AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ತಾತ್ಕಾಲಿಕ ಸಂಗಾತಿಗಳ ಆಯ್ಕೆಯತ್ತ ಒಲವು ತೋರಿಸಿದ ಚೀನಾದ ಯುವಜನತೆ

Temporary Partnership: ಶಿಕ್ಷಣ ಮತ್ತು ತಂತ್ರಜ್ಞಾನದಿಂದ ಆವರಿಸಿದ ಆಧುನಿಕ ಜೀವನಶೈಲಿಯಲ್ಲಿ ಆಗಾಗ ಕಣ್ಬಿಡುವ ಟ್ರೆಂಡ್​ಗಳು ಕೆಲವೊಮ್ಮೆ ಅಚ್ಚರಿಯನ್ನೂ ಆಘಾತವನ್ನೂ ಮತ್ತು ಅನುಕೂಲವನ್ನೂ ಸೃಷ್ಟಿಸುತ್ತಿರುತ್ತವೆ. ಇದೀಗ ಚೀನಾದ ಯುವಜನತೆ ಸಂಬಂಧಗಳಿಂದ ಉಂಟಾಗುವ ಸಂಕೀರ್ಣತೆ, ಸಂಘರ್ಷಗಳನ್ನು ತಪ್ಪಿಸಲು ತಾತ್ಕಾಲಿಕ ಸಂಗಾತಿಗಳ ಆಯ್ಕೆಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದೆ.

Viral: ತಾತ್ಕಾಲಿಕ ಸಂಗಾತಿಗಳ ಆಯ್ಕೆಯತ್ತ ಒಲವು ತೋರಿಸಿದ ಚೀನಾದ ಯುವಜನತೆ
ಸಾಂದರ್ಭಿಕ ಚಿತ್ರ
ಶ್ರೀದೇವಿ ಕಳಸದ
|

Updated on:Aug 18, 2023 | 3:35 PM

Share

China : ಯೌವನಕ್ಕೆ ಬರುತ್ತಿದ್ದಂತೆ ಆತುಕೊಳ್ಳಲೊಂದು ಸಾಂಗತ್ಯ ಬೇಕೆನ್ನಿಸುತ್ತದೆ. ಸಾಂಗತ್ಯವಿಲ್ಲದಿದ್ದಲ್ಲಿ  ಒಂಟಿತನವ್ನು ಉಸಿರಾಡುವುದು ಕಷ್ಟವೆನ್ನಿಸುತ್ತದೆ. ಆದರೆ ಸಿಕ್ಕ ಸಾಂಗತ್ಯ ಯಾವುದ್ಯಾವುದೋ ಕಾರಣಗಳಿಗೆ ಜಟಿಲವಾಗುತ್ತಾ ಹೋಗುತ್ತದೆ. ಹೆಚ್ಚಿನ ಪಾಲು ಬದ್ಧತೆ ಮತ್ತು ವ್ಯಕ್ತಿ ಸ್ವಾತಂತ್ರ್ಯ ಈ ಸಂಬಂಧಗಳ (Relationship) ನಡುವಿನ ಜಟಿಲತೆಗೆ ಕಾರಣ. ಆಗ ಬಿರುಕುಗಳು ಹೆಡೆಯೆತ್ತಿ ಭುಸುಗುಡಲು ಪ್ರಾರಂಭಿಸುತ್ತವೆ. ದಿನೇದಿನೇ ಸಂಬಂಧ ಸಂಕೀರ್ಣತೆಯೆಡೆ ತಿರುಗುತ್ತದೆ. ಇಂಥ ಸಂಕಷ್ಟದಿಂದ ದೂರ ಇದ್ದು ತಮ್ಮ ಸ್ವಾತಂತ್ರ್ಯವನ್ನು ಮತ್ತು ಏಕಾಂತವನ್ನು ಕಾಪಾಡಿಕೊಳ್ಳಲು ಚೀನಾದ ಯುವಜನತೆ ಹೊಸ ಟ್ರೆಂಡ್​ಗೆ ಇದೀಗ ಹೆಚ್ಚೆಚ್ಚು ಮಾರು ಹೋಗುತ್ತಿದೆ. ತಾತ್ಕಾಲಿಕ ಸಂಗಾತಿಗಳೆಡೆ (Temporary Partners) ಹೆಚ್ಚು ಆಸಕ್ತಿ ತೋರುತ್ತಿದೆ.

ಇದನ್ನೂ ಓದಿ : Viral Video: ಸೆಲ್ಫೀ ತೆಗೆದುಕೊಳ್ಳುತ್ತಿರುವ ಗಾಂಧೀಜಿ, ಭಗತ್, ಬೋಸ್​, ಝಾನ್ಸೀ, ಪಾಂಡೆ, ತಿಲಕ್ 

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP)ನ ಪ್ರಕಾರ, ಸಾಂಗತ್ಯಕ್ಕಾಗಿ ಹುಡುಕಾಟ ನಡೆಸಿರುವ ಯುವಕ ಯುವತಿಯರು ಸಂಬಂಧಗಳಿಂದ ಉಂಟಾಗುವ ಸಂಘರ್ಷ ಮತ್ತು ಸಂಕೀರ್ಣತೆಯನ್ನು ತಪ್ಪಿಸಲು ತಾತ್ಕಾಲಿಕ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಆಸಕ್ತಿಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಇವರು ತಾತ್ಕಾಲಿಕ ಸಂಗಾತಿಗಳ ಹುಡುಕಾಟಕ್ಕಾಗಿ Xiaohongshu ಎಂಬ ಸಾಮಾಜಿಕ ಜಾಲತಾಣಕ್ಕೆ ಮೊರೆ ಹೋಗುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಮಹಾರಾಷ್ಟ್ರ; 8 ವರ್ಷದ ಬಾಲಕನ ವಿರುದ್ಧ ಅತ್ಯಾಚಾರ, ಅಟ್ರಾಸಿಟಿ, ಪೋಕ್ಸೋ ಪ್ರಕರಣ ದಾಖಲು; ನೆಟ್ಟಿಗರ ಆಕ್ರೋಶ

ಸಾಮಾನ್ಯವಾಗಿ ಫುಡ್, ಗೇಮಿಂಗ್, ಫಿಟ್‌ನೆಸ್, ಪ್ರವಾಸ, ಕೃಷಿ, ಚಾಟಿಂಗ್​, ಸಂಗೀತ ಕೇಳುವಿಕೆಯಲ್ಲಿ ಆಸಕ್ತಿ ಇರುವ ಸಂಗಾತಿಗಳ ಆಯ್ಕೆಗೆ ಹೆಚ್ಚು ಪ್ರಾಧಾನ್ಯ ಕೊಡುತ್ತಿದ್ದಾರೆ. ಸಂಗಾತಿಗಳು ಮುಖತಃ ಭೇಟಿಯಾಗಲೇಬೇಕೆನ್ನುವ ಅನಿವಾರ್ಯತೆ ಇಲ್ಲಿಲ್ಲ. WeChat ಮತ್ತು ಇತರೇ ಆ್ಯಪ್​​ಗಳ ಮೂಲಕ ನಿತ್ಯವೂ ಒಡನಾಡಿಕೊಂಡಿದ್ದರೂ ಸರಿ.

ಇದನ್ನೂ ಓದಿ : Viral: ದೆಹಲಿಯ ಗ್ರೇಟರ್ ಕೈಲಾಶ್​ನಲ್ಲಿ ಬೆಡ್ ಜೊತೆ ಟಾಯ್ಲೆಟ್ ಬಾಡಿಗೆಗೆ ಲಭ್ಯ!

‘ನಾನು ನಿಜವಾಗಿಯೂ ಒಂಟಿಯಾಗಿದ್ದೇನೆ, ಹಾಗೆಂದು ಸಾಮಾಜಿಕ ಸಂವಹನ ನಡೆಸಲು ನನಗಿಷ್ಟವಿಲ್ಲ. ಆದರೆ ನನ್ನ ಜೀವನದಲ್ಲಿ ಎಲ್ಲದಕ್ಕೂ ತಲೆಹಾಕದಂಥ ಸಂಗಾತಿಯನ್ನು ಹೊಂದಬೇಕೆಂದು ಬಯಸುತ್ತೇನೆ. ಇಂಥ ಸಂಗಾತಿಯನ್ನು ಹುಡುಕುವ ಪ್ರಯತ್ನ ಅಷ್ಟು ಸುಲಭವಲ್ಲ, ಸಾಕಷ್ಟು ನಿರಾಸೆ ಅನುಭವಿಸುತ್ತಿದ್ದೇನೆ’ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಸೂರತ್​ನ ಹುರಿದ ಕಡಲೆಕಾಳು ಫ್ಯಾಕ್ಟರಿ; ಕಾರ್ಮಿಕರ ಮೈಕೈ ತುಂಬಾ ಕೊಳಕು ಎಂದ ನೆಟ್ಟಿಗರು

ಜೀವನಶೈಲಿಯನ್ನು ಆಧರಿಸಿದ ಇಂಥ ಟ್ರೆಂಡ್​ಗಳು ಮಾರ್ಪಾಡು ಹೊಂದುತ್ತಿರುತ್ತವೆ. ಆಧುನಿಕ ಜಗತ್ತಿನಲ್ಲಿ ವ್ಯಕ್ತಿ  ಹೆಚ್ಚೆಚ್ಚು ಸ್ವಕೇಂದ್ರಿತನಾಗುತ್ತಾ ಹೋಗುತ್ತಿದ್ದಾನೆ. ಎಷ್ಟೆಂದರೆ ಒಂದು ಸಾಂಗತ್ಯವನ್ನು ಕೂಡ ನೆಮ್ಮದಿಯಾಗಿ ಅನುಭವಿಸದಷ್ಟು ಮತ್ತು ಉಸಿರಾಡದಷ್ಟು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:33 pm, Fri, 18 August 23

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್