Viral Video: ಮೂರು ಕಣ್ಣಿನ ಮುಗಲು ಬಣ್ಣದ ಮುದ್ದು ಮಾದಯ್ಯ; ಚೈತ್ರಾ ಆಚಾರ್ ಹಾಡು ವೈರಲ್
Chaithra Achar : ಚೈತ್ರಾ ಆಚಾರ್ ಹಾಡಿರುವ ಈ ಜಾನಪದ ಹಾಡು ಸಾಮಾಜಿಕ ಜಾಲತಾಣಿಗರನ್ನು ಭಾರೀ ಗುಂಗಿಗೆ ಬೀಳಿಸಿದೆ. ಹುಡುಗಿಯರು ಸುಂದರವಾಗಿ ಕಾಣುವುದು ಮತ್ತು ಹಾಡುವುದು ಅಪರಾಧ ಎಂಬ ಕಾನೂನು ಬಂದರೆ ಈ ಹುಡುಗಿಯ ಗತಿ ಏನು? ಎಂದು ಮಾದಪ್ಪನಿಗೆ ಮೊರೆ ಹೋಗುತ್ತಿದ್ದಾರೆ ನೆಟ್ಟಿಗರು. ಚೈತ್ರಾಳ ದನಿಬಾನಿ ಮತ್ತು ತನ್ಮಯತೆಯ ಅನುಭವಕ್ಕಾಗಿ ಈ ವಿಡಿಯೋ ನೋಡಿ.
Kannada Actress : ಎಂಜಿನಿಯರಿಂಗ್ ಓದಿದಿರುವ ನಟಿ, ಗಾಯಕಿ ಚೈತ್ರಾ ಆಚಾರ್ಗೆ (Chaithra Achar) ವೃತ್ತಿಪರ ಗಾಯಕಿಯಾಗಬೇಕೆನ್ನುವ ಆಸೆಯಿತ್ತು. 2019ರಲ್ಲಿ ಸಿನೆಮಾಗಳಿಗೆ ಕೋರಸ್ನಲ್ಲಿ ಹಾಡಲು ಆರಂಭಿಸಿದರು. ಆದರೆ ಆಕಸ್ಮಿಕವಾಗಿ ನಟನೆ ಅವರ ಕೈಹಿಡಿಯಿತು. ‘ಮಾಹಿರ್’ ಸಿನೆಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ ದೃಶ್ಯ, ಗಿಲ್ಕಿ, ತಲೆದಂಡ, ಟೋಬಿ (Tobi)ಯಲ್ಲಿ ನಟಿಸಿದರು. ಇದೀಗ ‘ಸಪ್ತಸಾಗರದಾಚೆ ಸೈಡ್ ಬಿ’ಯಲ್ಲಿ ಇವರನ್ನು ನೋಡಲು ಕನ್ನಡಿಗರು ತುದಿಗಾಲಲ್ಲಿ ಕಾಯುತ್ತಿದ್ಧಾರೆ. ಈ ಎಲ್ಲದರ ಮಧ್ಯೆ ಇವರು ಹಾಡಿರುವ ‘ಮೂರು ಕಣ್ಣಿನ ಮುಗಲು ಬಣ್ಣದ ಮುದ್ದು ಮಾದಯ್ಯ’ ಎಂಬ ಜಾನಪದ ಹಾಡು ನೆಟ್ಟಿಗರನ್ನು ಗುಂಗಿಗೆ ಕೆಡವಿದೆ. ಜು. 29ರಂದು ತಮ್ಮ ಇನ್ಸ್ಟಾಗ್ರಾಂ ಅಕೌಂಟಿನಲ್ಲಿ ಚೈತ್ರಾ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ಬೀದಿಪಾಲಾಗಿದ್ದ 81 ವರ್ಷದ ಬರ್ಮಾದ ಮರ್ಲಿನ್ ಚೆನ್ನೈನಲ್ಲಿ ಮತ್ತೀಗ ಇಂಗ್ಲಿಷ್ ಟೀಚರ್
ಬೆಂಗಳೂರಿನವರಾದ ಚೈತ್ರಾ ಚಿಕ್ಕಂದಿನಿಂದಲೇ ತಾಯಿಯ ಸಂಗೀತ ಕೇಳುತ್ತಲೇ ಬೆಳೆದವರು. ನಂತರ ಕರ್ನಾಟಕ ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡರು. ಗರುಡ ಗಮನ ವೃಷಭ ವಾಹನದ ‘ಸೋಜುಗಾದ ಸೂಜು ಮಲ್ಲಿಗೆ’ ಹಾಡನ್ನು ಹಾಡಿ ಗಾಯಕಿಯಾಗಿ ಗಮನ ಸೆಳೆದ ಚೈತ್ರಾ ಬೆಂಕಿ, ಸಾರ್ವಜನಿಕರಿಗೆ ಸುವರ್ಣವಕಾಶ, ಮಾಯಾಬಜಾರ್ ಸಿನೆಮಾದಲ್ಲಿಯೂ ಹಾಡಿದ್ದಾರೆ.
ಚೈತ್ರಾ ಆಚಾರ್ ಹಾಡಿದ ಮಾದಯ್ಯನ ಹಾಡು ಕೇಳಿ
View this post on Instagram
ನಿಮ್ಮ ತನ್ಮಯತೆ ಮತ್ತು ಈ ಮಾದಪ್ಪನ ಹಾಡು ನನಗೆ ಗುಂಗು ಹಿಡಿಸಿವೆ ಎಂದಿದ್ಧಾರೆ ಒಬ್ಬರು. ಜಾನಪದ ಸೊಗಡು ನಿಮ್ಮ ಕಂಠದಲ್ಲಿ ಸಹಜವಾಗಿಯೇ ಇದೆ, ನೀವು ಮತ್ತಷ್ಟು ಇಂಥ ಹಾಡುಗಳನ್ನು ಹಾಡಿ ಮೇಡಮ್ ಎಂದಿದ್ದಾರೆ ಇನ್ನೊಬ್ಬರು. ಮಲೈಮಾದಪ್ಪ ಚೈತ್ರಾ ಮೇಡಮ್ಗೆ ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ ಮತ್ತೊಬ್ಬರು. ಹುಡುಗಿಯರು ಸುಂದರವಾಗಿ ಕಾಣುವುದು ಅಪರಾಧ ಎಂಬ ಕಾನೂನು ಬಂದರೆ ಈ ಸುಂದರಿಗೆ ಜೀವಾವಧಿ ಶಿಕ್ಷೆ ಕಾಯಂ! ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಮಂಕೀ ಮ್ಯಾನ್ ಎಂದರು ಕಲ್ಲನ್ನೂ ಎಸೆದರು ನಾನು ಧೃತಿಗೆಡಲಿಲ್ಲ
ನಿಮ್ಮ ನಟನೆ ಮತ್ತು ಹಾಡುಗಳ ಅಭಿಮಾನಿ ನಾನು ಎಂದು ಅನೇಕರು ಹೇಳಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಹಾಡನ್ನು ಹಾಡಿ ಎಂದಿದ್ದಾರೆ ಕೆಲವರು. ಉದಯೋನ್ಮುಖ ನಟಿ ಗಾಯಕಿ ಚೈತ್ರಾಗೆ ಒಳ್ಳೆಯ ಅವಕಾಶಗಳು ಸಿಗಲಿ, ಅವರ ಪ್ರತಿಭೆ ಜಗದಗಲ ಹರಡಲಿ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:23 pm, Wed, 20 September 23