AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೀರೆಯುಟ್ಟು ಕೈಟ್ ​ಬೋರ್ಡಿಂಗ್ ಮಾಡಿದ ಮಹಿಳೆ; ನೆಟ್ಟಿಗರೇನೆಂದರು?

Kiteboarding : ಇಲ್ಲೊಬ್ಬ ಮಹಿಳೆ ಸೀರೆಯುಟ್ಟು ಕೈಟ್​ ಬೋರ್ಡಿಂಗ್ ಮಾಡಿದ್ದಾಳೆ. ಭಾರತದಲ್ಲಿ ಕೈಟ್ ಬೋರ್ಡಿಂಗ್ ಚಾಲ್ತಿಯಲ್ಲಿ ತರುವ ಉದ್ದೇಶ ತನ್ನದು ಎಂದಿದ್ದಾಳೆ. ನೆಟ್ಟಿಗರು ಮಾತ್ರ ಈ ವಿಡಿಯೋ ನೋಡಿ ತೋಚಿದಂತೆ ಪ್ರತಿಕ್ರಿಯಿಸಿದ್ದಾರೆ. ತ್ವರಿತವಾಗಿ ಪ್ರತಿಕ್ರಿಯಿಸುವುದನ್ನು ತೀರ್ಮಾನಿಸುವುದನ್ನು ಜನ ಹೇಗೆಲ್ಲ ರೂಢಿಸಿಕೊಂಡಿದ್ದಾರೆ ಗಮನಿಸಿ. ಜೊತೆಗೆ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ.

Viral Video: ಸೀರೆಯುಟ್ಟು ಕೈಟ್ ​ಬೋರ್ಡಿಂಗ್ ಮಾಡಿದ ಮಹಿಳೆ; ನೆಟ್ಟಿಗರೇನೆಂದರು?
ಸಿರೆಯುಟ್ಟು ಕೈಟ್​ ಬೋರ್ಡಿಂಗ್ ಮಾಡುತ್ತಿರುವ ಕಾತ್ಯಾ ಸಾಯ್ನಿ
ಶ್ರೀದೇವಿ ಕಳಸದ
|

Updated on:Oct 09, 2023 | 11:16 AM

Share

Saree : ಚಂಡಮಾರುತ ಬೀಸಿದ ನಂತರ ಗಣಿತದ ಶಿಕ್ಷಕರು (Math Teacher) ಕ್ಲಾಸ್​ ತೆಗೆದುಕೊಳ್ಳುತ್ತಿರುವ ಹಾಗೆ ಈ ದೃಶ್ಯ ಕಾಣ್ತಿದೆ. ಕೆಲಸದ ವಿಷಯವಾಗಿ ಪ್ರಯಾಣಿಸಲು ಇದೇ ರೀತಿ ನಿರೀಕ್ಷೆ ಮಾಡ್ತಾರೆ ನನ್ನ ಬಾಸ್​, ಮಳೆ ಸುರಿಯುತ್ತಿದ್ದರೂ ರಸ್ತೆಗಳು ತುಂಬಿ ಹರಿಯುತ್ತಿದ್ದರೂ ಅವರು ಅದನ್ನು ಲೆಕ್ಕಸದೇ ನನ್ನನ್ನು ಹೀಗೆಯೇ ಓಡಿಸುತ್ತಾರೆ. ತಪ್ಪೇನಿಲ್ಲ ಸೀರೆ ಉಡುವುದು, ಕೆಲವೊಮ್ಮೆ ಸೀರೆಯನ್ನು ಮೇಲೆ ಎಳೆದುಕೊಂಡು ಅಡ್ಜಸ್ಟ್ ಮಾಡಿಕೊಳ್ಳಬೇಕಾಗುತ್ತದೆ. ಸೀರೆ ಮತ್ತು ನಿಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ತಾಳುವುದು ಸರಿ. ಆದರೂ ಎಲ್ಲಕಡೆಯೂ ಸೀರೆ ಉಡುವುದು ಸೂಕ್ತವೆನ್ನಿಸಲಾರದು. ಎಲ್ಲೆಲ್ಲಿ ಏನೇನು ಧರಿಸಬೇಕೋ ಧರಿಸಬೇಕು. ಒಟ್ಟಿನಲ್ಲಿ ಕಂಫರ್ಟ್​ ಮುಖ್ಯ, ಗಮನ ಸೆಳೆಯುವುದಲ್ಲ… ಮಹಿಳೆಯೊಬ್ಬಳು ಸೀರೆಯುಟ್ಟು  ಕೈಟ್ ಬೋರ್ಡಿಂಗ್ ಮಾಡಿದ್ಧಾಳೆ. ನೆಟ್ಟಿಗರು ಈ ವಿಡಿಯೋ ನೋಡಿ ಹೀಗೆ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಚಲೇಯಾ ಇಂಗ್ಲಿಷ್​ ವರ್ಷನ್​; ಗಾಯಕಿಗೆ ಧನ್ಯವಾದ ಹೇಳಿದ ಶಾರುಖ್​

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದು ನಿಜಕ್ಕೂ ಚೇತೋಹಾರಿಯಾಗಿದೆ ಎಂದು ಕೆಲವರು ಹೇಳಿದ್ದಾರೆ. ನಿಜ ಹೇಳಬೇಕೆಂದರೆ ಇದಕ್ಕಾಗಿ ಸೀರೆ ಉಡುವ ಅವಶ್ಯಕತೆಯೇ ಇಲ್ಲ ಎಂದಿದ್ದಾರೆ ಒಬ್ಬರು. ಮಹಿಳೆಯರು ಅತ್ಯಂತ ಶಕ್ತಿಶಾಲಿಗಳು ಎಂದು ಶ್ಲಾಘಿಸಿದ್ದಾರೆ ಒಂದಿಷ್ಟು ಜನ. ಆಕೆ ಸೀರೆ ಉಟ್ಟಿದ್ದಕ್ಕೆ ಅವಳನ್ನು ಹೊಗಳಬೇಕಾದ ಅವಶ್ಯಕತೆ ಇಲ್ಲ, ಅದಕ್ಕೆ ತಕ್ಕಂತ ಉಡುಪು ತೊಟ್ಟಿದ್ದರೆ ಜನರು ಇಷ್ಟು ಗಮನ ಕೊಡುತ್ತಿದ್ದರೆ? ಎಂದು ಕೇಳಿದ್ಧಾರೆ ಇನ್ನೂ ಒಂದಿಷ್ಟು ಜನ.

ಕಾತ್ಯಾ ಸಾಯ್ನಿ ಸೀರೆಯುಟ್ಟು ಡೈವ್ ಮಾಡಿದಾಗ

View this post on Instagram

A post shared by Katya Saini (@katyasaini)

ಜು. 10ರಂದು ಇನ್​ಸ್ಟಾಗ್ರಾಂನಲ್ಲಿ ಮಾಡಿದ ಈ ಪೋಸ್ಟ್​ ಅನ್ನು ಈತನಕ 1.9 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಮಿಶ್ರಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ 104 ವರ್ಷದ ವೃದ್ಧೆಯೊಬ್ಬರು ಸ್ಕೈ ಡೈವ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಹಾಗೆಯೇ ಸುಮಾರು 70 ವರ್ಷದ ಮಹಿಳೆಯೊಬ್ಬರು ಸೀರೆಯುಟ್ಟು ಸ್ಕೈಡೈವ್ ಮಾಡಿದ್ದನ್ನೂ ಕೂಡ.

ಇದನ್ನೂ ಓದಿ : Viral Video: ಸಾಬೂನು ತಿನ್ನುತ್ತಿರುವ ಯುವತಿ; ಹೊಟ್ಟೆಯಲ್ಲಿ ನೊರೆಗುಳ್ಳೆಗಳೆದ್ದವೋ? ಎಂದ ನೆಟ್ಟಿಗರು

ಇದೇನು ದೊಡ್ಡ ವಿಷಯವೇ? ಮನೆಗೆಲಸ ಮಾಡುವ ಕೆಲಸದಾಕೆಯೂ ಹೀಗೆ ಹಾರಬಲ್ಲಳು ಎಂದಿದ್ದಾರೆ ಒಬ್ಬರು. ಮಹಿಳೆಯರ ಬಗ್ಗೆ ಗೌರವವಿರಲಿ. ಭಾರತೀಯ ಮಹಿಳೆಯರಿಗೆ ಕೌಟುಂಬಿಕ ಜವಾಬ್ದಾರಿಗಳ ಹೊರತಾಗಿ ತನ್ನಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ ಇನ್ನೊಬ್ಬರು. ಅಂದಹಾಗೆ ಈ ಮೇಲಿನ ವಿಡಿಯೋದಲ್ಲಿರುವ ಮಹಿಳೆ ಕೈಟ್​, ಡೈವ್​ ಇನ್​ಸ್ಟ್ರಕ್ಟರ್. ವೈಲ್ಡ್​ಲೈಫ್​ ಬಯೋಲಾಜಿಸ್ಟ್​.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:13 am, Mon, 9 October 23