Viral Video: ಪೆನ್​ಪ್ರಿಯ ಬೆಕ್ಕು; ಕೊಟ್ಟಂತೆ ಮಾಡುವುದು ಆದರೆ ಕೊಡುವುದಿಲ್ಲ; ಬಿದ್ದುಬಿದ್ದು ನಗುತ್ತಿರುವ ನೆಟ್ಟಿಗರು

Pen : ಬೆಕ್ಕು ಆಟವಾಡಿಸಿದಂತೆ ಆಡುವುದು ಒಂದೆಡೆ. ಆದರೆ ತನಗೆ ಬೇಕಾದಂತೆ ಆಟವನ್ನಾಡುವುದು ಇನ್ನೊಂದೆಡೆ. ತನಗೆ ಬೇಕಾದಂತೆ ಆಟವಾಡಿಸುವುದು ಮತ್ತೊಂದೆಡೆ. ಇದೀಗ ಈ ಬೆಕ್ಕು ತನ್ನ ಪೋಷಕರಿಗೆ ಪೆನ್ನನ್ನು ಇಟ್ಟುಕೊಂಡು ಆಟವಾಡಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಬೆಕ್ಕನ್ನು ಮತ್ತದರ ತಮಾಷೆಯನ್ನು ಬಹುವಾಗಿ ಮೆಚ್ಚುತ್ತಿದ್ದಾರೆ. ನೋಡಿ ವೈರಲ್ ಆದ ಈ ವಿಡಿಯೋ.

Viral Video: ಪೆನ್​ಪ್ರಿಯ ಬೆಕ್ಕು; ಕೊಟ್ಟಂತೆ ಮಾಡುವುದು ಆದರೆ ಕೊಡುವುದಿಲ್ಲ; ಬಿದ್ದುಬಿದ್ದು ನಗುತ್ತಿರುವ ನೆಟ್ಟಿಗರು
ನಾನು ಪೆನ್ನು ಕೊಡುವುದಿಲ್ಲ!
Follow us
ಶ್ರೀದೇವಿ ಕಳಸದ
|

Updated on: Sep 20, 2023 | 10:51 AM

Cat Lover : ಸಾಕುಪ್ರಾಣಿಗಳು ಅದರಲ್ಲೂ ನಾಯಿಬೆಕ್ಕುಗಳು ಅತ್ಯಂತ ಬುದ್ಧಿವಂತಿಕೆಯಿಂದ ಮನುಷ್ಯರೊಂದಿಗೆ ಆಟವಾಡುತ್ತವೆ. ನೀವು ಅವುಗಳನ್ನು ಆಟವಾಡಿಸಲು ನೋಡಿದರೆ ಅವೇ ನಿಮಗೆ ಆಟವಾಡಿಸಲು ಶುರು ಮಾಡುತ್ತವೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ಬೆಕ್ಕೊಂದು ಪೆನ್ನಿನೊಂದಿಗೆ ಆಟವಾಡುತ್ತಿದೆ. ಅದರ ಪೋಷಕರು ಪೆನ್ನನ್ನು ಕೊಡುವಂತೆ ಕೈ ಚಾಚುತ್ತಾರೆ, ಕೊಟ್ಟಂತೆ ಮಾಡುತ್ತದೆಯಾದರೂ ಅದು ಕೊಡುವುದಿಲ್ಲ. ನೆಟ್ಟಿಗರು ಈ ಬೆಕ್ಕಿನಾಟವನ್ನು ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. 7 ದಿನಗಳ ಹಿಂದೆ ರೆಡ್ಡಿಟ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಅನ್ನು ಈತನಕ 2,500 ಜನರು ನೋಡಿದ್ದಾರೆ.

ಇದನ್ನೂ ಓದಿ : Viral Video: ಸಮುದ್ರದೊಳಗೊಬ್ಬ ಡೆಂಟಿಸ್ಟ್​; ಇವರ ಕಾರ್ಯಕ್ಷಮತೆಯನ್ನು ಮೆಚ್ಚಿದ ನೆಟ್ಟಿಗರು

ಬೆಕ್ಕುಗಳಿಗೆ ಕಪಾಟುಗಳೆಂದರೆ ಬಹಳ ಇಷ್ಟ. ಹಾಗೆಂದು ಅಲ್ಲಿ ಸುಮ್ಮನೇ ಕೂರಲಾರವು, ಮಲಗಲಾರವು. ಅಲ್ಲಿರುವ ಸಣ್ಣಪುಟ್ಟ ಸಾಮಾನುಗಳನ್ನು ಆಟಿಕೆಯನ್ನಾಗಿಸಿಕೊಂಡು ಆಟಕ್ಕೆ ಬೀಳುತ್ತವೆ. ಕೆಲವೊಮ್ಮೆ ಅವುಗಳನ್ನು ಕೆಡವಿ ತಮಾಷೆಯನ್ನೂ ನೋಡುವುದುಂಟು. ಇದೀಗ ಈ ಬೆಕ್ಕು ಕೂಡ ಪೆನ್ನನ್ನು ತಳ್ಳಿದಂತೆ ತಮಾಷೆ ಮಾಡುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪೆನ್​ಪ್ರಿಯ ಬೆಕ್ಕು

You little shit… byu/tommos inAnimalsBeingJerks

ಈ ಬೆಕ್ಕು ಯಾವ ತಳಿಯದು ತುಂಬಾ ಚೆನ್ನಾಗಿದೆ ಎಂದಿದ್ದಾರೆ ಒಬ್ಬರು. ಇದು ಬ್ರಿಟಿಷ್​ ಶಾರ್ಟ್​ ಹೇರ್​ ಎಂದಿದ್ದಾರೆ ಇನ್ನೊಬ್ಬರು. ಇದು ಶುದ್ಧ ವಿಜ್ಞಾನ ಐಸಾಕ್ ಮ್ಯೆವ್ಟನ್​ ಅವರು ಗುರುತ್ವಾಕರ್ಷಣೆಯನ್ನು ಪರೀಕ್ಷಿಸುತ್ತಿದ್ದಾರೆ ಎಂದಿದ್ದಾರೆ ಮತ್ತೊಬ್ಬರು. ನೀವು ಕೈ ಹಿಂತೆಗೆದಾಗ ಅದು ಪೆನ್ನನ್ನು ನೆಲಕ್ಕೆ ಬೀಳಿಸುವುದು ಗ್ಯಾರಂಟಿ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಬೀದಿಪಾಲಾಗಿದ್ದ 81 ವರ್ಷದ ಬರ್ಮಾದ ಮರ್ಲಿನ್​ ಚೆನ್ನೈನಲ್ಲಿ ಮತ್ತೀಗ ಇಂಗ್ಲಿಷ್​ ಟೀಚರ್

ನಾಯಿಗಳಿಗಿಂತ ಬೆಕ್ಕುಗಲು ಹೀಗೆ ತಮಾಷೆ ಮಾಡುವುದು ಹೆಚ್ಚು ಎಂದಿದ್ದಾರೆ ಒಬ್ಬರು. ತನಗೆ ಬೇಕಾದಂತೆ ನಿಯಮಗಳನ್ನು ರೂಪಿಸಿಕೊಳ್ಳುವಲ್ಲಿ ಬೆಕ್ಕು ಬಹಳ ಜಾಣ ಎಂದಿದ್ದಾರೆ ಮತ್ತೊಬ್ಬರು. ಅವನು ಸ್ವಲ್ಪ ಆ ಕಡೆ ತಿರುಗಲಿ, ಪೆನ್ನನ್ನು ಕೆಳಗೆ ಬೀಳಿಸಿ ಅವನ ಗಮನ ಸೆಳೆಯುತ್ತದೆ ನೋಡಿ ಆ ಬೆಕ್ಕು ಎಂದಿದ್ಧಾರೆ ಮಗದೊಬ್ಬರು. ಹೌದು! ಅದಕ್ಕೆ ಬೆಕ್ಕು ಎಂದರೆ ನನಗೆ ಹೀರೋ ಎಂದಿದ್ದಾರೆ ಇನ್ನೂ ಒಬ್ಬರು. ಒಟ್ಟಿನಲ್ಲಿ ಮಜಾ ಇದೆ ಬೆಕ್ಕಿನ ಸಹವಾಸ!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ