Viral Video: ಅಮೆರಿಕಾ ಮತ್ತು ಜಪಾನ್​ ಇನ್​ಫ್ಯೂಯೆನ್ಸರ್ಸ್​ ಹಿಂದಿಯಲ್ಲಿ ನಡೆಸಿದ ಸಂಭಾಷಣೆ

Hindi : ಈ ನಾನ್​ ನಿನ್ನ ತಲೆಗಿಂತ ದೊಡ್ಡದಾಗಿದೆ! ಎನ್ನುತ್ತಾನೆ ಈ ಅಮೆರಿಕನ್ ಇನ್​ಫ್ಲ್ಯೂಯೆನ್ಸರ್. ತಿಂದು ನೋಡೋಣ ಎನ್ನುತ್ತಾಳೆ ಜಪಾನಿನ ಇನ್​ಫ್ಲ್ಯೂಯೆನ್ಸರ್. ಇವರಿಬ್ಬರೂ ಇಂಗ್ಲಿಷ್​ನಲ್ಲಿ ಸಂಭಾಷಣೆ ನಡೆಸಿದ್ದರೆ ಇಷ್ಟೊಂದು ಈ ರೀಲ್ ವೈರಲ್ ಆಗುತ್ತಿರಲಿಲ್ಲ. ಇವರಿಬ್ಬರೂ ನಿರರ್ಗಳವಾಗಿ ಹಿಂದಿಯಲ್ಲಿ ಮಾತನಾಡಿದ್ದಾರೆ! ಈ ವಿಡಿಯೋ ನೋಡಿದ ನೆಟ್ಟಿಗರು ಮಜಮಜವಾಗಿ ಪ್ರತಿಕ್ರಿಯಿಸಿದ್ದಾರೆ.

Viral Video: ಅಮೆರಿಕಾ ಮತ್ತು ಜಪಾನ್​ ಇನ್​ಫ್ಯೂಯೆನ್ಸರ್ಸ್​ ಹಿಂದಿಯಲ್ಲಿ ನಡೆಸಿದ ಸಂಭಾಷಣೆ
ಜಪಾನ್ ಮತ್ತು ಅಮೆರಿಕದ ಇನ್​ಫ್ಯೂಯೆನ್ಸರ್ಸ್​
Follow us
ಶ್ರೀದೇವಿ ಕಳಸದ
|

Updated on:Sep 19, 2023 | 5:57 PM

Food: ಅಮೆರಿಕದ ಹಿಂದೀ ಯೂಟ್ಯೂಬರ್ ಡ್ರ್ಯೂ ಹಿಕ್ಸ್​ ಮತ್ತು ಇಂಡಿಯಾ ಜಪಾನ್ ಇನ್​ಫ್ಯೂಯೆನ್ಸರ್ ಮೇಯೋ ಜಪಾನ್ ಜಪಾನಿನ ರೆಸ್ಟೋರೆಂಟ್​ನಲ್ಲಿ ಊಟಕ್ಕೆ ಕುಳಿತಿದ್ದಾರೆ. ಇಬ್ಬರೂ ಒಂದೊಂದು ನಾನ್​ ಕೈಗೆತ್ತಿಕೊಳ್ಳುತ್ತಾರೆ. ಡ್ರ್ಯೂ, ಜಪಾನಿನಲ್ಲಿ ಇಷ್ಟು ದೊಡ್ಡ ನಾನ್ (Naan) ಯಾಕೆ ಮಾಡುತ್ತಾರೆ? ಎಂದು ಕೇಳುತ್ತಾನೆ. ಯಾಕೆ ಎಂದು ನನಗೂ ಗೊತ್ತಿಲ್ಲ ಆದರೆ ತಿಂದು ನೋಡೋಣವೇ? ಎಂದು ಮೇಯೋ ಕೇಳುತ್ತಾಳೆ. ಆದರೆ ಒಂದೇ ಕೈಯಿಂದ ತಿನ್ನಬೇಕು ಎಂದು ಡ್ರ್ಯೂ ಹೇಳುತ್ತಾನೆ. ಆದರೆ ಜಪನೀಸ್ ಬಟರ್​ ಚಿಕನ್​ ಸ್ವಲ್ಪ ಸಿಹಿ ಇದೆ ಅನ್ನಿಸುತ್ತಿದೆ. ಆದರೂ ಇದು ಬಹಳ ರುಚಿಯಾಗಿದೆ ಎನ್ನುತ್ತಾಳೆ. ಅಂತೂ ಜಪಾನಿನಲ್ಲಿ ಒಳ್ಳೆಯ ದೇಸೀ ಊಟ ಸಿಗುತ್ತದೆ ಎನ್ನುತ್ತಾರೆ ಇವರಿಬ್ಬರೂ. ಇವರಿಬ್ಬರೂ ಹಿಂದಿಯಲ್ಲಿ ನಡೆಸಿದ ಈ ಸಂಭಾಷಣೆ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ : Viral Video: ಬಾದಲ್ ಬರ್ಸಾ ಬಿಜುಲಿ; ಬೆಂಗಳೂರು ಅಜ್ಜಿಯರ ಡ್ಯಾನ್ಸ್​ಗೆ ಮನಸೋತ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಸೆ. 8ರಂದು ಪೋಸ್ಟ್ ಮಾಡಲಾಗಿದ್ದು ಈತನಕ 75,000ಕ್ಕಿಂತಲೂ ಹೆಚ್ಚು ಜನರು ಮೆಚ್ಚಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಜಪಾನಿಗೆ ಭೇಟಿ ನೀಡಿ ಜಪಾನೀ ಮತ್ತು ಭಾರತೀಯ ಖಾದ್ಯಗಳನ್ನು ಸವಿದಿದ್ದಕ್ಕೆ ಧನ್ಯವಾದ ಎಂದು ಡ್ರ್ಯೂಗೆ ಮೇಯೋ ಹೇಳಿದ್ದಾರೆ. ಹಾಂ ಕೈಯಿಂದ ತಿಂದಿದ್ದೇನೆ ಎಂದು ಪ್ರತಿಯಾಗಿ ಪ್ರತಿಕ್ರಿಯಿಸಿದ್ಧಾರೆ ಡ್ರ್ಯೂ.

ಹಿಂದಿಯಲ್ಲಿ ಸಂಭಾಷಿಸುತ್ತಿರುವ ವಿದೇಶಿ ಇನ್​ಫ್ಯೂಯೆನ್ಸರ್ಸ್​

View this post on Instagram

A post shared by Mayo Japan (@mayojapan)

ದಯವಿಟ್ಟು ಇವನಿಗೆ ಯಾರಾದರೂ ಆಧಾರ್ ಕಾರ್ಡ್ ಕೊಡಿಸಿ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ನಿಮ್ಮಿಬ್ಬರ ಈ ಜಂಟೀರೀಲಿಗಾಗಿ ಕಾಯುತ್ತಿದ್ದೆ, ಅಂತೂ ಮಾಡಿದಿರಿ. ತುಂಬಾ ಚೆನ್ನಾಗಿದೆ ಎಂದಿದ್ದಾರೆ ಇನ್ನೊಬ್ಬರು. ಮುಂದಿನ ಸಲ ಬ್ರೆಝಿಲ್​ ಇನ್​ಫ್ಲ್ಯೂಯೆನ್ಸರ್​ ಭೋಜಪುರಿ ಮಾತನಾಡಬಹುದೇನೋ, ಕಾಯುತ್ತಿದ್ದೇವೆ ಎಂದಿದ್ದಾರೆ ಮತ್ತೊಬ್ಬರು. ಅಮೆರಿಕಾ ಮತ್ತು ಜಪಾನದವರು ಹಿಂದೀ ಮಾತನಾಡುತ್ತಾ ಕೈಯಿಂದ ದೇಸಿ ಊಟ ಮಾಡುತ್ತಿದ್ದಾರೆ ಎಂದರೆ ಖಂಡಿತ ಇಲ್ಲಿ G20 Summit ನಡೆಯುತ್ತಿದೆ ಎಂದು ಕಾಲೆಳೆದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಮಂಕೀ ಮ್ಯಾನ್ ಎಂದರು ಕಲ್ಲನ್ನೂ ಎಸೆದರು ನಾನು ಧೃತಿಗೆಡಲಿಲ್ಲ

ಎಲ್ಲರೂ ಭಾರತದಲ್ಲಿ ನೆಲೆಗೊಳ್ಳಲು ಏನೆಲ್ಲ ಸಾಹಸ ಮಾಡುತ್ತಿದ್ದಾರೋ, ನೋಡಲು ಎರಡು ಕಣ್ಣುಗಳು ಸಾಲವು ಎಂದಿದ್ದಾರೆ ಒಬ್ಬರು. ರೀಲ್ಸ್ ಮಾಡಿ ಭಾರತಕ್ಕೆ ಬರಬಹುದೇ? ಎಂದು ಪ್ರಶ್ನಿಸಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 5:52 pm, Tue, 19 September 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ