Viral Video: ಜವಾನೀ ಜಾನ್​ ಏ ಮನ್; ಮಗಳೇ ತಾಯಿಯಂತೆ ಕಾಣುತ್ತಿದ್ದಾಳೆ ಎಂದ ನೆಟ್ಟಿಗರು

Asha Bhosle: ಅಕ್ಕ ತಂಗಿ ಬಿಡಿ, ನನಗಂತೂ ಇವರಿಬ್ಬರೂ ಅವಳಿಗಳಂತೆ ಕಾಣುತ್ತಿದ್ದಾರೆ ಎಂದು ಕೆಲವರು. ಈ ತಾಯಿ ಇಷ್ಟೊಂದು ತೆಳ್ಳಗೆ ಮೈಕಟ್ಟನ್ನು ಕಾಪಾಡಿಕೊಳ್ಳುವುದರ ಹಿಂದಿನ ಗುಟ್ಟೇನು ಎಂದು ಇನ್ನೂ ಕೆಲವರು. ನಿಜಕ್ಕೂ ನಾನು ಆ ತಾಯಿಯನ್ನೇ ಪದೇಪದೆ ನೋಡುತ್ತಿದ್ದೇನೆ ಎಂದು ಮತ್ತೂ ಕೆಲವರು. ಹಾಗಿದ್ದರೆ ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

Viral Video: ಜವಾನೀ ಜಾನ್​ ಏ ಮನ್; ಮಗಳೇ ತಾಯಿಯಂತೆ ಕಾಣುತ್ತಿದ್ದಾಳೆ ಎಂದ ನೆಟ್ಟಿಗರು
ತಾಯಿ ಮಗಳ ಡ್ಯಾನ್ಸ್​
Follow us
ಶ್ರೀದೇವಿ ಕಳಸದ
|

Updated on:Oct 09, 2023 | 2:15 PM

Mother Daughter: ಹಳೆಯ ಬಾಲಿವುಡ್​ ಸಿನೆಮಾ ‘ನಮಕ್​ ಹಲಾಲ್’ನ (Namak Halaal)  ‘ಜವಾನಿ ಜಾನ್​ ಏ ಮನ್​’ ಹಾಡಿಗೆ ಅಮ್ಮ ಮಗಳು ಡ್ಯಾನ್ಸ್ ಮಾಡಿದ್ದು ಇದೀಗ ವೈರಲ್ ಆಗಿದೆ. ಇವರಿಬ್ಬರ ಭಾವಾಭಿವ್ಯಕ್ತಿ ಮತ್ತು ಉತ್ಸಾಹವನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಅನ್ನು ಮನ್ನತ್ ಖನ್ನಾ ಸೆ. 27ರಂದು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈತನಕ ಸುಮಾರು 70,000 ಜನರು ಲೈಕ್ ಮಾಡಿದ್ದಾರೆ. ಇವರಿಬ್ಬರ ಕಾಸ್ಟ್ಯೂಮ್​ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ನೀವಿಬ್ಬರೂ ಅಕ್ಕತಂಗಿಯರಂತೆ ಇದ್ದೀರಿ, ಸ್ನೇಹಿತೆಯರಂತೆ ಇದ್ದೀರಿ, ತಾಯಿ ಮಗಳು ಎನ್ನಿಸುವುದೇ ಇಲ್ಲ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral Video: 406 ಚಿತ್ರಗಳು 26 ದಿನಗಳು; 65 ಮಿಲಿಯನ್​ ಜನರು ನೋಡಿದ ಚಮ್ಮಕ್ ಚಲ್ಲೋ ಡ್ಯಾನ್ಸ್​

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈತನಕ ಸುಮಾರು 3 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ತುಂಬಾ ಅದ್ಭುತವಾದ ನೃತ್ಯ, ಆಕರ್ಷಕವಾದ ನೃತ್ಯ ಎಂದು ಅನೇಕರು ಹೇಳಿದ್ದಾರೆ. ನಿಜಕ್ಕೂ ಇದು ಅತ್ಯುತ್ತಮವಾದ ಪ್ರದರ್ಶನ ಎಂದು ಕೆಲವರು ಹೇಳಿದ್ದಾರೆ.

ಅಮ್ಮ ಮಗಳ ನೃತ್ಯ

1982ರಲ್ಲಿ ಬಿಡುಗಡೆಯಾದ ಈ ಸಿನೆಮಾದ ಸಂಗೀತವನ್ನು ಬಪ್ಪಿಲಹರಿ ನಿರ್ದೇಶಿಸಿದ್ದಾರೆ. ಶಶಿ ಕಪೂರ್, ಅಮಿತಾಬ್ ಬಚ್ಚನ್, ಪರ್ವೀನ್ ಬಾಬಿ ಮತ್ತು ವಹೀದಾ ರೆಹಮಾನ್ ನಟಿಸಿದ್ದಾರೆ. ಈ ಹಳೆಯ ಸುಂದರವಾದ ಟ್ರ್ಯಾಕ್​ ನೆನಪಿಸಿದ್ದಕ್ಕೆ ನಿಮ್ಮಿಬ್ಬರಿಗೂ ಧನ್ಯವಾದ ಎಂದಿದ್ದಾರೆ ಕೆಲ ನೆಟ್ಟಿಗರು. ನಿಮ್ಮಿಬ್ಬರ ಸೌಂದರ್ಯದ ಗುಟ್ಟೇನು? ಎಂದಿದ್ದಾರೆ ಒಬ್ಬರು. ನೀವೆಲ್ಲ ಅಕ್ಕತಂಗಿ ಎನ್ನುತ್ತಿದ್ದೀರಿ, ಆದರೆ ನನಗಿವರು ಅವಳಿಗಳಂತೆ ಕಂಡರು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ನ್ಯೂಯಾರ್ಕ್​; ಜಗತ್ತಿನ ಅತ್ಯಂತ ಶಕ್ತಿಶಾಲಿ ಕುತ್ತಿಗೆ ಹೊಂದಿದ ವ್ಯಕ್ತಿ ಇಲ್ಲಿದ್ದಾನೆ!

ತಾಯಿಯೇ ಮಗಳು ಎಂದು ನಿಮ್ಮ ಈ ವಿಡಿಯೋದ ಶೀರ್ಷಿಕೆ ಬದಲಾಯಿಸಿ ಎಂದಿದ್ದಾರೆ ಮತ್ತೊಬ್ಬರು. ತಾಯಿ ಇಷ್ಟೊಂದು ತೆಳ್ಳಗಿರುವುದು ವಂಶವಾಹಿಯಿಂದ ಇರಬೇಕು ಎಂದಿದ್ದಾರೆ ಇನ್ನೊಬ್ಬರು. ನನಗಂತೂ ಮಗಳೇ ತಾಯಿ ಎನ್ನಿಸಿದ್ದಾಳೆ ಎಂದಿದ್ದಾರೆ ಇನ್ನೂ ಒಬ್ಬರು. ಅನೇಕರು ನಿಮಗಿಂತ ನಿಮ್ಮ ತಾಯಿಯೇ ಚಿಕ್ಕವರಂತೆ ಕಾಣುತ್ತಾರೆ ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:14 pm, Mon, 9 October 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ