Viral Video: ಚಲೇಯಾ ಇಂಗ್ಲಿಷ್​ ವರ್ಷನ್​; ಗಾಯಕಿಗೆ ಧನ್ಯವಾದ ಹೇಳಿದ ಶಾರುಖ್​

Shahrukh Khan: ನಿಜಕ್ಕೂ ಈ ಹಾಡು ಹಿಂದಿ ಹಾಡಿಗಿಂತ ಅದ್ಭುತವಾಗಿ ಮೂಡಿಬಂದಿದೆ. ಹೀಗೊಂದು ಆಲೋಚನೆಯೇ ಬಹಳ ಸೊಗಸಾಗಿದೆ. ಈ ಹಾಡಿನ ಖದರ್ ಬೇರೆಯೇ ಇದೆ... ಎಂದು ನೆಟ್ಟಿಗರು ವಿಪಾಶಾ ಮಲ್ಹೋತ್ರಾ ಹಾಡಿದ ಚಲೇಯಾ ಇಂಗ್ಲಿಷ್​ ವರ್ಷನ್​ ಅನ್ನು ಹೊಗಳುತ್ತಿದ್ದಾರೆ. ಶಾರುಖ್​ ಈ ವಿಡಿಯೋ ಹಂಚಿಕೊಂಡು ಗಾಯಕಿಗೆ ಧನ್ಯವಾದ ಹೇಳಿದ್ದು ನೆಟ್ಟಿಗರ ಗಮನವನ್ನು ಸೆಳೆದಿದೆ.

Viral Video: ಚಲೇಯಾ ಇಂಗ್ಲಿಷ್​ ವರ್ಷನ್​; ಗಾಯಕಿಗೆ ಧನ್ಯವಾದ ಹೇಳಿದ ಶಾರುಖ್​
ವಿಪಾಶಾ ಮಲ್ಹೋತ್ರಾ ಜವಾನ್ ಸಿನೆಮಾದ ಚಲೇಯಾ ಹಾಡನ್ನು ಇಂಗ್ಲಿಷ್​ನಲ್ಲಿ ಹಾಡುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on: Oct 07, 2023 | 1:02 PM

Chaleya: ಶಾರುಖ್ ಖಾನ್​ ಮತ್ತು ನಯನತಾರಾ ಅಭಿನಯದ ಜವಾನ್ (Jawan)​ ಸಿನೆಮಾದ ಚಲೇಯಾ ಹಾಡು ಇನ್ನೂ ಟ್ರೆಂಡಿಂಗ್​ನಲ್ಲಿದೆ. ಅನೇಕರು ಡ್ಯಾನ್ಸ್ ಮಾಡಿದರು, ಹಾಡಿದರು, ಲಿಪ್​ಸಿಂಕ್ ಮಾಡಿದರು, ಅಭಿನಯಿಸಿದರು. ಆದರೆ ಇಲ್ಲೊಬ್ಬ ಗಾಯಕಿ ಚಲೆಯಾ ಹಾಡಿನ ಇಂಗ್ಲಿಷ್​ ವರ್ಷನ್​ ಪ್ರಸ್ತುತಪಡಿಸಿದ್ದಾಳೆ. X ನಲ್ಲಿ ಈ ವಿಡಿಯೋ ಹಂಚಿಕೊಳ್ಳುವುದರ ಮೂಲಕ ಶಾರುಖ್ ಖಾನ್ ಈಕೆಗೆ ಧನ್ಯವಾದ ಅರ್ಪಿಸಿದ್ದಾರೆ. ವಿಪಾಶಾ ಮಲ್ಹೋತ್ರಾ ಜವಾನ್​ನ ‘ಚಲೇಯಾ’ ಹಾಡನ್ನು ಇಂಗ್ಲಿಷ್​ನಲ್ಲಿ ಹಾಡಿದ್ದಾರೆ.

ಇದನ್ನೂ ಓದಿ : Viral Video: ಸಾಬೂನು ತಿನ್ನುತ್ತಿರುವ ಯುವತಿ; ಹೊಟ್ಟೆಯಲ್ಲಿ ನೊರೆಗುಳ್ಳೆಗಳೆದ್ದವೋ? ಎಂದ ನೆಟ್ಟಿಗರು       

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

X ಖಾತೆದಾರ ಪ್ರಬಿನ್ ಕಟ್ವಾಲ್ ಈ ವಿಡಿಯೋ ಅ ಪೋಸ್ಟ್​ ಮಾಡಿದ್ದಾರೆ. ಶಾರುಖ್ ​ಖಾನ್​ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿ ರೀಪೋಸ್ಟ್ ಮಾಡಿದ್ದಾರೆ. ಅವರು, ಇದು ಅದ್ಭುತವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಕ್ಟೋಬರ್ 4 ರಂದು ಇದನ್ನು ಪೋಸ್ಟ್ ಮಾಡಲಾಗಿದ್ದು ಈತನಕ 1.1 ಮಿಲಿಯನ್​ ಜನರು ನೋಡಿದ್ದಾರೆ. ಇದು ನಿಜಕ್ಕೂ ಅದ್ಭುತವಾಗಿದೆ ಎಂದು ಅನೇಕರು ಹೇಳಿದ್ಧಾರೆ.

ವಿಪಾಶಾ ಮಲ್ಹೋತ್ರಾ ಹಾಡಿದ ಚಲೇಯಾ ಇಂಗ್ಲಿಷ್​ ವರ್ಷನ್​

ಚಲೇಯಾ ಹಾಡನ್ನು ಕುಮಾರ್ ಬರೆದಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.  ಅರಿಜಿತ್ ಸಿಂಗ್ ಮತ್ತು ಶಿಲ್ಪಾ ರಾವ್ ಹಾಡಿದ್ದಾರೆ. ಹೀಗೆ ಈ ಸಾಹಿತ್ಯವನ್ನು ಇಂಗ್ಲಿಷ್​ಗೆ ಅನುವಾದಿಸಿ ಹಾಡಬಹುದು ಎನ್ನುವ ಆಲೋಚನೆ ಈತನಕ ಹೊಳೆದೇ ಇರಲಿಲ್ಲ ಎಂದಿದ್ದಾರೆ ಒಬ್ಬರು. ನೀವು ಹಾಡಿದ್ದರಿಂದ ಇದಕ್ಕೆ ಬೇರೆಯದೇ ಹೊಳಪು ಬಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral: ನಾಥೂರಾಮ ಗೋಡ್ಸೆ;’ಅವನು ಕೊಲೆಗಡುಕನೇ ಆಗಿರಲಿ, ಹಿಂದೂವಾಗಿದ್ದಲ್ಲಿ ಎಲ್ಲಾ ಕ್ಷಮ್ಯ, ಹೊಸ ಭಾರತಕ್ಕೆ ಸ್ವಾಗತ’

ನನ್ನ ಬೆಳಗನ್ನು ಸುಂದರಗೊಳಿಸಿದ್ದಕ್ಕೆ ಧನ್ಯವಾದ ಎಂದು ಒಬ್ಬರು ಹೇಳಿದ್ದಾರೆ. ನಾನಿದನ್ನು ಬಹಳ ಸಲ ಕೇಳಿದೆ, ಕೇಳುತ್ತಲೇ ಇದ್ಧೇನೆ ಎಂದಿದ್ದಾರೆ ಇನ್ನೊಬ್ಬರು. ಇಂತ ಸೃಜನಶೀಲ ಪ್ರಯತ್ನಗಳು ನಡೆಯುತ್ತಿರಬೇಕು ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ