Viral Video: ಬಾದಲ್ ಬರ್ಸಾ ಬಿಜುಲಿ; ಬೆಂಗಳೂರು ಅಜ್ಜಿಯರ ಡ್ಯಾನ್ಸ್​ಗೆ ಮನಸೋತ ನೆಟ್ಟಿಗರು

Badal Barasat Bijuli : ಒಂದು ಹಾಡು ಟ್ರೆಂಡಿಂಗ್​ನಲ್ಲಿದ್ದರೆ ಯುವಕರು, ಯುವತಿಯರು, ಮಕ್ಕಳು, ನಡುವಯಸ್ಸಿನವರೆಲ್ಲ ಡ್ಯಾನ್ಸ್ ಮಾಡುತ್ತಾರೆ. ಅಷ್ಟೇ ಏಕೆ ಬೆಕ್ಕುನಾಯಿಗಳಿಗೂ ಮಾಡಿಸುತ್ತಾರೆ. ಆದರೆ ಅಜ್ಜಿಯಂದಿರು ಗುಂಪಿನಲ್ಲಿ ಡ್ಯಾನ್ಸ್ ಮಾಡಿದರೆ? ಅದೂ ಖಂಡಿತ ವೈರಲ್ಲೇ. ನೋಡಿ ಬೆಂಗಳೂರಿನ ಅಜ್ಜಿಯಂದಿರು 'ಕರ್ತವ್ಯ' ಎಂಬ ನೇಪಾಳಿ ಸಿನೆಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

Viral Video: ಬಾದಲ್ ಬರ್ಸಾ ಬಿಜುಲಿ; ಬೆಂಗಳೂರು ಅಜ್ಜಿಯರ ಡ್ಯಾನ್ಸ್​ಗೆ ಮನಸೋತ ನೆಟ್ಟಿಗರು
ಬಾದಲ್ ಬರ್ಸಾ ಬಿಜುಲಿ ಟ್ರೆಂಡಿಂಗ್ ಹಾಡಿಗೆ ಅಜ್ಜಿಯಂದಿರ ಡ್ಯಾನ್ಸ್
Follow us
|

Updated on:Sep 19, 2023 | 4:46 PM

Dance : 2004ರಲ್ಲಿ ಬಿಡುಗಡೆಯೈಆದ ನೇಪಾಳೀ ಸಿನೆಮಾದ ಹಾಡು ಬಾದಲ್ ಬರ್ಸಾ ಬಿಜುಲಿ ಇದೀಗ ಟ್ರೆಂಡ್​ನಲ್ಲಿದೆ. ಆನಂದ ಕರ್ಕಿ, ಪ್ರಶ್ನಾ ಶಕ್ಯಾ ಹಾಡಿರುವ ಈ ಹಾಡನ್ನು ಕರುಣ ಥಾಪಾ ಬರೆದಿದ್ದಾರೆ. ಸಚಿನ್ ಸಿಂಘ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಆದರೆ ಇದೀಗ ಈ ಹಾಡಿಗೆ ಡ್ಯಾನ್ಸ್ ಮಾಡಿರುವವರು ಯುವಕ ಯುವತಿಯರಲ್ಲ, ಬೆಂಗಳೂರಿನ ಹಿರಿಯ ಮಹಿಳೆಯರು! ಯಾರೋ ಎದುರಿಗೆ ನೃತ್ಯವನ್ನು (Dance) ಹೇಳಿಕೊಡುತ್ತಿದ್ದಾರೇನೋ ಎನ್ನುವ ಹಾಗೆ ಇವರು ಹೆಜ್ಜೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಹಾಡನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ.

ಇದನ್ನೂ ಓದಿ : Viral Video: ಇವನನ್ನು ಅಚ್ಚರಿಗೊಳಿಸಲೆಂದೇ ಇಡೀ ಊರು ಮೂಕಭಾಷೆ ಕಲಿಯಿತು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

shantai_second_childhood ಎಂಬ ಎನ್‌ಜಿಒ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಸೆ. 6ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಸುಮಾರು 18 ಮಿಲಿಯನ್​ ಜನರು ನೋಡಿದ್ದಾರೆ. 6.8 ಲಕ್ಷ ಜನರು ಮೆಚ್ಚಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಈ ಅಜ್ಜಿಯಂದಿರ ಉತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಜ್ಜಿಯಂದಿರ ಡ್ಯಾನ್ಸ್​ ಇಲ್ಲಿದೆ

ಈ ವಯಸ್ಸಿನಲ್ಲೂ ಈ ಉತ್ಸಾಹ! ಹೃದಯಾಂತರಾಳದ ನಮಸ್ಕಾರ. ನೀವೆಲ್ಲ ತುಂಬಾ ಒಳ್ಳೆಯ ಅಜ್ಜಿಯಂದಿರು ಎಂದಿದ್ದಾರೆ ಒಬ್ಬರು. ಇನ್​ಸ್ಟಾನಲ್ಲಿ ಇಂದು ನೋಡಿದ ಅತ್ಯಂತ ಸುಂದರವಾದ ರೀಲ್​ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ವೈರಲ್ ಹಾಡಿಗೆ ಇವರು ತೋರಿದ ಉತ್ಸಾಹ ಮಾತ್ರ ವರ್ಣಿಸಲಸಾಧ್ಯ ಎಂದಿದ್ದಾರೆ ಮತ್ತೊಬ್ಬರು. ನೀವೆಲ್ಲ ಸಾಕಷ್ಟು ಕಾಲ ಆರೋಗ್ಯವಂತರಾಗಿ ಬದುಕಿ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral Video: ಮಂಕೀ ಮ್ಯಾನ್ ಎಂದರು ಕಲ್ಲನ್ನೂ ಎಸೆದರು ನಾನು ಧೃತಿಗೆಡಲಿಲ್ಲ

ವಾರ್ಷಿಕೋತ್ಸವವಿದ್ಧಾಗ ನರ್ಸರಿ ಮಕ್ಕಳಿಗೆ ಶಿಕ್ಷಕರು ಎದುರಿಗೆ ನಿಂತು ಹೇಳಿಕೊಡುವ ರೀತಿಯಲ್ಲಿ ಇವರಿಗೂ ಯಾರೋ ಹೇಳಿಕೊಡುತ್ತಿದ್ಧಾರೆಂಬ ನನ್ನ ಅನುಮಾನ ನಿಜ ಎಂದುಕೊಳ್ಳುತ್ತೇನೆ ಎಂದು ಒಬ್ಬರು ಹೇಳಿದ್ದಾರೆ. ಅಜ್ಜಿಯರು ಬಹಳ ಮುದ್ದಾಗಿದ್ದಾರೆ, ಇವರ ಉತ್ಸಾಹ ನಮಗೂ ಬರಲಿ ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ನಾನೂ ಇನ್ನುಮೇಲೆ ಮೈಚಳಿ ಬಿಟ್ಟು ಇವರಂತೆ ಕುಣಿಯಬೇಕು ಎನ್ನಿಸುತ್ತಿದೆ ಈ ವಿಡಿಯೋ ನೋಡಿದಮೇಲೆ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:42 pm, Tue, 19 September 23