AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮುಂಬೈ; ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳು, ಏನಿದು ಸೋಜಿಗ?

AI Art : ಮುಂಬೈನಲ್ಲಿ ವಸತಿ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಐ ಕಲಾವಿದರೊಬ್ಬರು ಹೀಗೆ ತಮ್ಮ ಕಲ್ಪನೆಯನ್ನು ಹರಿಬಿಟ್ಟಿದ್ದಾರೆ. ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳನ್ನು ನೋಡಿದ ನೆಟ್ಟಿಗರು, ಈ ಕಟ್ಟಡಗಳು ಮುಂಬೈನುದ್ದಕ್ಕೂ ಹೀಗೆ ಸಂಚರಿಸುತ್ತಿರುತ್ತವೆಯೇ? ಎಂದು ಕೇಳಿದ್ದಾರೆ. ಅಂತೂ ಈ ಕಲ್ಪನೆ ಅದ್ಭುತವಾಗಿದೆ ಎಂದು ಅನೇಕರು ಶ್ಲಾಘಿಸುತ್ತಿದ್ಧಾರೆ.

Viral: ಮುಂಬೈ; ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳು, ಏನಿದು ಸೋಜಿಗ?
ಎಐ ಕಲಾವಿದ ಪ್ರತೀಕ ಅರೋರಾ ಕಲ್ಪನೆಯಲ್ಲಿ ಮುಂಬೈನ ಕಟ್ಟಡಗಳು
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Sep 21, 2023 | 12:58 PM

Share

Artificial Intelligence: ಕೃತಕ ಬುದ್ಧಿಮತ್ತೆಯು (AI) ಕಲಾವಿದರ ಕಲ್ಪನೆಗೆ ಹೊಸ ಗರಿಗಳನ್ನು ಮೂಡಿಸುತ್ತಲೇ ಇದೆ. ಟ್ರೆಂಡಿಂಗ್ ವಿಷಯಗಳ ಮೇಲೆ ತಮ್ಮ ಕಲ್ಪನೆಯನ್ನು ಹರಿಬಿಡುವ ರೀತಿ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತಿರುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಬಾರ್ಬಿ ಎಐ ಸೀರೀಸ್​ ಇದಕ್ಕೆ ಉತ್ತಮ ಉದಾಹರಣೆ. ಇದೀಗ ವೈರಲ್ ಆಗಿರುವ ಈ ಫೋಟೋಗಳನ್ನು ನೋಡಿ. ಮುಂಬೈನ ಕಟ್ಟಡಗಳು ಆಕಾಶದಲ್ಲಿ ಹಾರಾಡುತ್ತಿವೆ. Mumbai Surreal Estate ಎಂಬ ಶೀರ್ಷಿಕೆಯಲ್ಲಿ ಕಲಾವಿದ ಪ್ರತೀಕ ಅರೋರಾ ಇನ್​ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈನಲ್ಲಿ ಜಾಗ ಸಾಕಾಗದೆ ಜನರು ಇನ್ನು ಆಕಾಶದಲ್ಲಿಯೂ ಮನೆ ಕಟ್ಟಕೊಳ್ಳಲಾರಂಭಿಸಿದರೆ? ಎಂದು ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ತನ್ನ ಮದುವೆಯಾಯಿತು ಎಂದು ಈತ ಯಾರಿಗೆಲ್ಲ ಹೇಳುತ್ತಿದ್ದಾನೆ, ಈತನ ಸ್ನೇಹಿತರು ಯಾರೆಲ್ಲ ನೋಡಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಒಂದು ವಾರದ ಹಿಂದೆ ಪೋಸ್ಟ್ ಮಾಡಿದ ಈ ಹೈಪರ್ ರಿಯಲಿಸ್ಟಿಕ್​ ಚಿತ್ರಗಳನ್ನು ಅನೇಕರು ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ಧಾರೆ. ನಿಮ್ಮ ಮೆದುಳನ್ನು ಪ್ರೀತಿಸುತ್ತಿದ್ದೇನೆ ಎಂದಿದ್ದಾರೆ ಒಬ್ಬರು. ಕ್ಲೌಡ್​ 9 ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಕಲ್ಪನೆಯು ಮುಂದೊಮ್ಮೆ ನಿಜವಾದರೆ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಪ್ರತೀಕ ಅರೋರಾ ಕೈಚಳಕ

ಭಾರತದಲ್ಲಿ ಮುಂಬೈ ಪ್ರಮುಖ ಆರ್ಥಿಕ ಕೇಂದ್ರವಾಗಿರುವುದರಿಂದ ವ್ಯಾಪಾರೋದ್ಯಮಕ್ಕಾಗಿ ಜನರು ಇಲ್ಲಿ ಬಂದು ನೆಲೆಸುತ್ತಾರೆ. ಸಹಜವಾಗಿ ವಸತಿಗಾಗಿ ಬೇಡಿಕೆ ಹೆಚ್ಚುತ್ತದೆ. ಅದು ಖರೀದಿಗೆ ಇರಬಹುದು ಬಾಡಿಗೆಗೂ ಇರಬಹುದು. ಚಿಕ್ಕಪುಟ್ಟ ಅಪಾರ್ಟ್​ಮೆಂಟ್​​​ಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ವಾಸವಿರಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಲಾವಿದರು ಹೀಗೆ ಯೋಚಿಸಿರುವ ಸಾಧ್ಯತೆ ಇದೆ.

ಇದನ್ನೂ ಓದಿ : Viral Video: ಪಾದ ಮುಟ್ಟಿದರೆ ಎದ್ದುನಿಂತು ಆಶೀರ್ವದಿಸುತ್ತಾನೆ ಈ ಕೊಲ್ಕತ್ತೆಯ ಗಣಪ

ಬ್ರೋಕರೇಜ್ ಫ್ರೀ? ಎಂದು ಕೇಳಿದ್ಧಾರೆ ಒಬ್ಬರು. ಓಹೋ ಈ ಸಲ ಪರಿಸ್ಥಿತಿ ನಿಮ್ಮ ಕೈಮೀರಿ ಹೋಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಕಟ್ಟಡಗಳು ನಗರದ ತುಂಬಾ ತೇಲಿಕೊಂಡು ಚಲಿಸುತ್ತವೆಯೇ? ಎಂದು ಕೇಳಿದ್ದಾರೆ ಇನ್ನೊಬ್ಬರು. ಕೆಲದಿನಗಳ ಹಿಂದೆ ಯುವಕನೊಬ್ಬ ರಿಯಲ್​ ಎಸ್ಟೇಟಿಗನಾಗಿ ಮುಂಬೈನ ಅತ್ಯಂತ ಇಕ್ಕಟ್ಟಾದ ಸಿಂಗಲ್​ ಬೆಡ್​ರೂಂ ಅಪಾರ್ಟ್​ಮೆಂಟ್ ರೀಲ್ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:57 pm, Thu, 21 September 23

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್