Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಜವಾನ್ ಜಮಾನಾ; ಬ್ರೂಕ್ಲಿನ್​ ಸೇತುವೆಯ ಮೇಲೆ ಚಲೇಯಾ ಡ್ಯಾನ್ಸ್​; ಕೃತಜ್ಞತೆ ಸಲ್ಲಿಸಿದ ಶಾರುಖ್​

Shah Rukh Khan: ಎಲ್ಲೆಲ್ಲೂ ಜವಾನನ ಹವಾ. ಈ ಸಿನೆಮಾದ ಚಲೇಯಾ ಹಾಡು ಟ್ರೆಂಡಿಂಗ್​ನಲ್ಲಿದ್ದು ಜಗತ್ತಿನಾದ್ಯಂತ ಅನೇಕರು ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ವಿಡಿಯೋವನ್ನು ಸ್ವತಃ ಶಾರುಖ್ ಖಾನ್​ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಡ್ಯಾನ್ಸ್​ ಮಾಡಿದ ಹುಡುಗಿಯರಿಗೆ ಪ್ರೀತಿಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ. ನೆಟ್ಟಿಗರು ಇವರಿಬ್ಬರ ನೃತ್ಯಪ್ರೀತಿಯನ್ನು ಶ್ಲಾಘಿಸಿದ್ದಾರೆ.

Viral Video : ಜವಾನ್ ಜಮಾನಾ; ಬ್ರೂಕ್ಲಿನ್​ ಸೇತುವೆಯ ಮೇಲೆ ಚಲೇಯಾ ಡ್ಯಾನ್ಸ್​; ಕೃತಜ್ಞತೆ ಸಲ್ಲಿಸಿದ ಶಾರುಖ್​
ನ್ಯೂಯಾರ್ಕ್​ನ ಬ್ರೂಕ್ಲಿನ್​ ಸೇತುವೆಯ ಮೇಲೆ ಚಲೇಯಾ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ಹುಡುಗಿಯರು
Follow us
ಶ್ರೀದೇವಿ ಕಳಸದ
|

Updated on:Sep 21, 2023 | 1:51 PM

Jawan : ಜವಾನ್ ಸಿನೆಮಾ ಥಿಯೇಟರ್​ನಲ್ಲಿ ಪ್ರದರ್ಶನಗೊಳ್ಳುತ್ತಿರುವಾಗ ಶಾರುಖ್​ಖಾನ್ (Shahrukh Khan)​ ಅಭಿಮಾನಿಯೊಬ್ಬ ಸ್ಕ್ರೀನ್​ನ ಮುಂದೆಯೇ ಚಲೇಯಾ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ನೋಡಿದಿರಿ. ದಿವ್ಯಾಂಗ ವ್ಯಕ್ತಿಯೊಬ್ಬ ವೆಂಟಿಲೇಷನ್​​ ಮೇಲೆಯೇ ಥಿಯೇಟರಿಗೆ ಬಂದು ಸಿನೆಮಾ ನೋಡಿದ ವಿಡಿಯೋವನ್ನೂ ನೋಡಿದಿರಿ. ನಕಲಿ ‘ಆಝಾದ್​’ನೊಬ್ಬ ತಲೆಗೆ ಮುಖಕ್ಕೆ ಬ್ಯಾಂಡೇಜ್​ ಸುತ್ತಿಕೊಂಡು ರೈಲು ನಿಲ್ಧಾಣ ಮತ್ತು ರೈಲಿನಲ್ಲಿ ಓಡಾಡಿದ ವಿಡಿಯೋ ಕೂಡ ನೋಡಿದಿರಿ. ಇದೀಗ ನ್ಯೂಯಾರ್ಕ್​ನ ಬ್ರೂಕ್ಲಿನ್​ ಸೇತುವೆಯ ಮೇಲೆ ಹುಡುಗಿಯರಿಬ್ಬರು ಚಲೇಯಾ ಹಾಡಿಗೆ ಡ್ಯಾನ್ಸ್ ಮಾಡಿದ್ಧಾರೆ. ಈ ವಿಡಿಯೋವನ್ನು ಶಾರುಖ್​ಖಾನ್  X ನಲ್ಲಿ ಪೋಸ್ಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : Viral: ಮುಂಬೈ; ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳು, ಏನಿದು ಸೋಜಿಗ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಷ್ಟೊಂದು ರೀಲ್​​​ಗಳು ಚಲೇಯಾ ಹಾಡಿನ ಮೇಲೆ ಹೊಮ್ಮಿದವರಾದರೂ ಈ ವಿಡಿಯೋ ಮಾತ್ರ ವಿಶೇಷವಾಗಿ ನೆಟ್ಟಿಗರ ಗಮನ ಸೆಳೆದಿದೆ. ಏಕೆಂದರೆ ಶಾರುಖ್​ ಖಾನ್​ ಸ್ವತಃ ಈ ವಿಡಿಯೋವನ್ನು X ನಲ್ಲಿ ಹಂಚಿಕೊಂಡಿದ್ದಾರೆ. ‘ಇದು ಅದ್ಭುತವಾಗಿದೆ. ಹುಡುಗಿಯರೇ, ಚಲೇಯಾ ಹಾಡನ್ನು ಬ್ರೂಕ್ಲಿನ್ ಸೇತುವೆಯ ಮೇಲೆ ಪ್ರಸ್ತುತಪಡಿಸಿದ್ದಕ್ಕೆ ಧನ್ಯವಾದ. ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ನೋಟ್​ ಕೂಡ ಬರೆದಿದ್ದಾರೆ.

ಬ್ರೂಕ್ಲಿನ್​ ಸೇತುವೆಯ ಮೇಲೆ ‘ಚಲೇಯಾ’

ಜವಾನ್ ಸಿನೆಮಾ ಅಟ್ಲಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಆ್ಯಕ್ಷನ್​ ಥ್ರಿಲ್ಲರ್ ಸಿನೆಮಾ ಆಗಿರುವ ಇದು ದೇಶದಲ್ಲಿ ಪ್ರಚಲಿತವಿರುವ ಹಲವಾರು ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಪರಿಹರಿಸುವ ಕಥಾಹಂದರವನ್ನು  ಹೊಂದಿದೆ. ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸುನಿಲ್ ಗ್ರೋವರ್ ಮತ್ತು ಸಾನ್ಯಾ ಮಲ್ಹೋತ್ರಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : Viral: ಮುಂಬೈ; ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳು, ಏನಿದು ಸೋಜಿಗ?

ಸೆ. 20ರಂದು ಹಂಚಿಕೊಂಡ ಈ ವಿಡಿಯೋ ಇನ್ನೇನು 1 ಲಕ್ಷ ಜನರನ್ನು ತಲುಪಲಿದೆ. 3,500ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಸುಮಾರು 600 ಜನರು ರೀಪೋಸ್ಟ್ ಮಾಡಿದ್ದಾರೆ. ಈ ಸಿನೆಮಾದ ನಂತರ ಯಾವ ಸಿನೆಮಾ ತೆರೆಕಾಣಲಿದೆ, ಬೇಗ ತಿಳಿಸಿ ಸರ್ ಎಂದು ಶಾರುಖ್​ ಖಾನ್​ಗೆ ಕೇಳಿದ್ಧಾರೆ ಅನೇಕ ನೆಟ್ಟಿಗರು.

ಈ ವಿಡಿಯೋ ನೋಡಿದ ನಿಮ್ಮ ಅಭಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:50 pm, Thu, 21 September 23

ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್