದೇ ವಾಸಿ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:20 pm, Fri, 18 August 23