Viral Video: ಜವಾನ್​ ಜಮಾನಾ: ವೆಂಟಿಲೇಟರ್​ನೊಂದಿಗೆ ಶಾರುಖ್​ಗೋಸ್ಕರ ಥಿಯೇಟರಿಗೆ ಬಂದ ದಿವ್ಯಾಂಗ ವ್ಯಕ್ತಿ

Shahrukh Khan: ಅನೇಕ ಸಿನಿಪ್ರಿಯರಿಗೆ ನಟನಟಿಯರೆಂದರೆ ಕಣ್ಣಿಗೆ ಕಾಣುವ ದೇವರುಗಳಿದ್ದಂತೆ. ಏಕೆಂದರೆ ಎಂಥ ಸಂದರ್ಭದಲ್ಲಿಯೂ ಸಿನೆಮಾ ಎನ್ನುವುದು ಮನುಷ್ಯನಲ್ಲಿ ತುಸು ಶಕ್ತಿಯನ್ನು ತುಂಬುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅನೀಸ್​ ಫಾರೂಕಿ​ ಎಂಬ ಶಾರುಖ್​ನ ಕಟ್ಟಾ ಅಭಿಮಾನಿ ವೆಂಟಿಲೇಟರ್​ನೊಂದಿಗೆ ಥಿಯೇಟರಿಗೆ ಬಂದು ಜವಾನ ಸಿನೆಮಾ ನೋಡಿದ್ದಾನೆ.

Viral Video: ಜವಾನ್​ ಜಮಾನಾ: ವೆಂಟಿಲೇಟರ್​ನೊಂದಿಗೆ ಶಾರುಖ್​ಗೋಸ್ಕರ ಥಿಯೇಟರಿಗೆ ಬಂದ ದಿವ್ಯಾಂಗ ವ್ಯಕ್ತಿ
ದಿವ್ಯಾಂಗ ಅನೀಸ್ ಫಾರೂಕಿ
Follow us
ಶ್ರೀದೇವಿ ಕಳಸದ
|

Updated on:Sep 20, 2023 | 2:10 PM

Jawan: ದಿವ್ಯಾಂಗವುಳ್ಳ ಅನೀಸ್​ ಫಾರೂಕಿ ಎಂಬ ಶಾರುಖ್​ ಖಾನ್ (Shahrukh Khan)​ ಅಭಿಮಾನಿ ವೆಂಟಿಲೇಟರ್​ನಲ್ಲಿದ್ದರೂ ತನ್ನ ಪ್ರೀತಿಯ ನಟನ ‘ಜವಾನ್’​ ಸಿನೆಮಾ ನೋಡಲು ಥಿಯೇಟರಿಗೆ ಹೋಗಿದ್ದ ವಿಡಿಯೋ ಇದೀಗ ವೈರಲ್ ಆಗಿದೆ. ​ ಗಾಲಿಕುರ್ಚಿಯಲ್ಲಿ ಅವಶ್ಯಕ ಚಿಕಿತ್ಸಾ ಸಾಧನಗಳೊಂದಿಗೆ ಅನೀಸ್​ ಥಿಯೇಟರಿಗೆ ಬರುವ ಕ್ಲಿಪ್ಪಿಂಗ್​ನಿಂದ ಈ ರೀಲ್​ ತೆರೆದುಕೊಳ್ಳುತ್ತದೆ. ಥಿಯೇಟರ್ ಒಳಗೆ ಪ್ರವೇಶ ಸಿಗುವುದು ಅಷ್ಟೇನು ಸುಲಭವಾಗಿರಲಿಲ್ಲ ಎನ್ನುವುದೂ ಈ ವಿಡಿಯೋ ನೋಡಿದಾಗ ಅರ್ಥವಾಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈತನ ಆಸ್ಥೆ, ಅಭಿಮಾನ ಮತ್ತು ಶ್ರದ್ಧೆಯನ್ನು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದು : Viral Video: ಮೂರು ಕಣ್ಣಿನ ಮುಗಲು ಬಣ್ಣದ ಮುದ್ದು ಮಾದಯ್ಯ; ಚೈತ್ರಾ ಆಚಾರ್​ ಹಾಡು ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 15ರಂದು Xನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ 1.3 ಲಕ್ಷ ಜನರು ನೋಡಿದ್ದಾರೆ. ಸುಮಾರು 4,000 ಲೈಕ್ ಮಾಡಿದ್ದಾರೆ. 805 ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕ ನೆಟ್ಟಿಗರು ಅನೀಸ್​ ಬೇಗ ಗುಣಮುಖಹೊಂದಲಿ ಎಂದು ಹಾರೈಸಿದ್ದಾರೆ. ಅಂದಹಾಗೆ ಈ ಚಿತ್ರವು ಈತನಕ ಭಾರತದಲ್ಲಿ ರೂ. 400 ಕೋಟಿ, ಜಾಗತಿಕ ಮಟ್ಟದಲ್ಲಿ ರೂ. 700 ಕೋಟಿಗಳಷ್ಟು ಲಾಭ ಗಳಿಸಿದೆ.

ಅನೀಸ್​ ಥಿಯೇಟರಿಗೆ ಜವಾನನ್ನು ನೋಡಲು ಬಂದ ದೃಶ್ಯ

ಮೇಲಿರುವ ಆ ಭಗವಂತ ಮತ್ತು ತೆರೆಯ ಮೇಲಿರುವ ಮಾಂತ್ರಿಕ ನಟ ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡಲಿ ಎಂದಿದ್ದಾರೆ ಒಬ್ಬರು. ಶಾರುಖ್​ನ ದೊಡ್ಡ ಅಭಿಮಾನಿ ಎಂದರೆ ಇವರೇ ಎಂದಿದ್ದಾರೆ ಮತ್ತೊಬ್ಬರು. ಈತನಕ ಇಂಥ ಕಟ್ಟಾ ಅಭಿಮಾನಿಯನ್ನು ನಾನು ನೋಡಿಯೇ ಇರಲಿಲ್ಲ ಎಂದಿದ್ದಾರೆ ಮಗದೊಬ್ಬರು. ಈ ವ್ಯಕ್ತಿಯಿಂದ ಈ ಸಿನೆಮಾ ಮತ್ತಷ್ಟು ಜನರನ್ನು ಆಕರ್ಷಿಸಬಹುದೆ? ಎಂದು ಕೇಳಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಸಮುದ್ರದೊಳಗೊಬ್ಬ ಡೆಂಟಿಸ್ಟ್​; ಇವರ ಕಾರ್ಯಕ್ಷಮತೆಯನ್ನು ಮೆಚ್ಚಿದ ನೆಟ್ಟಿಗರು

ಶಾರುಖ್​​ ಅಭಿಮಾನಿಯಾದ ನಾನು ಇಂದಿನಿಂದ ನಿಮ್ಮ ಅಭಿಮಾನಿಯೂ ಎಂದಿದ್ದಾರೆ ಒಬ್ಬರು. ನಿಮ್ಮ ಪ್ರಯತ್ನಕ್ಕೆ, ಅಭಿಮಾನಕ್ಕೆ ಸಲಾಂ! ನಿಮ್ಮನ್ನು ನಾನು ಬಹಳ ಗೌರವಿಸುತ್ತೇನೆ ಎಂದಿದ್ಧಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:10 pm, Wed, 20 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ