AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೈಸುತ್ತ ಎಂಟು ಬೆಂಕಿಯ ಬಳೆಗಳನ್ನು ತಿರುಗಿಸಿ ವಿಶ್ವದಾಖಲೆಗೈದ ಗ್ರೇಸ್ ಗುಡ್

Hula Hoop: 'ನಾನು ಹುಲಾ ಹೂಪ್‌ನೊಂದಿಗೆ ನನ್ನ ಪಯಣವನ್ನು 18ನೇ ವಯಸ್ಸಿಗೆ ಶುರುಮಾಡಿದೆ. ಅಲ್ಲಿಂದ ಮುಂದೆ ನನಗದರ ಹುಚ್ಚೇ ಹಿಡಿದು ನನ್ನ ಆಟಕ್ಕೆ ಹೆಚ್ಚು ಹೆಚ್ಚು ಬಳೆಗಳನ್ನು ಕೂಡಿಸುತ್ತ ಹೋದೆ. ಮುಂದೆ ಇದಕ್ಕೆ ಬೆಂಕಿಯಾಟ ಗಾಳಿಯಾಟಗಳೂ ಕೂಡಿದುವು. ಆನಂತರದ್ದು ಇತಿಹಾಸ!' ಎಂದು ಗ್ರೇಸ್​ ತಮ್ಮ ಸಾಹಸದಾಟವನ್ನು ಬಣ್ಣಿಸಿದ್ದಾರೆ.

Viral Video: ಮೈಸುತ್ತ ಎಂಟು ಬೆಂಕಿಯ ಬಳೆಗಳನ್ನು ತಿರುಗಿಸಿ ವಿಶ್ವದಾಖಲೆಗೈದ ಗ್ರೇಸ್ ಗುಡ್
ವಿಶ್ವದಾಖಲೆಗೈದ ಗ್ರೇಸ್ ಗುಡ್​
ಶ್ರೀದೇವಿ ಕಳಸದ
|

Updated on:Sep 16, 2023 | 1:41 PM

Share

GWR: ಸೊಂಟದ ಸುತ್ತ ತಿರುಗಿಸುತ್ತ ಮಕ್ಕಳು ಮತ್ತು ದೊಡ್ಡವರು ಕೂಡ ಓಲಾಡುವ Hula Hoop ಅನ್ನು ನೀವೆಲ್ಲ ನೋಡುತ್ತಿರುತ್ತೀರಿ. ದೇಹದಂಡನೆಯ ಅಥವಾ ಕುಣಿಯುವ ಉತ್ಸಾಹವುಳ್ಳವರಾಗಿದ್ದಲ್ಲಿ ಆಡಿರುತ್ತೀರಿ ಕೂಡ. ಆದರೆ ಬೆಂಕಿಯುರಿಯ ಬಳೆಗಳು, ಅದೂ ಒಂದಲ್ಲ ಎರಡಲ್ಲ… ಎಂಟು ಬಳೆಗಳನ್ನು ಏಕಕಾಲದಲ್ಲಿ ಮೈಸುತ್ತ ತಿರುಗಿಸುತ್ತ ಆಟವಾಡುವುದನ್ನು ನೋಡಿದ್ದೀರಾ? ಅಂಥಾ ಒಂದು ಅಚ್ಚರಿಮೂಡಿಸುವ ಗಿನ್ನಿಸ್ ದಾಖಲೆ ಗಳಿಸಿರುವ ಪ್ರದರ್ಶನ ಇಲ್ಲಿದೆ. ಇದನ್ನು ಸಾಧಿಸಿದ ಮಹಿಳೆ ಬೆಂಕಿಯೊಂದಿಗಿನ ಸರಸಗಳಿಂದಲೇ ಜಗದ್ವಿಖ್ಯಾತರಾಗಿರುವ ಗ್ರೇಸ್ ಗುಡ್ (Grace Good) ಎಂಬ ಸರ್ಕಸ್ ಪಟು.

ಇದನ್ನೂ ಓದಿ : Viral: ‘ಜಗತ್ತಿನ ನನ್ನ ನೆಚ್ಚಿನ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ’; ಮಲಾಲಾ ಯುಸೂಫ್​

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತಮ್ಮ ಅಸಾಧಾರಣ ಬೆಂಕಿಯಾಟ, ಗಾಳಿಯಾಟ, ಬಳೆಯಾಟಗಳಿಂದ ಹಾಗೂ ದೇಹ ಸಮತೋಲನದ ಅದ್ಭುತ ಪ್ರದರ್ಶನಗಳಿಂದ ಅಪಾರ ಜನಮನ್ನಣೆ ಗಳಿಸಿ ನೆರೆದವರ ಮನಸೂರೆಗೊಳ್ಳುತ್ತಲೇ ಬಂದಿರುವ ಗ್ರೇಸ್ ಈಗ ಎರಡು ಅನನ್ಯ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಏಕಕಾಲದಲ್ಲಿ ಅತಿಹೆಚ್ಚು ಬೆಂಕಿಯಬಳೆಗಳ ತಿರುಗಿಸುವಿಕೆ ಹಾಗೂ ಉರುಳುತ್ತಿರುವ ಬೃಹತ್ ಗ್ಲೋಬ್ ಮೇಲೆ ಸಮತೋಲನ ಸಾಧಿಸುತ್ತಲೇ ಅತಿ ಹೆಚ್ಚು Hula Hoop ಬಳೆಗಳ ತಿರುಗಿಸುವಿಕೆಯ ಮೂಲಕ 30ರ ಗ್ರೇಸ್ ಗುಡ್ ಎರಡು ಹೊಸ ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಮೊದಲ ದಾಖಲೆಯಲ್ಲಿ ಅವರು ತಮ್ಮ ಸುತ್ತ ಎಂಟು ಬೆಂಕಿಯ ಬಳೆಗಳನ್ನೂ ಎರಡನೆಯದಲ್ಲಿ ಗ್ಲೋಬ್ ಮೇಲೆ ಬ್ಯಾಲನ್ಸ್ ಮಾಡುತ್ತ 28 ಬಳೆಗಳನ್ನೂ ತಿರುಗಿಸಿದ್ದಾರೆ.

ಬೆಂಕಿಯೊಂದಿಗೆ ಸರಸಕ್ಕಿಳಿದಿರುವ ಗ್ರೇಸ್​ ಗುಡ್​

View this post on Instagram

A post shared by Grace Good (@gracegood)

‘ನಾನು ಹುಲಾ ಹೂಪ್‌ನೊಂದಿಗೆ ನನ್ನ ಪಯಣವನ್ನು 18ನೇ ವಯಸ್ಸಿಗೆ ಶುರು ಮಾಡಿದೆ. ಅಲ್ಲಿಂದ ಮುಂದೆ ನನಗದರ ಹುಚ್ಚೇ ಹಿಡಿದು ನನ್ನ ಆಟಕ್ಕೆ ಹೆಚ್ಚು ಹೆಚ್ಚು ಬಳೆಗಳನ್ನು ಕೂಡಿಸುತ್ತ ಹೋದೆ. ಮುಂದೆ ಇದಕ್ಕೆ ಬೆಂಕಿಯಾಟ ಗಾಳಿಯಾಟಗಳೂ ಕೂಡಿದುವು. ಆನಂತರದ್ದು ಇತಿಹಾಸ!’ ಎಂದು ಗ್ರೇಸ್​ ತಮ್ಮ ಸಾಹಸದಾಟವನ್ನು ಬಣ್ಣಿಸಿದ್ದಾರೆ.

ಇದನ್ನೂ ಓದಿ : Viral Video: ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್​ ಸಿಂಗ್​​; 30 ಮಿಲಿಯನ್​ ಜನರು ನೋಡಿದ ಈ ಕಲಾಕೃತಿ

‘ದೊಡ್ಡ ಕನಸುಗಳನ್ನು ಕಾಣುವುದನ್ನು ಎಂದಿಗೂ ಬಿಡಬೇಡಿ! ಎಂದು ತಮ್ಮ ಅಭಿಮಾನಿಗಳಿಗೆ instagram ಮೂಲಕ ಸಂದೇಶ ಕಳಿಸಿದ್ದಾರೆ. ಅಂತರಿಕ್ಷದ ತಾರಾಮಂಡಲಗಳನ್ನು ಹತ್ತಿರದಿಂದ ಕಾಣಲಾಗದಿದ್ದರೂ ಭುವಿಯ ಮೇಲಿನ ಗ್ರೇಸ್ ಎಂಬ ತಾರೆಯ ಮಂಡಲವನ್ನು ನೋಡಲು ಮರೆಯದಿರಿ.

ಈ ವಿಡಿಯೋ ನೋಡಿ ನಿಮಗೆ ಏನನ್ನಿಸಿತು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 1:37 pm, Sat, 16 September 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ