Viral Video: ನ್ಯೂಯಾರ್ಕ್; ಜಗತ್ತಿನ ಅತ್ಯಂತ ಶಕ್ತಿಶಾಲಿ ಕುತ್ತಿಗೆ ಹೊಂದಿದ ವ್ಯಕ್ತಿ ಇಲ್ಲಿದ್ದಾನೆ!
Cycling: ನ್ಯೂಯಾರ್ಕ್ನಲ್ಲಿ ರಾತ್ರಿ ಹೀಗೆ ಇವನು ರಸ್ತೆಯಲ್ಲಿ ತಲೆಯ ಮೇಲೆ ಅಷ್ಟು ದೊಡ್ಡ ಫ್ರಿಡ್ಜ್ ಇಟ್ಟುಕೊಂಡು ಸೈಕಲ್ ಓಡಿಸುತ್ತಿರುವ ಉದ್ದೇಶವಾದರೂ ಏನು? ಎಲ್ಲಿಗೆ ಹೊರಟಿದ್ದಾನೆ? ಯಾರು ಅವನ ತಲೆ ಮೇಲೆ ಇದನ್ನು ಹೊರೆಸಿದ್ದಾರೆ, ಇಳಿಸುವವರು ಯಾರು? ಅಂತೆಲ್ಲ ನೆಟ್ಟಿಗರು ಪ್ರಶ್ನೆ ಕೇಳಿದ್ದಾರೆ. ಲಕ್ಷಾಂತರ ಜನರು ಈ ವಿಡಿಯೋ ಮೆಚ್ಚಿದ್ದಾರೆ. ನೀವೇನಂತೀರಿ?
New York : ಅಂಥದ್ದೇನಿದೆ ಈ ವಿಡಿಯೋದಲ್ಲಿ ಎಂದು ನೀವು ಮತ್ತೆ ಕೇಳುವ ಪ್ರಶ್ನೆಯೇ ಇಲ್ಲ. ಏಕೆಂದರೆ ಮೇಲಿನ ಫೋಟೋ ನೋಡಿದ್ದೀರಿ. ಅದರಲ್ಲಿ ವ್ಯಕ್ತಿಯೊಬ್ಬ ಮಧ್ಯರಾತ್ರಿಯಲ್ಲಿ ತಲೆಯ ಮೇಲೆ ಫ್ರಿಡ್ಜ್ (Fridge) ಇಟ್ಟುಕೊಂಡು ಸೈಕಲ್ ಓಡಿಸುತ್ತಿದ್ದಾನೆ. ಈ ದೃಶ್ಯ ನ್ಯೂಯಾರ್ಕನದ್ದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ಕುತ್ತಿಗೆಯ ಮನುಷ್ಯ ಎಂದು ಶ್ಲಾಘಿಸುತ್ತಿದ್ದಾರೆ. Instagramನ @barstoolsports ಎಂಬ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸೆ. 3ರಿಂದ ಈತನಕ ಸುಮಾರು 3 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ಸೀರೆಯುಟ್ಟು ಕೈಟ್ ಬೋರ್ಡಿಂಗ್ ಮಾಡಿದ ಮಹಿಳೆ; ನೆಟ್ಟಿಗರೇನೆಂದರು?
ಅವೆಂಜರ್ಸ್‌ಗಾಗಿ ಈ ವ್ಯಕ್ತಿಯನ್ನು ಸೈನ್ ಅಪ್ ಮಾಡಿ ಎಂದಿದ್ದಾರೆ ಒಬ್ಬರು. ಅವನ ತಲೆಯ ಮೇಲೆ ಫ್ರಿಡ್ಜ್ ಇಟ್ಟವರು ಯಾರು ಎಂದು ಯೋಚಿಸುತ್ತಿದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಇಂಥ ಕೆಲಸವನ್ನು ನಾನು ಮಾಡಬಲ್ಲೆ ಎನ್ನುವುದು ಅವನ ಮನಸ್ಸಿಗೆ ಹೇಗೆ ಬಂದಿತು? ಪ್ರೇರಣೆ ಏನು? ಯಾಕಾಗಿ ಹೀಗೆ ಮಾಡುತ್ತಿದ್ದಾನೆ ಅದೂ ನ್ಯೂಯಾರ್ಕ್ನಲ್ಲಿ ಎಂದಿದ್ದಾರೆ ಮತ್ತೊಬ್ಬರು.
‘ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಕುತ್ತಿಗೆಯುಳ್ಳ ವ್ಯಕ್ತಿ’
View this post on Instagram
ಇವನು ಎಲ್ಲಿಗೆ ಹೊರಟಿದ್ದಾನೆ, ಈ ಫ್ರಿಡ್ಜ್ ಅನ್ನು ಎಲ್ಲಿ ಹೇಗೆ ಇಳಿಸುತ್ತಾನೆ? ಇವನ ತಲೆಯ ಮೇಲೆ ಹೊರಿಸಿದವರು ಯಾರು? ಎಂದಿದ್ದಾರೆ ಒಬ್ಬರು. ಇವನು ರೀಲ್ಸ್ಗಾಗಿ ಮಾಡುತ್ತಿಲ್ಲ ತಾನೆ? ಎಂದು ಕೇಳಿದ್ದಾರೆ ಕೆಲವರು. ಇದು ಆಫ್ರಿಕಾದಲ್ಲಿ ಸಹಜ ಎಂದಿದ್ದಾರೆ ಮತ್ತೊಬ್ಬರು. ಇದು ನ್ಯೂಯಾರ್ಕ್ನಲ್ಲಿ ಮಾತ್ರ ಎಂದಿದ್ದಾ ಮಗದೊಬ್ಬರು. ಏನಾದರೂ ದಾಖಲೆ ಮಾಡಲು ಈ ವ್ಯಕ್ತಿ ಹೊರಟಿದ್ದಾನೆಯೇ? ಎಂದಿದ್ದಾರೆ ಇನ್ನೂ ಒಬ್ಬರು.
ಇದನ್ನೂ ಓದಿ : Viral Video: ಸಾಬೂನು ತಿನ್ನುತ್ತಿರುವ ಯುವತಿ; ಹೊಟ್ಟೆಯಲ್ಲಿ ನೊರೆಗುಳ್ಳೆಗಳೆದ್ದವೋ? ಎಂದ ನೆಟ್ಟಿಗರು
ಅಮೆರಿಕೆಯು ಅಂತೂ ಪ್ರತಿಭಾವಂತನನ್ನು ಪಡೆಯಿತು ಎಂದಿದ್ದಾರೆ ಒಬ್ಬರು. ನನಗೆ ಈ ಮನುಷ್ಯ ಗೊತ್ತು ಎಂದಿದ್ದಾರೆ ಇನ್ನೊಬ್ಬರು. ಇದು ಫೇಕ್ ವಿಡಿಯೋ ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಇವನ ಬೆನ್ನುಮೂಳೆಗೆ ಖಂಡಿತ ಚಿಕಿತ್ಸೆ ಬೇಕು ಎಂದಿದ್ದಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ