Viral Video: ‘ನನ್ನದು ವಿಶೇಷ ಕಣ್ಣು ಗೊತ್ತಾ?’; ದಿಟ್ಟ ಪುಟ್ಟಿಯ ದೃಷ್ಟಿಪ್ರಯಾಣ

Children : ಝೋಯಿಗೆ ಮೂರು ತಿಂಗಳು ತುಂಬಿದಾಗ ದಿನದಿಂದ ದಿನಕ್ಕೆ ಕಣ್ಣು ದೊಡ್ಡದಾಗುತ್ತ, ಬಣ್ಣವೂ ಬದಲಾಗತೊಡಗಿತು. ಕಣ್ಣು ಸೆಕೆಂಡರಿ ಗ್ಲುಕೋಮಾಗೆ ತುತ್ತಾಗಿತ್ತು. ಆದರೆ ಮಗು ಝೋಯಿ ತನ್ನ ಸಮಸ್ಯೆಯೊಂದಿಗೆ ಬದುಕನ್ನು ದಿಟ್ಟತನದಿಂದ ಎದುರಿಸುವುದು ಹೇಗೆ ಎನ್ನುವುದನ್ನು ಆಕೆಯ ತಂದೆತಾಯಿ ಕಲಿಸಿದ್ದು ಮಾತ್ರ ನಿಜಕ್ಕೂ ಶ್ಲಾಘನೀಯ.

Viral Video: 'ನನ್ನದು ವಿಶೇಷ ಕಣ್ಣು ಗೊತ್ತಾ?';  ದಿಟ್ಟ ಪುಟ್ಟಿಯ ದೃಷ್ಟಿಪ್ರಯಾಣ
ಗ್ಲುಕೋಮಾಗೆ ಒಳಗಾದ ಝೋಯೀ
Follow us
ಶ್ರೀದೇವಿ ಕಳಸದ
|

Updated on: Aug 18, 2023 | 6:28 PM

Glaucoma : ಈ ಪುಟ್ಟಮಗು ಝೋಯಿ (Zoe) ಹುಟ್ಟಿದಾಗ ಮನೆಯೆಲ್ಲ ಬೆಳದಿಂಗಳು. ಆಕೆಯ ಹಾವಭಾವ,  ಚುರುಕುತನ, ಅಳುನಗುವನ್ನು ಸಂಪೂರ್ಣ ಅನುಭವಿಸಿದರು ಆಕೆಯ ಅಪ್ಪ ಅಮ್ಮ. ಆದರೆ ಝೋಯಿಗೆ ಯಾವಾಗ ಮೂರು ತಿಂಗಳು ತುಂಬಿದವೋ ಇಬ್ಬರ ಮನಸ್ಸಿಗೂ ಮಂಕು ಕವಿಯಿತು. ಮಗುವಿನ ಕಣ್ಣು ದಿನದಿಂದ ದಿನಕ್ಕೆ ದೊಡ್ಡದಾಗುತ್ತ, ಬಣ್ಣವೂ ಬದಲಾಗತೊಡಗಿತು. ಝೋಯಿಯ ಎಡಗಣ್ಣು ಸೆಕೆಂಡರಿ ಗ್ಲುಕೋಮಾಗೆ ತುತ್ತಾಗಿತ್ತು. ಕಣ್ಣಿನ ವೈದ್ಯರ ಬಳಿ ಓಡಾಟ ಶುರುವಾಯಿತು. ಸುಂದರ ಕಣ್ಣು ಆಕಾರ ಕಳೆದುಕೊಳ್ಳುತ್ತಿದ್ದುದನ್ನು ನೋಡಿದ ತಂದೆತಾಯಿ ದಿನೇದಿನೇ ಕಳವಳಕ್ಕೆ ಈಡಾದರು. ಎರಡು ವರ್ಷಗಳಲ್ಲಿ ಮೂರು ಮುಖ್ಯವಾದ ಶಸ್ತ್ರಚಿಕಿತ್ಸೆಗಳು (Eye Surgery) ನಡೆದವು.

ಇದನ್ನೂ ಓದಿ : Viral Video: ಬಾಳೆಹಣ್ಣಿಗೆ ಇನ್ನುಮುಂದೆ ಕರ್ಮಫಲವೆಂದು ಮರುನಾಮಕರಣ ಮಾಡಬೇಕೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈತನಕವೂ ಮಗು ಕಣ್ಣುನೋವಿನಿಂದ ಪ್ರತೀ ದಿನ ಬಳಲುತ್ತದೆ. ಮನೆಯಿಂದ ಹೊರಗೆ ಹೋದಾಗ ಜನರು ವಿಚಿತ್ರವಾಗಿ ನೋಡುತ್ತಾರೆ. ಪ್ರಶ್ನಿಸುತ್ತಾರೆ. ಛಂದದ ಮುಖದಲ್ಲಿ ಅದೊಂದು ಕಣ್ಣು ಯಾಕೆ ಹೀಗೆ ಎಂಬ ಕುತೂಹಲ ಎಲ್ಲರಲ್ಲಿಯೂ ಉಂಟಾಗುತ್ತದೆ. ಶಾಲೆಯಲ್ಲಿ ಸ್ನೇಹಿತೆಯರೂ ಝೋಯಿಗೆ ಹೇಳಿದ್ದಿದೆ, ಹೇಳುತ್ತಲೂ ಇರುತ್ತಾರೆ; ನಿನ್ನ ಕಣ್ಣು ನೋಡಿ ನಮಗೆ ಭಯವಾಗುತ್ತದೆ ಝೋಯಿ ಎಂದು. ಆಗ ಆಕೆ ನಗುತ್ತಲೇ ನನ್ನದು ವಿಶೇಷ ಕಣ್ಣು ಗೊತ್ತಾ? ಎಂದು ಎನ್ನುತ್ತಾಳೆ.

ಝೋಯಿಯ ವಿಶೇಷ ಕಣ್ಣಿನ ಪಯಣ ಇಲ್ಲಿದೆ

7 ಗಂಟೆಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 35,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ಧಾರೆ. ಶಾಲೆಯಲ್ಲಿ ಯಾರೊಬ್ಬರ ದೈಹಿಕ  ನೋಟ, ಆರೋಗ್ಯ ಸಮಸ್ಯೆಗಳ ಬಗ್ಗೆ ಮಕ್ಕಳು ಪ್ರತಿಕ್ರಿಯೆ ವ್ಯಕ್ತಪಡಿಸದಂತೆ ನೋಡಿಕೊಳ್ಳಿ. ಇದೊಂದು ಕೆಟ್ಟ ಚಟವಾಗಿ ಉಳಿದಿದೆ, ಬೆಳೆಯುತ್ತಿದೆ. ಆದಾಗ್ಯೂ ಮಕ್ಕಳು ಪ್ರತಿಕ್ರಿಯಿಸಿದರೆ ಅವರ ಪೋಷಕರೊಂದಿಗೆ ಮಾತನಾಡಿ, ಇಲ್ಲವಾದರೆ ಅನ್ನಿಸಿಕೊಂಡ ಮಕ್ಕಳು ಮಕ್ಕಳು ಜೀವನಪೂರ್ತಿ ಆಘಾತಕ್ಕೆ ಒಳಗಾಗುತ್ತವೆ ಎಂದು ನಾನು ಅನೇಕ ಪೋಷಕರಿಗೆ ಸಲಹೆ ನೀಡುತ್ತಿರುತ್ತೇನೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral: ತಾತ್ಕಾಲಿಕ ಸಂಗಾತಿಗಳ ಆಯ್ಕೆಯತ್ತ ಒಲವು ತೋರಿಸಿದ ಚೀನಾದ ಯುವಜನತೆ

ನನಗೆ ವಿಶೇಷವಾದ ಕಣ್ಣು ಇದೆ… ಹೀಗೆ ಈ  ಮಗು ಹೇಳಲು ಮತ್ತು ಪರಿಸ್ಥಿತಿಯನ್ನು ಎದುರಿಸಲು ಕಲಿಸಿದ ಹೆತ್ತವರ ಮನೋಸ್ಥೈರ್ಯಕ್ಕೆ ಧನ್ಯವಾದ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ನೋಡಿ ಕಣ್ಣೀರಾದೆ, ಝೋಯಿ ನಿನಗೆ ಒಳ್ಳೆಯದಾಗಲಿ, ನಿನ್ನ ಕಣ್ಣು ಸರಿ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ