Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಾದ ಮುಟ್ಟಿದರೆ ಎದ್ದುನಿಂತು ಆಶೀರ್ವದಿಸುತ್ತಾನೆ ಈ ಕೊಲ್ಕತ್ತೆಯ ಗಣಪ

Ganesh Festival : 27 ವರ್ಷಗಳ ಹಿಂದೆ ಹಾಲು ಕುಡಿದ ಗಣಪನನ್ನು ನೋಡಿದ್ದಿರಿ. ಇದೀಗ ಪಾದ ಮುಟ್ಟಿದೊಡನೆ ಎದ್ದು ನಿಂತು ಆಶೀರ್ವದಿಸುವ ಗಣಪನನ್ನು ನೋಡಿ. ಕೊಲ್ಕತ್ತೆಯ ಮಂದಿ ಈ ಚಮತ್ಕಾರಿಕ ಗಣಪನೊಂದಿಗೆ ಭಕ್ತಿಭಾವದಿಂದ ಒಡನಾಡುತ್ತಿದ್ದಾರೆ. ಅವನ ಚಲನೆ ನೋಡುಗರಲ್ಲಿ ಸಂಚಲನ ಉಂಟುಮಾಡುತ್ತಿದೆ. ವೈರಲ್ ಆಗಿರುವ ಈ ವಿಡಿಯೋ ನೋಡಿ.

Viral Video: ಪಾದ ಮುಟ್ಟಿದರೆ ಎದ್ದುನಿಂತು ಆಶೀರ್ವದಿಸುತ್ತಾನೆ ಈ ಕೊಲ್ಕತ್ತೆಯ ಗಣಪ
ಪಾದ ಮುಟ್ಟಿದರೆ ಎದ್ದುನಿಂತು ಆಶೀರ್ವದಿಸುವ ಕೊಲ್ಕತ್ತಾ ಗಣಪ
Follow us
ಶ್ರೀದೇವಿ ಕಳಸದ
|

Updated on:Sep 20, 2023 | 3:53 PM

Kolkata: ಸಾರ್ವಜನಿಕ ಗಣಪತಿಗಳು ಚಮತ್ಕಾರ ಪ್ರದರ್ಶನ ಮಾಡದಿದ್ದರೆ ಹೇಗೆ? ಮನೆಮಂದಿ ಮಕ್ಕಳನ್ನು ಕರೆದುಕೊಂಡು ದೂರ ಪ್ರಯಾಣಿಸಿದ್ದಕ್ಕೆ ಏನಾದರೂ ಬೆರಗು, ಪುಳಕ, ಖುಷಿ ಅನುಭವವನ್ನು ಆ ಗಣಪ ಕೊಡಲೇಬೇಕು. ಇಲ್ಲವಾದಲ್ಲಿ ಕರೆದುಕೊಂಡು ಹೋದವರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವುದು ಗ್ಯಾರಂಟಿ! ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಕೊಲ್ಕತ್ತೆಯ ಉಲ್ಟಾಡಾಂಗನ (Ultadang) ನಾಗರಕಲ್ಲು​ ಮಾರ್ಕೆಟ್ಟಿನಲ್ಲಿ ಪ್ರತಿಷ್ಠಾಪಿಸಿರುವ ಈ ಗಣಪ, ಭಕ್ತಾದಿಗಳು ಪಾದ ಮುಟ್ಟುತ್ತಿದ್ದಂತೆ ಎದ್ದುನಿಂತು ಆಶೀರ್ವದಿಸುತ್ತಾನೆ. ನೆಟ್ಟಿಗರು ಈ ಸೋಜಿಗವನ್ನು ಬೆರಗಿನಿಂದ ನೋಡುತ್ತಿದ್ದಾರೆ.

ಇದನ್ನೂ ಓದಿ : Viral Video: ಜವಾನ್​ ಜಮಾನಾ: ವೆಂಟಿಲೇಟರ್​ನೊಂದಿಗೆ ಶಾರುಖ್​ಗೋಸ್ಕರ ಥಿಯೇಟರಿಗೆ ಬಂದ ದಿವ್ಯಾಂಗ ವ್ಯಕ್ತಿ  

‘ಈ ದೃಶ್ಯವನ್ನು ನೋಡಿ ನನಗೆ ಮೊದಲು ಅಚ್ಚರಿಯಾಯಿತು. ಭಕ್ತಿಯಿಂದ ಬಂದು ನಮಸ್ಕರಿಸಿದೆ. ನಂತರ ಪಾದಗಳನ್ನು ಮುಟ್ಟಿದೆ ಗಣಪ ಎದ್ದು ನಿಂತು ಆಶೀರ್ವದಿಸಿದ’ ಎಂದಿದ್ದಾರೆ ಪ್ರತ್ಯಕ್ಷದರ್ಶಿಯೊಬ್ಬರು. ಈ ಚಮತ್ಕಾರಿಕ ಗಣಪನ ದರ್ಶನಕ್ಕೆ ಜನಸಾಗರ ಹರಿದುಬರುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎದ್ದುನಿಂತು ಆಶೀರ್ವದಿಸುವ ಕೊಲ್ಕತ್ತೆಯ ಗಣಪ

‘ಪ್ರತೀ ವರ್ಷ ಹೊಸ ರೀತಿಯಲ್ಲಿ ಗಣಪನನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುತ್ತೇವೆ. ಒಂದು ರಾತ್ರಿ ಮಲಗಿರುವಾಗ ಈ ರೀತಿ ಗಣಪತಿಯನ್ನು ಚಮತ್ಕಾರಿಕವಾಗಿ ರೂಪಿಸಬೇಕು ಎಂಬ ಆಲೋಚನೆ ಮನಸಿಗೆ ಬಂದಿತು.ಇಲ್ಲಿ ಜಗನ್ನಾಥ ಪುರಿ ಶೈಲಿಯಲ್ಲಿ ಮಂಟಪವನ್ನು ತಯಾರುಮಾಡಲಾಗಿದೆ’ ಎಂದಿದ್ದಾರೆ ಪೂಜಾ ಸಮಿತಿಯ ಸದಸ್ಯರೊಬ್ಬರು.

ಇದನ್ನೂ ಓದಿ : Viral Video: ಮೂರು ಕಣ್ಣಿನ ಮುಗಲು ಬಣ್ಣದ ಮುದ್ದು ಮಾದಯ್ಯ; ಚೈತ್ರಾ ಆಚಾರ್​ ಹಾಡು ವೈರಲ್

27 ವರ್ಷಗಳ ಹಿಂದೆ ಗಣಪ ಹಾಲು ಕುಡಿದ ಸುದ್ದಿ ದೇಶಾದ್ಯಂತ ಬೆರಗು ಮೂಡಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಮೂರ್ತಿಯಂತೆ ಸುಮ್ಮನೇ ಕುಳಿತುಕೊಳ್ಳುವುದನ್ನು ಬಿಟ್ಟು ಈ ಗಣಪ, ಪಾದ ಮುಟ್ಟಿದ ಪ್ರತಿಯೊಬ್ಬರಿಗೂ ಆಶೀರ್ವದಿಸುವ ರೀತಿ ನಿಜಕ್ಕೂ ಆಪ್ತ ಮತ್ತು ಸಂವೇದನಾಶೀಲ ಎನ್ನಿಸಿದೆ. ಈ ಗಣಪತಿಯ ಚಮತ್ಕಾರ ನೋಡಲು ಜನಸಾಗರವು ಹರಿದುಬರುತ್ತಿದೆ.

ಇದನ್ನೂ ಓದಿ : Viral Video: ಬೀದಿಪಾಲಾಗಿದ್ದ 81 ವರ್ಷದ ಬರ್ಮಾದ ಮರ್ಲಿನ್​ ಚೆನ್ನೈನಲ್ಲಿ ಮತ್ತೀಗ ಇಂಗ್ಲಿಷ್​ ಟೀಚರ್

ಕೊರೊನಾ ನಂತರ ಒಂದೊಂದೇ ಹಬ್ಬಗಳು ಮತ್ತೆ ಮೊದಲಿನಂತೆ ರಂಗು ಪಡೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ದುಃಖ ನೋವಿನಿಂದ ಮಡುಗಟ್ಟಿದ ಮುಖಗಳಲ್ಲಿ ಲವಲವಿಕೆ ಕಾಣುತ್ತಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:53 pm, Wed, 20 September 23

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ